ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ICICI Bank: ಉಳಿತಾಯ ಖಾತೆಗಳ ಕನಿಷ್ಠ ಬ್ಯಾಲೆನ್ಸ್ ಮೊತ್ತ 50,000 ರೂ.ಗೆ ಹೆಚ್ಚಳ

ಐಸಿಐಸಿಐ ಬ್ಯಾಂಕ್ ತನ್ನ ಉಳಿತಾಯ ಖಾತೆಗಳಿಗೆ ಕನಿಷ್ಠ ಸರಾಸರಿ ಬ್ಯಾಲೆನ್ಸ್ ಅನ್ನು ಹೆಚ್ಚಿಸುವ ಕುರಿತು ಶನಿವಾರ ಘೋಷಣೆ ಮಾಡಿದ್ದು ಇದು ಆಗಸ್ಟ್ 1ರಿಂದಲೇ ಜಾರಿಯಾಗಿದೆ. ಮೆಟ್ರೋ ಮತ್ತು ನಗರ ಪ್ರದೇಶಗಳಲ್ಲಿನ ಗ್ರಾಹಕರಿಗೆ, ಕನಿಷ್ಠ ಸರಾಸರಿಯನ್ನು 10,000 ರೂ.ಯಿಂದ 50,000 ರೂ.ಗೆ ಹೆಚ್ಚಿಸಲಾಗಿದೆ ಎಂದು ತಿಳಿಸಿದೆ.

ಐಸಿಐಸಿಐ: ಉಳಿತಾಯ ಖಾತೆ ಕನಿಷ್ಠ ಬ್ಯಾಲೆನ್ಸ್ ಮೊತ್ತ ಹೆಚ್ಚಳ

ದೆಹಲಿ: ಗ್ರಾಹಕರ ಜೇಬಿಗೆ ಭಾರವಾಗುವ ಘೋಷಣೆಯೊಂದನ್ನು ಐಸಿಐಸಿಐ ಬ್ಯಾಂಕ್ (ICICI Bank) ಪ್ರಕಟಿಸಿದೆ. ಬ್ಯಾಂಕ್ ತನ್ನ ಉಳಿತಾಯ ಖಾತೆಗಳ (Savings accounts) ಕನಿಷ್ಠ ಬ್ಯಾಲೆನ್ಸ್ ಅನ್ನು 10,000 ರೂ.ಯಿಂದ 50,000 ರೂ.ಗೆ ಹೆಚ್ಚಿಸಿದೆ. ಮೆಟ್ರೋ (Metro) ಮತ್ತು ನಗರ ಪ್ರದೇಶಗಳಲ್ಲಿನ (Urban areas) ಗ್ರಾಹಕರ ಉಳಿತಾಯ ಖಾತೆಗಳ ಕನಿಷ್ಠ ಮೊತ್ತವನ್ನು 10,000 ರೂ.ಯಿಂದ 50,000 ರೂ. ಹೆಚ್ಚಿಸಲಾಗಿದೆ. ಈ ಹೊಸ ನಿಯಮವನ್ನು ಮೆಟ್ರೋ ಮತ್ತು ನಗರ ಪ್ರದೇಶಗಳಲ್ಲಿನ ಎಲ್ಲ ಶಾಖೆಗಳಲ್ಲಿ ಆಗಸ್ಟ್ 1ರಿಂದ ಜಾರಿಗೊಳಿಸಲಾಗಿದೆ.

ಐಸಿಐಸಿಐ ಬ್ಯಾಂಕ್ ತನ್ನ ಉಳಿತಾಯ ಖಾತೆಗಳಿಗೆ ಕನಿಷ್ಠ ಸರಾಸರಿ ಬ್ಯಾಲೆನ್ಸ್ ಅನ್ನು ಹೆಚ್ಚಿಸುವ ಕುರಿತು ಶನಿವಾರ ಘೋಷಣೆ ಮಾಡಿದ್ದು, ಇದು ಆಗಸ್ಟ್ 1ರಿಂದಲೇ ಜಾರಿಯಾಗಿದೆ ಎಂದು ತಿಳಿಸಿದೆ.

