8th Pay Commission: 8ನೇ ವೇತನ ಆಯೋಗ ಜಾರಿಗೆ ಗ್ರೀನ್ ಸಿಗ್ನಲ್! ಸಂಬಳದೊಂದಿಗೆ ಹೆಚ್ಚಾಗಲಿದೆ ಇನ್ನು ಹಲವು ಸವಲತ್ತು
8th Pay Commission benefits: ರಂಜನಾ ದೇಸಾಯಿ ನೇತೃತ್ವದ ತ್ರಿಸದಸ್ಯ ಸಮಿತಿಯ 8ನೇ ವೇತನ ಆಯೋಗವು ತನ್ನ ಕಾರ್ಯವನ್ನು ಆರಂಭಿಸಲು ಸರ್ಕಾರದಿಂದ ಕೊನೆಗೂ ಗ್ರೀನ್ ಸಿಗ್ನಲ್ ಸಿಕ್ಕಿದೆ. ಈ ಕುರಿತು ಹಣಕಾಸು ಸಚಿವಾಲಯ ನವೆಂಬರ್ 3ರಂದು ಅಧಿಸೂಚನೆಯನ್ನು ಹೊರಡಿಸಿದ್ದು ಇದರಲ್ಲಿ ವೇತನ ಆಯೋಗದ ರಚನೆ ಮತ್ತು ನಿಯಮಗಳ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.
8ನೇ ವೇತನ ಆಯೋಗ ಜಾರಿಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ(ಸಾಂದರ್ಭಿಕ ಚಿತ್ರ) -
ವಿದ್ಯಾ ಇರ್ವತ್ತೂರು
Nov 6, 2025 12:24 PM
ನವದೆಹಲಿ: ಕೇಂದ್ರ ಸರ್ಕಾರ (central govt) ಈಗ 8ನೇ ವೇತನ ಆಯೋಗದ (8th Pay Commission) ಪ್ರಸ್ತಾವನೆಗಳ ಪರಿಶೀಲನೆಯನ್ನು ನಡೆಸುತ್ತಿದೆ. ಇದರಲ್ಲಿ ಕೇವಲ ನೌಕರರ ವೇತನ (salary) ಹೆಚ್ಚಳ ಮಾತ್ರವಲ್ಲ ಬೋನಸ್ (bonuses), ಗ್ರಾಚ್ಯುಟಿ (gratuties) ಮತ್ತು ಇತರ ಹಲವಾರು ಸವಲತ್ತುಗಳ ಕುರಿತು ಕೂಡ ಪರಿಶೀಲನೆ ನಡೆಸಲಾಗುತ್ತಿದೆ. ನ್ಯಾಯಮೂರ್ತಿ ರಂಜನಾ ದೇಸಾಯಿ (Justice Ranjana Desai) ನೇತೃತ್ವದ ತ್ರಿಸದಸ್ಯ ಸಮಿತಿಯು ಈ ನಿಟ್ಟಿನಲ್ಲಿ ಕಾರ್ಯ ಪ್ರಾರಂಭಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕೊನೆಗೂ 8ನೇ ವೇತನ ಆಯೋಗಕ್ಕೆ ಸೂಚನೆ ನೀಡಿದೆ.
ಈ ಕುರಿತು ಹಣಕಾಸು ಸಚಿವಾಲಯ ನವೆಂಬರ್ 3ರಂದು ಅಧಿಸೂಚನೆಯನ್ನು ಹೊರಡಿಸಿದ್ದು, ಇದರಲ್ಲಿ ಆಯೋಗದ ರಚನೆ ಮತ್ತು ನಿಯಮಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಉಲ್ಲೇಖಿಸಲಾಗಿದೆ.
8ನೇ ವೇತನ ಆಯೋಗವು ಸರ್ಕಾರಿ ನೌಕರರ ವೇತನ, ಪಿಂಚಣಿ ಪರಿಷ್ಕರಣೆಯನ್ನು ಮಾತ್ರ ನಡೆಸುತ್ತಿಲ್ಲ. ಇದರೊಂದಿಗೆ ಭತ್ಯೆ, ಬೋನಸ್, ಗ್ರಾಚ್ಯುಟಿ ಮತ್ತು ಕಾರ್ಯಕ್ಷಮತೆಗೆ ಸಂಬಂಧಿಸಿ ಹಲವಾರು ಇತರ ಹಣಕಾಸಿನ ಪ್ರಯೋಜನಗಳನ್ನು ಕೂಡ ಪರಿಶೀಲಿಸುತ್ತಿದೆ. ಹಿಂದಿನ ಆಯೋಗಗಳಂತೆ ಈ ಸಮಿತಿಯು ವೇತನ ಸುಧಾರಣೆ ಮತ್ತು ಪ್ರಯೋಜನಗಳ ಕುರಿತು ಬದಲಾವಣೆಗಳಿಗೆ ಶಿಫಾರಸು ಮಾಡಲಿದೆ.
