ಹೊಸ ಓಷಿಯಾನಿಕ್ಸ್ ಕಲೆಕ್ಷನ್ ಪರಿಚಯಿಸಿದ ಫಾಸ್ಟ್ರ್ಯಾಕ್
ಸಾಗರದ ಉಲ್ಲಾಸಕರ ಅನಿರೀಕ್ಷಿತತೆ ಬಳಸಿಕೊಳ್ಳುವ ಮೂಲಕ ಓಷಿಯಾನಿಕ್ಸ್ ಕಲೆಕ್ಷನ್ ಕೈಗಡಿಯಾರ ಗಳನ್ನು ಸಮುದ್ರದ ಅಲೆಗಳಂತೆ ತಣ್ಣಗೆ ಹರಿಯುವ ಮತ್ತು ಬದುಕಿನಲ್ಲಿ ಮುನ್ನಡೆ ಯುವವರಿಗಾಗಿ ವಿನ್ಯಾಸಗೊಳಿಸಲಾಗಿದೆ. ಈ ಕೈಗಡಿಯಾರಗಳ ಸಂಗ್ರಹವು ತಾಜಾತನ, ಸೊಗಸಾದ ಮತ್ತು ಅತ್ಯಾಕರ್ಷಕ ವಿನ್ಯಾಸದೊಂದಿಗೆ ಗಮನ ಸೆಳೆಯಲಿದೆ.


ಬೆಂಗಳೂರು: ಭಾರತದ ಅತ್ಯಂತ ಜನಪ್ರಿಯ ಯುವ ಫ್ಯಾಷನ್ ಬ್ರ್ಯಾಂಡ್ ಆಗಿರುವ ಫಾಸ್ಟ್ರ್ಯಾಕ್, ಯುವ ಸಮೂಹದ ವೈವಿಧ್ಯಮಯ ಆದ್ಯತೆಗಳು ಮತ್ತು ಒಲವು – ನಿಲುವುಗಳಿಗೆ ಒಪ್ಪಿಗೆಯಾಗುವ ಹೊಸ ಒಸಿಯಾನಿಕ್ಸ್ ಕೈಗಡಿಯಾರಗಳ ಸಂಗ್ರಹವನ್ನು ಮಾರುಕಟ್ಟೆಗೆ ಪರಿಚಯಿಸಿದೆ.
ಹೊಸತನ ಅಳವಡಿಸಿಕೊಳ್ಳಲು ಮತ್ತು ನಿರಂತರ ಚಲನಶೀಲತೆಗೆ ಆದ್ಯತೆ ನೀಡುವವರಿಗೆ ಸಮುದ್ರ ದಿಂದ ಪ್ರೇರಣೆ ಪಡೆದು ಓಷಿಯಾನಿಕ್ಸ್ ಕೈಗಡಿಯಾರ ಸಂಗ್ರಹ ತಯಾರಿಸಲಾಗಿದೆ.
ಪರ್ವತಗಳ ಪ್ರಶಾಂತ ಪರಿಸರಕ್ಕೆ ಬದಲಾಗಿ ಸಮುದ್ರದ ಅಲೆಗಳ ಉಲ್ಲಾಸಕರ ಅನುಭವಕ್ಕೆ ಮತ್ತು ನಿಶ್ಚಲತೆಗೆ ಬದಲಾಗಿ ಹರಿವಿನ ಉತ್ಸಾಹಕ್ಕೆ ಆದ್ಯತೆ ನೀಡುವವರಿಗೆ ಈ ಹೊಸ ಸಂಗ್ರಹವು ಸೂಕ್ತ ವಾಗಿದೆ. ವ್ಯಕ್ತಿತ್ವ ಮತ್ತು ಆದ್ಯತೆಗಳಲ್ಲಿ ಯಾವುದಕ್ಕೆ ಮಹತ್ವ ನೀಡಬೇಕು ಎನ್ನುವ ಚರ್ಚೆಗೂ ಈ ಸಂಗ್ರಹವು ಕೊನೆ ಹಾಡಿದೆ.
