Gold Price Today: ಚಿನ್ನದ ದರದಲ್ಲಿ ಇಂದು ಭಾರೀ ಏರಿಕೆ; ಮತ್ತೆ ಗಗನಮುಖಿಯಾದ ಬಂಗಾರ
ಸೋಮವಾರ ಏರಿಕೆಯಾಗಿದ್ದ ಚಿನ್ನದ ದರ ಇಂದು (ಫೆ. 11) ಕೂಡ ದುಬಾರಿಯಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಂಗಳವಾರ 22 ಕ್ಯಾರಟ್ 1 ಗ್ರಾಂ ಚಿನ್ನದ ದರ 80 ರೂ. ಅಧಿಕವಾಗಿ 8,060 ರೂ.ಗೆ ತಲುಪಿದರೆ, 24 ಕ್ಯಾರಟ್ 1 ಗ್ರಾಂ ಚಿನ್ನದ ದರ 87 ರೂ. ದುಬಾರಿಯಾಗಿ 8,793 ರೂ.ಗೆ ಏರಿಕೆಯಾಗಿದೆ.
![ಚಿನ್ನದ ದರದಲ್ಲಿ ಇಂದು ಭಾರೀ ಏರಿಕೆ](https://cdn-vishwavani-prod.hindverse.com/media/original_images/Gold_Price_Today_11_1.jpg)
ಜೆನಿಲಿಯಾ (ಇನ್‌ಸ್ಟಾಗ್ರಾಂ ಚಿತ್ರ).
![Profile](https://vishwavani.news/static/img/user.png)
ಬೆಂಗಳೂರು: ಸೋಮವಾರ ಏರಿಕೆಯಾಗಿದ್ದ ಚಿನ್ನದ ದರ ಇಂದು (ಫೆ. 11) ಕೂಡ ದುಬಾರಿಯಾಗಿದೆ (Gold Price Today). ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಂಗಳವಾರ 22 ಕ್ಯಾರಟ್ 1 ಗ್ರಾಂ ಚಿನ್ನದ ದರ 80 ರೂ. ಅಧಿಕವಾಗಿ 8,060 ರೂ.ಗೆ ತಲುಪಿದರೆ, 24 ಕ್ಯಾರಟ್ 1 ಗ್ರಾಂ ಚಿನ್ನದ ದರ 87 ರೂ. ದುಬಾರಿಯಾಗಿ 8,793 ರೂ.ಗೆ ಏರಿಕೆಯಾಗಿದೆ. ಆ ಮೂಲಕ 22 ಕ್ಯಾರಟ್‌ನ 8 ಗ್ರಾಂ ಚಿನ್ನ 64,480 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 80,600 ರೂ. ಮತ್ತು 100 ಗ್ರಾಂಗೆ 8,06,000 ರೂ. ಪಾವತಿಸಬೇಕಾಗುತ್ತದೆ.
ಇನ್ನು 24 ಕ್ಯಾರಟ್‌ನ 8 ಗ್ರಾಂ ಚಿನ್ನ 70,344 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 87,930 ರೂ. ಮತ್ತು 100 ಗ್ರಾಂಗೆ 8,79,300 ರೂ. ಪಾವತಿಸಬೇಕಾಗುತ್ತದೆ.
ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ
ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
---|---|---|
ಚೆನ್ನೈ | 8,060 ರೂ. | 8,793 ರೂ. |
ಮುಂಬೈ | 8,060 ರೂ. | 8,793 ರೂ. |
ದಿಲ್ಲಿ | 8,075 ರೂ. | |
ಕೋಲ್ಕತಾ | 8,060 ರೂ. | 8,793 ರೂ. |
ಹೈದರಾಬಾದ್ | 8,060 ರೂ. | 8,793 ರೂ. |
ಬೆಳ್ಳಿ ಬೆಲೆ
ಇತ್ತ ಬೆಳ್ಳಿ ಬೆಲೆ ಇಂದು ಕೂಡ ಯಥಾಸ್ಥಿತಿ ಕಾಯ್ದುಕೊಂಡಿದೆ. ಬೆಳ್ಳಿ 1 ಗ್ರಾಂನ ಬೆಲೆ 99.50 ರೂ., 8 ಗ್ರಾಂಗೆ 796 ರೂ., 10 ಗ್ರಾಂ.ಗೆ 995 ರೂ. ಮತ್ತು 1 ಕೆಜಿಗೆ 99,500 ರೂ. ಪಾವತಿಸಬೇಕಾಗುತ್ತದೆ.
