ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Kannada New Movie: ಸದ್ದಿಲ್ಲದೆ ಚಿತ್ರೀಕರಣ ಮುಗಿಸಿದ ʼಅಮರಾವತಿ ಪೊಲೀಸ್ ಸ್ಟೇಷನ್ʼ ಚಿತ್ರತಂಡ

Amaravathi Police Station Movie: ಅಮರಾವತಿ ಪೊಲೀಸ್ ಸ್ಟೇಷನ್ ಚಿತ್ರದ ಅಂತಿಮ ಹಂತದ ಚಿತ್ರೀಕರಣವು ಅರಸೀಕೆರೆಯ ಗಿಜಿಹಳ್ಳಿ ಬಳಿ ಇರುವ ಯಾರ್ಡ್‌ವೊಂದರಲ್ಲಿ ನಡೆಯಿತು. ಕಳೆದ ನಾಲ್ಕೈದು ದಿನಗಳಿಂದ ಅರಸೀಕೆರೆ ತಾಲೂಕಿನ ಶ್ರೀ ಜೇನುಕಲ್ಲು ಸಿದ್ದೇಶ್ವರ ಸ್ವಾಮಿಯ ಸನ್ನಿಧಿ ಹಾಗೂ ಸುತ್ತಮುತ್ತಲು ಚಿತ್ರೀಕರಣ ಮಾಡಲಾಗಿದೆ.

ಸದ್ದಿಲ್ಲದೆ ಚಿತ್ರೀಕರಣ ಮುಗಿಸಿದ ʼಅಮರಾವತಿ ಪೊಲೀಸ್ ಸ್ಟೇಷನ್ʼ ಚಿತ್ರತಂಡ

-

Profile
Siddalinga Swamy Sep 12, 2026 3:36 PM

ತಿಪಟೂರು, ಸೆ.12: ಸಸ್ಪೆನ್ಸ್, ಥ್ರಿಲ್ಲಿಂಗ್ ಹಾಗೂ ಸೆಂಟಿಮೆಂಟಲ್‌ ಕಥೆಯನ್ನೊಳಗೊಂಡಿರುವ, ಪುನೀತ್ ನಿರ್ದೇಶನದ ಅಮರಾವತಿ ಪೊಲೀಸ್ ಸ್ಟೇಷನ್ ಚಿತ್ರದ (Amaravathi Police Station Movie) ಅಂತಿಮ ಹಂತದ ಚಿತ್ರೀಕರಣವು ಅರಸೀಕೆರೆಯ ಗಿಜಿಹಳ್ಳಿ ಬಳಿ ಇರುವ ಯಾರ್ಡ್‌ವೊಂದರಲ್ಲಿ ನಡೆಯಿತು. ಕಳೆದ ನಾಲ್ಕೈದು ದಿನಗಳಿಂದ ಅರಸೀಕೆರೆ ತಾಲೂಕಿನ ಶ್ರೀ ಜೇನುಕಲ್ಲು ಸಿದ್ದೇಶ್ವರ ಸ್ವಾಮಿಯ ಸನ್ನಿಧಿ ಹಾಗೂ ಸುತ್ತಮುತ್ತಲು ಚಿತ್ರೀಕರಣ ಮಾಡಲಾಗಿದೆ.

ಅಮರಾವತಿ ಪೊಲೀಸ್ ಸ್ಟೇಷನ್ ಚಿತ್ರವು ನಿರ್ದೇಶಕ ಪುನೀತ್ ಅವರ ಚೊಚ್ಚಲ ಸಿನಿಮಾ ಆಗಿದ್ದು, ಇವರು ಮೂಲತಃ ಅರಸೀಕೆರೆ ತಾಲೂಕಿನ ಕರಗುಂದ ಗ್ರಾಮದವರಾಗಿದ್ದಾರೆ. ಇನ್ನು ಈ ಚಿತ್ರದ ನಿರ್ಮಾಪಕರಾಗಿ ಪ್ರದೀಪ್, ಗೀತಾ ಅಂಜನ ರೆಡ್ಡಿ ಹಾಗೂ ಅನಿತಾ ಕುಮಾರಿ ಬಂಡವಾಳ ಹೂಡಿದ್ದಾರೆ.

Search Movie: ಎಸ್. ನಾರಾಯಣ್ ಪುತ್ರ ಪಂಕಜ್ ನಾರಾಯಣ್ ನಟನೆಯ ಹೊಸ ಸಿನಿಮಾಗೆ ಕ್ಲ್ಯಾಪ್‌ ಮಾಡಿದ ಶ್ರೀನಗರ ಕಿಟ್ಟಿ

ಅಮರಾವತಿ ಪೊಲೀಸ್ ಸ್ಟೇಷನ್ ಚಿತ್ರದ ಕೊನೆಯ ಹಂತದ ಚಿತ್ರೀಕರಣ ಅರಸೀಕೆರೆಯ ಗಿಜಿಹಳ್ಳಿ ಬಳಿ ಇರುವ ಯಾರ್ಡ್‌ವೊಂದರಲ್ಲಿ ನಡೆದಿದೆ. ಈ ಚಿತ್ರದಲ್ಲಿ ಮೂರು ಫೈಟ್‌ಗಳಿದ್ದು, ಇಂದು ಚಿತ್ರೀಕರಣ ಮುಕ್ತಾಯವಾಗಿದೆ. ಸದ್ಯದಲ್ಲೇ ಚಿತ್ರ ತೆರೆಕಾಣಲಿದ್ದು, ಅಮರಾವತಿ ಪೊಲೀಸ್ ಸ್ಟೇಷನ್ ಸಿನಿಮಾವನ್ನು ಪೈರಸಿ ಮಾಡದೆ, ಚಿತ್ರಮಂದಿರಕ್ಕೆ ಬಂದು ನೋಡಿ ಪ್ರೋತ್ಸಾಹಿಸಬೇಕು ಎಂದು ಚಿತ್ರತಂಡವು ಸಿನಿಪ್ರಿಯರಲ್ಲಿ ಮನವಿ ಮಾಡಿದೆ.