ಸಾಗರದ ಉಲ್ಲಾಸಕರ ಅನಿರೀಕ್ಷಿತತೆ ಬಳಸಿಕೊಳ್ಳುವ ಮೂಲಕ ಓಷಿಯಾನಿಕ್ಸ್ ಕಲೆಕ್ಷನ್ ಕೈಗಡಿಯಾರಗಳನ್ನು ಸಮುದ್ರದ ಅಲೆಗಳಂತೆ ತಣ್ಣಗೆ ಹರಿಯುವ ಮತ್ತು ಬದುಕಿನಲ್ಲಿ ಮುನ್ನಡೆ ಯುವವರಿಗಾಗಿ ವಿನ್ಯಾಸಗೊಳಿಸಲಾಗಿದೆ. ಈ ಕೈಗಡಿಯಾರಗಳ ಸಂಗ್ರಹವು ತಾಜಾತನ, ಸೊಗಸಾದ ಮತ್ತು ಅತ್ಯಾಕರ್ಷಕ ವಿನ್ಯಾಸದೊಂದಿಗೆ ಗಮನ ಸೆಳೆಯಲಿದೆ.
ಇದನ್ನೂ ಓದಿ: Vishweshwar Bhat Column: ವಿಮಾನದ ಎತ್ತರಮಾಪಕ
ಓಷಿಯಾನಿಕ್ಸ್ ಸಂಗ್ರಹದ ತಯಾರಿಕೆಯಲ್ಲಿ ಸ್ವರೂಪ ಮತ್ತು ಭಾವನೆ ಎರಡರಲ್ಲೂ ಸಾಗರದಿಂದ ಪ್ರೇರಣೆ ಪಡೆದುಕೊಳ್ಳಲಾಗಿದೆ. ಸಮುದ್ರದ ಅಲೆಗಳ ಸ್ವರೂಪದ ಡಯಲ್ಗಳು, ಸಮುದ್ರ-ವರ್ಣದ ಸೆರಾಮಿಕ್ ಪಟ್ಟಿಗಳು ಮತ್ತು ತಿಮಿಂಗಿಲ ರೆಕ್ಕೆಯ ಸೆಕೆಂಡ್ ಹ್ಯಾಂಡ್ನಂತಹ ಸೂಕ್ಷ್ಮ ವಿವರಗಳನ್ನು ಇದರಲ್ಲಿ ಅಳವಡಿಸಲಾಗಿದೆ. ಸಾಗರದ ಆಳದಲ್ಲಿನ ಜೀವಜಗತ್ತಿನ ಆಳ ಮತ್ತು ಚಲನೆಯನ್ನು ಇದು ಪ್ರತಿಧ್ವನಿಸುತ್ತದೆ. ನಿರಂತರವಾಗಿ ಕೈಬೀಸಿ ಕರೆಯುವ ಸಮುದ್ರದ ಅಲೆಗಳ ಕರೆಗೆ ಓಗೊಡಲು ಈ ಸಂಗ್ರಹವು ಯುವ ಜನರಿಗೆ ಆಹ್ವಾನ ನೀಡಲಿದೆ.
"ಫಾಸ್ಟ್ರ್ಯಾಕ್ನಲ್ಲಿ, ವೈಯಕ್ತಿಕ ಆದ್ಯತೆಗೆ ಅನುಗುಣವಾಗಿ ವಿನೂತನವಾದುದನ್ನು ಪರಿಚಯಿಸುವುದು ಎಂದರೆ ದಿಟ್ಟತನ ಮತ್ತು ಹೆಚ್ಚು ಪ್ರಸ್ತುತವಾಗಿರುವುದೇ ಆಗಿರಲಿದೆʼ ಎಂದು ಫಾಸ್ಟ್ರ್ಯಾಕ್ನ ಮಾರ್ಕೆ ಟಿಂಗ್ ಮುಖ್ಯಸ್ಥ ಡ್ಯಾನಿ ಜಾಕೋಬ್ ಹೇಳಿದ್ದಾರೆ.
