Gold Price Today on 7th January 2026: ಇಂದು ಮತ್ತೆ ಗಗನಮುಖಿಯಾದ ಚಿನ್ನದ ದರ; ಆಭರಣಪ್ರಿಯರು ಕಂಗಾಲು
Gold Rate Today: ಬೆಂಗಳೂರಿನಲ್ಲಿ ಬುಧವಾರ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯಲ್ಲಿ 60 ರುಪಾಯಿ ಏರಿಕೆ ಕಂಡು ಬಂದಿದ್ದು,12,785 ರುಪಾಯಿಗೆ ತಲುಪಿದೆ. 24 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯಲ್ಲಿ 66 ರುಪಾಯಿ ಹೆಚ್ಚಾಗಿ 13,948 ರುಪಾಯಿಗೆ ಏರಿಕೆಯಾಗಿದೆ.
ಸಾಂದರ್ಭಿಕ ಚಿತ್ರ. -
ಬೆಂಗಳೂರು, ಜ. 7: ಗ್ರಾಹಕರ ನಿದ್ದೆಗೆಡಿಸಿದ ಚಿನ್ನದ ದರ ಮತ್ತೆ ಹೆಚ್ಚಾಗಿದೆ (Gold Price Today on 7th January 2026). ಬೆಂಗಳೂರಿನಲ್ಲಿ ಬುಧವಾರ (ಜನವರಿ 7) 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯಲ್ಲಿ60 ರುಪಾಯಿ ಏರಿಕೆ ಕಂಡು ಬಂದಿದ್ದು,12,785 ರುಪಾಯಿಗೆ ತಲುಪಿದೆ. 24 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯಲ್ಲಿ 66 ರುಪಾಯಿ ಹೆಚ್ಚಾಗಿ 13,948 ರುಪಾಯಿಗೆ ಏರಿಕೆಯಾಗಿದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,11,056 ರುಪಾಯಿ ಇದ್ದರೆ, 10 ಗ್ರಾಂಗೆ ನೀವು 1,27,850 ರುಪಾಯಿ ಪಾವತಿಸಬೇಕು. ಇನ್ನು 100 ಗ್ರಾಂಗೆ 12,78,500 ರುಪಾಯಿ ಇದೆ. 24 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,11,584 ರುಪಾಯಿ, 10 ಗ್ರಾಂ ಚಿನ್ನದ ಬೆಲೆ 1,39,480 ರುಪಾಯಿ ಇದ್ದರೆ, 100 ಗ್ರಾಂಗೆ ನೀವು 13,94,800 ರುಪಾಯಿ ಪಾವತಿಸಬೇಕು.
ಚೆನ್ನೈಯಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 12,870 ರುಪಾಯಿ, 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 14,040 ರುಪಾಯಿ, ಮುಂಬೈಯಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 12,785 ರುಪಾಯಿ, 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 13,948 ರುಪಾಯಿ, ದೆಹಲಿಯಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 12,800 ರುಪಾಯಿ, 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 13,963 ರುಪಾಯಿ, ಕೋಲ್ಕತ್ತಾದಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 12,785 ರುಪಾಯಿ, 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 13,948 ರುಪಾಯಿ, ಹೈದರಾಬಾದ್‌ನಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 12,785 ರುಪಾಯಿ, 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 13,948 ರುಪಾಯಿ ಇದೆ.
ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ
ದರ ಪಟ್ಟಿ ಹೀಗಿದೆ
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
|---|---|---|
| ಚೆನ್ನೈ | 12,870 ರುಪಾಯಿ | 14,040 ರುಪಾಯಿ |
| ಮುಂಬೈ | 12,785 ರುಪಾಯಿ | 13,948 ರುಪಾಯಿ |
| ದೆಹಲಿ | 12,800 ರುಪಾಯಿ | 13,963 ರುಪಾಯಿ |
| ಕೋಲ್ಕತ್ತಾ | 12,785 ರುಪಾಯಿ | 13,948 ರುಪಾಯಿ |
| ಹೈದರಾಬಾದ್ | 12,725 ರುಪಾಯಿ | 13,882 ರುಪಾಯಿ |
ಹೊಸ ವರ್ಷದಲ್ಲಿ ಚಿನ್ನದ ಬೆಲೆ ಎಷ್ಟಾಗಬಹುದು? ಬಂಗಾರದ ದರ ಏರುತ್ತಿರುವುದೇಕೆ?
ಬೆಳ್ಳಿ ದರ
ಇನ್ನು ಬೆಂಗಳೂರಿನಲ್ಲಿ ಬೆಳ್ಳಿ ದರದಲ್ಲಿಯೂ ಭಾರಿ ಏರಿಕೆ ಕಂಡು ಬಂದಿದೆ. ಬೆಳ್ಳಿ 1 ಗ್ರಾಂಗೆ 10 ರುಪಾಯಿ ಏರಿಕೆಯಾಗಿ 263 ರುಪಾಯಿ ಆಗಿದೆ. 8 ಗ್ರಾಂಗೆ 2,104 ರುಪಾಯಿ, 10 ಗ್ರಾಂಗೆ 2,630 ರುಪಾಯಿ, 100 ಗ್ರಾಂಗೆ 26,300 ರುಪಾಯಿ, 1 ಕೆಜಿಗೆ 2,63,000 ರುಪಾಯಿ ಇದೆ.
ಚಿನ್ನದ ಬೆಲೆ ಏರಿಕೆಗೆ ಕಾರಣವೇನು?
ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ ಬಡ್ಡಿ ಕಡಿತ ಮಾಡಬಹುದು ಎನ್ನುವ ನಿರೀಕ್ಷೆ ಮತ್ತು ಜಾಗತಿಕವಾಗಿ ಉಂಟಾಗಿರುವ ಅನಿಶ್ಚಿತತೆಯ ಪರಿಣಾಮ ಹೂಡಿಕೆದಾರರ ಮೇಲೆ ಪ್ರಭಾವ ಬೀರಿದೆ. ಹೀಗಾಗಿ ಚಿನ್ನದ ದರದಲ್ಲಿ ನಿರಂತರ ಹೆಚ್ಚಳವಾಗುತ್ತಿದೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ.