ಸ್ವನಿಧಿ ಕಾರ್ಡ್‌ನಿಂದ ಸಿಗುತ್ತೆ ತಕ್ಷಣ ಹಣ; ಬೀದಿ ವ್ಯಾಪಾರಿಗಳಿಗೆ ನೆರವಾಗುವ ಈ ಯೋಜನೆಯ ವಿಶೇಷತೆ ಏನು?
ಕೇರಳದಲ್ಲಿ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರು ಸ್ವ ನಿಧಿ ಕ್ರೆಡಿಟ್ ಕಾರ್ಡ್ ಗೆ ಚಾಲನೆ ನೀಡಿದರು. ಇದು ಬೀದಿ ವ್ಯಾಪಾರಿಗಳಿಗೆ ತಕ್ಷಣ ಹಣ ನೀಡುವ ಕಾರ್ಡ್ ಆಗಿದ್ದು, ಇದರಿಂದ ಲಕ್ಷಾಂತರ ವ್ಯಾಪಾರಿಗಳಿಗೆ ಪ್ರಯೋಜನವಾಗಲಿದೆ. ಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳ ಆತ್ಮ ನಿರ್ಭರ್ ನಿಧಿ ಯೋಜನೆಯ ಭಾಗವಾಗಿ ಇದನ್ನು ಬಿಡುಗಡೆ ಮಾಡಲಾಗಿದೆ.
ಸಂಗ್ರಹ ಚಿತ್ರ -
ನವದೆಹಲಿ: ಕೇರಳದ ತಿರುವನಂತಪುರಂನಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ಸ್ವ ನಿಧಿ ಕ್ರೆಡಿಟ್ ಕಾರ್ಡ್ (PM SVANidhi Credit Card) ಗೆ ಚಾಲನೆ ನೀಡಿದರು. ಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳ ಆತ್ಮ ನಿರ್ಭರ್ ನಿಧಿ (Atma Nirbhar Nidhi) ಯೋಜನೆಯ ಭಾಗವಾಗಿರುವ ಇದು ಬೀದಿ ವ್ಯಾಪಾರಿಗಳಿಗೆ ತಕ್ಷಣ ಹಣ ನೀಡುವ ಕಾರ್ಡ್ ಆಗಿದ್ದು, ಇದರಿಂದ ಲಕ್ಷಾಂತರ ವ್ಯಾಪಾರಿಗಳಿಗೆ ಪ್ರಯೋಜನವಾಗಲಿದೆ. ಸ್ವ ನಿಧಿ ಕ್ರೆಡಿಟ್ ಕಾರ್ಡ್ ಗೆ ಚಾಲನೆ ವೇಳೆ ಪ್ರಧಾನಿ ಮೋದಿ ಅವರು ಒಂದು ಲಕ್ಷ ಫಲಾನುಭವಿಗಳಿಗೆ ಸ್ವ ನಿಧಿ ಸಾಲಗಳನ್ನು ವಿತರಿಸಿದರು.
ಕೋವಿಡ್-19 ಸಾಂಕ್ರಾಮಿಕ ರೋಗದಿಂದ ತೊಂದರೆಗೆ ಒಳಗಾದವರಿಗೆ ತಮ್ಮ ವ್ಯವಹಾರಗಳನ್ನು ಪುನರಾರಂಭಿಸಲು ಬಯಸುವ ಮಾರಾಟಗಾರರಿಗೆ ಸಹಾಯ ಮಾಡುವ ಸಲುವಾಗಿ 2020ರಲ್ಲಿ ಪ್ರಧಾನ ಮಂತ್ರಿ ಬೀದಿ ವ್ಯಾಪಾರಿಗಳ ಆತ್ಮ ನಿರ್ಭರ್ ನಿಧಿ ಯೋಜನೆಯನ್ನು ಪ್ರಾರಂಭಿಸಲಾಗಿತ್ತು. ಇದರ ಭಾಗವಾಗಿ ಇದೀಗ ಪಿಎಂ ಸ್ವನಿಧಿ ಯೋಜನೆಯನ್ನು ಬಿಡುಗಡೆ ಮಾಡಲಾಗಿದೆ.
SIDBI: ಸಿಡ್ಬಿ ಬಲವರ್ಧನೆಗೆ 5000 ಕೋಟಿ ರೂ ಈಕ್ವಿಟಿ ಬೆಂಬಲ: ಕೇಂದ್ರ ಸಂಪುಟ ಒಪ್ಪಿಗೆ
ಏನು ಪ್ರಯೋಜನ?
ಸಾಮಾನ್ಯವಾಗಿ ನಗರದಲ್ಲಿ ಬದುಕುವ ಬೀದಿ ವ್ಯಾಪಾರಿಗಳು ಪ್ರತಿಯೊಬ್ಬರಿಗೂ ಕೈಗೆಟುಕುವ ದರದಲ್ಲಿ ಸರಕು ಮತ್ತು ಸೇವೆಗಳನ್ನು ಪೂರೈಸುತ್ತಾರೆ. ಆದರೆ ಇವರಿಗೆ ಮಾನ್ಯತೆ ಕೊರತೆ, ಸಾಲ ಸೌಲಭ್ಯ, ಶಿಕ್ಷಣ, ಕೌಶಲ ತರಬೇತಿಗಳಿಗೆ ಸೀಮಿತ ಪ್ರವೇಶ ದೊರೆಯುತ್ತದೆ. ಇದನ್ನು ನಿವಾರಿಸಿ ವ್ಯಾಪಾರಿಗಳು ಮತ್ತು ಬೀದಿ ವ್ಯಾಪಾರಿಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಸ್ವನಿಧಿ ಯೋಜನೆ ಡಿಜಿಟಲ್ ಪ್ರವೇಶದ ಮೂಲಕ ಸಾಲ ಸೌಲಭ್ಯವನ್ನು ಒದಗಿಸುತ್ತದೆ.
