ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಯುಗಾದಿ ವಿಷ್ಯ: ಈ ವರ್ಷ ತುಲಾ ರಾಶಿಯವರ ಆದಾಯ ಹೆಚ್ಚಳ

ಹಿಂದೂ ಪಂಚಾಂಗದ ಪ್ರಕಾರ ಹೊಸ ವರ್ಷವು 2026ರ ಮಾರ್ಚ್ 19ರಂದು ಪ್ರಾರಂಭವಾಗಿದೆ. ಈ ವರ್ಷ ಪರಾಭವ ಸಂವತ್ಸರ ಆಗಿದ್ದು ಈ ವರ್ಷ ಕೆಲವು ರಾಶಿ ಚಕ್ರಗಳಿಗೆ ಸಂಪೂರ್ಣ ಗೆಲುವು ಇದ್ದೇ ಇದೆ. ತುಲಾ ರಾಶಿಯವರ ಭವಿಷ್ಯ ಈ ವರ್ಷ ಹೇಗಿರಲಿದೆ? ಏನೆಲ್ಲ ಬದಲಾವಣೆ ಬೀರಬಹುದು ಎಂದು ಜ್ಯೋತಿಷಿ ಶ್ರೀ ದೇವದತ್ತ‌ ಶರ್ಮ ಗುರೂಜಿ ತಿಳಿಸಿದ್ದಾರೆ.

Profile
Pushpa Kumari Mar 24, 2026 11:50 AM

ಬೆಂಗಳೂರು, ಮಾ. 24: ತುಲಾ ರಾಶಿಗೆ ಪರಾಭವ ಸಂವತ್ಸರವು ಬಹಳ ಶುಭದಾಯಕ ವರ್ಷ ಎಂದೇ ಹೇಳಬಹುದು‌‌. ಅಂದುಕೊಂಡ ಕೆಲಸ ಕಾರ್ಯಗಳು ನೆರವೇರಲಿದ್ದು, ಬಹಳಷ್ಟು ಲಾಭವನ್ನು ಗಳಿಸುತ್ತೀರಿ. ವ್ಯಾಪಾರ, ವ್ಯವಹಾರವನ್ನು ಮಾಡುವವರು ತಮ್ಮದೇ ಆದ ಸ್ವಂತ ಉದ್ಯಮ ಆರಂಭಿಸಬಹುದು. ರಾಜಕೀಯ ಕ್ಷೇತ್ರ, ಶಿಕ್ಷಣ ಕ್ಷೇತ್ರ, ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಯಶಸ್ಸು ಸಿಗಲಿದೆ. ಜತೆಗೆ ಈ ಅವಧಿಯಲ್ಲಿ ನೀವು ಹೆಚ್ಚಿನ ಧನ ಸಂಪತ್ತನ್ನು ಗಳಿಸುವ ಸೂಚನೆ ಕೂಡ ಇದೆ. ಆರ್ಥಿಕ ವಿಚಾರಕ್ಕೆ ಸಂಬಂಧಿಸಿದಂತೆ ಈ ವರ್ಷ ಆದಾಯವನ್ನು ಹೆಚ್ಚಿಸಲು ಹೊಸ ಮಾರ್ಗಗಳು ಸಿಗುತ್ತವೆ ಎಂದು ಜ್ಯೋತಿಷಿ ಶ್ರೀ ದೇವದತ್ತ‌ ಶರ್ಮ ಗುರೂಜಿ ತಿಳಿಸಿದ್ದಾರೆ.