ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

SMAT 2025: 56 ಎಸೆತಗಳಲ್ಲಿ 95 ರನ್‌ ಚಚ್ಚಿದ ಅಜಿಂಕ್ಯ ರಹಾನೆ, ಕೆಕೆಆರ್ ಫುಲ್‌ ಖುಷ್‌!

ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಮುಂಬೈ ತಂಡ, ಒಡಿಶಾ ತಂಡವನ್ನು 9 ವಿಕೆಟ್‌ಗಳಿಂದ ಸೋಲಿಸಿ ಎಲೈಟ್ ಗ್ರೂಪ್ ಎ ನಲ್ಲಿ ಅಗ್ರಸ್ಥಾನ ಗಳಿಸಿತು. ನಾಯಕ ಅಜಿಂಕ್ಯ ರಹಾನೆ ಅಜೇಯ 95 ರನ್‌ಗಳೊಂದಿಗೆ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಈ ಗೆಲುವಿನೊಂದಿಗೆ ಮುಂಬೈ ಸೂಪರ್ ಲೀಗ್‌ಗೆ ಅರ್ಹತೆ ಪಡೆಯಿತು.

56 ಎಸೆತಗಳಲ್ಲಿ 95 ರನ್‌ ಸಿಡಿಸಿದ ಅಜಿಂಕ್ಯ ರಹಾನೆ!

ಸ್ಪೋಟಕ ಅರ್ಧಶತಕ ಸಿಡಿಸಿದ ಅಜಿಂಕ್ಯ ರಹಾನೆ. -

Profile
Ramesh Kote Dec 9, 2025 12:28 AM

ಲಖನೌ: ಸೈಯದ್ ಮುಷ್ತಾಕ್ ಅಲಿ ಟ್ರೋಫಿ‌ (Syed Mushtaq Ali T20 Trophy) ಟೂರ್ನಿಯಲ್ಲಿ ಮುಂಬೈ ತಂಡ, ಅಜಿಂಕ್ಯ ರಹಾನೆ (Ajinkya Rahane) ಸ್ಪೋಟಕ ಬ್ಯಾಟಿಂಗ್‌ ಬಲದಿಂದ ಒಡಿಶಾ ತಂಡವನ್ನು ಒಂಬತ್ತು ವಿಕೆಟ್‌ಗಳಿಂದ ಸೋಲಿಸಿ ಎಲೈಟ್ ಗ್ರೂಪ್ ಎ ನಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿತು. ಆಮೂಲಕ ಸೂಪರ್‌ ಲೀಗ್‌ ಹಂತಕ್ಕೆ ಮುಂಬೈ ತಂಡ ಅರ್ಹತೆ ಪಡೆಯಿತು. ಅನುಭವಿ ಬ್ಯಾಟ್ಸ್‌ಮನ್ ಮತ್ತು ನಾಯಕ ಅಜಿಂಕ್ಯ ರಹಾನೆ ಅಜೇಯ 95 ರನ್‌ಗಳೊಂದಿಗೆ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು. ರಹಾನೆ ತಮ್ಮ ಸ್ಪೋಟಕ ಪ್ರದರ್ಶನದಿಂದ ಕೋಲ್ಕತ್ತಾ ನೈಟ್ ರೈಡರ್ಸ್ (KKR) ಗೆ ಪ್ರಮುಖ ಸಕಾರಾತ್ಮಕ ಸಂದೇಶವನ್ನು ರವಾನಿಸಿದ್ದಾರೆ.

ಸೋಮವಾರ ಇಲ್ಲಿನ ಏಕನಾ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಎಲೈಟ್‌ ಎ ಗುಂಪಿನ ಪಂದ್ಯದಲ್ಲಿ 168 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಮುಂಬೈ ಪರ ಅಜಿಂಕ್ಯ ರಹಾನೆ ಆಕ್ರಮಣಕಾರಿಯಾಗಿ ಇನಿಂಗ್ಸ್‌ ಆರಂಭಿಸಿದರು. ಅವರು ಸರ್ಫರಾಝ್ ಖಾನ್ (15 ಎಸೆತಗಳಲ್ಲಿ 28) ಅವರೊಂದಿಗೆ 74 ರನ್‌ಗಳ ಆರಂಭಿಕ ಜೊತೆಯಾಟವನ್ನು ಆಡಿದರು. ಸರ್ಫರಾಝ್‌ ಖಾನ್‌ 15 ಎಸೆತಗಳಲ್ಲಿ 28 ರನ್‌ಗಳನ್ನು ಗಳಿಸಿ ಔಟಾದರು.ನಂತರ, ರಹಾನೆ ಆಕ್ರಮಣಶೀಲತೆ ಮತ್ತು ