7 ಕೋಟಿ EPFO ಚಂದಾದಾರರಿಗೆ ಗುಡ್ ನ್ಯೂಸ್; ಹೆಚ್ಚಾಗಲಿದೆ ಇಪಿಎಫ್ ವಾರ್ಷಿಕ ಬಡ್ಡಿ ದರ
PF Rate Of Interest Hike: ನಿವೃತ್ತಿ ನಿಧಿ ಸಂಸ್ಥೆ ಇಪಿಎಫ್‌ಒ (EPFO) ನೌಕರರಿಗೆ ಸಿಹಿಸುದ್ದಿ ನೀಡಿದ್ದು, 2023-24ರ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಠೇವಣಿಗಳ ಮೇಲಿನ ಬಡ್ಡಿ ದರವನ್ನು ಹೆಚ್ಚಿಸಲು ಮುಂದಾಗಿದ್ದು, ಶೇಕಡಾ 9.25ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಹಿನ್ನಲೆ ಈಗ ಉದ್ಯೋಗಿಗಳಿಗೆ ಮೊದಲಿಗಿಂತ ಶೇಕಡಾ 1 ರಷ್ಟು ಹೆಚ್ಚಿನ ಬಡ್ಡಿ ಸಿಗಲಿದೆ.
ಇಪಿಎಫ್‌ಒ(ಸಾಂದರ್ಭಿಕ ಚಿತ್ರ) -
ನವದೆಹಲಿ: ನಿವೃತ್ತಿ ನಿಧಿ ಸಂಸ್ಥೆ ಇಪಿಎಫ್‌ಒ (EPFO) ನೌಕರರಿಗೆ ಸಿಹಿಸುದ್ದಿ ನೀಡಿದ್ದು, 2025-26ರ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಠೇವಣಿಗಳ ಮೇಲಿನ ಬಡ್ಡಿ ದರವನ್ನು ಹೆಚ್ಚಿಸಲು ಮುಂದಾಗಿದ್ದು, ಇಪಿಎಫ್‌ಒ ಪ್ರಸಕ್ತ ಹಣಕಾಸು ವರ್ಷದಲ್ಲಿ ಕೋಟ್ಯಂತರ ಉದ್ಯೋಗಿಗಳಿಗೆ ಮೊದಲಿಗಿಂತ ಶೇ.1 ರಷ್ಟು ಹೆಚ್ಚಿನ ಬಡ್ಡಿಯನ್ನು ನೀಡಲು ಮುಂದಾಗಿದೆ. ಹೀಗಾಗಿ ಇನ್ಮುಂದೆ ನಿಮ್ಮ ಪಿಎಫ್ ಖಾತೆಗೆ ಶೇ.9.25 ಬಡ್ಡಿ ದರವನ್ನು ನೀಡಲಾಗುತ್ತದೆ.
ಕಳೆದ ವರ್ಷ 2024-25ರ ಹಣಕಾಸು ವರ್ಷಕ್ಕೆ ಇಪಿಎಫ್ ಹಣಕ್ಕೆ ಸರ್ಕಾರ ಶೇ. 8.25ರಷ್ಟು ವಾರ್ಷಿಕ ಬಡ್ಡಿಯನ್ನು ಪ್ರಕಟಿಸಿತ್ತು. 2022-23 ರ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಖಾತೆಗಳಿಗೆ ಶೇ.8.15 ರ ಬಡ್ಡಿ ದರವನ್ನು ಘೋಷಿಸಿತ್ತು. ಅದಕ್ಕೂ ಹಿಂದಿನ ಆರ್ಥಿಕ ವರ್ಷ 2022ರಲ್ಲಿ ಶೇ. 8.10 ಬಡ್ಡಿಯನ್ನು ನೀಡಿತ್ತು. ಆದರೀಗ ಏಕಾಏಕಿ ಒಮ್ಮೆಲೇ ಶೇ.1ರಷ್ಟು ಏರಿಸಿದ್ದು, 7 ಕೋಟಿ EPFO ಚಂದಾದಾರರಿಗೆ ಗುಡ್ ನ್ಯೂಸ್ ನೀಡಿದೆ.