"ವ್ಯಕ್ತಿತ್ವ ಮತ್ತು ಆದ್ಯತೆಗಳಲ್ಲಿ ಯಾವುದಕ್ಕೆ ಮಹತ್ವ ನೀಡಬೇಕು ಎನ್ನುವ ಚರ್ಚೆ ಯಾವಾಗಲೂ ಮೋಜಿನಿಂದ ಕೂಡಿರುವ ಸಂಗತಿಯಾಗಿರುತ್ತದೆ. ಆದರೆ ಈ ಬಾರಿ, ಸಾಗರದ ಅಲೆಗಳ ಆಕರ್ಷಣೆ ಯೇ ಗೆದ್ದಿದೆ. ಮಹಾಸಾಗರವು ಕೆಲವು ದಿನಗಳ ಕಾಲ ಭೋರ್ಗರೆದರೆ, ಇನ್ನೂ ಕೆಲ ಕಾಲ ಪ್ರಶಾಂತ ವಾಗಿರುತ್ತದೆ. ಇದರ ಹೊರತಾಗಿ ಬಹುತೇಕ ಸಂದರ್ಭಗಳಲ್ಲಿ ಸಾಗರದ ಪರಿಸ್ಥಿತಿಯು ಅನಿರೀಕ್ಷಿತ ವಾಗಿರುತ್ತದೆ. ಓಷಿಯಾನಿಕ್ಸ್ ಸಂಗ್ರಹವು ಇದೇ ವೈಶಿಷ್ಟತೆಗಳನ್ನು ಒಳಗೊಂಡಿದೆ. ಸಮುದ್ರದ ಉಬ್ಬರವಿಳಿತದೊಂದಿಗೆ ಚಲಿಸುವ, ಅಲೆಗಳ ಹರಿವಿನೊಂದಿಗೆ ಮುನ್ನಡೆಯುವ ಮತ್ತು ತಮ್ಮದೇ ಆದ ತಂಪಾದ ಅಥವಾ ಸಂಪೂರ್ಣ ಗಡಿಬಿಡಿಯ ವಿಶಿಷ್ಟ ಅನುಭವ ತರುವ ಯುವ ಜನರಿ ಗಾಗಿಯೇ ಈ ಸಂಗ್ರಹವನ್ನು ತಯಾರಿಸಲಾಗಿದೆ.
ಈ ಸಂಗ್ರಹದ ಕೈಗಡಿಯಾರಗಳ ಬೆಲೆ ₹3,795 ರಿಂದ ಆರಂಭಗೊಂಡು ₹9,795 ರವರೆಗೆ ಇದೆ. ಈ ಸಂಗ್ರಹವು ಸಮುದ್ರದಿಂದ ಪ್ರೇರಣೆ ಪಡೆದ ಆಕರ್ಷಕ ಶೈಲಿಯನ್ನು ನಿಮ್ಮ ಮಣಿಕಟ್ಟಿಗೆ ನೇರವಾಗಿ ತರಲಿದೆ. ಪ್ರತಿಯೊಬ್ಬರಿಗೂ ಏನನ್ನಾದರೂ ಹೊಸತನ್ನು ಇದು ಒಳಗೊಂಡಿದೆ. ಈ ಕೈಗಡಿಯಾರ ಗಳು ಫಾಸ್ಟ್ರ್ಯಾಕ್ ಮಳಿಗೆ, ಫಾಸ್ಟ್ರ್ಯಾಕ್.ಇನ್ (fastrack.in) ಅಂತರ್ಜಾಲ ತಾಣ, ಟೈಟನ್ ವರ್ಲ್ಡ್ ಮತ್ತು ಪ್ರಮುಖ ಇ-ಕಾಮರ್ಸ್ ತಾಣಗಳಲ್ಲಿ ಖರೀದಿಗೆ ಲಭ್ಯ ಇವೆ.