ಬೈಕ್ ಪ್ರಿಯರಿಗೆ ಗುಡ್ ನ್ಯೂಸ್: ಈಗ ಅಮೆಜಾನ್, ಫ್ಲಿಪ್‌ಕಾರ್ಟ್‌ನಲ್ಲೂ ಸಿಗುತ್ತೆ ಕ್ಲಾಸಿಕ್ ಲುಕ್‌ನ 'ಜಾವಾ 42 ಐವರಿ' ಬೈಕ್!
Jawa 42 Ivory Bike: 'ಜಾವಾ 42 ಐವರಿ' ಬೈಕ್‌ಗೆ ಸಿಗುತ್ತಿರುವ ಭರ್ಜರಿ ಪ್ರತಿಕ್ರಿಯೆಯನ್ನು ಗಮನಿಸಿರುವ ಕಂಪನಿಯು, ದೇಶದ ಪ್ರಮುಖ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಾದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಇದರ ಬುಕಿಂಗ್ ಅನ್ನು ಪ್ರಾರಂಭಿಸಿದೆ. ಇದರಿಂದಾಗಿ ಸ್ಮಾರ್ಟ್‌ಫೋನ್‌ನಲ್ಲಿ ಕೆಲವೇ ಕ್ಲಿಕ್‌ಗಳ ಮೂಲಕ ನಿಮ್ಮ ನೆಚ್ಚಿನ ಬೈಕ್ ಅನ್ನು ಬುಕ್ ಮಾಡಬಹುದಾಗಿದೆ. ಈ ಕುರಿತ ಡಿಟೇಲ್ಸ್ ಇಲ್ಲಿದೆ.
ಕ್ಲಾಸಿಕ್ ಲುಕ್‌ನ 'ಜಾವಾ 42 ಐವರಿ' ಬೈಕ್. -
ಬೆಂಗಳೂರು, ಜೂ.25: ಆಧುನಿಕ ತಂತ್ರಜ್ಞಾನದ ಜತೆಗೆ ಹಳೆಯ ಕ್ಲಾಸಿಕ್ ವಿನ್ಯಾಸವನ್ನು ಇಷ್ಟಪಡುವ ಬೈಕ್ ಪ್ರಿಯರಿಗೆ 'ಜಾವಾ 42 ಐವರಿ' (Jawa 42 Ivory Bike) ಈಗ ನೆಚ್ಚಿನ ಆಯ್ಕೆಯಾಗುತ್ತಿದೆ. ಈ ಬೈಕ್‌ಗೆ ಸಿಗುತ್ತಿರುವ ಭರ್ಜರಿ ಪ್ರತಿಕ್ರಿಯೆಯನ್ನು ಗಮನಿಸಿರುವ ಕಂಪನಿಯು, ದೇಶದ ಪ್ರಮುಖ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಾದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಇದರ ಬುಕಿಂಗ್ ಅನ್ನು ಪ್ರಾರಂಭಿಸಿದೆ. ಇದರಿಂದಾಗಿ ಸ್ಮಾರ್ಟ್‌ಫೋನ್‌ನಲ್ಲಿ ಕೆಲವೇ ಕ್ಲಿಕ್‌ಗಳ ಮೂಲಕ ನಿಮ್ಮ ನೆಚ್ಚಿನ ಬೈಕ್ ಅನ್ನು ಬುಕ್ ಮಾಡಬಹುದಾಗಿದೆ.
ವಿನ್ಯಾಸ ಮತ್ತು ಎಂಜಿನ್ ಸಾಮರ್ಥ್ಯ
ಈ ಹೊಸ ಎಡಿಷನ್, ಜಾವಾ 42ರ ಹಳೆಯ ಪರಂಪರೆಯನ್ನು ಮುಂದುವರಿಸಿದೆ. ರೆಟ್ರೋ ಲುಕ್, ಸಿಗ್ನೇಚರ್ '42' ಡಿಕಾಲ್ಸ್ ಮತ್ತು ಪೆಟ್ರೋಲ್ ಟ್ಯಾಂಕ್ ಮೇಲಿರುವ ಚೆಕರ್ಡ್ ಫ್ಲ್ಯಾಗ್ ವಿನ್ಯಾಸವು ಇದಕ್ಕೆ ಸ್ಪೋರ್ಟಿ ಲುಕ್ ನೀಡಿದೆ. ಇದರಲ್ಲಿ ಶಕ್ತಿಶಾಲಿ ಲಿಕ್ವಿಡ್ ಕೂಲ್ಡ್ 'ಜೆ-ಪ್ಯಾಂಥರ್' ಎಂಜಿನ್ ಹಾಗೂ 6-ಸ್ಪೀಡ್ ಗೇರ್‌ಬಾಕ್ಸ್ ಅಳವಡಿಸಲಾಗಿದೆ.
