ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬಜಾಜ್ ಜನರಲ್ ಇನ್ಶೂರೆನ್ಸ್ ಎಂಎಚ್‌ಸಿಪಿ ಎಡ್ಜ್+ ಎಂಬ, ಅನುಕೂಲಕರ, ಭವಿಷ್ಯದ ದಿನಗಳಿಗೆ ಸೂಕ್ತವಾದ ಆರೋಗ್ಯ ಪರಿಹಾರ ಪ್ಲಾನ್ ಬಿಡುಗಡೆ

ಭಾರತದ ಪ್ರಮುಖ ಖಾಸಗಿ ಜನರಲ್ ಇನ್ಶೂರರ್‌ಗಳಲ್ಲಿ ಒಂದಾದ ಬಜಾಜ್ ಜನರಲ್ ಇನ್ಶೂರೆನ್ಸ್ ಲಿಮಿಟೆಡ್ (ಈ ಮೊದಲು ಬಜಾಜ್ ಅಲಾಯನ್ಸ್ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ ಎಂದು ಕರೆಯಲ್ಪಡುತ್ತಿತ್ತು), ಇಂದು 'ಮೈ ಹೆಲ್ತ್ ಕೇರ್ ಪ್ಲಾನ್ ಎಡ್ಜ್+' (ಎಂಎಚ್‌ಸಿಪಿ ಎಡ್ಜ್+) ಆರಂಭಿಸಿದ್ದು , ಇದು ಹೆಚ್ಚುತ್ತಿರುವ ಚಿಕಿತ್ಸಾ ವೆಚ್ಚಗಳನ್ನು ಪರಿಹರಿಸಲು ಮತ್ತು ಹೆಚ್ಚುವರಿ ಅನುಕೂಲ ಮತ್ತು ಕಸ್ಟಮೈಸೇಶನ್ ಮೂಲಕ ಜೇಬಿನಿಂದ ಖರ್ಚು ಮಾಡುವ ವೆಚ್ಚಗಳನ್ನು ಕಡಿಮೆ ಮಾಡಲು ವಿನ್ಯಾಸ ಗೊಳಿಸಲಾದ ಸಮಗ್ರ ಆರೋಗ್ಯ ಪರಿಹಾರ ಉತ್ಪನ್ನವಾಗಿದೆ.

ಬಜಾಜ್ ಜನರಲ್ ಇನ್ಶೂರೆನ್ಸ್ ಎಂಎಚ್‌ಸಿಪಿ ಎಡ್ಜ್+: ಪ್ಲಾನ್ ಬಿಡುಗಡೆ

-

Profile
Ashok Nayak May 19, 2026 5:40 PM

- ₹5 ಲಕ್ಷದಿಂದ ₹5 ಕೋಟಿಯವರೆಗಿನ ವಿಮಾ ಮೊತ್ತದ ಆಯ್ಕೆಗಳು

- ಪಾಲಿಸಿ ವರ್ಷದೊಳಗೆ ನಿರಂತರ ಕವರೇಜ್ ಖಚಿತಪಡಿಸುವ ಅನಿಯಮಿತ ಮರುಸ್ಥಾಪನೆ

- ವೈಯಕ್ತಿಕ ಅಗತ್ಯಗಳಿಗೆ ಅನುಗುಣವಾದ ರಕ್ಷಣೆಗಾಗಿ ಅನೇಕ ಆ್ಯಡ್-ಆನ್‌ಗಳು ಮತ್ತು ರೈಡರ್‌ಗಳೊಂದಿಗೆ ಮಾಡ್ಯುಲರ್ ವಿನ್ಯಾಸ

