ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನವರಾತ್ರಿ, ಯುಗಾದಿ ಮತ್ತು ಈದ್ ಸಂಭ್ರಮಕ್ಕಾಗಿ Amazon.in ಇಂದ AI ಆಧಾರಿತ ಹಬ್ಬದ ಶಾಪಿಂಗ್‌

ಸಾಂಪ್ರದಾಯಿಕ ಉಪವಾಸದ ಪದಾರ್ಥಗಳು ಮತ್ತು ಪ್ರೀಮಿಯಂ ಒಣ ಹಣ್ಣುಗಳಿಂದ ಹಿಡಿದು, ಸಾಂಪ್ರದಾಯಿಕ ಸಿಹಿತಿಂಡಿಗಳು ಮತ್ತು ಪಾನೀಯಗಳವರೆಗೆ ಎಲ್ಲವನ್ನೂ ಅಮೆಜಾನ್ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುತ್ತಿದೆ. ಗ್ರಾಹಕರು ಟಾಟಾ ಸಂಪನ್ನ, ಫಾರ್ಮ್ಲಿ, ಗೋ ದೇಸಿ, ಸ್ಟೋರಿಯಾ, ನಟ್ರಾಜ್ ನಂತಹ ಪ್ರಸಿದ್ಧ ಬ್ರಾಂಡ್‌ಗಳ ಹಬ್ಬದ ವಿಶೇಷ ಉತ್ಪನ್ನಗಳನ್ನು ಖರೀದಿಸಬಹುದು.

Amazon.in ಇಂದ AI ಆಧಾರಿತ ಹಬ್ಬದ ಶಾಪಿಂಗ್‌

-

Ashok Nayak
Ashok Nayak Mar 18, 2026 9:52 PM

ಬೆಂಗಳೂರು: ಭಾರತದಾದ್ಯಂತ ಕುಟುಂಬಗಳು ನವರಾತ್ರಿ, ಯುಗಾದಿ ಮತ್ತು ಈದ್ ಹಬ್ಬಗಳಿಗೆ ಸಿದ್ಧತೆ ನಡೆಸುತ್ತಿರುವ ಈ ಸಂದರ್ಭದಲ್ಲಿ, Amazon.in ವಿಶೇಷವಾಗಿ ಆಯ್ದ ವಸ್ತುಗಳು ಮತ್ತು ಸುಲಭ ಡೆಲಿವರಿ ಆಯ್ಕೆಗಳ ಮೂಲಕ ಹಬ್ಬದ ಶಾಪಿಂಗ್ ಅನ್ನು ಮತ್ತಷ್ಟು ಸರಳಗೊಳಿಸುತ್ತಿದೆ. ದೆಹಲಿ-ಎನ್‌ಸಿಆರ್, ಮುಂಬೈ ಮತ್ತು ಬೆಂಗಳೂರಿನ ಆಯ್ದ ಭಾಗಗಳಲ್ಲಿ ಅಮೆಜಾನ್ ನೌ ಮೂಲಕ ನಿಮಿಷಗಳಲ್ಲಿ ಪೂಜಾ ಸಾಮಗ್ರಿಗಳನ್ನು ಪಡೆಯಬಹುದು. ಇದರ ಜೊತೆಗೆ ಅಮೆಜಾನ್ ಫ್ರೆಶ್ ಮೂಲಕ 2 ಗಂಟೆಗಳ ನಿಗದಿತ ಸಮಯದಲ್ಲಿ ಅಥವಾ 'ಎವ್ರಿಡೇ ನೀಡ್ಸ್' ಮೂಲಕ ಮರುದಿನವೇ ಡೆಲಿವರಿ ಪಡೆಯುವ ಸೌಲಭ್ಯವಿದೆ.

