ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kushi 2: ನಟ ವಿಜಯ್ ಪುತ್ರ ಹಾಗೂ ನಟಿ ಜ್ಯೋತಿಕಾ ಪುತ್ರಿ ಕಾಂಬಿನೇಶನ್‌ನಲ್ಲಿ ಖುಷಿ ಪಾರ್ಟ್ 2 ಸಿನಿಮಾ?

Kushi 2: ತಮಿಳು ನಟ ವಿಜಯ್ ಅಭಿನಯದ ಖುಷಿ ಸಿನಿಮಾವು 2000 ರಲ್ಲಿ ಬಿಡುಗಡೆಯಾಗಿ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಬಳಿಕ ಇದೀಗ ಮತ್ತೆ ಇದೇ ಚಿತ್ರವು ಸೆಪ್ಟೆಂಬರ್ 25 ರಂದು ಮರು ಬಿಡುಗಡೆ ಯಾಗಲಿದೆ. ಈ ಹಿನ್ನೆಲೆಯಲ್ಲಿ ಚೆನ್ನೈನಲ್ಲಿ ಪತ್ರಿಕಾಗೋಷ್ಠಿ ನಡೆಸಲಾಗಿದೆ. ಈ ವೇಳೆ ನಿರ್ದೇಶಕ ಎಸ್.ಜೆ. ಸೂರ್ಯ, ನಿರ್ಮಾಪಕ ಎ.ಎಂ. ರತ್ನಂ ಮತ್ತು ಚಿತ್ರತಂಡದ ಇತರ ಸದಸ್ಯರು ಭಾಗವಹಿಸಿ ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಖುಷಿ 2 ಚಿತ್ರ ಬರುತ್ತಾ ಎಂಬ ಪ್ರಶ್ನೆಗೂ ಅವರು ಉತ್ತರಿಸಿದ್ದಾರೆ.

ನಟ ವಿಜಯ್ ಪುತ್ರ -ಜ್ಯೋತಿಕಾ ಪುತ್ರಿ ಕಾಂಬಿನೇಶನ್‌ನಲ್ಲಿ ಖುಷಿ-2?

-

Profile Pushpa Kumari Sep 22, 2025 4:48 PM

ನವದೆಹಲಿ: ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲವೊಂದು ಹಿಟ್ ಸಿನಿಮಾಗಳನ್ನು ಪಾರ್ಟ್ 2 ಮಾಡಿ ರಿಲೀಸ್ ಮಾಡುವುದು ಸಾಮಾನ್ಯ ವಿಚಾರವಾಗಿದೆ. ಹೆಚ್ಚಾಗಿ ಇಂತಹ ಸಿನಿಮಾದಲ್ಲಿ ಒಬ್ಬನೆ ಹೀರೋನನ್ನು ಮಾತ್ರ ಇಟ್ಟುಕೊಳ್ಳುತ್ತಾರೆ. ಇನ್ನು ಕೆಲವರು ಆ ಸಿನಿಮಾ ನಟರ ಮಕ್ಕಳನ್ನು ಆಯ್ಕೆ ಮಾಡಿ ಪಾರ್ಟ್2 ಸಿನಿಮಾ ಮಾಡುವುದು ಇದೆ. ಕನ್ನಡದ ವರನಟ ಡಾ. ರಾಜ್ ಕುಮಾರ್ ಅವರ ಗಂಧದ ಗುಡಿ ಸಿನಿಮಾದ ದ್ವಿತೀಯ ಭಾಗಕ್ಕೆ ಶಿವರಾಜ್ ಕುಮಾರ್ ಹೀರೊ ಆಗಿ ಅಭಿನಯಿಸಿದ್ದರು. ಬೇಡರ ಕಣ್ಣಪ್ಪ ಸಿನಿಮಾವನ್ನು ಶಿವಮೆಚ್ಚಿದ ಕಣ್ಣಪ್ಪನಾಗಿ ಮಾಡಿ ಅದರಲ್ಲೂ ಶಿವರಾಜ್ ಕುಮಾರ್ ಅವರು ಅಭಿನಯಿಸಿದ್ದರು. ಅಂತೆಯೇ ತಮಿಳು ನಟ ವಿಜಯ್ ಅವರ ಖುಷಿ (Kushi Movie) ಸಿನಿಮಾ ವನ್ನು ಪಾರ್ಟ್ 2 ಆಗಿ ಮಾಡುತ್ತಾರೆ ಎಂಬ ಸುದ್ದಿಯೊಂದು ಸೋಶಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ. ಪಾರ್ಟ್ 2 ನಲ್ಲಿ ವಿಜಯ್ ಪುತ್ರ ಹಾಗೂ ನಟಿ ಜ್ಯೋತಿಕಾ ಅವರ ಪುತ್ರಿ ಇಬ್ಬರು ಕಾಣಿಸಿಕೊಳ್ಳಲಿದ್ದು ಸಿನಿಮಾ ಇಂಡಸ್ಟ್ರಿಯಲ್ಲಿ ಈ ಸಿನಿಮಾ ಬಗ್ಗೆ ಸಂಚಲನ ಉಂಟು ಮಾಡುತ್ತಿದೆ. ಈ ಬಗ್ಗೆ ಸ್ವತಃ ಖುಷಿ ಸಿನಿಮಾದ ನಿರ್ದೇಶಕ ಎಸ್.ಜೆ. ಸೂರ್ಯ ಹಾಗೂ ನಿರ್ಮಾಪಕ ಎ.ಎಂ. ರತ್ನಂ ಅವರು ಮಾತನಾಡಿದ್ದಾರೆ.

