ಹೊಸ ಸ್ಟುಡಿಯೋ ಆರಂಭಿಸಿ ಅಸ್ತಿತ್ವ ಬಲಪಡಿಸಿದ ಇ-ಕಾಮರ್ಸ್ ಮಾರುಕಟ್ಟೆ
ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಗೃಹೋಪಯೋಗಿ ಮತ್ತು ಜೀವನಶೈಲಿ ಮಾರುಕಟ್ಟೆಗಳಲ್ಲಿ ಒಂದಾಗಿರುವ ಬೆಂಗಳೂರಿನಲ್ಲಿ ಕಂಪನಿಯ ಉಪಸ್ಥಿತಿ ಮತ್ತಷ್ಟು ಬಲಗೊಂಡಿದೆ. ದೇಶಾದ್ಯಂತ 90ಕ್ಕೂ ಹೆಚ್ಚು ನಗರಗಳಲ್ಲಿ 150ಕ್ಕೂ ಅಧಿಕ ಮಳಿಗೆಗಳನ್ನು ಹೊಂದಿರುವ ಕಂಪನಿಯು, ಆನ್ಲೈನ್ ಮತ್ತು ಆಫ್ಲೈನ್ ಪೀಠೋಪಕರಣಗಳ ಖರೀದಿ ಅನುಭವದ ಅತ್ಯುತ್ತಮ ಸೌಲಭ್ಯಗಳನ್ನು ಗ್ರಾಹಕರಿಗೆ ಒದಗಿಸುತ್ತಿದೆ.
-
ಬೆಂಗಳೂರು: ಪೀಠೋಪಕರಣಗಳು ಮತ್ತು ಗೃಹಾಲಂಕಾರ ಉತ್ಪನ್ನಗಳ ಭಾರತದ ಪ್ರಮುಖ ಇ-ಕಾಮರ್ಸ್ ಮಾರುಕಟ್ಟೆ ವೇದಿಕೆಯು ಬನ್ನೇರುಘಟ್ಟದಲ್ಲಿ ತನ್ನ ನೂತನ ಸ್ಟುಡಿಯೋ ಆರಂಭಿಸಿರುವುದಾಗಿ ಘೋಷಿಸಿದೆ. ಈ ಆರಂಭವು ಓಮ್ನಿಚಾನೆಲ್ ವಿಸ್ತರಣಾ ಕಾರ್ಯತಂತ್ರದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲಾಗಿದ್ದು, ಭಾರತದಾದ್ಯಂತ ಗ್ರಾಹಕರಿಗೆ ಆಕರ್ಷಕ ಹಾಗೂ ವೈಯಕ್ತಿಕಗೊಳಿಸಿದ ಗೃಹೋಪಯೋಗಿ ಶಾಪಿಂಗ್ ಅನುಭವವನ್ನು ಒದಗಿಸುವ ಬ್ರ್ಯಾಂಡ್ನ ಬದ್ಧತೆಯನ್ನು ಮತ್ತಷ್ಟು ಬಲಪಡಿಸುತ್ತದೆ.
ಈ ಹೊಸ ಸ್ಟುಡಿಯೋ ಆರಂಭದೊಂದಿಗೆ ಬೆಂಗಳೂರಿನಲ್ಲಿ ಒಟ್ಟು 12 ಸ್ಟುಡಿಯೋಗಳನ್ನು ಹೊಂದಿದೆ. ಇದರಿಂದ ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಗೃಹೋಪಯೋಗಿ ಮತ್ತು ಜೀವನಶೈಲಿ ಮಾರುಕಟ್ಟೆಗಳಲ್ಲಿ ಒಂದಾಗಿರುವ ಬೆಂಗಳೂರಿನಲ್ಲಿ ಕಂಪನಿಯ ಉಪಸ್ಥಿತಿ ಮತ್ತಷ್ಟು ಬಲಗೊಂಡಿದೆ. ದೇಶಾದ್ಯಂತ 90ಕ್ಕೂ ಹೆಚ್ಚು ನಗರಗಳಲ್ಲಿ 150ಕ್ಕೂ ಅಧಿಕ ಮಳಿಗೆಗಳನ್ನು ಹೊಂದಿರುವ ಕಂಪನಿಯು, ಆನ್ಲೈನ್ ಮತ್ತು ಆಫ್ಲೈನ್ ಪೀಠೋಪಕರಣಗಳ ಖರೀದಿ ಅನುಭವದ ಅತ್ಯುತ್ತಮ ಸೌಲಭ್ಯಗಳನ್ನು ಗ್ರಾಹಕರಿಗೆ ಒದಗಿಸುತ್ತಿದೆ.
