ನವದೆಹಲಿ: ರಿಯಲ್ ಸ್ಟಾರ್ ಉಪೇಂದ್ರ ಅವರು ವಿಭಿನ್ನವಾದ ಸಿನಿಮಾ ಮಾಡುತ್ತಲೇ ಪ್ರೇಕ್ಷಕರ ಮನಗೆದ್ದ ಯಶಸ್ವಿ ನಟರಾಗಿದ್ದಾರೆ. ನಿರ್ದೇಶನ, ನಟನೆ ಹಾಗೂ ಕೆಲವು ಸಿನಿಮಾಕ್ಕೆ ಹಾಡನ್ನು ಹೇಳುವ ಮೂಲಕವು ನಟ ಉಪೇಂದ್ರ (Upendra) ಅವರು ತಮ್ಮ ಬಹುಮುಖ ಪ್ರತಿಭೆಯನ್ನು ತೆರೆ ಮೇಲೆ ತಂದು ಪ್ರೇಕ್ಷಕರನ್ನು ರಂಜಿಸಿದ್ದಾರೆ. ಇವರು ಕನ್ನಡ ಮಾತ್ರವಲ್ಲದೆ ಈ ಹಿಂದಿನಿಂದಲೂ ಪರಭಾಷೆಯಲ್ಲಿಯೂ ಕೂಡ ಸಿನಿಮಾದಲ್ಲಿ ಮಿಂಚಿದ್ದರು. ಇತ್ತೀಚೆಗೆ ರಜನೀಕಾಂತ್ (Rajinikanth) ಅಭಿನಯದ ಕೂಲಿ (Cooli) ಸಿನಿಮಾದಲ್ಲಿ ಅಭಿನಯಿಸಿ ಪ್ಯಾನ್ ಇಂಡಿಯಾ ಮಟ್ಟಕ್ಕೆ ಗುರುತಿಸಿಕೊಂಡಿದ್ದರು. ಇದೀಗ ಅವರ ನಟನೆಯ ಹಳೆ ಸಿನಿಮಾವನ್ನು ತೆಲುಗಿನಲ್ಲಿ ಮರುಬಿಡುಗಡೆ ಮಾಡಲಾಗುತ್ತಿದೆ. ಈ ಹಿಂದೆ ಇವರ ನಿರ್ದೇಶನದ ಓಂ (OM) ಹಾಗೂ ಎ (A) ಸಿನಿಮಾಗಳು ಮರುಬಿಡುಗಡೆಯಾಗಿ ಹಿಟ್ ಆಗಿತ್ತು. ಇದೀಗ ಅವರೆ ನಟಿಸಿ ನಿರ್ದೇಶಿಸಿದ 'ಉಪೇಂದ್ರ' ಸಿನಿಮಾ ತೆಲುಗಿನಲ್ಲಿ ಮರುಬಿಡುಗಡೆಯಾಗುತ್ತಿದೆ.
ತೆಲುಗು, ತಮಿಳು ಹಾಗೂ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸಾಧನೆ ಮಾಡಿದ್ದ ನಟ ಉಪೇಂದ್ರ ಅವರು ತಮ್ಮ ವಿಭಿನ್ನ ಕಥೆ ಹಾಗೂ ವಿಷಯವಸ್ತುವನ್ನು ಜನರಿಗೆ ಸಿನಿಮಾ ಮೂಲಕ ತೋರ್ಪ ಡಿಸುವ ರೀತಿಯೇ ಭಿನ್ನವಾಗಿದೆ. ಅಂತಹ ವಿಭಿನ್ನವಾದ ಸಿನಿಮಾದಲ್ಲಿ ಉಪೇಂದ್ರ ಸಿನಿಮಾ ಕೂಡ ಒಂದು. ನಟ ಉಪೇಂದ್ರ ಅವರೇ ನಟಿಸಿ ನಿರ್ದೇಶನ ಮಾಡಿದ್ದ ‘ಉಪೇಂದ್ರ’ ಸಿನಿಮಾ ತೆಲುಗಿನಲ್ಲಿ ಅದ್ಧೂರಿಯಾಗಿ ಮರು ಬಿಡುಗಡೆ ಆಗುತ್ತಿದೆ.
