Narendra Modi: ಚೀತಾ ಯೋಜನೆಗೆ ಮೆಗಾ ಪ್ರಾಜೆಕ್ಟ್; ಮಾಹಿತಿ ಹಂಚಿಕೊಂಡ ಪ್ರಧಾನಿ ಮೋದಿ
International Cheetah Day: ಅಂತಾರಾಷ್ಟ್ರೀಯ ಚಿರತೆ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಗುರುವಾರ ವನ್ಯಜೀವಿ ಸಂರಕ್ಷಕರಿಗೆ ಶುಭಾಶಯಗಳನ್ನು ಕೋರಿದ್ದಾರೆ. ಸದ್ಯ ಭಾರತದಲ್ಲಿ ಚೀತಾ ಯೋಜನೆಯನ್ನು ಜಾರಿ ಮಾಡಲಾಗಿದ್ದು, ದಕ್ಷಿಣ ಆಫ್ರಿಕಾ ದೇಶ ನಮಿಬಿಯಾದಿಂದ 2022ರ ಸೆಪ್ಟೆಂಬರ್17ರಂದು ಏಂಟು ಚೀತಾಗಳನ್ನು ಮೊದಲ ಬಾರಿಗೆ ಭಾರತದ ಕುನೋ ಅರಣ್ಯ ಪ್ರದೇಶಕ್ಕೆ ಕರೆ ತರಲಾಗಿತ್ತು.
ಸಾಂಧರ್ಬಿಕ ಚಿತ್ರ -
ನವದೆಹಲಿ: ಅಂತಾರಾಷ್ಟ್ರೀಯ ಚಿರತೆ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಗುರುವಾರ (International Cheetah Day) ವನ್ಯಜೀವಿ ಸಂರಕ್ಷಕರಿಗೆ ಶುಭಾಶಯಗಳನ್ನು ಕೋರಿದ್ದಾರೆ. ಚಿರತೆ ದಿನದಂದು, ನಮ್ಮ ಗ್ರಹದ ಅತ್ಯಂತ ಗಮನಾರ್ಹ ಜೀವಿಗಳಲ್ಲಿ ಒಂದಾದ ಚಿರತೆಯನ್ನು ರಕ್ಷಿಸಲು ಸಮರ್ಪಿತವಾಗಿರುವ ಎಲ್ಲಾ ವನ್ಯಜೀವಿ ಪ್ರಿಯರು ಮತ್ತು ಸಂರಕ್ಷಣಾಕಾರರಿಗೆ ನನ್ನ ಶುಭಾಶಯಗಳು" ಎಂದು ಅವರು X ನಲ್ಲಿ ಬರೆದಿದ್ದಾರೆ. ಕುನೋ ರಾಷ್ಟ್ರೀಯ ಉದ್ಯಾನವನ (ಕೆಎನ್‌ಪಿ) ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆ ದೇಶದಲ್ಲಿ ಆಫ್ರಿಕನ್ ಚೀತಾಗಳಿಗೆ ನೆಲೆ ಕಲ್ಪಿಸಲಾಗಿದ್ದು, ಚೀತಾ ಯೋಜನೆ ಸ್ವತಃ ಪ್ರಧಾನಿಯವರೇ ಈ ಕುರಿತು ಆಸಕ್ತಿ ವಹಿಸಿದ್ದರು.
ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಮೊದಲು ಒಟ್ಟು 20 ಚೀತಾಗಳನ್ನು ತರಲಾಗಿತ್ತು. ಬಳಿಕ ಸೆಪ್ಟೆಂಬರ್ 2022 ರಲ್ಲಿ ನಮೀಬಿಯಾದಿಂದ ಎಂಟು ಮತ್ತು ಫೆಬ್ರವರಿ 2023 ರಲ್ಲಿ ದಕ್ಷಿಣ ಆಫ್ರಿಕಾದಿಂದ ಹನ್ನೆರಡು ಚೀತಾಗಳು ಭಾರತಕ್ಕೆ ಬಂದವು. ಡಿಸೆಂಬರ್ 2025 ರ ಹೊತ್ತಿಗೆ, ಭಾರತವು 32 ಚೀತಾಗಳನ್ನು ಹೊಂದಿದೆ. ಈಗಾಗಲೇ ಕಳೆದ ಬೇಸಿಗೆಯಿಂದ, ಚೀತಾ ಆವಾಸಸ್ಥಾನಕ್ಕೆ ಅಗತ್ಯವಾದ ಮೂಲಸೌಕರ್ಯಗಳನ್ನು ಇಲ್ಲಿ ಸಿದ್ಧಪಡಿಸುತ್ತಿದೆ. ಇದು 64 ಚದರ ಕಿ.ಮೀ ಪ್ರದೇಶದಲ್ಲಿ ಅವುಗಳಿಗಾಗಿ ಮೂರು ದೊಡ್ಡ ಆವರಣಗಳನ್ನು ನಿರ್ಮಿಸಲಾಗಿದೆ.
