IRCTCಯಿಂದ 'ಡಿವೈನ್ ಈಸ್ಟ್ ಟೆಂಪಲ್ ಟೂರ್' ಪ್ಯಾಕೇಜ್ ಆರಂಭ; 10 ದಿನಗಳ ಅದ್ಭುತ ಧಾರ್ಮಿಕ ಪ್ರವಾಸ ಹೇಗಿರಲಿದೆ ಗೊತ್ತಾ?
ಐಆರ್‌ಸಿಟಿಸಿ (IRCTC) ‘ಭಾರತ ಗೌರವ್’ ರೈಲಿನ ಮೂಲಕ ವಾರಾಣಸಿ, ಪುರಿ, ಗಂಗಾಸಾಗರ ಮತ್ತು ದೇಒಘರ್ ದೇವಾಲಯಗಳನ್ನು ಒಳಗೊಂಡ 10 ದಿನಗಳ ‘ಡಿವೈನ್ ಈಸ್ಟ್ ಟೆಂಪಲ್ ಟೂರ್’ ಯಾತ್ರೆಯನ್ನು ಆರಂಭಿಸಿದೆ. ಈ ವಿಶೇಷ ಪ್ಯಾಕೇಜ್‌ನಲ್ಲಿ ಪ್ರಯಾಣ, ವಸತಿ, ಆಹಾರ ಮತ್ತು ದೇವಾಲಯ ದರ್ಶನ ವ್ಯವಸ್ಥೆಗಳನ್ನು ಒದಗಿಸಲಾಗಿದ್ದು, ಭಕ್ತರಿಗೆ ಪೂರ್ವ ಭಾರತದ ಪ್ರಮುಖ ಧಾರ್ಮಿಕ ಕ್ಷೇತ್ರಗಳ ದರ್ಶನ ಮಾಡುವ ಅವಕಾಶ ದೊರೆಯಲಿದೆ.
ಐಆರ್‌ಸಿಟಿಸಿ -
ಬೆಂಗಳೂರು: ಐಆರ್‌ಸಿಟಿಸಿ (IRCTC)ಯು ತನ್ನ ಪ್ರತಿಷ್ಠಿತ 'ಭಾರತ್ ಗೌರವ್' ಡಿಲಕ್ಸ್ ಎಸಿ ಪ್ರವಾಸಿ ರೈಲಿನ ಮೂಲಕ ಪೂರ್ವ ಭಾರತದ ಪ್ರಮುಖ ಧಾರ್ಮಿಕ ಹಾಗೂ ಸಾಂಸ್ಕೃತಿಕ ತಾಣಗಳನ್ನು ಒಳಗೊಂಡ 10 ದಿನಗಳ 'ಡಿವೈನ್ ಈಸ್ಟ್ ಟೆಂಪಲ್ ಟೂರ್' (Divine East Temple Tour) ಅನ್ನು ಪ್ರಾರಂಭಿಸಿದೆ. ಈ ರೈಲು ಆಧಾರಿತ ಪ್ರವಾಸ ಪ್ಯಾಕೇಜ್ ಮೂಲಕ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಒಡಿಶಾ ಹಾಗೂ ಜಾರ್ಖಂಡ್ ರಾಜ್ಯಗಳಲ್ಲಿನ ಅತ್ಯಂತ ಪವಿತ್ರ ತೀರ್ಥಕ್ಷೇತ್ರಗಳು ಮತ್ತು ಸಾಂಸ್ಕೃತಿಕ ಹೇರಿಟೇಜ್ ತಾಣಗಳಿಗೆ ಭಕ್ತರು ಹಾಗೂ ಪ್ರವಾಸಿಗರಿಗೆ ಭೇಟಿ ನೀಡುವ ಅಪೂರ್ವ ಅವಕಾಶ ಲಭಿಸುತ್ತದೆ.
ಈ ಯಾತ್ರೆಯು ದೆಹಲಿ ಸಫ್ದರ್ಜಂಗ್ ನಿಲ್ದಾಣದಿಂದ ಆರಂಭವಾಗಿ, ವಾರಾಣಸಿ, ಕೊಲ್ಕತ್ತಾ, ಗಂಗಾಸಾಗರ, ಪುರಿ, ಭುವನೇಶ್ವರ, ಕೊನಾರ್ಕ್, ಚಿಲಿಕಾ ಮತ್ತು ಬೈದ್ಯನಾಥ ಧಾಮ (ದಿಯೋಘರ್)ವರೆಗೂ ತಲುಪಿ ಮತ್ತೆ ದೆಹಲಿಗೆ ಮರಳಲಿದೆ. 9 ರಾತ್ರಿ ಮತ್ತು 10 ದಿನಗಳ ಈ ಪ್ರವಾಸವು ಭಕ್ತರಿಗೆ ಆಧ್ಯಾತ್ಮಿಕ ಅನುಭವ ಹಾಗೂ ಸಾಂಸ್ಕೃತಿಕ ಅರಿವು ಮೂಡಿಸಲಿದೆ.