ತಮಿಳು ನಟ ವಿಜಯ್ ಅಭಿನಯದ ಖುಷಿ ಸಿನಿಮಾವು 2000 ರಲ್ಲಿ ಬಿಡುಗಡೆಯಾಗಿ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಬಳಿಕ ಇದೀಗ ಮತ್ತೆ ಇದೇ ಚಿತ್ರವು ಸೆಪ್ಟೆಂಬರ್ 25 ರಂದು ಮರು ಬಿಡುಗಡೆ ಯಾಗಲಿದೆ. ಈ ಹಿನ್ನೆಲೆಯಲ್ಲಿ ಚೆನ್ನೈನಲ್ಲಿ ಪತ್ರಿಕಾ ಗೋಷ್ಠಿ ನಡೆಸಲಾಗಿದೆ. ಈ ವೇಳೆ ನಿರ್ದೇಶಕ ಎಸ್.ಜೆ. ಸೂರ್ಯ, ನಿರ್ಮಾಪಕ ಎ.ಎಂ. ರತ್ನಂ ಮತ್ತು ಚಿತ್ರತಂಡದ ಇತರ ಸದಸ್ಯರು ಭಾಗವಹಿಸಿ ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಖುಷಿ 2 ಚಿತ್ರ ಬರುತ್ತಾ ಎಂಬ ಪ್ರಶ್ನೆಗೂ ಅವರು ಉತ್ತರಿಸಿದ್ದಾರೆ.

ಖುಷಿ ಸಿನಿಮಾದ ನಿರ್ದೇಶಕ ಎಸ್.ಜೆ. ಸೂರ್ಯ ಅವರು ಖುಷಿ ಸಿನಿಮಾದ ಹಳೆ ಸಂಗತಿ ಬಗ್ಗೆ ಮಾತನಾಡಿದ್ದಾರೆ. ನಟ ವಿಜಯ್‌ಗೆ 'ಖುಷಿ ' ಕಥೆಯನ್ನು ಹೇಳಿದಾಗ ಅವರು ಹೆಚ್ಚು ಪ್ರತಿಕ್ರಿಯೆ ನೀಡಿಲ್ಲ‌ ಅವರು ಅದರ ಬಗ್ಗೆ ಹೆಚ್ಚು ಆಸಕ್ತಿ ಹೊಂದಿಲ್ಲ ಎಂದು ನಾನು ಭಾವಿಸಿ ಅವರಿಗೆ ಇನ್ನೊಂದು ಕಥೆ ಹೇಳಲು ಮುಂದಾದೆ. ಆದರೆ ವಿಜಯ್, 'ಇಲ್ಲ, ಈ ಕಥೆ ಒಳ್ಳೆಯದಿದೆ ಇದನ್ನೇ ಮಾಡೋಣ ಎಂದು ಹೇಳಿದರು.