ಸಾಂಪ್ರದಾಯಿಕ ಉಪವಾಸದ ಪದಾರ್ಥಗಳು ಮತ್ತು ಪ್ರೀಮಿಯಂ ಒಣ ಹಣ್ಣುಗಳಿಂದ ಹಿಡಿದು, ಸಾಂಪ್ರದಾಯಿಕ ಸಿಹಿತಿಂಡಿಗಳು ಮತ್ತು ಪಾನೀಯಗಳವರೆಗೆ ಎಲ್ಲವನ್ನೂ ಅಮೆಜಾನ್ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುತ್ತಿದೆ. ಗ್ರಾಹಕರು ಟಾಟಾ ಸಂಪನ್ನ, ಫಾರ್ಮ್ಲಿ, ಗೋ ದೇಸಿ, ಸ್ಟೋರಿಯಾ, ನಟ್ರಾಜ್ ನಂತಹ ಪ್ರಸಿದ್ಧ ಬ್ರಾಂಡ್‌ಗಳ ಹಬ್ಬದ ವಿಶೇಷ ಉತ್ಪನ್ನಗಳನ್ನು ಖರೀದಿಸಬಹುದು.

ಹಬ್ಬದ ದಿನಗಳಲ್ಲಿ ಅಡುಗೆಯ ಕೆಲಸವನ್ನು ಸುಲಭಗೊಳಿಸಲು 'ರೆಡಿ-ಟು-ಈಟ್' ಸ್ಟೋರ್‌ನಲ್ಲಿ ವೈವಿಧ್ಯಮಯ ಖಾದ್ಯಗಳ ಮೇಲೆ ಶೇ. 35 ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಅಮೆಜಾನ್‌ನ ಬಲವಾದ ಡೆಲಿವರಿ ನೆಟ್‌ವರ್ಕ್ ಜೊತೆಗೆ ಪ್ರೈಮ್ ಸದಸ್ಯರಿಗೆ ವಿಶೇಷ ಕೊಡುಗೆಗಳು ಮತ್ತು ಅಮೆಜಾನ್ ಪೇ ಮೂಲಕ ಹೆಚ್ಚಿನ ಉಳಿತಾಯದ ಲಾಭವೂ ಸಿಗಲಿದೆ.

ಇದನ್ನೂ ಓದಿ: EPL: Amazon.in ನಲ್ಲಿ ಮಾ.6ರಿಂದ ಎಲೆಕ್ಟ್ರಾನಿಕ್ಸ್ ಪ್ರೀಮಿಯರ್ ಲೀಗ್ ಆರಂಭ

AI ಆಧಾರಿತ ಶಾಪಿಂಗ್‌ನಿಂದ ಹಬ್ಬದ ಖರೀದಿ ಈಗ ಇನ್ನಷ್ಟು ಸುಲಭ

ಅಮೆಜಾನ್‌ನ AI ಶಾಪಿಂಗ್ ಸಹಾಯಕವಾದ 'ರೂಫಸ್' ಮೂಲಕ ಗ್ರಾಹಕರು ಈಗ ಮಾತುಕತೆಯ ಶೈಲಿಯಲ್ಲೇ ತಮಗೆ ಬೇಕಾದ ವಸ್ತುಗಳನ್ನು ಹುಡುಕಬಹುದು. ರೂಫಸ್ ಗ್ರಾಹಕರ ಆದ್ಯತೆಗಳು ಮತ್ತು ಹಿಂದಿನ ಆರ್ಡರ್‌ಗಳ ಇತಿಹಾಸವನ್ನು ಅರ್ಥೈಸಿಕೊಂಡು, ವೈಯಕ್ತಿಕಗೊಳಿಸಿದ ಶಿಫಾರಸು ಗಳು, ಬೆಲೆಯ ಟ್ರೆಂಡ್‌ಗಳು ಮತ್ತು ಕಿರು ವೀಡಿಯೊ ವಿವರಣೆಗಳನ್ನು ನೀಡುತ್ತದೆ. ಗ್ರಾಹಕರು ಸರಳವಾಗಿ "ನವರಾತ್ರಿ ಉಪವಾಸದ ಪದಾರ್ಥಗಳನ್ನು ಸೂಚಿಸು", "ಈದ್ ಹಬ್ಬಕ್ಕೆ ಸಿಹಿತಿಂಡಿಗಳ ಆಯ್ಕೆ ತಿಳಿಸು" ಅಥವಾ "ಯುಗಾದಿ ಹಬ್ಬಕ್ಕೆ 500 ರೂಪಾಯಿಯೊಳಗಿನ ಆರೋಗ್ಯಕರ ತಿಂಡಿ ಗಳನ್ನು ತೋರಿಸು" ಎಂದು ಕೇಳುವ ಮೂಲಕ ತಕ್ಷಣವೇ ಸೂಕ್ತ ಮಾಹಿತಿಯನ್ನು ಪಡೆಯ ಬಹುದು.