ಸದ್ಯ ಲಭ್ಯವಿರುವ ಮಾಹಿತಿಯ ಪ್ರಕಾರ, ಸರ್ಕಾರವು 2025–26 ಆರ್ಥಿಕ ವರ್ಷದ EPF ಬಡ್ಡಿದರವನ್ನು ಶೇ.9.25 ವರೆಗೆ ಹೆಚ್ಚಿಸುವ ಸಾಧ್ಯತೆ ಇದ್ದು, ಇದು ಪ್ರಸ್ತುತ ಶೇ.8.25 ಬಡ್ಡಿದರದಿಂದ ಸುಮಾರು ಶೇ.1ರಷ್ಟು ಮಹತ್ತರ ಏರಿಕೆ ಆಗಲಿದೆ. ಈ ಬಡ್ಡಿದರ ಏರಿಕೆಯ ಅಂತಿಮ ನಿರ್ಧಾರವನ್ನು ಜನವರಿಯಲ್ಲಿ ನಡೆಯುವ EPFO ಕೇಂದ್ರ ಟ್ರಸ್ಟಿಗಳ ಮಂಡಳಿ (Central Board of Trustees) ಸಭೆಯಲ್ಲಿ ತೆಗೆದುಕೊಳ್ಳುವ ಸಾಧ್ಯತೆ ಇದ್ದು, ಸಭೆಯ ಅನುಮೋದನೆ ಹಾಗೂ ನಂತರ ಹಣಕಾಸು ಸಚಿವಾಲಯದ ಅಂಗೀಕಾರದೊಂದಿಗೆ ಹೊಸ ಬಡ್ಡಿದರ ಅಧಿಕೃತವಾಗಲಿದೆ.
ನಿಮಗೆ ಇಪಿಎಫ್ ಇಂಟ್ರೆಸ್ಟ್ ಕ್ರೆಡಿಟ್ ಆಗಿದೆಯಾ?
ನೀವು ಇಪಿಎಫ್ ಅಕೌಂಟ್ ಹೊಂದಿದ್ದು, ಅದರಲ್ಲಿರುವ ಹಣಕ್ಕೆ ಸರ್ಕಾರದಿಂದ ಬಡ್ಡಿ ಹಣ ಜಮೆಯಾಗಿದ್ದೀಯಾ ಎಂದು ಪರಿಶೀಲಿಸಲು ಮೂರು ವಿಧಾನಗಳಿದ್ದು, ನಿಮ್ಮ ಇಪಿಎಫ್ ಅಕೌಂಟ್ ಅಲ್ಲಿರುವ ಹಣಕ್ಕೆ ಸರ್ಕಾರದಿಂದ ಬಡ್ಡಿ ಹಣ ಜಮೆಯಾಗಿದೆಯಾ ಎಂದು ತಿಳಿದುಕೊಳ್ಳಲು ಈ ವಿಧಾನವನ್ನು ಅನುಸರಿಸ ಬಹುದು.
ಆನ್ಲೈನ್ನಲ್ಲಿ ಹೀಗೆ ಚೆಕ್ ಮಾಡಿ…
ಮೊದಲಿಗೆ ಇಪಿಎಫ್‌ಒ ಪೋರ್ಟಲ್ಗೆ ಹೋಗಿ, ಅಲ್ಲಿರುವ ಮುಖ್ಯ ಪುಟದಲ್ಲಿ ‘ಫಾರ್ ಎಂಪ್ಲಾಯೀಸ್’ ಅಡಿಯಲ್ಲಿ ‘ಅವರ್ ಸರ್ವಿಸಸ್’ಗೆ ಹೋಗಿ ಅಲ್ಲಿ ‘ಮೆಂಬರ್ ಪಾಸ್ಬುಕ್’ ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ಯುಎಎನ್ ನಂಬರ್ ಹಾಗೂ ಪಾಸ್ವರ್ಡ್ ಹಾಕಿ ಲಾಗಿನ್ ಆಗಿ. ಅಲ್ಲಿ ನಿಮ್ಮ ಪಿಎಫ್ ಅಕೌಂಟ್ ಆಯ್ಕೆ ಮಾಡಿ, ಖಾತೆಯ ಬ್ಯಾಲನ್ಸ್ ವೀಕ್ಷಿಸಬಹುದು.
