ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಶ್ರೀಲಂಕಾ ವಿರುದ್ಧದ ಅನಧಿಕೃತ ಟೆಸ್ಟ್‌ನಲ್ಲಿ ಶತಕ ಬಾರಿಸಿದ ಸಾಯಿ ಸುದರ್ಶನ್‌

Sri Lanka A vs India A: ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಭಾರತ, ಪರ ಸುದರ್ಶನ್‌ ಅವರು ಆಯುಷ್ ಪಾಂಡೆ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಿದರು. ಸುದರ್ಶನ್ 175 ಎಸೆತಗಳಲ್ಲಿ 74.43 ಸ್ಟ್ರೈಕ್ ರೇಟ್‌ನಲ್ಲಿ 132 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 19 ಬೌಂಡರಿಗಳು ಸೇರಿದ್ದವು.

ಲಂಕಾ ವಿರುದ್ಧದ ಅನಧಿಕೃತ ಟೆಸ್ಟ್‌ನಲ್ಲಿ ಶತಕ ಬಾರಿಸಿದ ಸುದರ್ಶನ್‌

Sai Sudharsan -

Abhilash BC
Abhilash BC Jun 25, 2026 5:19 PM

ಗಾಲೆ, ಜೂ.25: ಗುರುವಾರ ಗಾಲೆ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆರಂಭಗೊಂಡ ಶ್ರೀಲಂಕಾ ಎ ವಿರುದ್ಧದ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಭಾರತ ಎ ಪರ ಸಾಯಿ ಸುದರ್ಶನ್ ಭರ್ಜರಿ ಶತಕ ಗಳಿಸಿದರು. ಈ ಪ್ರದರ್ಶನದ ಮೂಲಕ ಟೀಕಾಕಾರರಿಗೆ ತಕ್ಕ ಉತ್ತರ ನೀಡಿದರು. ಮಾತ್ರವಲ್ಲದೆ ಭಾರತ ಟೆಸ್ಟ್ ತಂಡದಲ್ಲಿ ಮೂರನೇ ಸ್ಥಾನಕ್ಕೆ ತಾನು ಸೂಕ್ತ ಆಟಗಾರ ಎನ್ನುವುದನ್ನು ಸಾಭೀತುಪಡಿಸಿದ್ದಾರೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಭಾರತ, ಪರ ಸುದರ್ಶನ್‌ ಅವರು ಆಯುಷ್ ಪಾಂಡೆ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಿದರು. ಸುದರ್ಶನ್ 175 ಎಸೆತಗಳಲ್ಲಿ 74.43 ಸ್ಟ್ರೈಕ್ ರೇಟ್‌ನಲ್ಲಿ 132 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 19 ಬೌಂಡರಿಗಳು ಸೇರಿದ್ದವು.

ಅವರ ಇನ್ನಿಂಗ್ಸ್ ಭಾರತ ಎ ತಂಡವು ಕೇವಲ 50 ಓವರ್‌ಗಳಲ್ಲಿ 200 ರನ್‌ಗಳಿಗಿಂತ ಹೆಚ್ಚು ಗಳಿಸಲು ಸಹಾಯ ಮಾಡಿತು. ಆಯುಷ್ ಪಾಂಡೆ 64 ಎಸೆತಗಳಲ್ಲಿ 25, ದೇವದತ್ ಪಡಿಕ್ಕಲ್ 7 ಎಸೆತಗಳಲ್ಲಿ 12 ಮತ್ತು ರುತುರಾಜ್ ಗಾಯಕ್ವಾಡ್ 53 ಎಸೆತಗಳಲ್ಲಿ 22 ರನ್ ಗಳಿಸಿದರು. ತಂಡವನ್ನು ಮುನ್ನಡೆಸುತ್ತಿರುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಧ್ರುವ್ ಜುರೆಲ್ ಅರ್ಧಶತಕ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

ಇದು ಸುದರ್ಶನ್ ಅವರ ಪ್ರಥಮ ದರ್ಜೆ ಪಂದ್ಯಗಳಲ್ಲಿ ಒಂಬತ್ತನೇ ಶತಕ.. ಪ್ರಥಮ ದರ್ಜೆಯಲ್ಲಿ ಅವರ ಅತ್ಯುತ್ತಮ ಸ್ಕೋರ್ 213, ಇದು ರಣಜಿ ಟ್ರೋಫಿ ಪಂದ್ಯದಲ್ಲಿ ದೆಹಲಿ ವಿರುದ್ಧ ಅವರು ಗಳಿಸಿದರು. ಅಫ್ಘಾನಿಸ್ತಾನ ವಿರುದ್ಧದ ಹಿಂದಿನ ಟೆಸ್ಟ್ ಪಂದ್ಯದಲ್ಲಿ, ತಮಿಳುನಾಡು ಬ್ಯಾಟ್ಸ್‌ಮನ್ 81 ರನ್ ಗಳಿಸಿದ್ದರು. ಇಲ್ಲಿಯವರೆಗೆ, ಅವರು ಏಳು ಪಂದ್ಯಗಳಲ್ಲಿ 12 ಇನ್ನಿಂಗ್ಸ್‌ಗಳಲ್ಲಿ 31.92 ಸರಾಸರಿ ಮತ್ತು 43.33 ಸ್ಟ್ರೈಕ್ ರೇಟ್‌ನಲ್ಲಿ 383 ರನ್ ಗಳಿಸಿದ್ದಾರೆ. ಇದರಲ್ಲಿ ಮೂರು ಅರ್ಧಶತಕಗಳು ಸೇರಿವೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಗಳಿಸಿದ 165 ಎಸೆತಗಳಲ್ಲಿ 87 ರನ್ ಅವರ ಅತ್ಯುತ್ತಮ ಪ್ರದರ್ಶನವಾಗಿದೆ.