Sonam Kapoor: ತಾಯಿಯಾದ ಬಳಿಕ ಬಾಲಿವುಡ್‌ಗೆ ಮತ್ತೆ ಕಂಬ್ಯಾಕ್ ಮಾಡಿದ ಖ್ಯಾತ ನಟಿ
Sonam Kapoor: ಇತ್ತೀಚೆಗೆ ಸೋನಮ್ ಸಿನಿಮಾದಿಂದ ಗ್ಯಾಪ್ ತೆಗೆದುಕೊಂಡು ತಾಯ್ತನದ ಖುಷಿ ಯಲ್ಲಿದ್ದು ತಮ್ಮ ಮಗ ವಾಯು ಆರೈಕೆಯಲ್ಲಿ ತೊಡಗಿಕೊಂಡಿದ್ದರು. ಇದೀಗ ತಾಯ್ತನದ ನಂತರ ನಟಿ ಸೋನಮ್ ಕಪೂರ್ ಅವರು ಬಾಲಿವುಡ್‌ಗೆ ಕಮ್ ಬ್ಯಾಕ್ ಆಗುವ ಕುರಿತು ಖಚಿತಪಡಿಸಿದ್ದಾರೆ. ಕ್ಯಾಮರಾ ಎದುರಿಸಲು ನಾನು ಬಹಳಷ್ಟು ಉತ್ಸುಕಳಾಗಿದ್ದೇನೆ ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

-

ನವದೆಹಲಿ: 'ಸಾವರಿಯಾ' ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ನಟಿ ಸೋನಮ್ ಕಪೂರ್ (Sonam Kapoor) ಬಹುಬೇಡಿಕೆಯ ನಟಿಯಾಗಿದ್ದಾರೆ. ಹಲವಾರು ಹಿಟ್ ಚಿತ್ರಗಳನ್ನು ನೀಡಿದ್ರೂ ಮಗುವಾದ ಬಳಿಕ ಸಿನಿಮಾ ಕೆಲಸಗಳಿಗೆ ವಿರಾಮ ತೆಗೆದುಕೊಂಡಿದ್ದಾರೆ. ಹೆಚ್ಚಾಗಿ ಪತಿ ಮಗುವಿನೊಂದಿಗೆ ಸಮಯ ಕಳೆಯುತ್ತಿದ್ದ ಇವರು ಯಾವಾಗ ಹೊಸ ಸಿನಿಮಾ ಘೋಷಣೆ ಮಾಡ್ತಾರೆ ಎಂದು ಫ್ಯಾನ್ಸ್ ಕಾಯುತ್ತಿದ್ದರು. ಇದೀಗ ಅವರು ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದು ತಾಯ್ತನದ ಕಾರಣದಿಂದ ತೆಗೆದುಕೊಂಡಿದ್ದ ವಿರಾಮದ ನಂತರ ಮತ್ತೆ ಚಿತ್ರರಂಗಕ್ಕೆ ಕಮ್ ಬ್ಯಾಕ್ ಆಗುತ್ತಿದ್ದಾರೆ. ತನ್ನ ಹೊಸ ಸಿನಿಮಾ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ತಾಯ್ತ ನದ ಅನುಭವ, ಮಹಿಳಾ ಪ್ರಧಾನ ಪಾತ್ರಗಳು ಮತ್ತು ತಮ್ಮ ಮುಂಬರುವ ಚಿತ್ರಗಳ ಬಗ್ಗೆ ಸೋನಮ್ ಮಾತನಾಡಿದ್ದಾರೆ.