ಮೆಟ್ರೋ ಮತ್ತು ನಗರ ಪ್ರದೇಶಗಳಲ್ಲಿನ ಗ್ರಾಹಕರಿಗೆ, ಕನಿಷ್ಠ ಸರಾಸರಿಯನ್ನು 10,000 ರೂ.ಯಿಂದ 50,000 ರೂ.ಗೆ ಹೆಚ್ಚಿಸಲಾಗಿದೆ. ಅರೆ-ನಗರ ಪ್ರದೇಶಗಳಲ್ಲಿ ಇದು 5,000 ರೂ.ಯಂದ 25,000 ರೂ.ಗೆ ಹೆಚ್ಚಿಸಲಾಗಿದೆ. ಗ್ರಾಮೀಣ ಶಾಖೆಗಳಲ್ಲಿ ಕನಿಷ್ಠ ಮೊತ್ತ 2,500 ರೂ.ಯಿಂದ 10,000 ರೂ.ಗೆ ಹೆಚ್ಚಿಸಲಾಗಿದೆ.

ಉಳಿತಾಯ ಖಾತೆಗಳ ಕನಿಷ್ಠ ಮೊತ್ತದ ಹೆಚ್ಚಳವು ಗ್ರಾಹಕರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಇದು ಗ್ರಾಮೀಣ ಮತ್ತು ಅರೆ-ನಗರ ಪ್ರದೇಶಗಳ ಗ್ರಾಹಕರ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ. ಕನಿಷ್ಠ ಮೊತ್ತ ಕಾಯ್ದುಕೊಳ್ಳಲು ಸಾಧ್ಯವಾಗದ ಗ್ರಾಹಕರಿಗೆ ಬ್ಯಾಂಕ್ ದಂಡ ವಿಧಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: Rakshabandhan: ಪಾಕ್‌ ಜೈಲಿನಲ್ಲಿ ತಮ್ಮ ಬಂಧಿ: 14 ವರ್ಷಗಳಿಂದ ರಾಖಿ ಕಟ್ಟಲು ಕಾಯುತ್ತಿರುವ ಸಹೋದರಿಯ ಕರುಣಾಜನಕ ಕಥೆ ಇದು

ಮಾಸಿಕ ಸರಾಸರಿ ಬ್ಯಾಲೆನ್ಸ್ ಕಾಯ್ದುಕೊಳ್ಳಲು ವಿಫಲರಾದ ಗ್ರಾಹಕರಿಗೆ ಬ್ಯಾಂಕ್ ಶೇ. 6 ಅಥವಾ 500 ರೂ. ಇದರಲ್ಲಿ ಯಾವುದು ಕಡಿಮೆಯೋ ಅದನ್ನು ದಂಡವಾಗಿ ವಿಧಿಸಲಾಗುತ್ತದೆ. ಇನ್ನು ಗ್ರಾಹಕರು ನಿರ್ದಿಷ್ಟ ಮಾನದಂಡಗಳನ್ನು ಪೂರೈಸಿದರೆ ಈ ಶುಲ್ಕಗಳನ್ನು ಮನ್ನಾ ಮಾಡಲಾಗುತ್ತದೆ ಎಂದು ಐಸಿಐಸಿಐ ಬ್ಯಾಂಕ್ ತಿಳಿಸಿದೆ.

ಕುಟುಂಬ ಬ್ಯಾಂಕಿಂಗ್ ಸೌಲಭ್ಯ ಪಡೆದುಕೊಂಡಿರುವವರು ಅರ್ಹತಾ ಮಾನದಂಡಗಳ 1.5 ಪಟ್ಟು ಹೆಚ್ಚು ಬ್ಯಾಲೆನ್ಸ್ ಕಾಯ್ದುಕೊಳ್ಳಬೇಕು. ಇಲ್ಲವಾದರೆ ನಿರ್ವಹಣೆಯಿಲ್ಲದ ಶುಲ್ಕಗಳನ್ನು ಪ್ರತ್ಯೇಕವಾಗಿ ಅನ್ವಯಿಸಲಾಗುತ್ತದೆ. ಪಿಂಚಣಿದಾರರಿಗೆ ಈ ಶುಲ್ಕಗಳಿಂದ ವಿನಾಯಿತಿ ಇದೆ. ಚೆಕ್ ಅಮಾನ್ಯವಾದರೆ ಪ್ರತಿ 200 ರೂ. ಶುಲ್ಕ ವಿಧಿಸಲಾಗುತ್ತದೆ.