Chikkaballapur News: ಸಾಮಾಜಿಕ ಪರಿಣಾಮಗಳನ್ನು ಅಧ್ಯಯನ ಮಾಡುವ ಜವಾಬ್ದಾರಿ ಸಮಾಜ ಶಾಸ್ತ್ರಜ್ಞರ ಮೇಲಿದೆ: ಪ್ರಾಂಶುಪಾಲೆ ಡಾ.ಮಂಜುಳ ಅಭಿಮತ
ತಂತ್ರಜ್ಞಾನ ಮಾನವನ ಜೀವನವನ್ನು ಸುಲಭಗೊಳಿಸಿದರೂ, ಅದರ ಸಾಮಾಜಿಕ ಪರಿಣಾಮಗಳನ್ನು ಅಧ್ಯಯನ ಮಾಡುವ ಜವಾಬ್ದಾರಿ ಸಮಾಜ ಶಾಸ್ತ್ರಜ್ಞರ ಮೇಲಿದೆ. ಕೃತಕ ಬುದ್ಧಿಮತ್ತೆಯ ಬಳಕೆ ಶಿಕ್ಷಣ, ಆರೋಗ್ಯ, ಕೃಷಿ, ಉದ್ಯೋಗ ಕ್ಷೇತ್ರಗಳಲ್ಲಿ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ, ಸಾಮಾಜಿಕ ಅಸಮಾ ನತೆ, ಉದ್ಯೋಗ ನಷ್ಟ, ಡೇಟಾ ಗೌಪ್ಯತೆ ಮತ್ತು ನೈತಿಕ ಮೌಲ್ಯಗಳಂತಹ ಪ್ರಶ್ನೆಗಳು ಉದ್ಭವಿಸುತ್ತಿವೆ
ತಂತ್ರಜ್ಞಾನ ಮಾನವನ ಜೀವನವನ್ನು ಸುಲಭಗೊಳಿಸಿದರೂ, ಅದರ ಸಾಮಾಜಿಕ ಪರಿಣಾಮಗಳನ್ನು ಅಧ್ಯಯನ ಮಾಡುವ ಜವಾಬ್ದಾರಿ ಸಮಾಜ ಶಾಸ್ತ್ರಜ್ಞರ ಮೇಲಿದೆ ಎಂದು ಬಂಗಾರು ತಿರುಪತಿ ಪ್ರಥಮದರ್ಜೆ ಕಾಲೇಜು ಪ್ರಾಂಶುಪಾಲೆ ಡಾ.ಮಂಜುಳ ಅಭಿಪ್ರಾಯಪಟ್ಟರು. -
ಚಿಕ್ಕಬಳ್ಳಾಪುರ: ತಂತ್ರಜ್ಞಾನ ಮಾನವನ ಜೀವನವನ್ನು ಸುಲಭಗೊಳಿಸಿದರೂ, ಅದರ ಸಾಮಾಜಿಕ ಪರಿಣಾಮಗಳನ್ನು ಅಧ್ಯಯನ ಮಾಡುವ ಜವಾಬ್ದಾರಿ ಸಮಾಜ ಶಾಸ್ತ್ರಜ್ಞರ ಮೇಲಿದೆ ಎಂದು ಬಂಗಾರು ತಿರುಪತಿ ಪ್ರಥಮದರ್ಜೆ ಕಾಲೇಜು ಪ್ರಾಂಶುಪಾಲೆ ಡಾ.ಮಂಜುಳ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ್ದ ಕೃತಕ ಬುದ್ಧಿಮತ್ತೆ ಯುಗದಲ್ಲಿ ಸಮಾಜಶಾಸ್ತ್ರದ ಉಪಯುಕ್ತತೆ ಸಂಬಂಧ ಏರ್ಪಡಿಸಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಬಂಗಾರು ತಿರುಪತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲೆ ಡಾ.ಮಂಜುಳಾ ಮಾತನಾಡಿದರು.