ಉಪೇಂದ್ರ ಅವರ ಸಿನಿಮಾಗಳಿಗೆ ಕನ್ನಡದಲ್ಲಿ ಹೇಗೆ ಅಭಿಮಾನಿ ಬಳಗವಿದೆಯೋ ಹಾಗೇ ತೆಲುಗಿ ನಲ್ಲೂ ದೊಡ್ಡ ಸಂಖ್ಯೆಯ ಅಭಿಮಾನಿ ಬಳಗವನ್ನು ಅವರು ಹೊಂದಿದ್ದಾರೆ. ಇವರ ಮೂವಿ ಮೇಕಿಂಗ್ ಮತ್ತು ನಟನೆಗೆ ಹಲವು ಸ್ಟಾರ್ ನಟರು ಕೂಡ ಅಭಿಮಾನಿಗಳಾಗಿದ್ದಾರೆ. ಇವರ ಅಭಿನ ಯದ ಉಪೇಂದ್ರ ಸಿನಿಮಾವನ್ನು ತೆಲುಗಿನಲ್ಲಿ ರೀ ರಿಲೀಸ್ ಮಾಡುತ್ತಿರುವುದು ಅಭಿಮಾನಿಗಳು ಸಂತಸಗೊಂಡಿದ್ದಾರೆ. ‘ಪುಷ್ಪ’, ‘ಪುಷ್ಪ 2’ ಸಿನಿಮಾಗಳನ್ನು ಬಂಡವಾಳ ಹಾಕಿ ನಿರ್ಮಿಸಿರುವ ಮೈತ್ರಿ ಮೂವಿ ಮೇಕರ್ಸ್ ಅವರು ‘ಉಪೇಂದ್ರ’ ಸಿನಿಮಾವನ್ನು ಮರುಬಿಡುಗಡೆ ಮಾಡುತ್ತಿದ್ದಾರೆ.
ಇದನ್ನೂ ಓದಿ:Actor Upendra: ಕುಟುಂಬದೊಂದಿಗೆ ರಾಯರ ದರ್ಶನ ಪಡೆದ ನಟ ಉಪೇಂದ್ರ, ನಟಿ ತಾರಾ
ಮೈತ್ರಿ ಮೂವಿ ಮೇಕರ್ಸ್ ಅವರು ಉಪೇಂದ್ರ ಸಿನಿಮಾ ಮರು ಬಿಡುಗಡೆ ಮಾಡುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಇದೇ ಅಕ್ಟೋಬರ್ 11 ರಂದು ‘ಉಪೇಂದ್ರ’ ಸಿನಿಮಾ ಹೈದರಾಬಾದ್, ವಿಶಾಖಪಟ್ಟಣಂ, ಆಂಧ್ರ ಪ್ರದೇಶ, ತೆಲಂಗಾಣ ಇನ್ನು ಹಲವು ಪ್ರಮುಖ ನಗರಗಳಲ್ಲಿ ಮರು ಬಿಡುಗಡೆ ಆಗುತ್ತಿದೆ ಎಂಬ ಮಾಹಿತಿಯನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಸಂಸ್ಥೆಯು ಪೋಸ್ಟ್ ನಲ್ಲಿ ತಿಳಿಸಿ ಹಂಚಿಕೊಂಡಿದ್ದಾರೆ.
ಉಪೇಂದ್ರ ಸಿನಿಮಾವು 1999ರಲ್ಲಿ ಬಿಡುಗಡೆ ಆಗಿತ್ತು. ಈ ಸಿನಿಮಾಕ್ಕೆ ಗುರುಕಿರಣ್ ಸಂಗೀತ ನೀಡಿದ್ದು ಎಲ್ಲ ಹಾಡುಗಳು ಸೂಪರ್ ಹಿಟ್ ಆಗಿವೆ. ಇದೇ ಸಿನಿಮಾದ ‘ಏನಿಲ್ಲ, ಏನಿಲ್ಲ’ ಹಾಡು ಇತ್ತೀಚೆಗಷ್ಟೆ ಭಾರಿ ವೈರಲ್ ಆಗಿತ್ತು.ಈ ಸಿನಿಮಾದಲ್ಲಿ ನಟ ಉಪೇಂದ್ರ ನಾನು ಎಂಬ ಹೆಸರಿನ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ರವೀನಾ ಟಂಡನ್, ದಾಮಿನಿ ಮತ್ತು ಪ್ರೇಮಾ ನಾಯಕಿಯರಾಗಿ ಇದೇ ಸಿನಿಮಾದಲ್ಲಿ ನಟಿಸಿದ್ದರು. ಮನುಷ್ಯನ ಜೀವನದ ಏರಿಳಿತಗಳು, ಸಂಸಾರ, ಹಣ , ಕೀರ್ತಿ , ಪ್ರೀತಿ ಪ್ರೇಮ, ಸಮಾಜದ ಕಟ್ಟಲೆ ಇತ್ಯಾದಿಗಳನ್ನು ಸಿನಿಮಾ ಕಥೆಯಲ್ಲಿ ಚೆನ್ನಾಗಿ ತಿಳಿಸಲಾಗಿದೆ.