ಎಷ್ಟು ಫಲಾನುಭವಿಗಳು?
2025ರ ಆಗಸ್ಟ್ ನಲ್ಲಿ ಯೋಜನೆಯ ಪುನರ್ರಚನೆ ಮತ್ತು ವಿಸ್ತರಣೆ ಮಾಡಿದ್ದು, ಸಾಲ ನೀಡುವ ಅವಧಿಯನ್ನು 2030ರ ಮಾರ್ಚ್ 31ರವರೆಗೆ ವಿಸ್ತರಿಸಲಾಗಿದೆ. ಇದಕ್ಕಾಗಿ 7,332 ಕೋಟಿ ರೂ. ವೆಚ್ಚವಾಗಿದೆ. ಇದು 50 ಲಕ್ಷ ಹೊಸ ಫಲಾನುಭವಿಗಳೊಂದಿಗೆ ಒಟ್ಟು 1.15 ಕೋಟಿ ಮಾರಾಟಗಾರರಿಗೆ ಪ್ರಯೋಜನ ನೀಡುವ ಗುರಿ ಹೊಂದಿದೆ.
ಏನಿದು ಸ್ವನಿಧಿ ಕ್ರೆಡಿಟ್ ಕಾರ್ಡ್ ?
ಇದು ಯುಪಿಐ ಲಿಂಕ್ ಆಗಿರುವ ರುಪೇ ಕ್ರೆಡಿಟ್ ಕಾರ್ಡ್ ಆಗಿದ್ದು ಇದರಲ್ಲಿ ಡಿಜಿಟಲ್ ಪಾವತಿಗಳನ್ನು ಪ್ರೋತ್ಸಾಹಿಸುವ ಮಾರಾಟಗಾರರಿಗೆ ದೈನಂದಿನ ಹಣದ ಅಗತ್ಯಗಳನ್ನು ನಿರ್ವಹಿಸಲು ಸಹಾಯ ಮಾಡುವ ಸಲುವಾಗಿ ಬಡ್ಡಿರಹಿತವಾಗಿ ಸಾಲ ನೀಡಲಾಗುತ್ತದೆ. ಯಾವುದೇ ತುರ್ತು ವ್ಯವಹಾರ ಮತ್ತು ವೈಯಕ್ತಿಕ ಅವಶ್ಯಕತೆಗಳನ್ನು ಪೂರೈಸಲು ಬೀದಿ ವ್ಯಾಪಾರಿಗಳಿಗೆ ತಕ್ಷಣ ಇದರಿಂದ ಸಾಲ ಪಡೆಯಬಹುದು. ಎರಡನೇ ಕಂತಿನ ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿಸಿದ ಫಲಾನುಭವಿಗಳಿಗೆ ಈ ಕಾರ್ಡ್ ದೊರೆಯಲಿದೆ.
Keshava Prasad B Column: ಭಾರತೀಯ ಸ್ಟಾಕ್ ಮಾರ್ಕೆಟ್‌ಗೆ ದೇಸಿ ಹೂಡಿಕೆದಾರರ ಅಭಯ
ಎಷ್ಟು ಸಾಲ?
ಮೊದಲ ಕಂತಿನಲ್ಲಿ 15,000 ರೂ., ಎರಡನೇ ಕಂತಿನಲ್ಲಿ 25,000 ರೂ. ಮತ್ತು ಮೂರನೇ ಕಂತಿನಲ್ಲಿ 50,000 ರೂ. ವರೆಗೆ ಇದರಲ್ಲಿ ಸಾಲ ಪಡೆಯಲು ಅವಕಾಶವಿದೆ. ಡಿಜಿಟಲ್ ಅಳವಡಿಕೆಯನ್ನು ಉತ್ತೇಜಿಸಲು ಇದರಲ್ಲಿ ತಿಂಗಳಿಗೆ ಗರಿಷ್ಠ 100 ರೂ. ನಿಂದ 1,200 ರೂ. ವರೆಗೆ ಕ್ಯಾಶ್‌ಬ್ಯಾಕ್ ಪಡೆಯಲು ಅವಕಾಶವಿದೆ.
ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಮತ್ತು ಹಣಕಾಸು ಸೇವೆಗಳ ಇಲಾಖೆ ಜಂಟಿಯಾಗಿ ನಿರ್ವಹಿಸುವ ಸ್ವನಿಧಿ ಕ್ರೆಡಿಟ್ ಕಾರ್ಡ್, ಕೇವಲ ಹಣದ ಅವಶ್ಯಕತೆಯನ್ನು ಮಾತ್ರ ಇದು ಪೂರೈಸುವುದಿಲ್ಲ. ಮಾರಾಟಗಾರರಿಗೆ ಕಲ್ಯಾಣ ಉಪಕ್ರಮಗಳು, ಆರ್ಥಿಕ ಸಾಕ್ಷರತೆ ಮತ್ತು ಕೌಶಲ್ಯ ಅಭಿವೃದ್ಧಿಯ ಪ್ರಯೋಜನ ಪಡೆಯಲು ಅವಕಾಶ ಮಾಡಿಕೊಡುತ್ತದೆ.