ಬೆಲೆಗಳ ಇತಿಹಾಸವನ್ನು ಟ್ರ್ಯಾಕ್ ಮಾಡುವ ಮೂಲಕ 'ರೂಫಸ್' ಈಗ ಮತ್ತಷ್ಟು ಸ್ಮಾರ್ಟ್ ಮತ್ತು ಸಮರ್ಥವಾಗಿದೆ. ಇದು 30 ರಿಂದ 90 ದಿನಗಳವರೆಗಿನ ಬೆಲೆಗಳ ಏರಿಳಿತವನ್ನು ತೋರಿಸುತ್ತದೆ, ಇದರಿಂದಾಗಿ ಗ್ರಾಹಕರು ತಾವು ಖರೀದಿಸುತ್ತಿರುವ ವಸ್ತುವಿನ ಬೆಲೆ ಈಗ ಕನಿಷ್ಠ ಮಟ್ಟದಲ್ಲಿದೆಯೇ ಎಂದು ತಿಳಿದು ಸ್ಮಾರ್ಟ್ ನಿರ್ಧಾರ ತೆಗೆದುಕೊಳ್ಳಬಹುದು.

ಪ್ರಾಡಕ್ಟ್ ಪೇಜ್‌ನಲ್ಲಿರುವ "ಬೆಲೆ ಇತಿಹಾಸ" ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ಅಥವಾ "ಈ ಡ್ರೈ ಫ್ರೂಟ್ ಪ್ಯಾಕ್ ಕಳೆದ 30 ದಿನಗಳಲ್ಲಿ ಆಫರ್‌ನಲ್ಲಿತ್ತೇ?" ಅಥವಾ "ಇದರ ಬೆಲೆಯ ಇತಿಹಾಸ ವೇನು?" ಎಂದು ಕೇಳುವ ಮೂಲಕ ಪ್ರಸ್ತುತ ಬೆಲೆ, ಇತ್ತೀಚಿನ ಗರಿಷ್ಠ ಮತ್ತು ಕನಿಷ್ಠ ಬೆಲೆಗಳ ವಿವರವನ್ನು ಪಡೆಯಬಹುದು. ಅಷ್ಟೇ ಅಲ್ಲದೆ, ಗ್ರಾಹಕರು ಈಗ ರೂಫಸ್‌ಗೆ ಬೆಲೆಯ ಅಲರ್ಟ್ ಸೆಟ್ ಮಾಡಲು ಸಹ ಸೂಚಿಸಬಹುದು. ಉದಾಹರಣೆಗೆ, "ಈ ಗೋಡಂಬಿಯ ಬೆಲೆ 399 ರೂಪಾಯಿ ಗೆ ಬಂದಾಗ ನನಗೆ ತಿಳಿಸು", "ಈ ಸಾಬೂದಾನಿಯ ಮೇಲೆ ಶೇ. 20 ರಿಯಾಯಿತಿ ಇದ್ದಾಗ ಖರೀದಿಸು" ಅಥವಾ "ಈ ಸ್ವೀಟ್ ಬಾಕ್ಸ್ ಬೆಲೆ 800 ರೂಪಾಯಿ ಅಥವಾ ಅದಕ್ಕಿಂತ ಕಡಿಮೆ ಯಾದಾಗ ಆರ್ಡರ್ ಮಾಡು" ಎಂದು ಹೇಳಬಹುದು.

ರೂಫಸ್ ನಿರಂತರವಾಗಿ ಬೆಲೆಗಳನ್ನು ಪರಿಶೀಲಿಸುತ್ತದೆ ಮತ್ತು ನಿಮ್ಮ ನಿಗದಿತ ಬೆಲೆಯನ್ನು ತಲುಪಿ ದಾಗ ನಿಮಗೆ ಅಲರ್ಟ್ ನೀಡುತ್ತದೆ ಅಥವಾ ನಿಮ್ಮ ಡಿಫಾಲ್ಟ್ ಪಾವತಿ ವಿಧಾನವನ್ನು ಬಳಸಿ ಖರೀದಿಯನ್ನು ಪೂರ್ಣಗೊಳಿಸುತ್ತದೆ.

ನಿಮ್ಮ ಹಬ್ಬದ ಸಂಭ್ರಮವನ್ನು ಹೆಚ್ಚಿಸಲು ಇಲ್ಲಿವೆ ಕೆಲವು ಅತ್ಯುತ್ತಮ ಆಯ್ಕೆಗಳು

ನವರಾತ್ರಿ ಮತ್ತು ರಾಮನವಮಿಯ ಉಪವಾಸದ ವಿಶೇಷಗಳು: ನವರಾತ್ರಿಯ ಅಡುಗೆಮನೆಯು ಸಾಂಪ್ರದಾಯಿಕ ಹಾಗೂ ಪೌಷ್ಟಿಕಾಂಶಯುಕ್ತ ಉಪವಾಸದ ಪದಾರ್ಥಗಳಿಂದ ಕಳೆಗಟ್ಟುತ್ತದೆ. ರೊಟ್ಟಿ ಅಥವಾ ಪಕೋಡಗಳನ್ನು ತಯಾರಿಸಲು ನೇಚರ್‌ವಿಟ್ ಬಕ್ವೀಟ್ ಕುಟ್ಟು ಹಿಟ್ಟು, ಜೀವಾ ಅಮರಂತ್ ಹಿಟ್ಟು ಮತ್ತು ಟಿಡಬ್ಲ್ಯೂಎಫ್ ವರ್ಜಿನ್ ಅಮರಂತ್ ಹಿಟ್ಟು (ರಾಜಗಿರಾ ಹಿಟ್ಟು) ಅತ್ಯುತ್ತಮವಾಗಿವೆ. ಸಾಬೂದಾನಿ ಕಿಚಡಿಯಂತಹ ಖಾದ್ಯಗಳಿಗೆ ವೇದಕ ಸಾಬೂದಾನಿ ಮತ್ತು ಲಘು ಉಪಹಾರ ಅಥವಾ ಖೀರು ತಯಾರಿಸಲು ವೇದಕ ಒಣ ತಾವರೆ ಬೀಜಗಳು (ಮಖಾನಾ) ಸಹಕಾರಿ. ಸಿಹಿ ತಿನಿಸುಗಳ ತಯಾರಿಕೆಯಲ್ಲಿ ನೈಸರ್ಗಿಕ ಸಿಹಿಗಾಗಿ ಟೂ ಬ್ರದರ್ಸ್ ಆರ್ಗ್ಯಾನಿಕ್ ಫಾರ್ಮ್ಸ್‌ನ ಕೈಯಿಂದ ತಯಾರಿಸಿದ ಬೆಲ್ಲವು ಒಂದು ಉತ್ತಮ ಆಯ್ಕೆಯಾಗಿದೆ.

