ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gold Price Today on 7th December 2025: ಬೆಂಗಳೂರಿನಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ಬೆಲೆ

Gold Rate Today: ಕೆಲ ದಿನಗಳಿಂದ ಏರಿಳಿತ ಕಾಣುತ್ತಿದ್ದ ಚಿನ್ನದ ಬೆಲೆ ಇಂದು ಯಥಾಸ್ಥಿತಿಯಲ್ಲಿದೆ. 22 ಕ್ಯಾರಟ್‌ ಚಿನ್ನದ ದರ 11,930 ರೂ. ಇದ್ದರೆ, 24 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನ 13,015 ರೂ. ಇದೆ.

ಬೆಂಗಳೂರಿನಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ಬೆಲೆ

ಚಿನ್ನದ ಬೆಲೆಯಲ್ಲಿ ಯಥಾಸ್ಥಿತಿ -

Vishakha Bhat
Vishakha Bhat Dec 7, 2025 1:08 PM

ಬೆಂಗಳೂರು: ಕೆಲ ದಿನಗಳಿಂದ ಏರಿಳಿತ ಕಾಣುತ್ತಿದ್ದ ಚಿನ್ನದ ಬೆಲೆ ಇಂದು ಯಥಾಸ್ಥಿತಿಯಲ್ಲಿದೆ. 22 ಕ್ಯಾರಟ್‌ ಚಿನ್ನದ ದರ (Gold Price Today on 7th December 2025) 11,930 ರೂ. ಇದ್ದರೆ, 24 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನ 13,015 ರೂ. ಇದೆ. 22 ಕ್ಯಾರಟ್‌ 8 ಗ್ರಾಂ ಚಿನ್ನದ ಬೆಲೆ 95,440 ರೂ. ಇದ್ದರೆ, 10 ಗ್ರಾಂಗೆ ನೀವು 1,19,300 ರೂ. ಮತ್ತು 100 ಗ್ರಾಂ ಗೆ 11,93,000 ರೂ. ಪಾವತಿಸಬೇಕಾಗುತ್ತದೆ. 24 ಕ್ಯಾರಟ್‌ನ 8 ಗ್ರಾಂ ಚಿನ್ನಕ್ಕೆ 1,04,120 ರೂ. ನೀಡಿದರೆ, 10 ಗ್ರಾಂಗೆ ನೀವು 1,30,150 ರೂ. ಮತ್ತು 100 ಗ್ರಾಂಗೆ 13,01,500 ರೂ. ಪಾವತಿಸಬೇಕು.

ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ

ನಗರ 22 ಕ್ಯಾರಟ್‌ (1 ಗ್ರಾಂ) 24 ಕ್ಯಾರಟ್‌ (1 ಗ್ರಾಂ)
ಚೆನ್ನೈ 11,930 ರೂ 13,015 ರೂ.
ಮುಂಬೈ 11,930 ರೂ 13,015 ರೂ.
ದೆಹಲಿ 11,930 ರೂ 13,015 ರೂ.
ಕೋಲ್ಕತ್ತಾ 11,930 ರೂ 13,015 ರೂ.
ಹೈದರಾಬಾದ್‌ 11,930 ರೂ 13,015 ರೂ.

ದೇಶದ ಬೇರೆ ಬೇರೆ ನಗರಗಳಲ್ಲಿ ಚಿನ್ನದ ದರವನ್ನು ನೋಡುವುದಾದರೆ ಬೆಂಗಳೂರು, ಹೈದರಾಬಾದ್‌ ಹಾಗೂ ಕೊಲ್ಕತ್ತಾದಲ್ಲಿ 22 ಕ್ಯಾರಟ್‌ ಚಿನ್ನದ ದರ 11,930 ರೂ ಇದೆ. 24 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನ 13,015 ರೂ. ಇದೆ. ದೆಹಲಿಯಲ್ಲಿ ಕೊಂಚ ವ್ಯತ್ಯಾಸವಿದ್ದು, 22 ಕ್ಯಾರಟ್‌ ಚಿನ್ನ 11,945 ರೂ. ಹಾಗೂ 24 ಕ್ಯಾರಟ್‌ ಚಿನ್ನದ ಬೆಲೆ 13,030 ರೂ. ಇರಲಿದೆ.

Gold Price Today on 6th December 2025: ಬೆಂಗಳೂರಿನಲ್ಲಿ ಕೊಂಚ ಇಳಿಕೆ ಕಂಡ ಚಿನ್ನದ ದರ; ಇಂದಿನ ಬೆಲೆ ಏನಿದೆ ಚೆಕ್‌ ಮಾಡಿ

ಬೆಳ್ಳಿ ದರದಲ್ಲಿಯೂ ಇಂದು ಯಥಾಸ್ಥಿತಿ ಕಂಡು ಬಂದಿದೆ. ಬೆಳ್ಳಿ ದರ 190 ರೂ. ಇದ್ದು, 8 ಗ್ರಾಂ ಬೆಳ್ಳಿಗೆ 1,520 ರೂ. 10 ಗ್ರಾಂಗೆ 1,900 ರೂ. ಮತ್ತು 1 ಕೆ.ಜಿಗೆ 1,90,000 ರೂ. ಪಾವತಿಸಬೇಕು. ದೆಹಲಿ, ಮುಂಬೈ ಸೇರಿದಂತೆ ಹಲವು ಕಡೆ ಇದೇ ದರ ಮುಂದುವರಿದಿದೆ.

ಚಿನ್ನದ ಬೆಲೆಯೇರಿಕೆಗೆ ಹಲವು ಅಂಶಗಳು ಪ್ರಭಾವ ಬೀರುತ್ತವೆ. ಅದರಲ್ಲಿಯೂ ಅಂತಾರಾಷ್ಟ್ರೀಯ ಮಟ್ಟದಲ್ಲಿನ ಅನಿಶ್ಚತತೆ ಹಾಗೂ ಸುಂಕ ಮತ್ತ ಆಮದುಗಳು ಗಮನಾರ್ಹವಾಗಿ ಪರಿಣಾಮ ಬೀರುತ್ತವೆ. ಭಾರತ ಚಿನ್ನವನ್ನು ಆಮದು ಮಾಡಿಕೊಳ್ಳುವ ದೇಶ. ಹೀಗಾಗಿ ಅದರ ಮೇಲಿನ ಸುಂಕದ ಹೊರೆಯೂ ಗ್ರಾಹಕರ ಮೇಲೆ ಬೀರಲಿದೆ. ಷೇರು ಮಾರುಕಟ್ಟೆ ಕುಸಿತ ಕಂಡಾಗಲೂ ಚಿನ್ನದ ಬೆಲೆಯಲ್ಲಿ ವ್ಯತ್ಯಾಸವಾಗುತ್ತದೆ.