ಇದನ್ನೂ ಓದಿ: News York Car Blast: ತಡರಾತ್ರಿ ಭೀಕರ ಕಾರು ಸ್ಫೋಟ; ಬೆಂಕಿ ತಗುಲಿ ಐವರ ಸ್ಥಿತಿ ಗಂಭೀರ
ಆಯೋಗದ ರಚನೆ
8ನೇ ವೇತನ ಆಯೋಗದಲ್ಲಿ ನ್ಯಾಯಮೂರ್ತಿ ದೇಸಾಯಿ ಅವರು ಅಧ್ಯಕ್ಷರಾಗಿದ್ದು, ಪ್ರೊ. ಪುಲಕ್ ಘೋಷ್ ಅವರು ಅರೆಕಾಲಿಕ ಸದಸ್ಯರು ಮತ್ತು ಪಂಕಜ್ ಜೈನ್ ಅವರು ಸದಸ್ಯ ಕಾರ್ಯದರ್ಶಿಯಾಗಿ ನೇಮಕಗೊಂಡಿರುತ್ತಾರೆ ಎಂದು ಸರ್ಕಾರ ಅಧಿಸೂಚನೆಯಲ್ಲಿ ತಿಳಿಸಿದೆ. ನವದೆಹಲಿಯಲ್ಲಿರುವ ಆಯೋಗದ ಪ್ರಧಾನ ಕಚೇರಿಯು 18 ತಿಂಗಳೊಳಗೆ ಸರ್ಕಾರಕ್ಕೆ ತನ್ನ ಶಿಫಾರಸುಗಳನ್ನು ಸಲ್ಲಿಸಲಿದೆ. ಅಗತ್ಯವಿದ್ದರೆ ಮಧ್ಯಂತರ ವರದಿಯನ್ನು ಕೂಡ ಸಲ್ಲಿಸುವ ಸಾಧ್ಯತೆ ಇರುತ್ತದೆ.
ಏನು ಪ್ರಯೋಜನ?
- ಆಯೋಗವು ಉದ್ಯೋಗಿಗಳ ವೇತನ ಮತ್ತು ಅವರಿಗೆ ನೀಡಲಾಗುವ ಸವಲತ್ತುಗಳ ಬಗ್ಗೆ ಪರಿಶೀಲನೆ ನಡೆಸಲಿದೆ. ಇದರಲ್ಲಿ ಕೇಂದ್ರ ಸರ್ಕಾರದ ಕೈಗಾರಿಕಾ ಮತ್ತು ಕೈಗಾರಿಕೇತರ ನೌಕರರು, ಅಖಿಲ ಭಾರತ ಸೇವೆಗಳ ಅಧಿಕಾರಿಗಳು, ಸಶಸ್ತ್ರ ಪಡೆಗಳ ನೌಕರರು, ಕೇಂದ್ರಾಡಳಿತ ಪ್ರದೇಶಗಳ ನೌಕರರು, ಭಾರತೀಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ನೌಕರರು, ಆರ್ ಬಿಐ ಹೊರತುಪಡಿಸಿ ಸಂಸತ್ತಿನಿಂದ ಸ್ಥಾಪಿಸಲ್ಪಟ್ಟ ನಿಯಂತ್ರಕ ಸಂಸ್ಥೆಗಳ ಸದಸ್ಯರು, ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳ ಅಧಿಕಾರಿಗಳು ಮತ್ತು ನೌಕರರು, ಕೇಂದ್ರಾಡಳಿತ ಪ್ರದೇಶಗಳ ಅಡಿಯಲ್ಲಿ ನ್ಯಾಯಾಂಗ ಅಧಿಕಾರಿಗಳು ಸೇರುತ್ತಾರೆ.
- ಇವರ ವೇತನ, ಭತ್ಯೆ ಮತ್ತು ಬೋನಸ್‌ಗಳನ್ನು ಮಾತ್ರ ಪರಿಶೀಲಿಸಲಾಗುವುದಿಲ್ಲ. ಇದರೊಂದಿಗೆ ಇನ್ನು ಕೆಲವು ಅಂಶಗಳನ್ನು ಆಯೋಗವು ಪರಿಷ್ಕರಣೆ ಮಾಡಲಿದೆ.