ಹಬ್ಬದ ಒಣ ಹಣ್ಣುಗಳು ಮತ್ತು ಪೌಷ್ಟಿಕ ಉಪಹಾರ: ಪ್ರಸಾದಕ್ಕಿರಲಿ, ಸಿಹಿ ತಿನಿಸುಗಳಿಗಿರಲಿ ಅಥವಾ ಅತಿಥಿಗಳ ಸತ್ಕಾರಕ್ಕಿರಲಿ, ಒಣ ಹಣ್ಣುಗಳು ಹಬ್ಬದ ಅವಿಭಾಜ್ಯ ಅಂಗ. ನಟ್ರಾಜ್ ಆಸ್ಟ್ರೇಲಿಯನ್ ಆಲ್ಮಂಡ್ಸ್ ಮತ್ತು ಟ್ರೂ ಎಲಿಮೆಂಟ್ಸ್ ಪ್ರೀಮಿಯಂ ಆಲ್ಮಂಡ್ಸ್ ಮತ್ತು ಟಾಟಾ ಸಂಪನ್ ಕ್ಯಾಶ್ಯೂ ಹಬ್ಬದ ಪ್ಲೇಟರ್‌ಗಳಿಗೆ ಸೂಕ್ತವಾಗಿವೆ. ಫಾರ್ಮ್ಲಿ ಪಂಚಮೇವ ಡ್ರೈ ಫ್ರೂಟ್ಸ್ ಮಿಕ್ಸ್ ಮತ್ತು ಪ್ರೆಟ್ಟಿನಟ್ಟಿ ಹೆಲ್ತಿ ನಟ್ಮಿಕ್ಸ್ ಮತ್ತು ಪಾರ್ಮ್ಲೀ ರೋಸ್ಟೆಡ್ ಪಿಸ್ತಾಗಳು ಅತಿಥಿಗಳಿಗೆ ನೀಡಲು ಸುಲಭವಾದ ಮತ್ತು ಆರೋಗ್ಯಕರವಾದ ಆಯ್ಕೆಗಳಾಗಿವೆ.

ಉಡುಗೊರೆ ಮತ್ತು ಹಂಚಿಕೆಗಾಗಿ ಸಾಂಪ್ರದಾಯಿಕ ಸಿಹಿತಿಂಡಿಗಳು: ಸಿಹಿಯಿಲ್ಲದೆ ಯಾವುದೇ ಹಬ್ಬ ಪೂರ್ಣವಾಗುವುದಿಲ್ಲ. ಬಿಕಾನೊ ರಾಜ್‌ಭೋಗ್ ಮತ್ತು ಗಿಟ್ಸ್ ರಸಗುಲ್ಲಾಗಳು ಸಾಂಪ್ರದಾಯಿಕ ರುಚಿಯನ್ನು ನೀಡಿದರೆ, ಕರಾಚಿ ಬೇಕರಿ ಕಾಜು ಕಟ್ಲಿ ಮತ್ತು ಗೋ ದೇಸಿ ಕಾಜು ಕಟ್ಲಿಗಳು ಗೋಡಂಬಿ ಪ್ರಿಯರಿಗೆ ಹಬ್ಬದೂಟವಿದ್ದಂತೆ. ಆಧುನಿಕ ರುಚಿಯನ್ನು ಬಯಸುವವರಿಗಾಗಿ ಸ್ವೀಟ್ ಕರಂ ಕಾಫಿಯ ಡೇಟ್ಸ್ ಲಡ್ಡು ಮತ್ತು ಗೋ ದೇಸಿ ಅವರ ಬೆಲ್ಲದ ಕಾಜು ಕಟ್ಲಿಗಳು ಪೌಷ್ಟಿಕಾಂಶ ಯುಕ್ತ ಹಾಗೂ ಸ್ವಾದಿಷ್ಟ ಆಯ್ಕೆಗಳಾಗಿವೆ.

