Neha Shetty: ಪವನ್ ಕಲ್ಯಾಣ್ ನಟನೆ ಒಜಿ ಸಿನಿಮಾ ತಂಡದಿಂದ ಕನ್ನಡದ ನಟಿಗೆ ಅವಮಾನ! ಆಗಿದ್ದಾದರೂ ಏನು?
OG Movie: ಪವನ್ ಕಲ್ಯಾಣ್ ಅಭಿನಯದ ಒಜಿ ಸಿನಿಮಾದಲ್ಲಿ ನಟಿ ನೇಹಾ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು. ಆದರೆ ಆ ಸಿನಿಮಾದಲ್ಲಿ ಅವರು ಡ್ಯಾನ್ಸ್ ಮಾಡಿದ್ರೂ ಕೂಡ ಈ ಹಾಡು ಮಾತ್ರ ತೆರೆ ಮೇಲೆ ಬರಲೇ ಇಲ್ಲ. ನೇಹಾ ಅವರು ಈ ಸಿನಿಮಾದಲ್ಲಿ ಡ್ಯಾನ್ಸ್ ಒಂದನ್ನು ಮಾಡಿದ್ದು ಥೈಲ್ಯಾಂಡ್‌ನಲ್ಲಿ ಹಾಡಿನ ಚಿತ್ರೀಕರಣವಾಗಿತ್ತು ಎಂದು ಹೇಳಲಾಗಿದೆ. ಆದರೂ ನೇಹಾ ಅವರ ಹಾಡನ್ನು ಚಿತ್ರದಿಂದ ತೆಗೆದಿದ್ದೇಕೆ..? ಎಂಬ ಪ್ರಶ್ನೆಗಳು ಉಂಟಾಗಿದೆ.

-

ನವದೆಹಲಿ: ಸ್ಯಾಂಡಲ್ ವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ಮುಂಗಾರು ಮಳೆ ಸಿನಿಮಾ ಸೂಪರ್ ಹಿಟ್ ಆಗಿದ್ದು ನಮಗೆಲ್ಲ ತಿಳಿದೆ ಇದೆ. ಇದೇ ಸಿನಿಮಾ ನಟ ಗಣೇಶ್ ಹಾಗೂ ನಟಿ ಪೂಜಾ ಗಾಂಧಿ ಅವರಿಗೆ ಬಿಗ್ ಸಕ್ಸಸ್ ನೀಡುವುದರ ಜೊತೆಗೆ ಸಾಲು ಸಾಲು ಸಿನಿಮಾ ಆಫರ್ಸ್ ಕೂಡ ಬರುವಂತೆ ಮಾಡಿತು. ಬಳಿಕ ಮುಂಗಾರು ಮಳೆ ಭಾಗ 2 ನ್ನು ಕೂಡ ಹೊಸ ಥೀಂ ನಲ್ಲಿ ರಿಲೀಸ್ ಮಾಡಲಾಯಿತು. ನಟ ಗೋಲ್ಡನ್ ಸ್ಟಾರ್ ಗಣೇಶ್, ಕ್ರೇಜಿ ಸ್ಟಾರ್ ರವಿಚಂದ್ರನ್ ಹಾಗೂ ನಟಿ ನೇಹಾ ಶೆಟ್ಟಿ (Neha Shetty) ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡರು. ಆದರೆ ಈ ಸಿನಿಮಾ ಯಶಸ್ಸು ಪಡೆಯಲಿಲ್ಲ. ಅಂತೆಯೇ ಈ ಸಿನಿಮಾದ ನಾಯಕಿ ನೇಹಾ ಶೆಟ್ಟಿ ಅವರಿಗೂ ಕೂಡ ಸಿನಿಮಾ ರಂಗದಲ್ಲಿ ಹೆಚ್ಚಿನ ಅವಕಾಶ ಸಿಕ್ಕಿಲ್ಲ. ಬಳಿಕ ಸ್ಯಾಂಡಲ್ ವುಡ್ ನಿಂದ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಸಾಲು ಸಾಲು ಸಿನಿಮಾ ಮಾಡಿದ್ದರೂ ದೊಡ್ಡ ಮಟ್ಟಿಗೆ ಯಶಸ್ಸು ಸಿಗಲಿಲ್ಲ. 2022ರಲ್ಲಿ ತೆರೆಕಂಡ ಬಂದ ''ಡಿಜೆ ಟಿಲ್ಲು'' ಸಿನಿಮಾ ಇವರಿಗೆ ಸ್ವಲ್ಪ ಕೀರ್ತಿ ತಂದು ಕೊಟ್ಟಿತು. ಬಳಿಕ ಪವನ್ ಕಲ್ಯಾಣ್ ಅಭಿನಯದ ಒಜಿ ಸಿನಿಮಾದಲ್ಲಿ ಇವರು ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು. ಆದರೆ ಆ ಸಿನಿಮಾದಲ್ಲಿ ಅವರು ಡ್ಯಾನ್ಸ್ ಮಾಡಿದ್ರೂ ಕೂಡ ಈ ಹಾಡು ಮಾತ್ರ ತೆರೆ ಮೇಲೆ ಬರಲೇ ಇಲ್ಲ.
