ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅಮೃತಸರ ಏರ್‌ಪೋರ್ಟ್‌ನಲ್ಲಿ ಅನುಮಾನಾಸ್ಪದ ಡ್ರೋನ್ ಪತ್ತೆ: ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ಸ್ಥಗಿತ; ದೆಹಲಿ, ಚಂಡೀಗಢಕ್ಕೆ ವಿಮಾನಗಳ ಡೈವರ್ಟ್‌

ಅನುಮಾನಾಸ್ಪದ ಡ್ರೋನ್ ಕಂಡು ಬಂದ ಹಿನ್ನೆಲೆಯಲ್ಲಿ ಅಮೃತಸರ ವಿಮಾನ ನಿಲ್ದಾಣ ಕಾರ್ಯಾಚರಣೆಯನ್ನು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸ್ಥಗಿತಗೊಳಿಸಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ. ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿದ್ದ ಸುಮಾರು ಏಳು ವಿಮಾನಗಳನ್ನು ದೆಹಲಿ, ಚಂಡೀಗಢಕ್ಕೆ ಕಳುಹಿಸಲಾಗಿದೆ.

ಅಮೃತಸರ ವಿಮಾನ ನಿಲ್ದಾಣ ಕಾರ್ಯಾಚರಣೆ ಗಂಟೆಗಳ ಕಾಲ ಸ್ಥಗಿತ

ಸಂಗ್ರಹ ಚಿತ್ರ -

ಅಮೃತಸರ: ವಿಮಾನ ನಿಲ್ದಾಣದ (airport) ಮೇಲೆ ಅನುಮಾನಾಸ್ಪದ ಡ್ರೋನ್ ಚಟುವಟಿಕೆ (suspicious Drones activity) ಕಂಡು ಬಂದ ಬಳಿಕ ಅಮೃತಸರ ವಿಮಾನ ನಿಲ್ದಾಣದ (Amritsar airport) ಕಾರ್ಯಾಚರಣೆಯನ್ನು ಕೆಲವು ಗಂಟೆಗಳ ಕಾಲ ಸ್ಥಗಿತಗೊಳಿಸಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ. ಇದರಿಂದಾಗಿ ಏಳು ವಿಮಾನಗಳನ್ನು ದೆಹಲಿ (Delhi), ಚಂಡೀಗಢಕ್ಕೆ (Chandigarh) ಕಳುಹಿಸಲಾಗಿದೆ. ಡ್ರೋನ್ ಚಟುವಟಿಕೆಯಿಂದ ಯಾವುದೇ ರೀತಿಯ ಬೆದರಿಕೆ ಇದೆಯೇ ಎಂಬುದನ್ನು ಪರಿಶೀಲಿಸಲು ಸಮಿತಿಯನ್ನು ರಚಿಸಲಾಗಿತ್ತು. ಯಾವುದೇ ಅಪಾಯ ಕಂಡುಬರದ ಹಿನ್ನೆಲೆಯಲ್ಲಿ ರಾತ್ರಿ 11.15ರ ಬಳಿಕ ವಿಮಾನ ನಿಲ್ದಾಣ ಕಾರ್ಯಾಚರಣೆಯನ್ನು ಪುನರಾರಂಭಿಸಲು ಅನುಮತಿ ನೀಡಲಾಯಿತು

ಅಮೃತಸರ ವಿಮಾನ ನಿಲ್ದಾಣದ ಮೇಲೆ ಡ್ರೋನ್‌ಗಳು ಕಂಡುಬಂದ ಬಳಿಕ ಲ್ಯಾಂಡಿಂಗ್‌ಗಾಗಿ ಕಾಯುತ್ತಿದ್ದ ಏಳು ವಿಮಾನಗಳನ್ನು ಬೇರೆಡೆಗೆ ತಿರುಗಿಸಲಾಯಿತು. ಅಲ್ಲದೇ ಭಾನುವಾರ ರಾತ್ರಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತು.