- ಕನ್ಸೂಮೆಬಲ್‌ಗಳು, ಆಧುನಿಕ ಚಿಕಿತ್ಸೆಗಳು ಮತ್ತು ಜಾಗತಿಕ ಚಿಕಿತ್ಸೆ ಆಯ್ಕೆಗಳಿಗೆ ಕವರೇಜ್

- ಕ್ಲೈಮ್ ಮಾಡುವವರೆಗೆ, ಪ್ರವೇಶ ವಯಸ್ಸಿನ ಪ್ರೀಮಿಯಂ ಲಾಕ್ ಮಾಡಲು ಏಜ್ ಶೀಲ್ಡ್ ಫೀಚರ್

- ಸ್ಮಾರ್ಟ್ ಟೆನ್ಯೂರ್ ಗ್ರಾಹಕರಿಗೆ ಪಾಲಿಸಿ ಅವಧಿಯಾದ್ಯಂತ ತಮ್ಮ ಒಟ್ಟು ವಿಮಾ ಮೊತ್ತವನ್ನು ಒಟ್ಟುಗೂಡಿಸಲು ಮತ್ತು ಮೊದಲ ವರ್ಷದಿಂದಲೇ ಅದನ್ನು ತಮ್ಮ ಅಗತ್ಯಕ್ಕೆ ತಕ್ಕಂತೆ ಬಳಸಲು ಅನುವು ಮಾಡಿಕೊಡುತ್ತದೆ.

ಬೆಂಗಳೂರು: ಭಾರತದ ಪ್ರಮುಖ ಖಾಸಗಿ ಜನರಲ್ ಇನ್ಶೂರರ್‌ಗಳಲ್ಲಿ ಒಂದಾದ ಬಜಾಜ್ ಜನರಲ್ ಇನ್ಶೂರೆನ್ಸ್ ಲಿಮಿಟೆಡ್ (ಈ ಮೊದಲು ಬಜಾಜ್ ಅಲಾಯನ್ಸ್ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ ಎಂದು ಕರೆಯಲ್ಪಡುತ್ತಿತ್ತು), ಇಂದು 'ಮೈ ಹೆಲ್ತ್ ಕೇರ್ ಪ್ಲಾನ್ ಎಡ್ಜ್+' (ಎಂಎಚ್‌ಸಿಪಿ ಎಡ್ಜ್+) ಆರಂಭಿಸಿದ್ದು , ಇದು ಹೆಚ್ಚುತ್ತಿರುವ ಚಿಕಿತ್ಸಾ ವೆಚ್ಚಗಳನ್ನು ಪರಿಹರಿಸಲು ಮತ್ತು ಹೆಚ್ಚುವರಿ ಅನುಕೂಲ ಮತ್ತು ಕಸ್ಟಮೈಸೇಶನ್ ಮೂಲಕ ಜೇಬಿನಿಂದ ಖರ್ಚು ಮಾಡುವ ವೆಚ್ಚಗಳನ್ನು ಕಡಿಮೆ ಮಾಡಲು ವಿನ್ಯಾಸಗೊಳಿಸಲಾದ ಸಮಗ್ರ ಆರೋಗ್ಯ ಪರಿಹಾರ ಉತ್ಪನ್ನ ವಾಗಿದೆ.

ತನ್ನ ಅಸ್ತಿತ್ವದಲ್ಲಿರುವ ಎಂಎಚ್‌ಸಿಪಿ ಕೊಡುಗೆಯ ಘನ ಅಡಿಪಾಯದ ಮೇಲೆ ನಿರ್ಮಿಸಲ್ಪಟ್ಟ ಎಂಎಚ್‌ಸಿಪಿ ಎಡ್ಜ್+, ಪ್ರಮುಖ ಆಸ್ಪತ್ರೆ ದಾಖಲಾತಿ ಕವರೇಜ್ ಅನ್ನು ವ್ಯಾಪಕವಾದ ಐಚ್ಛಿಕ ರೈಡರ್‌ಗಳೊಂದಿಗೆ ಸಂಯೋಜಿಸುತ್ತದೆ ಹಾಗೂ ವಿಕಸನಗೊಳ್ಳುತ್ತಿರುವ ಆರೋಗ್ಯ ರಕ್ಷಣೆ ಅಗತ್ಯಗಳು, ಜೀವನದ ಹಂತ ಮತ್ತು ಕೈಗೆಟುಕುವಿಕೆಯ ಆಧಾರದ ಮೇಲೆ ತಮ್ಮ ಪಾಲಿಸಿಯನ್ನು ರೂಪಿಸಿಕೊಳ್ಳಲು ಗ್ರಾಹಕರಿಗೆ ಅನುವು ಮಾಡಿಕೊಡುತ್ತದೆ. ಈ ಪ್ಲಾನ್ ಪಾಲಿಸಿ ವರ್ಷದೊಳಗೆ ವಿಮಾ ಮೊತ್ತದ ಅನಿಯಮಿತ ಮರುಸ್ಥಾಪನೆಯೊಂದಿಗೆ ₹5 ಲಕ್ಷದಿಂದ ₹5 ಕೋಟಿಯವರೆಗಿನ ವಿಮಾ ಮೊತ್ತದ ಆಯ್ಕೆಗಳನ್ನು ಒದಗಿಸುತ್ತದೆ, ಅನೇಕ ಕ್ಲೈಮ್‌ಗಳ ಸಂದರ್ಭದಲ್ಲಿಯೂ ನಿರಂತರ ರಕ್ಷಣೆಯನ್ನು ಖಚಿತಪಡಿಸುತ್ತದೆ.

