Gold Price Today On 24th March: ಮತ್ತೆ ಇಳಿಕೆಯಾಯ್ತು ಚಿನ್ನದ ದರ; ಇಂದು ಕಡಿಮೆಯಾಗಿದ್ದು ಬರೋಬ್ಬರಿ 2,160 ರುಪಾಯಿ
Gold Silver Price Today: ಸತತ 2ನೇ ದಿನವಾದ ಮಂಗಳವಾರ (ಮಾರ್ಚ್ 24)ವೂ ಚಿನ್ನದ ದರದಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ ಬರೋಬ್ಬರಿ 270 ರುಪಾಯಿ ಕಡಿಮೆಯಾಗಿದ್ದು 12,865 ರುಪಾಯಿಗೆ ಕುಸಿದಿದೆ. ಇನ್ನು 24 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ 294 ರುಪಾಯಿ ಕಡಿಮೆಯಾಗಿದ್ದು, 15,775 ರುಪಾಯಿಗೆ ಬಂದು ತಲುಪಿದೆ.
ಸಾಂದರ್ಭಿಕ ಚಿತ್ರ -
ಬೆಂಗಳೂರು, ಮಾ. 24: ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಮುಂದುವರಿದಿದ್ದು, ಡಾಲರ್ ಎದುರು ರುಪಾಯಿ ಮೌಲ್ಯ ಕುಸಿಯುತ್ತಿದೆ. ಇದರ ಮಧ್ಯೆ ಚಿನ್ನದ ಬೆಲೆಯೂ ಇಳಿಯಲಾರಂಭಿಸಿದೆ. ಸತತ 2ನೇ ದಿನವಾದ ಮಂಗಳವಾರ (ಮಾರ್ಚ್ 24)ವೂ ಚಿನ್ನದ ದರದಲ್ಲಿ ಭಾರಿ ಇಳಿಕೆ ಕಂಡುಬಂದಿದೆ (Gold Price Today On 24th March). ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ ಬರೋಬ್ಬರಿ 270 ರುಪಾಯಿ ಕಡಿಮೆಯಾಗಿದ್ದು 12,865 ರುಪಾಯಿಗೆ ಕುಸಿದಿದೆ. ಇನ್ನು 24 ಕ್ಯಾರಟ್‌ನ 1 ಗ್ರಾಂ ಚಿನ್ನ 294 ರುಪಾಯಿ ಕಡಿಮೆಯಾಗಿದ್ದು, 15,775 ರುಪಾಯಿಗೆ ಬಂದು ತಲುಪಿದೆ. ಆ ಮೂಲಕ ಬೆಲೆ ಏರಿಕೆಯಿಂದ ಬಳಲಿದ್ದ ಗ್ರಾಹಕರಿಗೆ ತುಸು ನೆಮ್ಮದಿ ನೀಡಿದೆ.
ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,02,920 ರುಪಾಯಿ ಆಗಿದ್ದರೆ, 10 ಗ್ರಾಂಗೆ 1,28,650 ರುಪಾಯಿ ಹಾಗೂ 100 ಗ್ರಾಂಗೆ 12,86,500 ರುಪಾಯಿ ಪಾವತಿಸಬೇಕು. 24 ಕ್ಯಾರಟ್ 8 ಗ್ರಾಂ ಚಿನ್ನದ ಬೆಲೆ 1,12,280 ರುಪಾಯಿ, 10 ಗ್ರಾಂಗೆ ನೀವು 1,40,350 ರುಪಾಯಿ ಹಾಗೂ 100 ಗ್ರಾಂಗೆ ನೀವು 14,03,500 ರುಪಾಯಿ ನೀಡಬೇಕಾಗುತ್ತದೆ.
ಚೆನ್ನೈಯಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 13,000 ರುಪಾಯಿ, 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 14,182 ರುಪಾಯಿ, ಮುಂಬೈಯಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 12,865 ರುಪಾಯಿ, 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 14,035 ರುಪಾಯಿ, ದೆಹಲಿಯಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 12,880 ರುಪಾಯಿ, 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 14,050 ರುಪಾಯಿ, ಕೋಲ್ಕತ್ತಾದಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 12,865 ರುಪಾಯಿ, 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 14,035 ರುಪಾಯಿ, ಹೈದರಾಬಾದ್‌ನಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 12,865 ರುಪಾಯಿ, 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 14,035 ರುಪಾಯಿ ಇದೆ.
ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ
ದರ ಪಟ್ಟಿ ಹೀಗಿದೆ
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
|---|---|---|
| ಚೆನ್ನೈ | 13,000 ರುಪಾಯಿ | 14,182 ರುಪಾಯಿ |
| ಮುಂಬೈ | 12,865 ರುಪಾಯಿ | 14,035 ರುಪಾಯಿ |
| ದೆಹಲಿ | 12,880 ರುಪಾಯಿ | 14,050 ರುಪಾಯಿ |
| ಕೋಲ್ಕತ್ತಾ | 12,865 ರುಪಾಯಿ | 14,035 ರುಪಾಯಿ |
| ಹೈದರಾಬಾದ್ | 12,865 ರುಪಾಯಿ | 14,035 ರುಪಾಯಿ |
ಬೆಳ್ಳಿ ದರ
ಇತ್ತ ಬೆಳ್ಳಿ ದರ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಗೆ 5 ರುಪಾಯಿ ಹೆಚ್ಚಾಗಿದ್ದು, 235 ರುಪಾಯಿಗೆ ಬಂದು ತಲುಪಿದೆ. 10 ಗ್ರಾಂ ಬೆಳ್ಳಿಗೆ 2,350 ರುಪಾಯಿ ಹಾಗೂ 1 ಕೆಜಿಗೆ 2,35,000 ರುಪಾಯಿ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.