ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Anju Aravind: ಎರಡು ಮದುವೆಯಾದ್ರೂ ಮುರಿದು ಬಿದ್ದ ದಾಂಪತ್ಯ ಜೀವನ; ಈಗ ಬೆಂಗಳೂರಿನ ಈ ವ್ಯಕ್ತಿಯ ಜೊತೆ ಈ ನಟಿ ಲಿವ್ ಇನ್ !

ಕನ್ನಡ, ತಮಿಳು, ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಸಾಕಷ್ಟು ಹಿಟ್ ಸಿನಿಮಾ ನೀಡಿ ನಟಿ ಅಂಜು ಅರವಿಂದ್ ಜನ ಮನ ಗೆದ್ದಿದ್ದಾರೆ. ಸಿನಿಮಾದ ಜೊತೆಗೆ ಮಲಯಾಳಂ ಟಿವಿ ಶೋ ಹಾಗೂ ಧಾರವಾಹಿಯಲ್ಲಿ ಕೂಡ ಅಭಿನಯಿಸುವ ಮೂಲಕ ಅಪಾರ ಅಭಿಮಾನಿಗಳ ಪ್ರೀತಿ ಸಂಪಾದಿಸಿದ್ದಾರೆ. ಇತ್ತೀಚೆಗಷ್ಟೇ ನಟಿ ಅಂಜು ಅರವಿಂದ್ ಅವರು ಸಂದರ್ಶನವೊಂದರಲ್ಲಿ ಪಾಲ್ಗೊಂಡಿದ್ದು, ವೈಯಕ್ತಿಕ ವಿಚಾರದ ಬಗ್ಗೆ ಮುಕ್ತವಾಗಿ ಮಾಹಿತಿ ಹಂಚಿಕೊಂಡಿದ್ದಾರೆ.

ಎರಡು ಮದುವೆಯಾಗಿ ಸದ್ಯ ಲಿವ್​-ಇನ್ ರಿಲೇಶನ್​ಶಿಪ್‌ನಲ್ಲಿರೋ ಖ್ಯಾತ ನಟಿ!

Profile Pushpa Kumari Jun 3, 2025 6:16 PM

ನವದೆಹಲಿ: ಮಲಯಾಳಂನ ಪ್ರಸಿದ್ಧ ನಟಿ ಅಂಜು ಅರವಿಂದ್ (Anju Aravind) ಇತ್ತೀಚೆಗೆ ಸಿನಿಮಾದಲ್ಲಿ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲವಾದರೂ ವೈಯಕ್ತಿಕ ವಿಚಾರದಲ್ಲಿ ಹೆಚ್ಚು ಸುದ್ದಿಯಲ್ಲಿದ್ದಾರೆ. ಕನ್ನಡ, ತಮಿಳು, ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಸಾಕಷ್ಟು ಹಿಟ್ ಸಿನಿಮಾ ನೀಡಿ ಜನ ಮನ ಗೆದ್ದಿದ್ದಾರೆ. ಸಿನಿಮಾದ ಜೊತೆಗೆ ಮಲಯಾಳಂ ಟಿವಿ ಶೋ ಹಾಗೂ ಧಾರವಾಹಿಯಲ್ಲಿ ಕೂಡ ಅಭಿನಯಿಸುವ ಮೂಲಕ ಅಪಾರ ಅಭಿಮಾನಿಗಳ ಪ್ರೀತಿ ಸಂಪಾದಿಸಿದ್ದಾರೆ. ಇತ್ತೀಚೆಗಷ್ಟೇ ನಟಿ ಅಂಜು ಅರವಿಂದ್ ಅವರು ಸಂದರ್ಶನವೊಂದರಲ್ಲಿ ಪಾಲ್ಗೊಂಡಿದ್ದು, ವೈಯಕ್ತಿಕ ವಿಚಾರದ ಬಗ್ಗೆ ಮುಕ್ತವಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ಸದ್ಯ ದಾಂಪತ್ಯ ಜೀವನದಿಂದ ಹೊರಬಂದು ಲಿವ್ ಇನ್ ರಿಲೇಶನ್ ಶಿಪ್‌ನಲ್ಲಿ ಇರುವ ಬಗ್ಗೆ ನಟಿ ಅಂಜು ಬಹಿರಂಗಪಡಿಸಿದ್ದಾರೆ.

