Gold Price Today On August 27th 2026: ರಾಖಿ ಹಬ್ಬದ ಮುನ್ನಾ ದಿನ ಆಭರಣ ಗ್ರಾಹಕರಿಗೆ ಸಿಕ್ತು ಸಿಹಿ ಸುದ್ದಿ; ಕುಸಿದ ಚಿನ್ನದ ದರ
Gold Rate Today: ಗುರುವಾರ ಚಿನ್ನದ ಬೆಲೆಯಲ್ಲಿ ಕುಸಿತ ಕಂಡು ಬಂದಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರ 70 ರುಪಾಯಿ ಅಗ್ಗವಾಗಿ 14,940 ರುಪಾಯಿಗೆ ತಲುಪಿದೆ. ಇನ್ನು 24 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ 77 ರುಪಾಯಿ ಕಡಿಮೆಯಾಗಿ 16,298 ರುಪಾಯಿಗೆ ಬಂದಿದೆ.
ಮಮಿತಾ ಬೈಜು (ಇನ್‌ಸ್ಟಾಗ್ರಾಮ್ ಚಿತ್ರ) -
ಬೆಂಗಳೂರು, ಆ. 27: ದೇಶಾದ್ಯಂತ ರಾಖಿ ಹಬ್ಬದ ಸಿದ್ಧತೆ ಜೋರಾಗಿದೆ. ಈ ಮಧ್ಯೆ ಆಭರಣ ಗ್ರಾಹಕರಿಗೆ ಗುಡ್‌ನ್ಯೂಸ್ ಸಿಕ್ಕಿದೆ. ಮಂಗಳವಾರ ಇಳಿಕೆಯಾಗಿದ್ದ ಚಿನ್ನದ ದರದಲ್ಲಿ ಬುಧವಾರ ಯಥಾಸ್ಥಿತಿ ಕಂಡುಬಂದಿತ್ತು. ಗುರುವಾರ (ಆಗಸ್ಟ್ 27) ಚಿನ್ನದ ಬೆಲೆಯಲ್ಲಿ ಕುಸಿತ ಕಂಡು ಬಂದಿದೆ (Gold Price Today On August 27th 2026). ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರ 70 ರುಪಾಯಿ ಅಗ್ಗವಾಗಿ 14,940 ರುಪಾಯಿಗೆ ತಲುಪಿದೆ. ಇನ್ನು 24 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ 77 ರುಪಾಯಿ ಕಡಿಮೆಯಾಗಿ 16,298 ರುಪಾಯಿಗೆ ಬಂದಿದೆ.
ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,19,520 ರುಪಾಯಿ ಆಗಿದ್ದರೆ, 10 ಗ್ರಾಂಗೆ 1,49,400 ರುಪಾಯಿ ಹಾಗೂ 100 ಗ್ರಾಂಗೆ 14,94,000 ರುಪಾಯಿ ಪಾವತಿಸಬೇಕು. 24 ಕ್ಯಾರಟ್ 8 ಗ್ರಾಂ ಚಿನ್ನದ ಬೆಲೆ 1,30,384 ರುಪಾಯಿ, 10 ಗ್ರಾಂಗೆ 1,62,980 ರುಪಾಯಿ ಹಾಗೂ 100 ಗ್ರಾಂಗೆ 16,29,800 ರುಪಾಯಿ ಇದೆ.
ವಿವಿಧ ನಗರಗಳಲ್ಲಿನ ಚಿನ್ನದ ದರ
ದರ ಪಟ್ಟಿ ಹೀಗಿದೆ
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
|---|---|---|
| ಚೆನ್ನೈ | 14,940 ರುಪಾಯಿ | 16,298 ರುಪಾಯಿ |
| ಮುಂಬೈ | 14,940 ರುಪಾಯಿ | 16,298 ರುಪಾಯಿ |
| ದೆಹಲಿ | 14,955 ರುಪಾಯಿ | 16,313 ರುಪಾಯಿ |
| ಕೋಲ್ಕತಾ | 14,940 ರುಪಾಯಿ | 16,298 ರುಪಾಯಿ |
| ಹೈದರಾಬಾದ್ | 14,940 ರುಪಾಯಿ | 16,298 ರುಪಾಯಿ |
ಚೆನ್ನೈಯಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 14,940 ರುಪಾಯಿ, 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 16,298 ರುಪಾಯಿ, ಮುಂಬೈಯಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 14,940 ರುಪಾಯಿ, 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 16,298 ರುಪಾಯಿ, ದೆಹಲಿಯಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 14,955 ರುಪಾಯಿ, 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 16,313 ರುಪಾಯಿ, ಕೋಲ್ಕತ್ತಾದಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 14,940 ರುಪಾಯಿ, 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 16,298 ರುಪಾಯಿ, ಹೈದರಾಬಾದ್‌ನಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 14,940 ರುಪಾಯಿ, 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 16,298 ರುಪಾಯಿ ಇದೆ.
ಭಾರತದ ಯುಪಿಐ ಕ್ರಾಂತಿಗೆ ಒಂದು ದಶಕ: ಡಿಜಿಟಲ್ ಅನುಭವ ಹಂಚಿಕೊಳ್ಳಲು ನಾಗರಿಕರಿಗೆ ಪ್ರಧಾನಿ ಮೋದಿ ಕರೆ
ಬೆಳ್ಳಿ ದರ
ಇತ್ತ ಬೆಳ್ಳಿ ದರದಲ್ಲಿ ಯಥಾಸ್ಥಿತಿ ಮುಂದುವರಿದಿದೆ. ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಗೆ 260 ರುಪಾಯಿ ಇದೆ. 10 ಗ್ರಾಂ ಬೆಳ್ಳಿಗೆ 2,600 ರುಪಾಯಿ ಹಾಗೂ 1 ಕೆಜಿಗೆ2,60,000 ರುಪಾಯಿ ಕಂಡು ಬಂದಿದೆ.