ಹಬ್ಬದ ಕೂಟಗಳಿಗಾಗಿ ತಂಪು ಪಾನೀಯಗಳು: ಬೇಸಿಗೆ ಆರಂಭವಾಗಿರುವುದರಿಂದ, ಹಬ್ಬದ ಸಂಭ್ರಮದ ನಡುವೆ ತಂಪು ಪಾನೀಯಗಳು ಚೈತನ್ಯ ನೀಡುತ್ತವೆ. ಸ್ಟೋರಿಯಾ ಎಳನೀರು, ರಾ ಪ್ರೆಸ್ಸರಿ ವೇಲೆನ್ಸಿಯಾ ಆರೆಂಜ್ ಜ್ಯೂಸ್ ಮತ್ತು ಯೂ ಫುಡ್‌ಲ್ಯಾಬ್ಸ್ ನೈಸರ್ಗಿಕ ಎಳನೀರು ಉತ್ತಮ ಆಯ್ಕೆಗಳು. ಹೆಚ್ಚು ಜನರು ಸೇರುವ ಕಡೆ ಟ್ಯಾಂಗ್ ಮ್ಯಾಂಗೋ ಇನ್‌ಸ್ಟಂಟ್ ಡ್ರಿಂಕ್ ಮತ್ತು ಶುಗರ್ ಬೆರಿ ಬರ್ಸ್ಟ್ ಸಿರಪ್‌ಗಳನ್ನು ಸುಲಭವಾಗಿ ಸಿದ್ಧಪಡಿಸಬಹುದು. ಇನ್ನು ಮನೆಗೆ ಬರುವ ಅತಿಥಿ ಗಳೊಂದಿಗೆ ಮಾತುಕತೆ ನಡೆಸುವಾಗ ಸತ್ಕರಿಸಲು ಟಾಟಾ ಟೀ ಪ್ರೀಮಿಯಂ ಸದಾ ಸಿದ್ಧ.

ಹಬ್ಬದ ಆಚರಣೆಗಳಿಗೆ ಪೂಜಾ ಸಾಮಗ್ರಿಗಳು: ಹಬ್ಬದ ಸಂಭ್ರಮವು ದಿನನಿತ್ಯದ ಆಚರಣೆಗಳು ಮತ್ತು ಪೂಜಾ ಸಿದ್ಧತೆಗಳೊಂದಿಗೆ ಕೂಡಿರುತ್ತದೆ. ದೆಹಲಿ-ಎನ್‌ಸಿಆರ್, ಮುಂಬೈ ಮತ್ತು ಬೆಂಗಳೂರಿನ ಆಯ್ದ ಭಾಗಗಳಲ್ಲಿ ಅಮೆಜಾನ್ ನೌ ಮೂಲಕ ತಾಜಾ ಹೂವುಗಳು ಮತ್ತು ಎಲೆಗಳನ್ನು ಅತೀ ವೇಗವಾಗಿ ಮನೆಬಾಗಿಲಿಗೇ ತರಿಸಿಕೊಳ್ಳಬಹುದು. ಇದರಿಂದ ಕೊನೆಯ ಕ್ಷಣದ ಪೂಜಾ ಸಿದ್ಧತೆಗಳೂ ಕೂಡ ಈಗ ಸುಲಭವಾಗಲಿವೆ.

ಹಬ್ಬದ ಬ್ಯುಸಿ ದಿನಗಳಿಗಾಗಿ 'ರೆಡಿ-ಟು-ಈಟ್' ಆಹಾರ: ಹಬ್ಬದ ದಿನಗಳಲ್ಲಿ ಸಿದ್ಧತೆಗಳು, ಅತಿಥಿಗಳ ಸತ್ಕಾರ ಮತ್ತು ಆಚರಣೆಗಳ ನಡುವೆ ಸಮಯದ ಅಭಾವವಿರುತ್ತದೆ. ಅಂತಹ ಸಂದರ್ಭದಲ್ಲಿ ಅಡುಗೆಮನೆಯಲ್ಲಿ ಹೆಚ್ಚು ಸಮಯ ಕಳೆಯದೆ, ರುಚಿಕರವಾದ ಆಹಾರ ಸವಿಯಲು ಬಯಸು ವವರಿಗಾಗಿ 'ಅಮೆಜಾನ್ ಗ್ರೋಸರಿ' ವೈವಿಧ್ಯಮಯವಾದ ಸಿದ್ಧ ಆಹಾರ ಮತ್ತು ಸಸ್ಯಾಹಾರಿ ಖಾದ್ಯಗಳನ್ನು ನೀಡುತ್ತಿದೆ. ಇನ್‌ಸ್ಟಂಟ್ ನೂಡಲ್ಸ್‌ನಿಂದ ಹಿಡಿದು ವಿವಿಧ ಇನ್ಸ್ಟಂಟ್ ಆಹಾರ ದಿಂದ ಪ್ಯಾಕೇಜ್ಡ್ ಮೀಲ್ಸ್‌ಗಳವರೆಗೆ ಎಲ್ಲವೂ ಲಭ್ಯವಿದ್ದು, ಹಬ್ಬದ ಗಡಿಬಿಡಿಯ ನಡುವೆಯೂ ಹೊಟ್ಟೆ ತುಂಬಿಸುವ ರುಚಿಕರ ಊಟವನ್ನು ನಿಮಿಷಗಳಲ್ಲಿ ಸಿದ್ಧಪಡಿಸಬಹುದು. ಬಿಡುವಿಲ್ಲದ ದಿನಚರಿ ಅಥವಾ ಹಬ್ಬದ ಕಾರ್ಯಕ್ರಮಗಳ ನಡುವೆ ಲಘು ಉಪಹಾರಕ್ಕಾಗಿ ಇವು ಅತ್ಯಂತ ಸೂಕ್ತವಾದ ಆಯ್ಕೆಗಳಾಗಿವೆ.

