ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Reels Ajji: ಅಜ್ಜಿಯ ಕೊನೇ ರೀಲ್ಸ್‌ ಹಂಚಿಕೊಂಡ ಸೂರಜ್; ಮುತ್ತಜ್ಜಿ ಅಂತಿಮ ಆಸೆ ಏನಾಗಿತ್ತು?

Reels Ajji: ಯಲ್ಲಾಪುರ ತಾಲ್ಲೂಕಿನ ಕೆರೆಹೊಸಳ್ಳಿಯ ಲಕ್ಷ್ಮಿ ನಾಯ್ಕ (93) ವಯೋಸಹಜ ಅನಾರೋಗ್ಯದಿಂದ ನಿಧನರಾಗಿರೋದು ಗೊತ್ತೇ ಇದೆ. ಸೋಷಿಯಲ್ ಮೀಡಿಯಾದಲ್ಲಿ ಎಷ್ಟು ಜನಪ್ರಿಯರಾಗಿದ್ದಾರೆ ಅಂದ್ರೆ ಸೂರಜ್ ಯಾವ ರೀಲ್ಸ್ ಹಾಕಿದರೂ ಅದರಲ್ಲಿ ಅಜ್ಜಿ ಯಾಕಿಲ್ಲ ಎಂದು ಜನರು ಪ್ರಶ್ನಿಸುತ್ತಾರೆ. ಅಷ್ಟರ ಮಟ್ಟಿಗೆ ಈ ಅಜ್ಜಿಯನ್ನು ಜನರು ಇಷ್ಟಪಡುತ್ತಿದ್ದರು. ಈಗ ಸೂರಜ್‌ ಅವರು ಅಜ್ಜಿಯ ಕೊನೇ ವಿಡಿಯೋ ಹಂಚಿಕೊಂಡಿದ್ದಾರೆ.

ಅಜ್ಜಿಯ ಕೊನೇ ರೀಲ್ಸ್‌ ಹಂಚಿಕೊಂಡ ಸೂರಜ್!

ಸೂರಜ್‌ ಅಜ್ಜಿ -

Yashaswi Devadiga
Yashaswi Devadiga Apr 3, 2026 8:16 PM

ಯಲ್ಲಾಪುರ ತಾಲ್ಲೂಕಿನ ಕೆರೆಹೊಸಳ್ಳಿಯ ಲಕ್ಷ್ಮಿ ನಾಯ್ಕ (93) (Lakshmi Naik) ವಯೋಸಹಜ ಅನಾರೋಗ್ಯದಿಂದ ನಿಧನರಾಗಿರೋದು ಗೊತ್ತೇ ಇದೆ. ಸೋಷಿಯಲ್ ಮೀಡಿಯಾದಲ್ಲಿ ಎಷ್ಟು ಜನಪ್ರಿಯರಾಗಿದ್ದಾರೆ ಅಂದ್ರೆ ಸೂರಜ್ (Suraj) ಯಾವ ರೀಲ್ಸ್ ಹಾಕಿದರೂ ಅದರಲ್ಲಿ ಅಜ್ಜಿ ಯಾಕಿಲ್ಲ ಎಂದು ಜನರು ಪ್ರಶ್ನಿಸುತ್ತಾರೆ. ಅಷ್ಟರ ಮಟ್ಟಿಗೆ ಈ ಅಜ್ಜಿಯನ್ನು ಜನರು ಇಷ್ಟಪಡುತ್ತಿದ್ದರು. ಈಗ ಸೂರಜ್‌ ಅವರು ಅಜ್ಜಿಯ (grand Mother) ಕೊನೇ ವಿಡಿಯೋ ಹಂಚಿಕೊಂಡಿದ್ದಾರೆ.

ಕೊನೆಯ ವಿಡಿಯೋ

ಈ ಬಗ್ಗೆ ಸೂರಜ್‌ ಬರೆದುಕೊಂಡಿದ್ದಾರೆ. , ಆದರೆ ದೇಹಕ್ಕೆ ವಯಸ್ಸಾಗಿತ್ತು. ಕೊನೆಗೆ ಪೂರ್ಣವಾಗಿ ಮುಗಿಸಿದ ವಿಡಿಯೋ ಇದೊಂದೇ. ಇದನ್ನು ಇಲ್ಲಿ ಪೋಸ್ಟ್ ಮಾಡಿರಲಿಲ್ಲ, ಬೇರೆ ಒಂದು ಚಾನೆಲ್‌ನಲ್ಲಿ ಪೋಸ್ಟ್ ಮಾಡಿದ್ದೆ. ನೀವು ಎಲ್ಲರೂ ಕೇಳ್ತಾ ಇದ್ದ್ರಿ — “ಅಜ್ಜಿ ವಿಡಿಯೋ ಯಾವಾಗ ಬರುತ್ತೆ?” ಅಂತ, ಆದರೆ ಅವರಿಗೆ ಅದನ್ನು ಪೂರ್ಣವಾಗಿ ಮುಗಿಸಲು ಆಗ್ತಿರಲಿಲ್ಲ.