ಈ ಸುದ್ದಿಯನ್ನು ಓದಿ: Viral News: ಚಾಲಕನಿಲ್ಲದೆ ಚಲಿಸಿದ ಟ್ರ್ಯಾಕ್ಟರ್; ಭೀಕರ ಅಪಘಾತದಿಂದ ವ್ಯಕ್ತಿಯ ಸ್ಥಿತಿ ಗಂಭೀರ
ಉಮಂಗ್ ಆ್ಯಪ್ ಮೂಲಕ ಪರಿಶೀಲಿಸಬಹುದು
ಉಮಂಗ್ ಆ್ಯಪ್ ಅನ್ನು ಡೌನ್ಲೋಡ್ ಮಾಡಿ ತೆರೆಯಿರಿ. ಅಲ್ಲಿ ಇಪಿಎಫ್‌ಒ ಸರ್ವಿಸ್ಗೆ ಹೋಗಿ ಲಾಗಿನ್ ಆಗಬೇಕು. ಅಲ್ಲಿ ಪಿಎಫ್ ಬ್ಯಾಲನ್ಸ್ ಪರಿಶೀಲಿಸಬಹುದು.
ಮಿಸ್ಡ್ ಕಾಲ್ ಮೂಲಕ ಬ್ಯಾಲನ್ಸ್ ಪರಿಶೀಲನೆ
ಯುಎಎನ್ ಜೊತೆ ಸಕ್ರಿಯವಾಗಿರುವ ಮೊಬೈಲ್ ನಂಬರ್ನಿಂದ 9966044425 ನಂಬರ್ಗೆ ಡಯಲ್ ಮಾಡಿ. ಅದು ಒಂದೆರಡು ರಿಂಗ್ ಆದ ಬಳಿಕ ಆಟೊಮ್ಯಾಟಿಕ್ ಆಗಿ ಕರೆ ಕಟ್ ಆಗುತ್ತದೆ. ಇತ್ತೀಚಿನ ಪಿಎಫ್ ಬ್ಯಾಲನ್ಸ್ ಎಷ್ಟಿದೆ ಎಂದು ತಿಳಿಸುವ ಎಸ್ಸೆಮ್ಮೆಸ್ ಮೆಸೇಜ್ ಬರುತ್ತದೆ. ಆದರೆ, ಈ ಸರ್ವಿಸ್ ಪಡೆಯಲು ಕೆವೈಸಿ ಪೂರ್ಣಗೊಳಿಸಿರಬೇಕು.
ಮೆಸ್ಸೇಜ್ ಮೂಲಕ ಚೆಕ್ ಮಾಡಿ
ಈ ಮೆಸ್ಸೇಜ್ ಮಾಡುವ ಮೂಲಕವೂ ಪಿಎಫ್ ಬ್ಯಾಲನ್ಸ್ ಚೆಕ್ ಮಾಡಬಹುದಾಗಿದ್ದು, ಕೆವೈಸಿ ಪೂರ್ಣಗೊಂಡಿರುವ ಯುಎಎನ್ಗೆ ನೋಂದಾಯಿತವಾಗಿರುವ ಮೊಬೈಲ್ ನಂಬರ್ ಬೇಕು. EPFOHO ಎಂದು ಟೈಪ್ ಮಾಡಿ ಬಳಿಕ ಯುಎಎನ್ ನಂಬರ್ ಹಾಕಿ, ನಂತರ ಭಾಷೆಯ ಕೋಡ್ ಹಾಕಿ ಎಸ್ಸೆಮ್ಮೆಸ್ ಅನ್ನು 7738299899 ನಂಬರ್ಗೆ ಕಳುಹಿಸಿ.