ಪ್ರಧಾನಿ ಮೋದಿ ಟ್ವೀಟ್
On International Cheetah Day, my best wishes to all wildlife lovers and conservationists dedicated to protecting the cheetah, one of our planet’s most remarkable creatures. Three years ago, our Government launched Project Cheetah with the aim of safeguarding this magnificent… pic.twitter.com/FJgfJqoGeA
— Narendra Modi (@narendramodi) December 4, 2025
ಇನ್ನು ದೇಶದಲ್ಲಿ ಇದುವರೆಗೆ ಚೀತಾ ಯೋಜನೆಗೆ 112 ಕೋಟಿ ರೂ. ವ್ಯಯ ಮಾಡಲಾಗಿದ್ದು, ಅದರಲ್ಲಿ ಶೇ 67ರಷ್ಟು ಮಧ್ಯಪ್ರದೇಶದಲ್ಲಿ ಚೀತಾಗಳ ಪುನರ್ವಸತಿಗೆ ಹೋಗಿದೆ. ಚೀತಾ ಯೋಜನೆ ಅಡಿಯಲ್ಲಿ ಗಾಂಧಿ ಸಾಗರ್ ಅಭಯಾರಣ್ಯದಲ್ಲಿ ಚೀತಾಗಳನ್ನು ಈಗ ಹಂತ ಹಂತವಾಗಿ ಸ್ಥಳಾಂತರಿಸಲಾಗುವುದು. ಈ ಅಭಯಾರಣ್ಯವೂ ರಾಜಸ್ಥಾನದ ಗಡಿಗೆ ಹೊಂದಿಕೊಂಡಿರುವ ಹಿನ್ನೆಲೆ ರಾಜಸ್ಥಾನ ಮತ್ತು ಮಧ್ಯಪ್ರದೇಶದ ನಡುವೆ ಅಂತಾರಾಜ್ಯ ಚಿರತೆ ಸಂರಕ್ಷಣೆ ಪ್ರದೇಶ ಒಪ್ಪಂದಕ್ಕೆ ಮುಂದಾಗಲಾಗುವುದು. ಚೀತಾಗಳ ಸಾಮರ್ಥ್ಯವನ್ನು ಹೆಚ್ಚಿಸಲು ಕುನೋ ರಾಷ್ಟ್ರೀಯ ಉದ್ಯಾನವನ ಮತ್ತು ಗಾಂಧಿ ಸಾಗರ್ ಅಭಯಾರಣ್ಯದಲ್ಲಿ ವಿಶೇಷ ತರಬೇತಿ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
: ʼನವೆಂಬರ್ ಅತ್ಯಂತ ವಿಶೇಷʼ; ರಾಮ ಮಂದಿರದ ಧ್ವಜಾರೋಹಣ ಕುರಿತು ಮೋದಿ ಹೇಳಿದ್ದೇನು?
ಆರಂಭದಲ್ಲಿ ಕೆಲವು ಚೀತಾಗಳು ಇಲ್ಲಿನ ಪರಿಸರಕ್ಕೆ ಹೊಂದಿಕೊಳ್ಳಲಾಗದೇ ವಿವಿಧ ಕಾರಣಗಳಿಂದ ಸಾವನ್ನಪ್ಪಿದ್ದರೂ ಉಳಿದ ಚೀತಾಗಳ ಸಂತಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಸದ್ಯ ಸಫಾರಿಗೂ ಮನವಿ ಮಾಡಲಾಗಿದ್ದು, ಆ ಕುರಿತು ಅರ್ಜಿ ವಿಚಾರಣೆ ನಡೆಸಲಾಗುತ್ತಿದೆ.