ಸೂಪರ್ ಸ್ಟಾರ್ ರಜನಿಕಾಂತ್, ಮಮ್ಮೂಟ್ಟಿ, ಮೋಹನ್ ಲಾಲ್ ಜೊತೆಗೆ ತೆರೆ ಹಂಚಿಕೊಂಡಿದ್ದ ನಟಿ ಅಂಜು ಅರವಿಂದ್ ನಟನೆ ಮತ್ತು ನೃತ್ಯ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಎರಡು ಬಾರಿ ಮದುವೆ ಆದರೂ ದಾಂಪತ್ಯ ಜೀವನದಲ್ಲಿ ಸುಖ ಸಂಸಾರ ನಡೆಸಲಾಗಿಲ್ಲವಂತೆ. ನಟಿ ಅಂಜು ಅರವಿಂದ್ ಅವರು ಮೊದಲ ಮದುವೆಯಲ್ಲಿ ವೈಮನಸ್ಸು ಮೂಡಿ ವಿಚ್ಚೇದನ ಪಡೆದರು. ಬಳಿಕ ಮರುವಿವಾಹವಾಗಿದ್ದಾರೆ. ಆದರೆ ವಿಧಿಯಾಟಕ್ಕೆ ಇವರ ಎರಡನೆ ಪತಿ ಮರಣ ಹೊಂದಿದರು. ಎರಡು ಸಲ ದಾಂಪತ್ಯ ಜೀವನಕ್ಕೆ ಕಾಲಿಟ್ಟರು ಸುಖ ಸಂಸಾರ ಹೊಂದಲು ಸಾಧ್ಯವಾಗಿಲ್ಲ. ಪ್ರಸ್ತುತ ಅವರು ಲಿವ್-ಇನ್ ರಿಲೇಶನ್ ಶಿಪ್ ನಲ್ಲಿದ್ದು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಸಂದರ್ಶನದಲ್ಲಿ ಮುಕ್ತವಾಗಿ ಎಲ್ಲ ವಿಚಾರವನ್ನು ಹಂಚಿಕೊಂಡಿದ್ದಾರೆ.

ನನ್ನ ಸಂಗಾತಿಯ ಹೆಸರು ಸಂಜಯ್ ಅಂಬಾಲ ಪರಂಬತ್ ಕಳೆದ ಐದು ವರ್ಷಗಳಿಂದ ನಾವು ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಬಹಳ ಸಂತೋಷದಿಂದ ವಾಸಿಸುತ್ತಿದ್ದೇವೆ. ಬೆಂಗಳೂರಿನಲ್ಲಿ ನೃತ್ಯ ಶಿಕ್ಷಕಿಯಾಗಿದ್ದು ನನ್ನ ವೃತ್ತಿ ಜೀವನಕ್ಕೆ ಸಂಜಯ್ ಬಹಳ ಸಪೋರ್ಟಿವ್ ಆಗಿದ್ದಾರೆ. ನಮ್ಮ ಕಥೆಯನ್ನು ಇಟ್ಟುಕೊಂಡು ನಿರ್ದೇಶಕರು ಚಲನಚಿತ್ರವಾಗಿ ಮಾಡಬಹುದು ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಇದನ್ನು ಓದಿ: The Rajasaab Movie: ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಚಿತ್ರದ ರಿಲೀಸ್‌ ಡೇಟ್‌ ಅನೌನ್ಸ್‌

ನಾವಿಬ್ಬರು ವಿಜಯ್ ಸೇತುಪತಿ ತ್ರಿಶಾ ಅಭಿನಯದ 96 ಸಿನಿಮಾ ನೋಡುವಾಗ ನಮ್ಮ ಶಾಲಾ ಅವಧಿ ನೆನಪಿಸಿ ಕೊಂಡೆವು. ನಾನು 8 ನೇ ತರಗತಿಯಲ್ಲಿದ್ದಾಗ ಸಂಜಯ್ ನನ್ನ ಮೊದಲ ಕ್ರಶ್ ಆಗಿದ್ದರು. ನಾವು ಮೊದಲು ಭೇಟಿಯಾದದ್ದು ಕೂಡ ಡ್ಯಾನ್ಸ್ ಕ್ಲಾಸಿನಲ್ಲಿ. ಆಗೆಲ್ಲ ಮೊಬೈಲ್ ಫೋನ್‌ಗಳು ಇರಲಿಲ್ಲ ಹಾಗಾಗಿ ಅವರನ್ನು ಸಂಪರ್ಕಿಸುವುದು ಕೂಡ ಸಾಧ್ಯ ವಾಗಿಲ್ಲದ‌ ಕಾರಣ ನಾವು‌ ಬೇರೆಯಾದೆವು. ಆದರೆ ಕೊನೆಗೆ ದೇವರೆ ನಮ್ಮನ್ನು ಒಂದು ಮಾಡಿದ್ದಾರೆ. ಬೆಂಗಳೂರಿನಲ್ಲಿರುವ ನನ್ನ ನೃತ್ಯ ಅಕಾಡೆಮಿಗೆ ಅಂಜು ಅರವಿಂದ್ ಅಕಾಡೆಮಿ ಆಫ್ ಡ್ಯಾನ್ಸ್ ಎಂಬ ಹೆಸರು ಸೂಚಿಸಿದ್ದು ಸಹ ಅವರೇ. ಸಂಜಯ್ ಕೂಡ ಒಬ್ಬ ಡ್ಯಾನ್ಸರ್. ಅವರು ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು ಈಗ ನಿವೃತ್ತರಾಗಿದ್ದಾರೆ ಎಂದು ನಟಿ ಅಂಜು ಅವರು ತಿಳಿಸಿದ್ದಾರೆ.