ಇದನ್ನೂ ಓದಿ: Bangalore News: ರಿಯಾ ಡೈಮಂಡ್ಸ್ ಬೆಂಗಳೂರಿನಲ್ಲಿ ಭಾರತದ ಮೊದಲ ಪ್ರಯೋಗಾಲಯದಲ್ಲಿ ಬೆಳೆದ ವಜ್ರ ನಿಶ್ಚಿತಾರ್ಥ ಉಂಗುರ ಸ್ಟುಡಿಯೋ ಪ್ರಾರಂಭ

ರೂಮ್ ಬಾಡಿಗೆ, ICU ಶುಲ್ಕಗಳು, ಶಸ್ತ್ರಚಿಕಿತ್ಸೆಗಳು, ಆಧುನಿಕ ಚಿಕಿತ್ಸೆ ವಿಧಾನಗಳು, ಆಯುಷ್ ಚಿಕಿತ್ಸೆಗಳು ಮತ್ತು ಆಸ್ಪತ್ರೆಗೆ ದಾಖಲಾಗುವ ಮೊದಲು ಮತ್ತು ನಂತರದ ವೆಚ್ಚಗಳನ್ನು ಒಳಗೊಂಡಂತೆ ಆಸ್ಪತ್ರೆ ದಾಖಲಾತಿ ವೆಚ್ಚಗಳಿಗೆ ಬೇಸ್ ಪ್ಲಾನ್ ಸಮಗ್ರ ಕವರೇಜ್ ಒದಗಿಸುತ್ತದೆ. ಇದು ಡೇ ಕೇರ್ ಪ್ರಕ್ರಿಯೆಗಳು, ಡೊಮಿಸಿಲಿಯರಿ ಆಸ್ಪತ್ರೆ ದಾಖಲಾತಿ, ಅಂಗ ದಾನಿ ವೆಚ್ಚಗಳು ಮತ್ತು ತುರ್ತು ಆ್ಯಂಬುಲೆನ್ಸ್ ಸೇವೆಗಳನ್ನು ಕೂಡಾ ಕವರ್ ಮಾಡುತ್ತದೆ, ವೈದ್ಯಕೀಯ ಅನಿರೀಕ್ಷಿತ ಘಟನೆಗಳ ಸಮಯದಲ್ಲಿ ಸಮಗ್ರ ಹಣಕಾಸಿನ ರಕ್ಷಣೆಯನ್ನು ಒದಗಿಸುತ್ತದೆ.