ಕೃತಕ ಬುದ್ಧಿಮತ್ತೆ ಯುಗದಲ್ಲಿ ಕಲಾನಿಕಾಯದ ವಿದ್ಯಾರ್ಥಿಗಳ ಎದುರು ಬಹುದೊಡ್ಡ ಸವಾಲು ಗಳಿವೆ. ಬಿಎ ಓದುತ್ತಿರುವ ಸಮಾಜ ಶಾಸ್ತçದ ವಿದ್ಯಾರ್ಥಿಗಳು ಎಐ ತಂತ್ರಜ್ಞಾನದ ಬಗ್ಗೆ ಆತಂಕ ದಿಂದ ಮಾತನಾಡುವುದು ತಪ್ಪಲ್ಲ. ಆದರೆ ಅದನ್ನು ಎದುರಿಸಿ ಮುನ್ನಡೆಯುವ ದಾಶರಿಗಳನ್ನು ಹುಡುಕಬೇಕಿದೆ. ಕೃತಕ ಬುದ್ಧಿಮತ್ತೆ ವೇಗವಾಗಿ ವಿಸ್ತರಿಸುತ್ತಿರುವ ಈ ಯುಗದಲ್ಲಿ ಸಮಾಜ ಶಾಸ್ತ್ರದ ಮಹತ್ವವನ್ನು ಅರಿತುಕೊಳ್ಳುವ ಉದ್ದೇಶದಿಂದ ನಗರದ ಪದವಿ ಕಾಲೇಜಿನಲ್ಲಿ “ಕೃತಕ ಬುದ್ಧಿಮತ್ತೆ ಯುಗದಲ್ಲಿ ಸಮಾಜ ಶಾಸ್ತ್ರದ ಪಾತ್ರ” ಎಂಬ ವಿಷಯದ ಮೇಲೆ ವಿಶೇಷ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದರು.
Chikkaballapur News: 25 ಸಾವಿರ ಫಲಾನುಭವಿಗಳಿಗೆ ಕಂದಾಯ ಸವಲತ್ತುಗಳ ವಿತರಣೆ: ಜಿಲ್ಲಾಧಿಕಾರಿ ಜಿ.ಪ್ರಭು
ತಂತ್ರಜ್ಞಾನ ಮಾನವನ ಜೀವನವನ್ನು ಸುಲಭಗೊಳಿಸಿದರೂ, ಅದರ ಸಾಮಾಜಿಕ ಪರಿಣಾಮ ಗಳನ್ನು ಅಧ್ಯಯನ ಮಾಡುವ ಜವಾಬ್ದಾರಿ ಸಮಾಜ ಶಾಸ್ತ್ರಜ್ಞರ ಮೇಲಿದೆ. ಕೃತಕ ಬುದ್ಧಿಮತ್ತೆಯ ಬಳಕೆ ಶಿಕ್ಷಣ, ಆರೋಗ್ಯ, ಕೃಷಿ, ಉದ್ಯೋಗ ಕ್ಷೇತ್ರಗಳಲ್ಲಿ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ, ಸಾಮಾಜಿಕ ಅಸಮಾನತೆ, ಉದ್ಯೋಗ ನಷ್ಟ, ಡೇಟಾ ಗೌಪ್ಯತೆ ಮತ್ತು ನೈತಿಕ ಮೌಲ್ಯಗಳಂತಹ ಪ್ರಶ್ನೆಗಳು ಉದ್ಭವಿಸುತ್ತಿವೆ ಎಂದರು.