ಚಿನ್ನದ ಬೆಲೆ ಮೇಲೆ ಪರಿಣಾಮ ಬೀರುವ ಅಂಶಗಳು
ಶತಮಾನಗಳಿಂದ ಚಿನ್ನವು ಭಾರತೀಯ ಸಂಸ್ಕೃತಿ ಮತ್ತು ಅರ್ಥಶಾಸ್ತ್ರದ ಪ್ರಮುಖ ಭಾಗವಾಗಿ ಗುರುತಿಸಿಕೊಂಡಿದೆ. ದೇಶದಲ್ಲಿ ಆಭರಣವಾಗಿ ಮಾತ್ರವಲ್ಲ ಹೂಡಿಕೆಗೂ ಚಿನ್ನ ಬಳಕೆಯಾಗುತ್ತಿದೆ. ಭಾರತದಲ್ಲಿ ಪ್ರತಿ ದಿನ ಚಿನ್ನದ ದರದಲ್ಲಿ ಏರಿಳಿತ ಕಂಡು ಬರುತ್ತದೆ. ಅದಕ್ಕೆ ಕಾರಣವೇನು? ಚಿನ್ನದ ದರದ ಮೇಲೆ ಪ್ರಭಾವ ಬೀರುವ ಅಂಶಗಳು ಯಾವುವು? ಎನ್ನುವ ವಿವರ ಇಲ್ಲಿದೆ.
ಜಾಗತಿಕ ಮಾರುಕಟ್ಟೆಯ ಪ್ರಭಾವ: ಜಾಗತಿಕ ಚಿನ್ನದ ಮಾರುಕಟ್ಟೆಯ ಏರಿಳಿತ ಭಾರತದಲ್ಲಿ ಚಿನ್ನದ ದರವನ್ನು ನಿರ್ಧರಿಸುವಲ್ಲಿ ಪ್ರದಾನ ಪಾತ್ರವಹಿಸುತ್ತದೆ. ಭೌಗೋಳಿಕ ರಾಜಕೀಯ ಘಟನೆಗಳು, ಆರ್ಥಿಕ ಪರಿಸ್ಥಿತಿಗಳು ಮತ್ತು ಕರೆನ್ಸಿ ಏರಿಳಿತಗಳಂತಹ ಅಂಶಗಳು ಚಿನ್ನದ ದರದ ಮೇಲೆ ನೇರ ಪರಿಣಾಮ ಬೀರುತ್ತವೆ. ಅಂತಾರಾಷ್ಟ್ರೀಯ ಮಾರುಕಟ್ಟೆಗಳು ಅನಿಶ್ಚಿತತೆಗೆ ಒಳಗಾದಾಗ ಹೂಡಿಕೆದಾರರು ಹೆಚ್ಚಾಗಿ ಚಿನ್ನದತ್ತ ಮುಖ ಮಾಡುತ್ತಾರೆ. ಇದು ಬೆಲೆ ಹೆಚ್ಚಳಕ್ಕೆ ಕಾರಣವಾಗುತ್ತದೆ.
