ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Gold Price Today On 4th June 2026: ಚಿನ್ನದ ದರದಲ್ಲಿಂದು ಮತ್ತೆ ಇಳಿಕೆ; ಬೆಲೆ ಎಷ್ಟಿದೆ ನೋಡಿ

ಕಳೆದೆರಡು ದಿನದಿಂದ ಏರುತ್ತಿರುವ ಚಿನ್ನದ ಬೆಲೆಯಲ್ಲಿಂದು ಕೊಂಚ ಇಳಿಕೆಯಾಗಿದೆ. ಗುರುವಾರ (ಜೂನ್‌ 4) ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 10 ರೂ ಇಳಿಕೆ ಕಂಡು ಬಂದಿದ್ದು, 14,310 ರುಪಾಯಿ ಇದ್ದರೆ, 24 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 11 ರೂ. ಇಳಿಕೆಯಾಗಿ 15,611 ರುಪಾಯಿ ಕಂಡು ಬಂದಿದೆ.

ಚಿನ್ನದ ದರದಲ್ಲಿಂದು ಮತ್ತೆ ಇಳಿಕೆ; ಬೆಲೆ ಎಷ್ಟಿದೆ ನೋಡಿ

ಚಿನ್ನದ ದರದಲ್ಲಿ ಇಳಿಕೆ (ಸಂಗ್ರಹ ಚಿತ್ರ) -

Vishakha Bhat Heggar
Vishakha Bhat Heggar Jun 4, 2026 12:56 PM

ಬೆಂಗಳೂರು: ಕಳೆದೆರಡು ದಿನದಿಂದ ಏರುತ್ತಿರುವ ಚಿನ್ನದ ಬೆಲೆಯಲ್ಲಿಂದು ಕೊಂಚ ಇಳಿಕೆಯಾಗಿದೆ. ಗುರುವಾರ (ಜೂನ್‌ 4) ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 10 ರೂ (Gold Price Today On 4th June 2026) ಇಳಿಕೆ ಕಂಡು ಬಂದಿದ್ದು, 14,310 ರುಪಾಯಿ ಇದ್ದರೆ, 24 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 11 ರೂ. ಇಳಿಕೆಯಾಗಿ 15,611 ರುಪಾಯಿ ಕಂಡು ಬಂದಿದೆ. ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,14,480 ರೂ. ಇದ್ದರೆ, 10 ಗ್ರಾಂಗೆ 1,43,100 ರೂ. ಮತ್ತು 100 ಗ್ರಾಂ ಚಿನ್ನಕ್ಕೆ 14,31,000 ರೂ. ಪಾವತಿ ಮಾಡಬೇಕಾಗುತ್ತದೆ. 24 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,24,888 ರೂ. ಇದ್ದರೆ 10 ಗ್ರಾಂಗೆ ನೀವು 1,56,110 ರೂ. ಮತ್ತು 100 ಗ್ರಾಂ ಚಿನ್ನಕ್ಕೆ ನೀವು 15,61,100 ರೂ. ಪಾವತಿ ಮಾಡಬೇಕು.

ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ

ನಗರ 22 ಕ್ಯಾರಟ್‌ (1 ಗ್ರಾಂ) 24 ಕ್ಯಾರಟ್‌ (1 ಗ್ರಾಂ)
ಚೆನ್ನೈ 14,310 15,611 ರುಪಾಯಿ
ಮುಂಬೈ 14,310 15,611 ರುಪಾಯಿ
ದೆಹಲಿ 14,310 15,611 ರುಪಾಯಿ
ಕೋಲ್ಕತ್ತಾ 14,310 15,611 ರುಪಾಯಿ
ಹೈದರಾಬಾದ್‌ 14,310 15,611 ರುಪಾಯಿ

ಇತ್ತ ಬೆಳ್ಳಿ ದರದಲ್ಲಿಯೂ ಯಥಾಸ್ಥಿತಿ ಕಂಡುಬಂದಿದೆ. ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಗೆ 280 ರುಪಾಯಿ ಇದೆ. 10 ಗ್ರಾಂ ಬೆಳ್ಳಿಗೆ 2,800 ರುಪಾಯಿ ಹಾಗೂ 1 ಕೆಜಿಗೆ 2,80,000 ರುಪಾಯಿ ಕಂಡು ಬಂದಿದೆ.