ಮಾರುಕಟ್ಟೆಯಲ್ಲಿರುವ ಇತರೆ 350 ಸಿಸಿ ಬೈಕ್‌ಗಳಿಗೆ ಹೋಲಿಸಿದರೆ ಇದು ಶೇ.40 ರಷ್ಟು ಹೆಚ್ಚು ಪವರ್ ಉತ್ಪಾದಿಸುತ್ತದೆ. ಸಿಟಿ ಟ್ರಾಫಿಕ್ ಹಾಗೂ ಲಾಂಗ್ ಡ್ರೈವ್ ಎರಡಕ್ಕೂ ಇದು ಅತ್ಯುತ್ತಮವಾಗಿದೆ. ಜತೆಗೆ 'ಅಸಿಸ್ಟ್ ಮತ್ತು ಸ್ಲಿಪ್ಪರ್ ಕ್ಲಚ್' ಇರುವುದರಿಂದ ಬೈಕ್ ಕಂಟ್ರೋಲ್ ಮಾಡುವುದು ಬಹಳ ಸುಲಭ.
ಬೆಲೆ ಎಷ್ಟು?
ಜಾವಾ 42 ಐವರಿ ಬೈಕ್‌ನ ನವದೆಹಲಿ ಎಕ್ಸ್-ಶೋರೂಂ ಬೆಲೆ ಕೇವಲ 1,84,950 ರೂ. ಆಗಿದೆ. ಸದ್ಯ ದೇಶದ 118 ನಗರಗಳಲ್ಲಿ 130 ಡೀಲರ್‌ಶಿಪ್‌ಗಳ ಮೂಲಕ ಆನ್‌ಲೈನ್ ಬುಕಿಂಗ್‌ಗೆ ಅವಕಾಶ ಕಲ್ಪಿಸಲಾಗಿದೆ.
ಆನ್‌ಲೈನ್‌ನಲ್ಲಿ ಖರೀದಿಸುವುದು ಹೇಗೆ?
- ಅಮೆಜಾನ್ ಅಥವಾ ಫ್ಲಿಪ್‌ಕಾರ್ಟ್ ಆ್ಯಪ್‌ಗೆ ಹೋಗಿ, ಎಕ್ಸ್-ಶೋರೂಂ ಬುಕಿಂಗ್ ಮೊತ್ತವನ್ನು ಪಾವತಿಸಿ.
- ನಿಮ್ಮ ಹತ್ತಿರದ ಜಾವಾ ಅಧಿಕೃತ ಡೀಲರ್ ನಿಮ್ಮನ್ನು ಸಂಪರ್ಕಿಸಿ, ಆನ್-ರೋಡ್ ಬೆಲೆಯ ಉಳಿದ ಹಣದ ಬಗ್ಗೆ ಮಾಹಿತಿ ನೀಡುತ್ತಾರೆ.
- ವಾಹನದ ನೋಂದಣಿ ಮತ್ತು ಇನ್ಶೂರೆನ್ಸ್ ಶೋರೂಂನಲ್ಲೇ ಮುಗಿಯುತ್ತದೆ, ಬಳಿಕ ನಿಮಗೆ ಬೈಕ್ ಡೆಲಿವರಿ ಸಿಗುತ್ತದೆ.
- ಎಕ್ಸ್‌ಟ್ರಾ ಆಕ್ಸೆಸರೀಸ್‌ಗಳನ್ನು ನೀವು ಶೋರೂಂನಲ್ಲೇ ಖರೀದಿಸಬಹುದು.
