ಹೊಸ ಆದಾಯ ತೆರಿಗೆ ಮಸೂದೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ!
Income Tax Bill Approves: ಬಹು ನಿರೀಕ್ಷಿತ ಆದಾಯ ತೆರಿಗೆ ಮಸೂದೆಗೆ ಕೇಂದ್ರ ಸರ್ಕಾರ ಶುಕ್ರವಾರ ಅನುಮೋದನೆ ನೀಡಿದೆ. ಇದರೊಂದಿಗೆ ಆದಾಯ ತೆರಿಗೆ ಕುರಿತ ಪ್ರಕ್ರಿಯೆಗಳ ನಿಮಿತ್ತ ಬಜೆಟ್‌ಗಾಗಿ ಕಾಯುವ ಅಗತ್ಯವಿಲ್ಲ. ಆರು ದಶಕಗಳಷ್ಟು ಹಳೆಯದಾದ 1961 ರ ಆದಾಯ ತೆರಿಗೆ ಕಾಯ್ದೆಯನ್ನು ಬದಲಿಸುವ ಹೊಸ ಆದಾಯ ತೆರಿಗೆ ಮಸೂದೆಯನ್ನು ಆರು ತಿಂಗಳೊಳಗೆ ಕೇಂದ್ರ ಸರ್ಕಾರ ರಚಿಸಿದೆ.
ನವದೆಹಲಿ: ತೆರಿಗೆಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಸರಳವಾಗಿಸಲು ಕೇಂದ್ರ ಸಚಿವ ಸಂಪುಟ (Union Cabinet) ಶುಕ್ರವಾರ ಆದಾಯ ತೆರಿಗೆ ಮಸೂದೆ (Income Tax Bill)ಗೆ ಅನುಮೋದನೆಯನ್ನು ನೀಡಿದೆ. ಆ ಮೂಲಕ ತೆರಿಗೆ ಕುರಿತ ವಿನಾಯಿತಿ ಸೇರಿದಂತೆ ಯಾವುದೇ ಪ್ರಕ್ರಿಯೆಗಳ ವಿನಾಯಿತಗಳ ಬಗ್ಗೆ ತಿಳಿದುಕೊಳ್ಳಲು ಇನ್ನು ಮುಂದೆ ಬಜೆಟ್‌ಗಾಗಿ ಕಾಯುವ ಅಗತ್ಯವಿಲ್ಲ.
ಆರು ದಶಕಗಳಷ್ಟು ಹಳೆಯದಾದ 1961ರ ಆದಾಯ ತೆರಿಗೆ ಕಾಯ್ದೆಯನ್ನು ಬದಲಿಸುವ ಹೊಸ ಆದಾಯ ತೆರಿಗೆ ಮಸೂದೆಯನ್ನು ಆರು ತಿಂಗಳೊಳಗೆ ರಚಿಸಲಾಗಿದೆ ಮತ್ತು ತೆರಿಗೆದಾರರಿಗೆ ತೆರಿಗೆ ಅನುಸರಣೆಯನ್ನು ಸುಲಭಗೊಳಿಸಲು ಮತ್ತು ಓದಲು ಮತ್ತು ಅರ್ಥಮಾಡಿಕೊಳ್ಳಲು ಸುಲಭವಾಗುವಂತೆ ಭಾಷೆಯನ್ನು ಸರಳಗೊಳಿಸಲು ಪ್ರಯತ್ನಿಸಲಾಗಿದೆ.
Budget 2025 income tax-ಮಧ್ಯಮ ವರ್ಗದ ಜನರಿಗೆ ಸಿಹಿ ಸುದ್ದಿ: 12 ಲಕ್ಷ ರೂ ವರೆಗೆ ಆದಾಯ ತೆರಿಗೆ ಇಲ್ಲ!