ಪ್ರವಾಸದ ಮಾರ್ಗ ಮತ್ತು ಪ್ರಮುಖ ಸ್ಥಳಗಳು
ವಾರಣಾಸಿ:
ಕಾಶಿ ವಿಶ್ವನಾಥ ದೇವಸ್ಥಾನ (ಜ್ಯೋತಿರ್ಲಿಂಗ) ದರ್ಶನ ಮತ್ತು ಗಂಗಾ ಆರತಿ
ಮೆಟ್ರೋ ನಿಲ್ದಾಣದಲ್ಲಿ ಗೆಳತಿಯೊಂದಿಗಿದ್ದ ಮಗನನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ತಾಯಿ ಮಾಡಿದ್ದೇನು ಗೊತ್ತಾ?
ಕೋಲ್ಕತ್ತಾ:
ವಿಕ್ಟೋರಿಯಾ ಮೆಮೋರಿಯಲ್, ಕಾಳಿಘಾಟ್ (ಶಕ್ತಿ ಪೀಠ) ಮತ್ತು ದಕ್ಷಿಣೇಶ್ವರ ಕಾಳಿ ಮಂದಿರ
ಗಂಗಾಸಾಗರ:
ಸಾಗರ ಸಂಗಮದಲ್ಲಿ ಪವಿತ್ರ ಸ್ನಾನ ಮತ್ತು ಕಪಿಲ ಮುನಿ ಆಶ್ರಮ ಭೇಟಿ
ಒಡಿಶಾ:
ಪುರಿ ಜಗನ್ನಾಥ ದೇವಾಲಯ, ಭುವನೇಶ್ವರ, ಧೌಲಿ ಶಾಂತಿ ಸ್ತೂಪ, ಉದಯಗಿರಿ-ಖಂಡಗಿರಿ ಗುಹೆಗಳು ಮತ್ತು ಕೋನಾರ್ಕ್ ಸೂರ್ಯ ದೇವಾಲಯ (ಯುನೆಸ್ಕೋ ಪರಂಪರೆಯ ತಾಣ)
ದಿಯೋಘರ್: ಶಿವನ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದಾದ ವೈದ್ಯನಾಥ ಧಾಮದ ದರ್ಶನ
ಆರಾಮದಾಯಕ ಪ್ರಯಾಣ
ಭಾರತ್ ಗೌರವ್ ರೈಲು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ್ದು, ಪ್ರಯಾಣಿಕರಿಗೆ ಆರಾಮದಾಯಕ ಅನುಭವ ನೀಡಲಿದೆ. ಎಸಿ I, ಎಸಿ II ಮತ್ತು ಎಸಿ III ದರ್ಜೆಯ ಕ್ಯಾಬಿನ್‌ಗಳು, ಸ್ವಚ್ಛ ಮತ್ತು ರುಚಿಕರವಾದ ಸಸ್ಯಾಹಾರ ಭೋಜನದ ವ್ಯವಸ್ಥೆ, ಪ್ರವಾಸದ ಉದ್ದಕ್ಕೂ ಮಾರ್ಗದರ್ಶನ ನೀಡಲು ವಿಶೇಷ ಟೂರ್ ಮ್ಯಾನೇಜರ್‌ಗಳು ಹಾಗೂ ಪ್ರಯಾಣಿಕರ ಸುರಕ್ಷತೆಗಾಗಿ ಸುಧಾರಿತ ಸೆಕ್ಯೂರಿಟಿ ಫೀಚರ್‌ಗಳು ಈ ರೈಲಿನಲ್ಲಿ ಸಿಗಲಿವೆ.
ದರ ಮತ್ತು ಬುಕ್ಕಿಂಗ್ ವಿವರಗಳು
AC I ಕ್ಲಾಸ್: ಒಬ್ಬರಿಗೆ ₹ 1,06,940
AC II ಕ್ಲಾಸ್: ಒಬ್ಬರಿಗೆ ₹ 98,925
AC III ಕ್ಲಾಸ್: ಒಬ್ಬರಿಗೆ ₹ 79,285
ಪ್ಯಾಕೇಜ್‌ನಲ್ಲಿ ಏನೇನಿದೆ?
ಈ ಪ್ಯಾಕೇಜ್ ದರದಲ್ಲಿ ಎಸಿ ರೈಲು ಪ್ರಯಾಣ, ಎಸಿ ಹೋಟೆಲ್ ವಸತಿ, ಎಲ್ಲಾ ಸಸ್ಯಾಹಾರಿ ಊಟಗಳು, ಎಸಿ ವಾಹನಗಳಲ್ಲಿ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆ, ಪ್ರಯಾಣ ವಿಮೆ ಹಾಗೂ ಐಆರ್‌ಸಿಟಿಸಿ ಟೂರ್ ಮ್ಯಾನೇಜರ್‌ಗಳ ಸೇವೆ ಸೇರಿದಂತೆ ಅನೇಕ ಸೌಲಭ್ಯಗಳು ಒಳಗೊಂಡಿವೆ.