ಹಕ್ಕುತ್ಯಾಗ: ಉತ್ಪನ್ನದ ವಿವರಗಳು, ವಿವರಣೆ ಮತ್ತು ಬೆಲೆಗಳನ್ನು ಮಾರಾಟಗಾರರು ಒದಗಿಸಿರು ತ್ತಾರೆ. ಬೆಲೆ ನಿಗದಿಪಡಿಸುವಲ್ಲಿ ಅಥವಾ ಉತ್ಪನ್ನದ ವಿವರಣೆ ನೀಡುವಲ್ಲಿ ಅಮೆಜಾನ್ ಭಾಗಿಯಾಗಿರುವುದಿಲ್ಲ ಮತ್ತು ಮಾರಾಟಗಾರರು ಒದಗಿಸಿದ ಮಾಹಿತಿಯ ನಿಖರತೆಗೆ ಅಮೆಜಾನ್ ಜವಾಬ್ದಾರವಾಗಿರುವುದಿಲ್ಲ. ನಮ್ಮ ನಿಯಮ ಮತ್ತು ನಿಬಂಧನೆಗಳನ್ನು ಇಲ್ಲಿ ಓದಿ.

*

ಅಮೆಜಾನ್ ನೌ ಮೂಲಕ 10 ನಿಮಿಷಗಳ ಡೆಲಿವರಿ, ಅಮೆಜಾನ್ ಫ್ರೆಶ್ ಮೂಲಕ 2 ಗಂಟೆಗಳ ಸ್ಲಾಟ್, ಮತ್ತು 'ಎವ್ರಿಡೇ ನೀಡ್ಸ್' ಮೂಲಕ ಅದೇ ದಿನ ಅಥವಾ ಮರುದಿನದ ಡೆಲಿವರಿ ಆಯ್ಕೆಗಳೊಂದಿಗೆ ಹಬ್ಬದ ಸಂಭ್ರಮವನ್ನು ಸವಿಯಿರಿ.

  • ವಿಶೇಷವಾಗಿ ಸಿದ್ಧಪಡಿಸಲಾದ 'ರೆಡಿ ಟು ಈಟ್' ಸ್ಟೋರ್‌ನಲ್ಲಿ ಶೇ. 35 ರಷ್ಟು ರಿಯಾಯಿತಿ ಪಡೆಯಿರಿ.
  • ಹಬ್ಬದ ಶಾಪಿಂಗ್ ಅನುಭವವನ್ನು ಸುಲಭಗೊಳಿಸಲು 'ರೂಫಸ್' ಮೂಲಕ ಸಂವಾದಾತ್ಮಕ ಸರ್ಚ್, 90 ದಿನಗಳ ಬೆಲೆ ಇತಿಹಾಸ ಮತ್ತು ಬೆಲೆ ಏರಿಳಿತದ ಅಲರ್ಟ್‌ಗಳನ್ನು ಪಡೆಯಿರಿ.