ಭರ್ಜರಿ 'ಓನರ್‌ಶಿಪ್ ಅಶ್ಯೂರೆನ್ಸ್' ಪ್ರೋಗ್ರಾಂ
ಗ್ರಾಹಕರಿಗೆ ನೆಮ್ಮದಿಯ ಅನುಭವ ನೀಡಲು 'ಕ್ಲಾಸಿಕ್ ಲೆಜೆಂಡ್ಸ್' ಈ ಸೌಲಭ್ಯಗಳನ್ನು ನೀಡುತ್ತಿದೆ
- 4-ವರ್ಷ/50,000-ಕಿ.ಮೀ ಸ್ಟ್ಯಾಂಡರ್ಡ್ ವಾರಂಟಿ.
- ವಾರಂಟಿಯನ್ನು 6 ವರ್ಷಗಳವರೆಗೆ ವಿಸ್ತರಿಸುವ ಅವಕಾಶ.
- 8 ವರ್ಷಗಳವರೆಗೆ ರಸ್ತೆಬದಿಯಲ್ಲೇ ಸಹಾಯ ನೀಡುವ ರೋಡ್‌ಸೈಡ್ ಅಸಿಸ್ಟೆಂನ್ಸ್ ಸೌಲಭ್ಯ 5 ವರ್ಷಗಳವರೆಗೆ ಎಎಂಸಿ ಸೌಲಭ್ಯ.
ಜಾವಾ 42 ಐವರಿ ಖರೀದಿಸಿದ ಆರಂಭಿಕ ಗ್ರಾಹಕರು ಬೈಕ್‌ನ ವಿನ್ಯಾಸ ಹಾಗೂ ಪವರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ʼಲಾಂಗ್ ಡ್ರೈವ್‌ಗಳಿಗೆ ಇದು ಹೇಳಿಮಾಡಿಸಿದಂತಿದೆʼ ಎಂದು ಪುಣೆಯ ಶೈಲೇಂದ್ರ ಎಸ್. ನಾನೇಕರ್ ಹೇಳಿದ್ದರೆ, ʼಹಬ್ಬದ ದಿನಗಳಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟು ಈ ಬೈಕ್ ಮೇಲೆ ಕುಳಿತರೆ, ಇದರ ಬಣ್ಣ ಅದಕ್ಕೆ ಪರ್ಫೆಕ್ಟ್ ಆಗಿ ಮ್ಯಾಚ್ ಆಗುತ್ತದೆ. ಇದೊಂದು ಅದ್ಭುತ ಕ್ಲಾಸಿಕ್ ಫೀಲ್ ಕೊಡುತ್ತದೆʼ ಎಂದು ಆಂಧ್ರಪ್ರದೇಶದ ಹರಿ ಹೇಳಿದ್ದಾರೆ.
ಎನ್‌ಜಿಒಗಳಿಗೆ ಬರೋಬ್ಬರಿ 24 ಕೋಟಿ ರೂ. ಅನುದಾನ; ಸರ್ಕಾರೇತರ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಿದ ಎಚ್‌ಸಿಎಲ್ ಫೌಂಡೇಶನ್
ʼಶೋರೂಂನಲ್ಲಿ ನೋಡಿದ ತಕ್ಷಣ ಇದರ ಬಣ್ಣಕ್ಕೆ ನಾನು ಫಿದಾ ಆದೆʼ ಎಂದು ಪುದುಚೇರಿಯ ಪ್ರೇಮ್ ಕುಮಾರ್ ಸಂತಸ ಹಂಚಿಕೊಂಡಿದ್ದಾರೆ. ಒಟ್ಟಿನಲ್ಲಿ ಈ ಬೈಕ್ ಜನರ ಮನಸೂರೆಗೊಳ್ಳುತ್ತಿದ್ದು, ದೇಶಾದ್ಯಂತ 450ಕ್ಕೂ ಹೆಚ್ಚು ಸೇವಾ ಕೇಂದ್ರಗಳನ್ನು ಹೊಂದಿರುವ ಜಾವಾ-ಯೆಜ್ಡಿ ಸಂಸ್ಥೆಯು, ಭಾರತೀಯ ಬೈಕ್ ಪ್ರಿಯರಿಗೆ ಕ್ಲಾಸಿಕ್ ಮೋಟಾರ್‌ಸೈಕ್ಲಿಂಗ್‌ನ ನೈಜ ಅನುಭವವನ್ನು ಮರಳಿ ತರುತ್ತಿದೆ.