ನಟಿ ನೇಹಾ ಅವರು ಸಿನಿಮಾ ಇಂಡಸ್ಟ್ರಿಯಲ್ಲಿ ಕಳೆದ ಎರಡು ಮೂರು ವರ್ಷದಿಂದ ಅಷ್ಟಾಗಿ ಸಕ್ರಿಯವಾಗಿಲ್ಲ. ಹಾಗಿದ್ದರು ಸೋಶಿಯಲ್ ಮಿಡಿಯಾದಲ್ಲಿ ಫ್ಯಾನ್ಸ್ ಫಾಲೋವರ್ಸ್ ಇವರಿಗೆ ತುಂಬಾ ಇದ್ದಾರೆ. ಸಿನಿಮಾ ಇವೆಂಟ್, ಮಾಡೆಲಿಂಗ್ , ಫೋಟೊಶೂಟ್ ನಲ್ಲಿ ಭಾಗಿಯಾಗುತ್ತಿದ್ದ ಇವರಿಗೆ ಯಾವಾಗಲು ಅಭಿಮಾನಿಗಳು ಹೊಸ ಸಿನಿಮಾ ಯಾವಾಗ ಎಂದು ಕೇಳುತ್ತಿದ್ದರು. ನೇಹಾ ಶೆಟ್ಟಿ ಅವರು ಇತ್ತೀಚೆಗಷ್ಟೆ ಶಾಪಿಂಗ್ ಮಾಲ್ ಒಂದರ ಉದ್ಘಾಟನೆ ಸಮಾರಂಭಕ್ಕೆ ಹಾಜರಾಗಿದ್ದಾಗ ಅಭಿಮಾನಿಗಳು ಇದೆ ಪ್ರಶ್ನೆ ಕೇಳಿದ್ದರು. ಅದಕ್ಕೆ ಅವರು ಒಜಿ ಚಿತ್ರದಲ್ಲಿ ತಾವು ಇರುವುದಾಗಿ ಹೇಳಿದ್ದರು. ಅದರೆ ಸಿನಿಮಾ ಈಗಾಗಲೇ ರಿಲೀಸ್ ಆಗಿದ್ದರೂ ಆ ಸಿನಿಮಾದಲ್ಲಿ ಆಕೆ ಇಲ್ಲದ್ದು ಕಂಡು ಅಭಿಮಾನಿಗಳಿಗೂ ಅಚ್ಚರಿಗೊಂಡಿದ್ದಾರೆ.
