ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ನಯನತಾರಾ-ನಿರ್ದೇಶಕ ವಿಘ್ನೇಶ್
ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ನಯನತಾರಾ-ನಿರ್ದೇಶಕ ವಿಘ್ನೇಶ್
-
Vishwavani News
Jun 9, 2022 6:14 PM
ಚೆನ್ನೈ: ಹಿಂದು ಸಂಪ್ರದಾಯದಂತೆ ದಕ್ಷಿಣ ಭಾರತದ ಬಹುಬೇಡಿಕೆಯ ನಟಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಗುರುವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಮಹಾಬಲಿಪುರಂನ ರೆಸಾರ್ಟ್ನಲ್ಲಿ ನಡೆದ ನಯನತಾರಾ ಮದುವೆಯಲ್ಲಿ ಶಾರುಖ್ ಖಾನ್, ರಜನಿಕಾಂತ್, ವಿಜಯ್ ಸೇತುಪತಿ, ತಲಾ ಅಜಿತ್, ಸೂರ್ಯ ಸೇರಿದಂತೆ ಅನೇಕ ಗಣ್ಯರು, ಕುಟುಂಬದ ಆಪ್ತರು ಮತ್ತು ಸ್ನೇಹಿತರು ಪಾಲ್ಗೊಂಡಿದ್ದರು.
ಮಾಧ್ಯಮದವರಿಗೆ ನಿರ್ಬಂಧ ಹೇರಲಾಗಿತ್ತು. ಈ ಮದುವೆಯ ದೃಶ್ಯ ಪ್ರಸಾರದ ಹಕ್ಕನ್ನ 10 ಕೋಟಿ ರೂ.ಗೆ ಈ ಜೋಡಿ ಸೇಲ್ ಮಾಡಿದೆ ಎನ್ನಲಾಗಿದೆ. ನವ ಜೋಡಿಯ ಫೋಟೋ ವೈರಲ್ ಆಗಿದ್ದು, ನೆಟ್ಟಿಗರು ಮತ್ತು ಅಭಿಮಾನಿಗಳು ಪ್ರಭುದೇವ ಮತ್ತು ಸಿಂಬು ಜೊತೆಗಿನ ಅಫೇರ್‌ನಿಂದ ಸುದ್ದಿಯಾಗಿದ್ದ ನಯನತಾರಾ, ತನಗಿಂತ ಒಂದು ವರ್ಷ ಚಿಕ್ಕವರಾದ ವಿಘ್ನೇಶ್ರನ್ನು ಕೈಹಿಡಿದಿದ್ದಾರೆ.
ವಿಘ್ನೇಶ್ ಮತ್ತು ನಯನತಾರಾ ಅವರ ಮದುವೆ ಮೊದಲಿಗೆ ತಿರುಪತಿ ತಿರುಮಲ ದೇವಸ್ಥಾನದಲ್ಲಿ ನಡೆಯಲಿದೆ ಎಂದು ಹೇಳ ಲಾಗಿತ್ತು.