ಇಂಧನ ಕೊರತೆ: ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಕೊಚ್ಚಿಗೆ ಮರಳಿದ ಏರ್ ಇಂಡಿಯಾ ವಿಮಾನ

ಈ ಕುರಿತು ಮಾಹಿತಿ ನೀಡಿದ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI) ಅಧಿಕಾರಿಯೊಬ್ಬರು,ಭಾರತೀಯ ವಾಯುಪಡೆಯು ಅಮೃತಸರ ವಾಯುನೆಲೆಯಾದ್ಯಂತ ಡ್ರೋನ್ ಚಟುವಟಿಕೆಯ ಬಗ್ಗೆ ವಾಯು ಸಂಚಾರ ನಿಯಂತ್ರಣಕ್ಕೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ರಾತ್ರಿ 9.50 ರ ಸುಮಾರಿಗೆ ವಿಮಾನ ನಿಲ್ದಾಣ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತು. ಲ್ಯಾಂಡಿಂಗ್ ಗೆ ಕಾಯುತ್ತಿದ್ದ ಸುಮಾರು ಏಳು ವಿಮಾನಗಳನ್ನು ಚಂಡೀಗಢ ಮತ್ತು ದೆಹಲಿಗೆ ತಿರುಗಿಸಲಾಯಿತು ಎಂದು ಹೇಳಿದರು.

ಎರಡು ವಿಮಾನಗಳನ್ನು ಚಂಡೀಗಢಕ್ಕೆ ಮತ್ತು ಐದು ವಿಮಾನಗಳನ್ನು ದೆಹಲಿಗೆ ಕಳುಹಿಸಲಾಗಿದೆ. ಇದರಲ್ಲಿ ಏರ್ ಇಂಡಿಯಾ, ಇಂಡಿಗೋ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ವಿಮಾನಗಳು ಸೇರಿದ್ದವು ಎಂದರು.



ಇದರ ಬಳಿಕ ಡ್ರೋನ್ ಚಟುವಟಿಕೆಯು ವಿಮಾನಗಳ ಚಲನೆಗೆ ಅಪಾಯವನ್ನುಂಟು ಮಾಡಬಹುದೇ ಎಂದು ನಿರ್ಣಯಿಸಲು ಸಮಿತಿಯನ್ನು ರಚಿಸಲಾಯಿತು. ಬಳಿಕ ವಿಮಾನ ನಿಲ್ದಾಣದ ಸುತ್ತ ಯಾವುದೇ ಡ್ರೋನ್‌ಗಳು ಕಾಣಿಸಿಕೊಳ್ಳದೇ ಇದ್ದುದರಿಂದ ರಾತ್ರಿ 11.15ಕ್ಕೆ ವಿಮಾನ ನಿಲ್ದಾಣವನ್ನು ಕಾರ್ಯಾಚರಣೆಯನ್ನು ಪುನರಾರಂಭಿಸಲು ಸಮಿತಿ ಅನುಮತಿ ನೀಡಿತು.

ಸಮಾನ ಭೂಮಿ ನಕ್ಷೆ ರಾಷ್ಟ್ರೀಯ ಗಡಿಗಳ ಚಿತ್ರಣವಲ್ಲ: ನವದೆಹಲಿ

ದೆಹಲಿ ಮತ್ತು ಚಂಡೀಗಢಕ್ಕೆ ತಿರುಗಿಸಲಾದ ಏಳು ವಿಮಾನಗಳಲ್ಲಿ ಐದು ವಿಮಾನಗಳು ಮರಳಿ ಅಮೃತಸರ ವಿಮಾನ ನಿಲ್ದಾಣಕ್ಕೆ ಆಗಮಿಸಿ ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಿದೆ. ಈ ಕುರಿತು ಸಾಮಾಜಿಕ ಮಾಧ್ಯಮದ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಪ್ರಯಾಣಿಕರೊಬ್ಬರು, ಅಮೃತಸರ ವಿಮಾನ ನಿಲ್ದಾಣವು ಭಾನುವಾರ ರಾತ್ರಿ ಸುಮಾರು 2 ಗಂಟೆಗಳ ಕಾಲ ಮುಚ್ಚಲ್ಪಟ್ಟಿತು. ಇದರಿಂದ ನಮ್ಮ ದುಬೈ- ಅಮೃತಸರ ವಿಮಾನವು ದೆಹಲಿಗೆ ತೆರಳಿ ಬಳಿಕ ಅಮೃತಸರಕ್ಕೆ ಆಗಮಿಸಿತ್ತು. ಪರಿಸ್ಥಿತಿಯನ್ನು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಿಬ್ಬಂದಿ ಅತ್ಯಂತ ಶಾಂತಿಯುತವಾಗಿ ನಿಭಾಯಿಸಿದರು. ಯಾರಿಗೂ ಭಯಭೀತರಾಗಲು ಬಿಡಲಿಲ್ಲ ಎಂದು ಹೇಳಿದ್ದಾರೆ.