ಎಐ ಬಳಕೆಯಿಂದ ಕೆಲವು ಪರಂಪರಾಗತ ಉದ್ಯೋಗಗಳು ಕಡಿಮೆಯಾಗುವ ಸಾಧ್ಯತೆ ಇದೆ. ಇದರಿಂದ ಹೊಸ ಕೌಶಲ್ಯಗಳ ಅಗತ್ಯತೆ ಹೆಚ್ಚುತ್ತದೆ. ತಂತ್ರಜ್ಞಾನಕ್ಕೆ ಪ್ರವೇಶವಿಲ್ಲದ ವರ್ಗಗಳು ಹಿಂದುಳಿಯುವ ಅಪಾಯವಿದ್ದು ಸಾಮಾಜಿಕ ಅಸಮಾನತೆ ಹೆಚ್ಚಬಹುದು. ಯಂತ್ರ ನಿರ್ಧಾರಗಳ ನೈತಿಕ ಪರಿಣಾಮಗಳ ಬಗ್ಗೆ ಚರ್ಚೆ ಅಗತ್ಯವಿದೆ. ವ್ಯಕ್ತಿಗತ ಮಾಹಿತಿಯ ರಕ್ಷಣೆಯು ಸಹ ಪ್ರಮುಖ ಸವಾಲಾಗಿದೆಮ ಎಂದರು.
ಸAಪನ್ಮೂಲ ವ್ಯಕ್ತಿಗಳು ತಮ್ಮ ಉಪನ್ಯಾಸದಲ್ಲಿ ಎಐ ಕೇವಲ ತಂತ್ರಜ್ಞಾನವಲ್ಲ, ಅದು ಸಾಮಾಜಿಕ ಪರಿವರ್ತನೆಯ ಸಾಧನವಾಗಿದೆ. ಅದನ್ನು ಮಾನವೀಯ ಮೌಲ್ಯಗಳೊಂದಿಗೆ ಹೊಂದಾಣಿಕೆ ಮಾಡುವುದು ಸಮಾಜ ಶಾಸ್ತ್ರದ ಕರ್ತವ್ಯ” ಎಂದು ಹೇಳಿದರು.
ವಿದ್ಯಾರ್ಥಿಗಳು ಗುಂಪು ಚರ್ಚೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ಎಐ ಯಿಂದ ಉಂಟಾಗುವ ಸವಾಲುಗಳು ಮತ್ತು ಅವಕಾಶಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಕಾರ್ಯಾ ಗಾರವು ಪ್ರಶ್ನೋತ್ತರ ಅವಧಿಯೊಂದಿಗೆ ಸಮಾಪ್ತಿಯಾಯಿತು.
ಕೊನೆಯಲ್ಲಿ ಪ್ರಾಂಶುಪಾಲ ಜಿಡಿ ಚಂದ್ರಯ್ಯ ಮಾತನಾಡಿ, ಇಂತಹ ಕಾರ್ಯಾಗಾರಗಳು ವಿದ್ಯಾರ್ಥಿ ಗಳಲ್ಲಿನ ಸಂದೇಹಗಳಿಗೆ ಮದ್ದರೆಯುವುದರೊಂದಿಗೆ ವೈಚಾರಿಕ ಚಿಂತನೆಗೆ ಪ್ರೇರಣೆ ನೀಡುತ್ತವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರು, ವಿದ್ಯಾರ್ಥಿಗಳು ಮತ್ತು ಗಣ್ಯರು ಉಪಸ್ಥಿತರಿದ್ದರು.
ಶಿಬಿರದಲ್ಲಿ ಪ್ರಾಧ್ಯಾಪಕಿ ಡಾ.ಮಂಜುಳ,ಪ್ರಾಧ್ಯಾಪಕರಾದ ಪ್ರೇಮಕುಮಾರ್, ವೆಂಕಟಾಚಲಪತಿ, ಐಕ್ಯೂಎಸಿ ಸಂಯೋಜಕ ಪದ್ಮಕುಮಾರಿ, ದೈಹಿಕ ಶಿಕ್ಷಣ ನಿರ್ದೇಶಕ ಶಾರದ, ನಾಗರಾಜ್, ಮಂಜು ನಾಥ್, ಗ್ರಂಥಪಾಲಕ ಸಂತೋಷ್, ಕನ್ನಡ ಉಪನ್ಯಾಸಕ ಮುನಿರಾಜು.ಎಂ ಸೇರದಂತೆ ಬೋಧಕ ಬೋಧಕೇತರ ಸಿಬ್ಬಂದಿ ಇದ್ದರು.