ಎಂಎಚ್‌ಸಿಪಿ ಎಡ್ಜ್+ ನ ಪ್ರಮುಖ ವ್ಯತ್ಯಾಸವೆಂದರೆ ಅದರ ಮಾಡ್ಯುಲರ್ ರಚನೆಯಾಗಿದ್ದು, ಇದು ಗ್ರಾಹಕರಿಗೆ ಹಲವಾರು ಆ್ಯಡ್-ಆನ್‌ಗಳು ಮತ್ತು ರೈಡರ್‌ಗಳ ಮೂಲಕ ತಮ್ಮ ಕವರೇಜ್ ಹೆಚ್ಚಿಸಲು ಅನುವು ಮಾಡಿಕೊಡುತ್ತದೆ. ಇವುಗಳು ಡಿಸ್ಚಾರ್ಜ್ ಸಮಯದಲ್ಲಿ, ಇನ್ಶೂರೆನ್ಸ್‌ನಲ್ಲಿ ಒಳಗೊಳ್ಳದ ವೆಚ್ಚಗಳನ್ನು ಕಡಿಮೆ ಮಾಡಲು ಕನ್ಸ್ಯೂಮೆಬಲ್ಸ್ ಪ್ಲಸ್, ವಿಮಾ ಮೊತ್ತದ ವೇಗವರ್ಧಿತ ಬೆಳವಣಿಗೆ ಗಾಗಿ ಸೂಪರ್ ಕ್ಯುಮುಲೇಟಿವ್ ಬೋನಸ್ ಮತ್ತು ಗಂಭೀರ ಘಟನೆಗಳ ಸಂದರ್ಭದಲ್ಲಿ ಹೆಚ್ಚಿನ ರಕ್ಷಣೆಗಾಗಿ ಮೇಜರ್ ಇಲ್‌ನೆಸ್ ಮತ್ತು ಆ್ಯಕ್ಸಿಡೆಂಟ್ ಮಲ್ಟಿಪ್ಲೈಯರ್ ಪ್ರಯೋಜನಗಳನ್ನು ಒಳಗೊಂಡಿವೆ. ಈ ಉತ್ಪನ್ನ ವಿದೇಶದಲ್ಲಿ ತುರ್ತು ಮತ್ತು ಯೋಜಿತ ಚಿಕಿತ್ಸೆಗಳಿಗೆ ಜಾಗತಿಕ ಕವರೇಜ್ ಆಯ್ಕೆಗಳನ್ನು ಒದಗಿಸುತ್ತದೆ ಹಾಗೂ ಅಂತಾರಾಷ್ಟ್ರೀಯ ಆರೋಗ್ಯ ಸೇವೆಯ ಅಗತ್ಯ ಗಳನ್ನು ಹೊಂದಿರುವ ಗ್ರಾಹಕರಿಗೆ ನೆರವಾಗುತ್ತದೆ.

ಹೆಚ್ಚುವರಿಯಾಗಿ, ಎಂಎಚ್‌ಸಿಪಿ ಎಡ್ಜ್+ ದೀರ್ಘಾವಧಿಯ ಕೈಗೆಟುಕುವಿಕೆ ಮತ್ತು ಭವಿಷ್ಯದ ಸಿದ್ಧತೆಯ ಮೇಲೆ ಕೇಂದ್ರೀಕರಿಸಿದ ಫೀಚರ್‌ಗಳನ್ನು ಪರಿಚಯಿಸುತ್ತದೆ. ಏಜ್ ಶೀಲ್ಡ್ ರೈಡರ್ ಕ್ಲೈಮ್ ಮಾಡುವವರೆಗೆ, ಪ್ರವೇಶ ವಯಸ್ಸಿನ ತಮ್ಮ ಪ್ರೀಮಿಯಂ ಅನ್ನು ಲಾಕ್ ಮಾಡಲು ಗ್ರಾಹಕರಿಗೆ ಅನುವು ಮಾಡಿಕೊಡುತ್ತದೆ. ಹಾಗೆಯೇ ಸ್ಮಾರ್ಟ್ ಟೆನ್ಯೂರ್ ಪೂರ್ಣ ಪಾಲಿಸಿ ಅವಧಿಯಲ್ಲಿನ ತಮ್ಮ ವಿಮಾ ಮೊತ್ತವನ್ನು ಸಂಯೋಜಿಸಲು ಗ್ರಾಹಕರಿಗೆ ಅನುವು ಮಾಡಿಕೊಡುತ್ತದೆ ಹಾಗೂ ಪಾಲಿಸಿಯ ಆರಂಭಿಕ ವರ್ಷಗಳಲ್ಲಿಯೂ ಅಗತ್ಯವಿದ್ದಾಗ ದೊಡ್ಡ ಮೊತ್ತದ ಒಟ್ಟಾರೆ ಕವರೇಜ್‌ ಬಳಸಲು ಅವಕಾಶ ನೀಡುತ್ತದೆ.

