ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ದೇಶಾದ್ಯಂತ 200ಕ್ಕೂ ಹೆಚ್ಚು ವಿಮಾನ ರದ್ದು: ಪರದಾಡಿದ ಇಂಡಿಗೋ ಪ್ರಯಾಣಿಕರು

ವಿವಿಧ ಕಾರಣಗಳಿಂದಾಗಿ ದೇಶಾದ್ಯಂತ ಮಂಗಳವಾರ 200ಕ್ಕೂ ಹೆಚ್ಚು ಇಂಡಿಗೋ ವಿಮಾನ ಸಂಚಾರ ರದ್ದುಗೊಂಡಿದ್ದು, ಈ ಕುರಿತು ಸಂವಹನ ಕೊರತೆಯಾಗಿದ್ದರಿಂದ ಪ್ರಯಾಣಿಕರು ವಿಮಾನಯಾನ ಸಂಸ್ಥೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ಅನೇಕ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಸೇರಿದ್ದು, ದೀರ್ಘ ವಿಳಂಬ ಮತ್ತು ಸಂವಹನ ಕೊರತೆಯ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ವಿಮಾನ ರದ್ದು: ಇಂಡಿಗೋ ಪ್ರಯಾಣಿಕರಿಂದ ಆಕ್ರೋಶ

(ಸಂಗ್ರಹ ಚಿತ್ರ) -

ನವದೆಹಲಿ: ದೇಶಾದ್ಯಂತ ವಿವಿಧ ಕಾರಣಗಳಿಂದಾಗಿ ಮಂಗಳವಾರ 200ಕ್ಕೂ ಹೆಚ್ಚು ಇಂಡಿಗೋ ವಿಮಾನ (IndiGo Flight) ಸಂಚಾರ ರದ್ದುಗೊಂಡಿದೆ. ಇದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅನೇಕ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಸೇರಿದ್ದು, ದೀರ್ಘ ವಿಳಂಬ ಮತ್ತು ಸಂವಹನ ಕೊರತೆಯ ಬಗ್ಗೆ ವಿಮಾನಯಾನ ಸಂಸ್ಥೆ (Indian airlines) ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಸಾಮಾಜಿಕ ಮಾಧ್ಯಮಗಳಲ್ಲಿ (social media) ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇಂಡಿಗೋ (Indigo) ಕಾರ್ಯಾಚರಣೆಯ ವಿಳಂಬದಿಂದಾಗಿ ಅನೇಕರು 14 ಗಂಟೆಗಳಿಗಿಂತಲೂ ಹೆಚ್ಚು ಕಾಲ ವಿಮಾನ ನಿಲ್ದಾಣಗಳಲ್ಲಿ ಸಿಲುಕಿಕೊಂಡರು.

ವಿವಿಧ ರೀತಿಯ ಸಮಸ್ಯೆಗಳ ಕಾರಣದಿಂದ ದೇಶಾದ್ಯಂತ ಮಂಗಳವಾರ 200ಕ್ಕೂ ಹೆಚ್ಚು ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ವಿಮಾನಯಾನ ಸಂಸ್ಥೆಯು ಪೈಲಟ್ ಗಳು ಮತ್ತು ಕ್ಯಾಬಿನ್ ಸಿಬ್ಬಂದಿಗೆ ಸೋಮವಾರ ಹೊಸ ನಿಯಮಗಳನ್ನು ಜಾರಿಗೆಗೊಳಿಸಿದ್ದು, ಇದರ ಬಳಿಕ ಸಿಬ್ಬಂದಿ ಕೊರತೆಯನ್ನು ಎದುರಿಸಿದೆ. ಇದು ವಿಮಾನ ಹಾರಾಟಕ್ಕೆ ತೊಂದರೆಯನ್ನು ಉಂಟು ಮಾಡಿತು.

Narendra Modi: ಚೀತಾ ಯೋಜನೆಗೆ ಮೆಗಾ ಪ್ರಾಜೆಕ್ಟ್‌; ಮಾಹಿತಿ ಹಂಚಿಕೊಂಡ ಪ್ರಧಾನಿ ಮೋದಿ

ವಿಮಾನ ಹಾರಾಟವಿಲ್ಲದೆ ಅನೇಕ ಪ್ರಯಾಣಿಕರು ನಿಲ್ದಾಣಗಳಲ್ಲಿ 12 ರಿಂದ 14 ಗಂಟೆಗಳ ಕಾಲ ಸಿಲುಕಿಕೊಂಡರು. ವಿಮಾನ ಸಂಚಾರದ ಸ್ಥಿತಿಗತಿಗಳ ಬಗ್ಗೆ ತಿಳಿದುಕೊಳ್ಳಲು ನಿಲ್ದಾಣಗಳಲ್ಲಿ ದೀರ್ಘವಾದ ಸರತಿ ಸಾಲುಗಳು ಕಂಡುಬಂದವು. ಇದರಿಂದ ತೊಂದರೆಗೆ ಒಳಗಾದ ಅನೇಕ ಪ್ರಯಾಣಿಕರು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ನೋವಿನ ಅನುಭವಗಳನ್ನು ಹಂಚಿಕೊಂಡರು. ಪ್ರಯಾಣಿಕರೊಂದಿಗೆ ಇಂಡಿಗೋದ ಗ್ರಾಹಕ ಸೇವಾ ಪ್ರತಿಕ್ರಿಯೆ ತಂಡವು ಸರಿಯಾಗಿ ಸ್ಪಂದಿಸಿಲ್ಲ ಎಂದು ಅನೇಕರು ದೂರಿದ್ದಾರೆ.