ಸುಮಾರು 1,300 ಚದರ ಅಡಿ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ನೂತನ ಸ್ಟುಡಿಯೋದಲ್ಲಿ ಪ್ರಮುಖ ಬ್ರ್ಯಾಂಡ್ಗಳ ಪೀಠೋಪಕರಣಗಳು, ಹಾಸಿಗೆಗಳು, ಗೃಹಾಲಂಕಾರ ಉತ್ಪನ್ನಗಳು, ಮಾಡ್ಯುಲರ್ ಪರಿಹಾರಗಳು ಹಾಗೂ ಜೀವನಶೈಲಿ ಉತ್ಪನ್ನಗಳ ವ್ಯಾಪಕ ಶ್ರೇಣಿಯನ್ನು ಪ್ರದರ್ಶಿಸ ಲಾಗಿದೆ.
ಇದನ್ನೂ ಓದಿ: Padayatra completes 8th Day: ಪಾದಯಾತ್ರೆ 8ನೇ ದಿನ ಮುಕ್ತಾಯ, 17 ಕಿ.ಮೀ. ನಡಿಗೆ: ಸಂಡೂರಲ್ಲಿ ರಾರಾಜಿಸಿದ ಕೇಸರಿ ಧ್ವಜ
ಗ್ರಾಹಕರಿಗೆ ಸ್ಫೂರ್ತಿ ನೀಡುವ ಉದ್ದೇಶದಿಂದ ಸುಂದರವಾಗಿ ವಿನ್ಯಾಸಗೊಳಿಸಲಾದ ಕೊಠಡಿ ವಿನ್ಯಾಸಗಳು ಮತ್ತು ಅನುಭವಾಧಾರಿತ ಪ್ರದರ್ಶನಗಳನ್ನು ಇಲ್ಲಿ ರೂಪಿಸಲಾಗಿದೆ. ಗ್ರಾಹಕರ ವಿಶಿಷ್ಟ ಅಭಿರುಚಿ ಮತ್ತು ಅಗತ್ಯಗಳಿಗೆ ತಕ್ಕಂತೆ ಮನೆಗಳನ್ನು ರೂಪಿಸಿಕೊಳ್ಳಲು ಪೆಪ್ಪರ್ಫ್ರೈಯ ವಿನ್ಯಾಸ ಸಲಹೆಗಾರರು ತಜ್ಞ ಮಾರ್ಗದರ್ಶನವನ್ನೂ ಒದಗಿಸುತ್ತಾರೆ.
ಸ್ಟುಡಿಯೋ ಉದ್ಘಾಟನೆಯ ಕುರಿತು ಮಾತನಾಡಿದ ಮುಖ್ಯ ವ್ಯವಹಾರ ಅಧಿಕಾರಿ ಹುಸೇನ್ ಕೆಸುರಿ ಅವರು, “ಬೆಂಗಳೂರು ನಮ್ಮ ಅತ್ಯಂತ ಪ್ರಮುಖ ಬೆಳವಣಿಗೆಯ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಇಲ್ಲಿ ಮನೆ ಮಾಲೀಕರ ಉತ್ಸಾಹಭರಿತ ಸಮುದಾಯವಿದ್ದು, ಉತ್ತಮ ವಿನ್ಯಾಸದ ವಾಸಸ್ಥಳಗಳಿಗೆ ಹೆಚ್ಚಿನ ಬೇಡಿಕೆಯಿದೆ. ಬನ್ನೇರುಘಟ್ಟದಲ್ಲಿ ನಮ್ಮ ಹೊಸ FOFO ಸ್ಟುಡಿಯೋ ಆರಂಭಿಸಿರುವುದು ಗ್ರಾಹಕರಿಗೆ ನಮ್ಮ ಸೇವೆಗಳನ್ನು ಸುಲಭವಾಗಿ ತಲುಪಿಸುವ ಮತ್ತು ಅವರಿಗೆ ತಡೆರಹಿತ ಓಮ್ನಿ ಚಾನೆಲ್ ಅನುಭವವನ್ನು ಒದಗಿಸುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ನಮ್ಮ ಸ್ಟುಡಿಯೋಗಳ ಮೂಲಕ ಗ್ರಾಹಕರು ವಿವಿಧ ಉತ್ಪನ್ನಗಳನ್ನು ವೀಕ್ಷಿಸಬಹುದು, ವೈಯಕ್ತಿಕ ಗೊಳಿಸಿದ ವಿನ್ಯಾಸ ಸಲಹೆಗಳನ್ನು ಪಡೆಯಬಹುದು ಹಾಗೂ ತಮ್ಮ ಮನೆಗಳಿಗೆ ಸೂಕ್ತವಾದ ಆಯ್ಕೆಗಳನ್ನು ಆತ್ಮವಿಶ್ವಾಸದಿಂದ ಮಾಡಬಹುದು,” ಎಂದು ಹೇಳಿದರು.