ಇದನ್ನೂ ಓದಿ: Sonam Kapoor: ಎರಡನೇ ಮಗುವಿನ ಫೋಟೋ ಹಂಚಿಕೊಂಡ ಸೋನಂ ಕಪೂರ್

ಈಗ, ಅವರು ಪೂರ್ಣವಾಗಿ ಮುಗಿಸಿದ ಕೊನೆಯ ವಿಡಿಯೋವನ್ನು ಇಂದು ನಿಮ್ಮ ಜೊತೆಗೆ ಹಂಚಿಕೊಳ್ಳ್ತಾ ಇದ್ದೀನಿ.

ಈ ಅಕೌಂಟ್ ನನ್ನದ್ದಾಗಿರಬಹುದು, ಆದರೆ ಇದರ ಗ್ರೋತ್‌ಗೆ ಮುಖ್ಯ ಕಾರಣ ಅವರು. ಈಗ ನಿಮ್ಮನ್ನು ಎಂಟರ್ಟೈನ್ ಮಾಡುವ ಜವಾಬ್ದಾರಿ ಸಂಪೂರ್ಣವಾಗಿ ನನ್ನ ಮೇಲೆ ಬಂದಿದೆ. ಸಾಧ್ಯವಾದಷ್ಟು ಚೆನ್ನಾಗಿ ನಿಭಾಯಿಸ್ತೀನಿ.

ಅವರನ್ನು ಮತ್ತೆ ನೇರವಾಗಿ ನೋಡೋಕೆ ಆಗಲ್ಲ… ನಾನು ಮಾಡಿದ ಕೆಲವೊಂದು ವಿಡಿಯೋಗಳಲ್ಲಿ ನೋಡಬಹುದು,ನಮ್ಮ ನೆನಪಲ್ಲಿ ನೋಡಬಹುದು.

Thank you, ಮುತ್ತಜ್ಜಿ ಎಂದು ಬರೆದುಕೊಂಡಿದ್ದಾರೆ.

ಮರಿಮೊಮ್ಮಗ ಡ್ರಾಮಾ ಜೂನಿಯರ್ಸ್ ಸೂರಜ್ ಜೊತೆ ಲೆಕವಿಲ್ಲದಷ್ಟು ರಿಲ್ಸ್ ಮಾಡೋ ಮೂಲಕ ಅನೃಕ ಜನರ ಗಮನಸೆಳೆಯುವಂತೆ ಮಾಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ 'ರೀಲ್ಸ್ ಅಜ್ಜಿ' ಎಂದೇ ಮನೆಮಾತಾಗಿದ್ದರು.

ಇದನ್ನೂ ಓದಿ: Aditya Dhar: ಕೃತಿಚೌರ್ಯದ ಆರೋಪ ; ಆದಿತ್ಯ ಧರ್‌ಗೆ ಲೀಗಲ್ ನೋಟಿಸ್?

ಸರಿಯಾಗಿ ಕಿವಿ ಕೇಳಿಸದಿದ್ದರೂ, ಕಣ್ಣು ಮಂಜಾಗಿದ್ದರೂ ತನ್ನ ಮರಿಮೊಮ್ಮಗ ಹೇಳಿಕೊಟ್ಟಂತೆ ನಟನೆ ಮಾಡುತ್ತಲೇ ಫೇಮಸ್‌ ಆದವರು. ಅವರ ಪ್ರತಿಯೊಂದು ವಿಡಿಯೋಗಳು ಹಾಗೂ ಅಭಿನಯ ಶೈಲಿ ಜನಮನದಲ್ಲಿ ವಿಶೇಷ ಸ್ಥಾನ ಪಡೆದಿದ್ದು, ಎಲ್ಲ ವಯಸ್ಸಿನವರಿಂದಲೂ ಮೆಚ್ಚುಗೆಗೆ ಪಾತ್ರವಾಗಿದ್ದರು.