ಒಬ್ಬ ಬಳಕೆದಾರ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು ಹೀಗೆ.. ನಾನು ಪುಣೆಯಿಂದ ದೆಹಲಿಗೆ ಹೋಗಬೇಕಿತ್ತು. ಇಂಡಿಗೋ ವಿಮಾನ 3 ಗಂಟೆಗಳಿಗೂ ಹೆಚ್ಚು ವಿಳಂಬವಾಗಿದೆ. 12 ಗಂಟೆಗಳಿಗಿಂತಲೂ ಹೆಚ್ಚು ಸಮಯದಿಂದ ವಿಮಾನ ನಿಲ್ದಾಣದಲ್ಲಿ ಕಾಯುತ್ತಿರುವ ಅನೇಕ ಪ್ರಯಾಣಿಕರಿದ್ದಾರೆ ಎಂದು ತಿಳಿಸಿದ್ದಾರೆ.

ಇನ್ನೊಬ್ಬರು, ಪುಣೆ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನದ ಅವ್ಯವಸ್ಥೆ ನಾಚಿಕೆಗೇಡು. ಯಾವುದೇ ಮಾಹಿತಿ ಇಲ್ಲ, ಸಿಬ್ಬಂದಿ ಇಲ್ಲ, ನಾಗರಿಕರ ಸ್ವಯಂ ಸೇವೆ ಮತ್ತು ಪ್ರದರ್ಶನ ಫಲಕದಲ್ಲಿ ವಿಮಾನವು ಸಮಯಕ್ಕೆ ಸರಿಯಾಗಿದೆ ಎಂದು ನಿಗದಿಯಾಗಿದೆ ಎಂದು ತಿಳಿಸಿದ್ದಾರೆ.

ಇನ್ನೊಬ್ಬರು ವಿಡಿಯೊವೊಂದನ್ನು ಹಂಚಿಕೊಂಡಿದ್ದು, ಇಂಡಿಗೋ ಸಿಬ್ಬಂದಿ ಏನಾದರೂ ಮಾಡಿ, ನನಗೆ ವಿಮಾನವನ್ನು ನೀಡಿ ಎಂದು ತಿಳಿಸಿದ್ದಾರೆ.



ದೇಶಾದ್ಯಂತ ನೀರಿನ ಸಮೃದ್ಧ ಪೂರೈಕೆಗೆ ಸುಜಲಾಂ ಭಾರತ್‌ ಯೋಜನೆ ಜಾರಿ

ವಿಮಾನ ಹಾರಾಟ ವಿಳಂಬದ ಕುರಿತು ಪ್ರತಿಕ್ರಿಯಿಸಿರುವ ಇಂಡಿಗೋ ಆಗಿರುವ ತೊಂದರೆಗಾಗಿ ಕ್ಷಮೆಯಾಚಿಸಿದೆ. ಪ್ರತಿದಿನ ಸುಮಾರು 2,200 ವಿಮಾನಗಳನ್ನು ನಿರ್ವಹಿಸುವ ಇಂಡಿಗೋ, ಗಮನಾರ್ಹವಾಗಿ ಅಡ್ಡಿಯಾಗಿದೆ. ಇದಕ್ಕಾಗಿ ಗ್ರಾಹಕರಲ್ಲಿ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತಿರುವುದಾಗಿ ಹೇಳಿದೆ.

ತಂತ್ರಜ್ಞಾನದ ದೋಷಗಳು, ಚಳಿಗಾಲಕ್ಕೆ ಸಂಬಂಧಿಸಿದ ವೇಳಾಪಟ್ಟಿ ಬದಲಾವಣೆ, ಪ್ರತಿಕೂಲ ಹವಾಮಾನ ಪರಿಸ್ಥಿತಿ, ಸಿಬ್ಬಂದಿಗೆ ಹೊಸ ಕರ್ತವ್ಯ ನಿಯಮಗಳಿಂದಾಗಿ ಅನಿರೀಕ್ಷಿತವಾಗಿ ಹಲವು ಸವಾಲು ಎದುರಾಗಿದ್ದರಿಂದ ಕಾರ್ಯಾಚರಣೆಗಳ ಮೇಲೆ ಅಡ್ಡಿಯಾಗಿದೆ. ಈ ಹಿನ್ನೆಲೆಯಲ್ಲಿ ಗುರುವಾರ ವಿಮಾನಯಾನ ಅಧಿಕಾರಿಗಳನ್ನು ಸಭೆ ಕರೆದಿರುವುದಾಗಿ ವಾಯುಯಾನ ಕಾವಲು ಸಂಸ್ಥೆ, ನಾಗರಿಕ ವಿಮಾನಯಾನ ನಿರ್ದೇಶನಾಲಯ ತಿಳಿಸಿದೆ.