ಮಳಿಗೆಯ ಮಾಲೀಕ ದಿನೇಶ್ ಕುಮಾರ್ ಮಾತನಾಡಿ, “ಭಾರತದ ಪ್ರಮುಖ ಗೃಹೋಪಯೋಗಿ ಮತ್ತು ಪೀಠೋಪಕರಣಗಳ ಮಾರುಕಟ್ಟೆ ವೇದಿಕೆಯ ಜೊತೆ ಪಾಲುದಾರಿಕೆ ಹೊಂದಿರುವುದಕ್ಕೆ ನಮಗೆ ಅತ್ಯಂತ ಸಂತೋಷವಾಗಿದೆ. ಈ ವೇದಿಕೆಯು ವಿಶಿಷ್ಟವಾದ ಓಮ್ನಿಚಾನೆಲ್ ವ್ಯವಹಾರ ಮಾದರಿ ರೂಪಿಸುವಲ್ಲಿ ಮುಂಚೂಣಿಯಲ್ಲಿದೆ. ದೇಶದ ಅತಿದೊಡ್ಡ ಓಮ್ನಿಚಾನೆಲ್ ಗೃಹೋಪಯೋಗಿ ಮತ್ತು ಪೀಠೋಪಕರಣಗಳ ವ್ಯವಹಾರವನ್ನು ನಿರ್ಮಿಸುವ ಅದರ ಪ್ರಯಾಣದ ಭಾಗವಾಗಿರುವುದಕ್ಕೆ ನಮಗೆ ಹೆಮ್ಮೆಯಿದೆ,” ಎಂದು ತಿಳಿಸಿದರು.
ಓಮ್ನಿಚಾನೆಲ್ ಕಾರ್ಯತಂತ್ರವು ಆನ್ಲೈನ್ನಲ್ಲಿ ಉತ್ಪನ್ನಗಳನ್ನು ಸುಲಭವಾಗಿ ಅನ್ವೇಷಿಸುವ ಸೌಲಭ್ಯವನ್ನು ಮಳಿಗೆಯಲ್ಲಿ ನೇರವಾಗಿ ಉತ್ಪನ್ನಗಳನ್ನು ಅನುಭವಿಸುವ ಅವಕಾಶದೊಂದಿಗೆ ಸಂಯೋಜಿಸುತ್ತದೆ. ಇದರಿಂದ ಗ್ರಾಹಕರು ಖರೀದಿಸುವ ಮೊದಲು ಉತ್ಪನ್ನಗಳನ್ನು ಸ್ಪರ್ಶಿಸಿ, ಅವುಗಳ ಗುಣಮಟ್ಟ ಮತ್ತು ವಿನ್ಯಾಸವನ್ನು ಪರಿಶೀಲಿಸಿ, ಸೂಕ್ತ ನಿರ್ಧಾರ ಕೈಗೊಳ್ಳಬಹುದು. ಈ ಸ್ಟುಡಿಯೋ ಒಳಾಂಗಣ ವಿನ್ಯಾಸ ಸಮಾಲೋಚನೆಗಳು ಮತ್ತು ಮಾಡ್ಯುಲರ್ ಪರಿಹಾರಗಳ ಕೇಂದ್ರ ವಾಗಿಯೂ ಕಾರ್ಯನಿರ್ವಹಿಸಲಿದ್ದು, ಗ್ರಾಹಕರು ತಮ್ಮ ಕನಸಿನ ಮನೆಗಳನ್ನು ದೃಶ್ಯೀಕರಿಸಿ ರೂಪಿಸಿಕೊಳ್ಳಲು ನೆರವಾಗುತ್ತದೆ.