ಬೇಡಿಕೆ ಮತ್ತು ಪೂರೈಕೆ: ಭಾರತದಲ್ಲಿ ಚಿನ್ನವು ಅಮೂಲ್ಯ ಲೋಹ ಮಾತ್ರವಲ್ಲ ಸಂಸ್ಕೃತಿಯ ಸಂಕೇತವೂ ಹೌದು. ಹೀಗಾಗಿ ಹಬ್ಬಗಳು ಮತ್ತು ಮದುವೆ ಋತುವಿನಲ್ಲಿ ಚಿನ್ನಾಭರಣಗಳಿಗೆ ಬೇಡಿಕೆ ಹೆಚ್ಚಾಗಿ ದರದ ಏರಿಳಿತಗಳಿಗೆ ಕಾರಣವಾಗುತ್ತದೆ. ಜತೆಗೆ ಪೂರೈಕೆಯಲ್ಲಿನ ಅಡೆತಡೆಗಳು ಮತ್ತು ಆಮದು ಸುಂಕದಲ್ಲಿನ ಬದಲಾವಣೆಗಳು ಸ್ಥಳೀಯ ಚಿನ್ನದ ಬೆಲೆಗಳ ಮೇಲೆ ಪರಿಣಾಮ ಬೀರುತ್ತದೆ.
ಸರ್ಕಾರದ ನೀತಿ: ಸರ್ಕಾರದ ನೀತಿಗಳು ಭಾರತದ ಚಿನ್ನದ ದರದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಆಮದು ಸುಂಕಗಳು, ತೆರಿಗೆಗಳು ಮತ್ತು ಚಿನ್ನದ ಆಮದಿನ ಮೇಲಿನ ನಿರ್ಬಂಧಗಳಲ್ಲಿನ ಬದಲಾವಣೆಗಳು ಏರಿಳಿತಗಳಿಗೆ ಕಾರಣವಾಗುತ್ತದೆ. ಹಣದುಬ್ಬರಕ್ಕೆ ಸಂಬಂಧಿಸಿದ ಸರ್ಕಾರದ ನೀತಿಗಳು ಚಿನ್ನದ ದರದ ಮೇಲೆ ಪ್ರಭಾವ ಬೀರುತ್ತದೆ.
ವಿನಿಮಯ ದರಗಳು: ಜಾಗತಿಕವಾಗಿ ಚಿನ್ನದ ಬೆಲೆ ಯುಎಸ್ ಡಾಲರ್‌ಗಳಲ್ಲಿರುವುದರಿಂದ ಭಾರತೀಯ ರೂಪಾಯಿ-ಯುಎಸ್ ಡಾಲರ್ ವಿನಿಮಯ ದರದಲ್ಲಿನ ಏರಿಳಿತಗಳು ಭಾರತದಲ್ಲಿ ಚಿನ್ನದ ದರದ ಮೇಲೆ ಪರಿಣಾಮ ಬೀರುವ ಮತ್ತೊಂದು ಪ್ರಮುಖ ಅಂಶ. ಡಾಲರ್ ವಿರುದ್ಧ ರೂಪಾಯಿ ಮೌಲ್ಯದ ಕುಸಿತ ಭಾರತದಲ್ಲಿ ಚಿನ್ನದ ಬೆಲೆ ಏರಿಕೆಗೆ ಕಾರಣವಾಗುತ್ತದೆ.
ಈ ಸುದ್ದಿಯನ್ನೂ ಓದಿ: ಹೊಸ ಆದಾಯ ತೆರಿಗೆ ಮಸೂದೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ!
ಹೂಡಿಕೆದಾರರ ಮನಸ್ಥಿತಿ: ಚಿನ್ನದ ಮೇಲಿನ ಹೂಡಿಕೆಯೂ ಬೆಲೆಯನ್ನು ಪ್ರಭಾವಿಸುವ ಇನ್ನೊಂದು ಅಂಶ. ವ್ಯಾಪಾರ ಪ್ರಮಾಣಗಳು ಮತ್ತು ಇತರ ಹಣಕಾಸು ಮಾರುಕಟ್ಟೆಗಳಲ್ಲಿನ ಪ್ರವೃತ್ತಿಗಳು ಚಿನ್ನದ ಬೆಲೆಗಳ ಮೇಲೆ ಪ್ರಭಾವ ಬೀರುತ್ತವೆ.