Actor Upendra: ಕುಟುಂಬದೊಂದಿಗೆ ರಾಯರ ದರ್ಶನ ಪಡೆದ ನಟ ಉಪೇಂದ್ರ, ನಟಿ ತಾರಾ
ನಟ, ಪ್ರಜಾಕೀಯ ಪಕ್ಷದ ಅಧ್ಯಕ್ಷ ಉಪೇಂದ್ರ ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ಭಾನುವಾರ ಮಂತ್ರಾಲಯಕ್ಕೆ ಭೇಟಿ ನೀಡಿ ಶ್ರೀ ರಾಯರ ದರ್ಶನ ಪಡೆದರು. ಇದೇ ಸಂದರ್ಭದಲ್ಲಿ ನಟಿ ತಾರಾ ಕೂಡ ಇದ್ದರು. ಇವರನ್ನು ಮಂತ್ರಾಲಯದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಲವರು ಗೌರವಿಸಿ ಬೀಳ್ಕೊಟ್ಟರು.



ಕನ್ನಡ ಚಿತ್ರ ನಟ, ಪ್ರಜಾಕೀಯ ಪಕ್ಷದ ಅಧ್ಯಕ್ಷ ಉಪೇಂದ್ರ ಅವರು ತಮ್ಮ ಪತ್ನಿ ಪ್ರಿಯಾಂಕಾ ಮತ್ತು ಮಕ್ಕಳಾದ ಐಶ್ವರ್ಯ ಮತ್ತು ಆಯುಷ್ ಅವರೊಂದಿಗೆ ಭಾನುವಾರ ಮಂತ್ರಾಲಯಕ್ಕೆ ಭೇಟಿ ನೀಡಿ ಶ್ರೀ ರಾಯರ ದರ್ಶನ ಪಡೆದರು. ಈ ಸಂದರ್ಭದಲ್ಲಿ ಹಿರಿಯ ನಟಿ ತಾರಾ ಕೂಡ ಇವರೊಂದಿಗೆ ರಾಯರ ದರ್ಶನ ಪಡೆದರು.

ಉಪೇಂದ್ರ ಮತ್ತು ಅವರ ಕುಟುಂಬ ಹಾಗೂ ನಟಿ ತಾರಾ ಮಂತ್ರಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಬಳಿಕ ಅವರಿಗೆ ಮಂತ್ರಾಲಯದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಲವರು ಫಲಮಂತ್ರಾಕ್ಷತೆ, ಶೇಷವ ವಸ್ತ್ರ ಹಾಗೂ ಸ್ಮರಣಿಕೆ ನೀಡಿ ಆಶೀರ್ವಾದ ಮಾಡಿದರು.

ಉಪೇಂದ್ರ ಮತ್ತು ಪ್ರಿಯಾಂಕಾ ಉಪೇಂದ್ರ ದಂಪತಿ ತಮ್ಮ ಮಕ್ಕಳೊಂದಿಗೆ ರಾಘವೇಂದ್ರ ಸ್ವಾಮಿಯ ದರ್ಶನ ಪಡೆದುಕೊಂಡರು. ಇದಕ್ಕೂ ಮೊದಲು ಶ್ರೀ ಮಂಚಲಮ್ಮ ದೇವಿಯ ವಿಶೇಷ ಪೂಜೆ ನೆರವೇರಿಸಿದರು. ಬಳಿಕ ರಾಯರ ಮೂಲ ಬೃಂದಾವನ ದರ್ಶನ ಪಡೆದು, ಅಲ್ಲಿ ವಿಶೇಷ ಪೂಜೆ, ಬಳಿಕ ಮಠದ ಆವರಣದಲ್ಲಿ ನಡೆದ ಅಂಬಾರಿ ರಥೊತ್ಸವದಲ್ಲೂ ಪಾಲ್ಗೊಂಡರು.

ಅನಂತರ ಅವರು ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರನ್ನು ಭೇಟಿಯಾಗಿ ಉಭಯ ಕುಶಲೋಪರಿ ವಿಚಾರಿಸಿದರು. ಈ ಸಂದರ್ಭದಲ್ಲಿ ಪೀಠಾಧಿಪತಿಗಳು ಅವರನ್ನು ಗೌರವಿಸಿದರು. ಉಪೇಂದ್ರ ದಂಪತಿ ಹಾಗೂ ಕುಟುಂಬ ಸದಸ್ಯರಿಗೆ ಫಲಮಂತ್ರಾಕ್ಷತೆ, ಶೇಷವಸ್ತ್ರ ಹಾಗೂ ಸ್ಮರಣಿಕೆ ನೀಡಿ ಆಶೀರ್ವದಿಸಿದರು.

ನಟಿ ತಾರಾ ಅವರು ಕೂಡ ಈ ಸಂದರ್ಭದಲ್ಲಿ ತಮ್ಮ ಕುಟುಂಬದೊಂದಿಗೆ ಮಠಕ್ಕೆ ಭೇಟಿ ನೀಡಿ ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನದ ದರ್ಶನ ಪಡೆದು, ವಿಶೇಷ ಪೂಜೆ ನೇರವೇರಿಸಿದರು. ಬಳಿಕ ಶ್ರೀ ಸುಬುಧೇಂದ್ರ ತೀರ್ಥ ಅವರಿಂದ ಆಶೀರ್ವಾದ ಪಡೆದುಕೊಂಡರು.