ಗ್ರಾಹಕರು ಗ್ಲೋಬಲ್ ಕವರ್ ಆಯ್ಕೆ ಮಾಡಬಹುದು, ಇದು ವಿದೇಶದಲ್ಲಿ ಯೋಜಿತ ಮತ್ತು ತುರ್ತು ಚಿಕಿತ್ಸೆಗಳಿಗೆ ಅವಕಾಶ ಒದಗಿಸುವ ಮೂಲಕ, ಭಾರತದ ಹೊರಗೆ ಚಿಕಿತ್ಸೆಯನ್ನು ವಿಸ್ತರಿಸುತ್ತದೆ. ಹೆಲ್ತ್ ಲಿಮಿಟ್‌ಲೆಸ್ ರೈಡರ್, ಪಾಲಿಸಿಯ ಜೀವಿತಾವಧಿಯಲ್ಲಿ ಯಾವುದೇ ವಾರ್ಷಿಕ ವಿಮಾ ಮೊತ್ತದ ಮಿತಿಯಿಲ್ಲದೆ ಒಂದು ಕ್ಲೈಮ್ ಒದಗಿಸುವ ಮೂಲಕ ರಕ್ಷಣೆಯನ್ನು ಹೆಚ್ಚಿಸುತ್ತದೆ. ಈ ಪ್ಲಾನ್ ಹೆಲ್ತ್ ಪ್ರೈಮ್ ರೈಡರ್ ರೀತಿಯ ಐಚ್ಛಿಕ ರೈಡರ್‌ಗಳ ಮೂಲಕ ವೆಲ್‌ನೆಸ್ ಮತ್ತು ಮುಂಜಾ ಗ್ರತಾ ಆರೈಕೆಗೆ ವಿಸ್ತರಿಸುತ್ತಿದ್ದು, ಇದು ಟೆಲಿ ಸಮಾಲೋಚನೆ, ಕ್ಲಿನಿಕ್ ಸಮಾಲೋಚನೆ, ಡಯಾ ಗ್ನಸ್ಟಿಕ್ ಬೆಂಬಲ, ಮುಂಜಾಗ್ರತಾ ಆರೋಗ್ಯ ತಪಾಸಣೆಗಳು ಮತ್ತು ಜೀವನಶೈಲಿ ಮತ್ತು ಫಿಟ್‌ನೆಸ್ ಸಂಬಂಧಿತ ಸೇವೆಗಳನ್ನು ಒಳಗೊಂಡಿದೆ.

ಪ್ರಕಟಣೆಯ ಬಗ್ಗೆ ಮಾತನಾಡಿದ ಬಜಾಜ್ ಜನರಲ್ ಇನ್ಶೂರೆನ್ಸ್‌ನ ಎಂಡಿ ಮತ್ತು ಸಿಇಒ ಡಾ. ತಪನ್ ಸಿಂಘೇಲ್: "ಹೆಲ್ತ್ ಇನ್ಶೂರೆನ್ಸ್ ಉತ್ಪನ್ನ ಮನೋಭಾವದಿಂದ, ಪರಿಹಾರ ಕೇಂದ್ರಿತ ಮನೋ ಭಾವದತ್ತ ಸಾಗುತ್ತಿದೆ. ಇಲ್ಲಿ ಆಸ್ಪತ್ರೆ ದಾಖಲಾತಿಯನ್ನು ಕವರ್ ಮಾಡುವುದರ ಮೇಲೆ ಮಾತ್ರ ಗಮನಹರಿಸುವುದಿಲ್ಲ, ಗ್ರಾಹಕರ ಸಂಪೂರ್ಣ ಆರೋಗ್ಯದ ಪ್ರಯಾಣದಲ್ಲಿ ನಾವು ಗ್ರಾಹಕ ರಿಗೆ ಎಷ್ಟು ಪರಿಣಾಮಕಾರಿಯಾಗಿ ಬೆಂಬಲ ನೀಡುತ್ತೇವೆ ಎಂಬುದರ ಮೇಲೆ ಗಮನ ಹರಿಸುತ್ತೇವೆ. ಎಂಎಚ್‌ಸಿಪಿ ಎಡ್ಜ್+ ನೊಂದಿಗೆ, ಹೆಚ್ಚುತ್ತಿರುವ ವೈದ್ಯಕೀಯ ವೆಚ್ಚಗಳು, ಇನ್ಶೂರೆನ್ಸ್‌ನಲ್ಲಿ ಒಳಗೊಳ್ಳದ ವೆಚ್ಚಗಳು ಅಥವಾ ಹೆಚ್ಚಿನ ಮತ್ತು ಹೆಚ್ಚು ಹೊಂದಿಕೊಳ್ಳಬಹುದಾದ ಕವರೇಜ್‌ ನಂಥ, ಕೆಲವು ಅತ್ಯಗತ್ಯ ಅಂತರಗಳನ್ನು ಕಡಿಮೆ ಮಾಡಲು ಪ್ಲಾನ್ ಅನ್ನು ನಾವು ನಿರ್ಮಿಸಿದ್ದೇವೆ.