ಈ ಮಸೂದೆಯು ಹೊಸ ತೆರಿಗೆಗಳನ್ನು ಪರಿಚಯಿಸುವುದಿಲ್ಲ. ಬದಲಿಗೆ ತೆರಿಗೆ ಕಾನೂನುಗಳನ್ನು ಸರಳೀಕರಿಸುವುದು, ಕಾನೂನು ಸಂಕೀರ್ಣತೆಗಳನ್ನು ಕಡಿಮೆ ಮಾಡುವುದು ಮತ್ತು ತೆರಿಗೆದಾರರಿಗೆ ಅನುಸರಣೆಯನ್ನು ಸುಲಭಗೊಳಿಸುವುದರ ಮೇಲೆ ಕೇಂದ್ರೀಕರಿಸುತ್ತದೆ ಎಂದು ಹಣಕಾಸು ಕಾರ್ಯದರ್ಶಿ ಗುರುವಾರ ದೃಢಪಡಿಸಿದ್ದಾರೆ.
ಇದು ಕಡಿಮೆ ವಾಕ್ಯಗಳು, ನಿಬಂಧನೆಗಳು ಮತ್ತು ವಿವರಣೆಗಳನ್ನು ಹೊಂದಿರುತ್ತದೆ. ನು ಪ್ರಸ್ತುತ ಕಾನೂನುಗಿಂತ ಹೊಸ ಕಾನೂ 50% ಕಡಿಮೆ ಇರುತ್ತದೆ ಎಂದು ಸರ್ಕಾರ ಹೇಳಿದೆ. ಮೊಕದ್ದಮೆಗಳನ್ನು ಕಡಿಮೆ ಮಾಡುವುದು ಸಹ ಇದರ ಒಂದು ಪ್ರಮುಖ ಗುರಿಯಾಗಿದೆ. ಮಸೂದೆಯು ಕೆಲವು ಅಪರಾಧಗಳಿಗೆ ಕಡಿಮೆ ದಂಡಗಳನ್ನು ಪರಿಚಯಿಸಬಹುದು, ಇದು ತೆರಿಗೆ ವ್ಯವಸ್ಥೆಯನ್ನು ಹೆಚ್ಚು ತೆರಿಗೆದಾರ ಸ್ನೇಹಿಯನ್ನಾಗಿ ಮಾಡುತ್ತದೆ.
ಹೊಸ ಆದಾಯ ತೆರಿಗೆ ಮಸೂದೆಯ ಅಗತ್ಯವೇನು?
ಹೊಸ ಆದಾಯ ತೆರಿಗೆ ಮಸೂದೆಯು ಅಸ್ತಿತ್ವದಲ್ಲಿರುವ ಆದಾಯ ತೆರಿಗೆ ರಚನೆಯನ್ನು ಸುಧಾರಿಸುವ ಮೂಲಕ ನಿಬಂಧನೆಗಳನ್ನು ಸರಳಗೊಳಿಸುವ ಗುರಿಯನ್ನು ಹೊಂದಿದೆ. ಇದು ಪ್ರಸ್ತುತ ಅಸ್ತಿತ್ವದಲ್ಲಿರುವ 1961ರ ಆದಾಯ ತೆರಿಗೆ ಕಾಯ್ದೆಯನ್ನು ಬದಲಾಯಿಸುತ್ತದೆ.
ಬಜೆಟ್ ಭಾಷಣದ ಸಮಯದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಈ ಮಸೂದೆಯು ಭಾರತೀಯ ನ್ಯಾಯಾಂಗ ಸಂಹಿತೆಯ ಮೂಲ ತತ್ವಶಾಸ್ತ್ರವನ್ನೇ ಸಾಕಾರಗೊಳಿಸುತ್ತದೆ ಎಂದು ಹೇಳಿದ್ದರು.
ಈ ಕಾನೂನು ಜುಲೈ 2024 ರಿಂದ 1860 ರ ಭಾರತೀಯ ದಂಡ ಸಂಹಿತೆಯನ್ನು ರದ್ದುಗೊಳಿಸಿದೆ. ಈ ಮಸೂದೆಯು ಸರಳೀಕೃತ ನಿವಾಸ ನಿಯಮಗಳನ್ನು ತರುವ ನಿರೀಕ್ಷೆಯಿದೆ.