ನಿರ್ಮಾಪಕ ಎ.ಎಂ. ರತ್ನಂ 'ಅವರನ್ನು ಖುಷಿ ಭಾಗ 2' ಇದೆಯೇ ಎಂದು ಮಾಧ್ಯಮದವರು ಪ್ರಶ್ನಿಸಿದ್ದಾರೆ. ಈ ಬಗ್ಗೆ ನಮಗೂ ಯೋಚನೆ ಈ ಹಿಂದೆ ಇತ್ತು. ಆದರೆ ವಿಜಯ್ ಅವರು ಸದ್ಯ ತಮ್ಮ ವೈಯಕ್ತಿಕ ಹಾಗೂ ರಾಜಕೀಯ ಬದುಕಿನಲ್ಲಿ ಬ್ಯುಸಿಯಾಗಿದ್ದಾರೆ. ಹಾಗಾಗಿ ಸದ್ಯಕ್ಕಂತು ಈ ಯೋಚನೆ ಮಾಡುವಂತಿಲ್ಲ ಎಂದಿದ್ದಾರೆ. ಬಳಿಕ ಮಾಧ್ಯಮದವರು ಖುಷಿ ಭಾಗ 2 ರಲ್ಲಿ ವಿಜಯ್ ನಟನೆ ಯಿಂದ ದೂರ ಸರಿಯುತ್ತಿರುವುದರಿಂದ ವಿಜಯ್ ಪುತ್ರ ಹಾಗೂ ಜ್ಯೋತಿಕಾ ಅವರ ಮಗಳ ಜೊತೆಗೆ, ಖುಷಿ ಪಾರ್ಟ್ 2 ತರಬಹುದೇ ಎಂದು ಕೇಳಿದ್ದಾರೆ.

ಇದನ್ನೂ ಓದಿ:Dad Movie: ಶಿವರಾಜ್‍ಕುಮಾರ್ ಅಭಿನಯದ ‘ಡ್ಯಾಡ್‍ʼ ಚಿತ್ರಕ್ಕೆ ನಂದಿ ಬೆಟ್ಟದಲ್ಲಿ 2ನೇ ಹಂತದ ಚಿತ್ರೀಕರಣ

ಇದಕ್ಕೆ ಎಸ್.ಜೆ. ಸೂರ್ಯ ಅವರು ಪ್ರತಿಕ್ರಿಯೆ ನೀಡಿ, ನಿಮ್ಮ ಯೋಚನೆ ಚೆನ್ನಾಗಿದೆ. ಆದರೆ ಕೆಲವು ದೃಶ್ಯವನ್ನು ಮರುಸೃಷ್ಟಿಸಲು ಸಾಧ್ಯವಿಲ್ಲ. ಅದು ಅದಾಗಲೇ ಆಗಬೇಕು. ದೇವರ ಇಚ್ಛೆಯಿದ್ದರೆ, ಎಲ್ಲವೂ ಸರಿಯಾಗಿ ನಡೆಯುತ್ತದೆ. ಮುಂದೊಂದು ದಿನ ಈ ಕಾಂಬಿನೇಶನ್ ನಲ್ಲಿ ಬೇರೊಂದು ಸಿನಿಮಾ ಬಂದರೂ ಆಶ್ಚರ್ಯವಿಲ್ಲ ಎಂದು ಉತ್ತರಿಸಿದರು.ಈ ಮೂಲಕ ವಿಜಯ್ ಪುತ್ರ ಮುಂದಿನ ದಿನದಲ್ಲಿ ಸಿನಿಮಾಕ್ಕೆ ಬರಬಹುದು ಎಂದು ಅಭಿಮಾನಿಗಳು ಕಾತುರರಾಗಿದ್ದಾರೆ.

2000ರಲ್ಲಿ ತೆರೆಕಂಡ ಖುಷಿ ಸಿನಿಮಾದಲ್ಲಿ ವಿಜಯ್ ಗೆ ನಾಯಕಿಯಾಗಿ ಜ್ಯೋತಿಕಾ ಅವರು ತೆರೆ ಮೇಲೆ ಮಿಂಚಿದ್ದರು. ಕಾಲೇಜಿನ ರೋಮ್ಯಾಂಟಿಕ್ ಲವ್ ಸ್ಟೋರಿ ಇದಾಗಿದ್ದು ಸೂಪರ್ ಹಿಟ್ ಸಿನಿಮಾ ಇದಾಗಿತ್ತು‌. ಚಿತ್ರದಲ್ಲಿ ದೇವಾ ಅವರ ಸಂಗೀತ ಪ್ರಮುಖ ಪಾತ್ರ ವಹಿಸಿತ್ತು. ಸದ್ಯ ನಟ ವಿಜಯ್ ಪುತ್ರ ಜೇಸನ್ ಸಂಜಯ್ ತಮಿಳು ಚಲನಚಿತ್ರೋದ್ಯಮದಲ್ಲಿ ನಿರ್ದೇಶನ ಕ್ಷೇತ್ರಕ್ಕೆ ಕಾಲಿಟ್ಟಿದ್ದು ಜೆಎಸ್ 01 ಹೆಸರಿನ ಸಿನಿಮಾಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.