ಬಾಲಿವುಡ್‌ನ ಅತ್ಯಂತ ಬೇಡಿಕೆಯ ನಟಿಯರಲ್ಲಿ ಸೋನಮ್ ಕೂಡ ಒಬ್ಬರು. ಅಂತರರಾಷ್ಟ್ರೀಯ ಮಟ್ಟದ ಸಿನಿಮಾ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಅವರು ಮಹಿಳಾ ಪ್ರಧಾನ ಪಾತ್ರಗಳಲ್ಲಿ ನಟಿಸುವ ಮೂಲಕ ಹೆಚ್ಚು ಫೇಮ್ ಗಿಟ್ಟಿಸಿಕೊಂಡಿದ್ದಾರೆ. ಇತ್ತೀಚೆಗೆ ಸೋನಮ್ ಸಿನಿ ಮಾದಿಂದ ಗ್ಯಾಪ್ ತೆಗೆದುಕೊಂಡು ತಾಯ್ತನದ ಖುಷಿಯಲ್ಲಿದ್ದು ತಮ್ಮ ಮಗ ವಾಯು ಆರೈಕೆ ಯಲ್ಲಿ ತೊಡಗಿಕೊಂಡಿದ್ದರು. ಇದೀಗ ತಾಯ್ತನದ ನಂತರ ನಟಿ ಸೋನಮ್ ಕಪೂರ್ ಅವರು ಬಾಲಿ ವುಡ್‌ಗೆ ಕಮ್ ಬ್ಯಾಕ್ ಆಗುವ ಕುರಿತು ಖಚಿತಪಡಿಸಿದ್ದಾರೆ. ಕ್ಯಾಮರಾ ಎದುರಿಸಲು ನಾನು ಬಹಳಷ್ಟು ಉತ್ಸುಕಳಾಗಿದ್ದೇನೆ ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ತಾಯ್ತನದ ಬಗ್ಗೆ ಭಾವುಕತೆಯಿಂದ ಮಾತನಾಡಿದ ಸೋನಮ್, "ನಾನು ತಾಯಿಯಾದ ಮೇಲೆ ಮಗನಿಗೆ ಸಾಧ್ಯವಾದಷ್ಟು ಸಮಯ ನೀಡಬೇಕೆಂದು ಬಯಸಿದೆ. ಮಗುವಿನ ಬೆಳವಣಿಗೆಯ ಪ್ರತಿ ಯೊಂದು ಹಂತವನ್ನೂ ಕಣ್ತುಂಬಿಕೊಳ್ಳುವುದು ನನಗೆ ಬಹಳಷ್ಟು ಮುಖ್ಯವಾಗಿತ್ತು. ತಾಯಿಯಾದ ಅನುಭವ ನನ್ನ ಜೀವನದ ಅತ್ಯಂತ ಸಾರ್ಥಕ ಭಾವ'' ಎಂದು ಹೇಳಿದರು.
ಮುಂದಿನ ಸಿನಿಮಾದಲ್ಲಿ ನಟಿಸುವ ಬಗ್ಗೆ ಮಾತನಾಡಿ ಈಗ ನಾನು ಮತ್ತೆ ನಟನೆಗೆ ಮರಳಲಿದ್ದೇನೆ. ನಾನು ಯಾವಾಗಲೂ ಮಹಿಳಾ ಪ್ರಧಾನ ಕಥೆಗಳನ್ನು ಆಯ್ದುಕೊಳ್ಳಲು ಪ್ರಯತ್ನಿಸಿದ್ದೇನೆ. ಈಗ ಕೂಡ ತನ್ನ ದೃಷ್ಟಿಕೋನ ಬದಲಾಗಿಲ್ಲ. ನಾನು ಮಹಿಳಾ ಪಾತ್ರ ಗಳಿಗೆ ಹೆಚ್ಚಿನ ಒತ್ತು ನೀಡುವ ಕಥೆಗಳನ್ನು ಹುಡುಕುತ್ತಿದ್ದೇನೆ. ಮತ್ತೆ ಕ್ಯಾಮರಾ ಮುಂದೆ ಬರಲು ನಾನು ಬಹಳಷ್ಟು ಉತ್ಸು ಕಳಾಗಿದ್ದೇನೆ. ತಾಯಿಯಾದ ನಂತರದ ನನ್ನ ಮೊದಲ ಸಿನಿಮಾದ ಶೂಟಿಂಗ್ 2025ರ ಕೊನೆಯ ತಿಂಗಳಿನಲ್ಲಿ ಪ್ರಾರಂಭವಾಗಲಿದೆ ಎಂದು ಸೋನಮ್ ತಿಳಿಸಿದರು.
2007ರಲ್ಲಿ ಸಂಜಯ್ ಲೀಲಾ ಬನ್ಸಾಲಿ ಅವರ ಸಾವರಿಯಾ ಚಿತ್ರದ ಮೂಲಕ ಸೋನಮ್ ಬಾಲಿವುಡ್‌ಗೆ ಆಗಮಿಸಿದ್ದು ಬಳಿಕ ದಿ ಝೋಯಾ ಫ್ಯಾಕ್ಟರ್, ಬ್ಲೈಂಡ್ ಹೀಗೆ ಹಲವು ಚಿತ್ರದಲ್ಲಿ ನಟಿಸಿದ್ದರು. ಮುಂಬರುವ ದಿನಗಳಲ್ಲಿ ಸೋನಮ್, ಅನೂಜಾ ಚೌಹಾನ್ ಅವರ ಜನಪ್ರಿಯ ಕಾದಂಬರಿ ಆಧಾರಿತ ಬ್ಯಾಟಲ್ ಫಾರ್ ಬಿತ್ತೋರಾ ಚಿತ್ರದಲ್ಲಿ ನಟಿಸಲಿದ್ದಾರೆ. ಹಾಗೆಯೇ, ತಾಯ್ತನದ ನಂತರದ ಅವರ ಮೊದಲ ಚಿತ್ರದ ಶೂಟಿಂಗ್ ಈ ವರ್ಷದ ಕೊನೆಯಲ್ಲಿ ಆರಂಭವಾಗುವ ನಿರೀಕ್ಷೆ ಕೂಡ ಇದೆ.