- 8ನೇ ವೇತನ ಆಯೋಗವು ಸಂಬಳ, ಭತ್ಯೆ ಸೇರಿದಂತೆ ಇನ್ನು ಹಲವು ರೀತಿಯ ಪ್ರಯೋಜನಗಳನ್ನು ನೌಕರರಿಗೆ ಒದಗಿಸಲಿದೆ. ಪ್ರತಿಭಾನ್ವಿತ ಯುವಕರಿಗೆ ಸರ್ಕಾರಿ ಉದ್ಯೋಗಗಳನ್ನು ಆಕರ್ಷಕವಾಗಿ ಮಾಡುವುದು ಮತ್ತು ಕೆಲಸದ ಸಂಸ್ಕೃತಿಯಲ್ಲಿ ದಕ್ಷತೆ ಮತ್ತು ಹೊಣೆಗಾರಿಕೆಯನ್ನು ಉತ್ತೇಜಿಸುವುದು ಇದರ ಉದ್ದೇಶವಾಗಿದೆ.
- ಇನ್ನು ಬೋನಸ್ ಯೋಜನೆಗಳನ್ನು ಕೂಡ ಆಯೋಗ ಪರಿಶೀಲಿಸುತ್ತಿದೆ. ಪ್ರಸ್ತುತ ನೀಡಲಾಗುತ್ತಿರುವ ವಿವಿಧ ರೀತಿಯ ಭತ್ಯೆಗಳನ್ನು ಕೂಡ ಆಯೋಗ ಪರಿಶೀಲನೆ ನಡೆಸುತ್ತಿದೆ.
- ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಮತ್ತು ಏಕೀಕೃತ ಪಿಂಚಣಿ ಯೋಜನೆ ಅಡಿಯಲ್ಲಿ ಬರುವ ಉದ್ಯೋಗಿಗಳಿಗೆ ಮರಣ ಮತ್ತು ನಿವೃತ್ತಿ ಗ್ರಾಚ್ಯುಟಿಗಳನ್ನು ಕೂಡ ಪರಿಶೀಲನೆ ನಡೆಸಲಾಗುತ್ತಿದೆ.
- ಎನ್ ಪಿಎಸ್ ವ್ಯಾಪ್ತಿಗೆ ಬಾರದ ಉದ್ಯೋಗಿಗಳಿಗೆ ಗ್ರಾಚ್ಯುಟಿ ಮತ್ತು ಪಿಂಚಣಿಯಲ್ಲಿ ಸುಧಾರಣೆಗಳನ್ನು ಶಿಫಾರಸು ಮಾಡಲಾಗುತ್ತದೆ.
ಇದನ್ನೂ ಓದಿ: Bangalore News: 7 ರಂದು ಉಪಕುಲಪತಿಗಳ ಸಮಾವೇಶ
ಏನು ಪರಿಣಾಮ?
8ನೇ ವೇತನ ಆಯೋಗವು ತನ್ನ ಶಿಫಾರಸುಗಳನ್ನು ಮಾಡುವಾಗ ದೇಶ ಮತ್ತು ರಾಜ್ಯಗಳ ಆರ್ಥಿಕ ಪರಿಸ್ಥಿತಿಗಳನ್ನು ಕೂಡ ಪರಿಗಣಿಸಲಿದೆ. ಕೇಂದ್ರ ಸರ್ಕಾರಿ ಮತ್ತು ಖಾಸಗಿ ವಲಯದ ಉದ್ಯೋಗಿಗಳಿಗೆ ನೀಡಲಾಗುವ ಸಂಬಳ ಮತ್ತು ಸವಲತ್ತುಗಳ ಕುರಿತು ಶಿಫಾರಸುಗಳನ್ನು ಒದಗಿಸಲು ಈ ಪರಿಶೀಲನೆ ಅಗತ್ಯವಾಗಿರುತ್ತದೆ.
ಇದಕ್ಕೆ ಸಂಬಂಧಿಸಿ ಆಯೋಗವು ತಜ್ಞರ ಸಹಾಯವನ್ನು ಪಡೆಯಲಿದೆ. ಇದಕ್ಕಾಗಿ ಸರ್ಕಾರವು ಆಯೋಗಕ್ಕೆ ಅಗತ್ಯವಿರುವ ಸಲಹೆಗಾರರು, ತಜ್ಞರು ಮತ್ತು ಸಾಂಸ್ಥಿಕ ಸಲಹೆಗಾರರನ್ನು ನೇಮಿಸುವ ಸ್ವಾತಂತ್ರ್ಯವನ್ನು ನೀಡಿದೆ. ಆಯೋಗವು ಮುಂದಿನ 18 ತಿಂಗಳೊಳಗೆ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕಾಗುತ್ತದೆ. ಅಂದರೆ 2025ರ ನವೆಂಬರ್ ತಿಂಗಳಲ್ಲಿ ಆಯೋಗ ಕೆಲಸ ಪ್ರಾರಂಭಿಸಿದರೆ ಅದರ ಶಿಫಾರಸುಗಳು 2027 ಮೇ ತಿಂಗಳ ಒಳಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.