ನೇಹಾ ಅವರು ಈ ಸಿನಿಮಾದಲ್ಲಿ ಡ್ಯಾನ್ಸ್ ಒಂದನ್ನು ಮಾಡಿದ್ದು ಥೈಲ್ಯಾಂಡ್‌ನಲ್ಲಿ ಹಾಡಿನ ಚಿತ್ರೀಕರಣವಾಗಿತ್ತು ಎಂದು ಹೇಳಲಾಗಿದೆ. ಆದರೂ ನೇಹಾ ಅವರ ಹಾಡನ್ನು ಚಿತ್ರದಿಂದ ತೆಗೆದಿದ್ದೇಕೆ..? ಎಂಬ ಪ್ರಶ್ನೆಗಳು ಉಂಟಾಗಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಕೂಡ ನಡೆಯುತ್ತಿದೆ. ನಟಿ ನೇಹಾ ಅವರ ಸೀನ್ ಕಟ್ ಮಾಡುವ ಮೂಲಕ ನಿರ್ದೇಶಕರು ಹಾಗೂ ಒಜಿ ಸಿನಿಮಾ ತಂಡ ಆಕೆಗೆ ಅವಮಾನ ಮಾಡಿದ್ದಾರೆ ಎಂದು ಟ್ರೋಲರ್ಸ್ ಒಜಿ ಸಿನಿಮಾ ತಂಡದ ವಿರುದ್ಧ ಟೀಕೆ ಮಾಡಿದ್ದಾರೆ.
ಈ ನಡುವೆ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದ ನಿರ್ದೇಶಕ ಸುಜಿತ್ ಅವರಿಗೆ ಇದೇ ವಿಚಾರದ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದ್ದಾರೆ. ಈ ವೇಳೆ ಅವರು ಪ್ರತಿಕ್ರಿಯೆ ನೀಡಿದ್ದು , ನಾವು ನಮ್ಮ ಚಿತ್ರದಲ್ಲಿ ವಿಶೇಷವಾದ ಹಾಡೊಂದು ಇದೆ ಆ ಹಾಡಿನಲ್ಲಿ ಅವರು ಕುಣಿದಿದ್ದಾರೆ ಎಂದು ಹೇಳಿಲ್ಲವಲ್ಲ? ಅಥವಾ ಯಾವುದೇ ಘೋಷಣೆ ಕೂಡ ಮಾಡಿದ್ದೇವಾ ಇಲ್ಲವಲ್ಲ ಎಂದು ಅವರು ಪ್ರತ್ಯುತ್ತರ ನೀಡಿದ್ದಾರೆ. ಆದರೆ ವರದಿ ಒಂದರ ಪ್ರಕಾರ ನಿರ್ದೇಶಕರು ನಟ ಪವನ್ ಕಲ್ಯಾಣ್ ಅವರ ಸಮ್ಮತಿ ಮೇರೆಗೆ ಈ ಹಾಡನ್ನು ಡಿಲಿಟ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಇಷ್ಟೆಲ್ಲ ಆಗಿದ್ದರು ಕೂಡ ನಟಿ ನೇಹಾ ಅವರು ಈ ಬಗ್ಗೆ ಯಾವ ಹೇಳಿಕೆ ನೀಡದೆ ಮೌನ ವಹಿಸಿದ್ದಾರೆ. ಇನ್ನಾದರು ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತಾರೆಯೇ ಎಂದು ಕಾದುನೋಡಬೇಕು. ನಟಿ ನೇಹಾ ಶೆಟ್ಟಿ ಅವರು ಕನ್ನಡದಲ್ಲಿ ಮುಂಗಾರು ಮಳೆ ಸಿನಿಮಾದಲ್ಲಿ ನಂದಿನಿ ಎಂಬ ಪಾತ್ರದಲ್ಲಿ ಅದ್ಭುತವಾಗಿ ಅಭಿನಯಿಸಿದ್ದರು. ಅದಾದ ಬಳಿಕ ತೆಲುಗಿನ ಮೆಹಬೂಬಾ, ರೂಲ್ಸ್ ರಂಜನ್, ಗ್ಯಾಂಗ್ಸ್ ಆಫ್ ಗೋದಾವರಿ, ಗಲ್ಲಿ ರೌಡಿ, ಮೋಸ್ಟ್ ಎಲಿಜೆಬಲ್ ಬ್ಯಾಚುಲರ್ ಸೇರಿದಂತೆ ಅನೇಕ ಚಿತ್ರ ಮಾಡಿದ್ದಾರೆ.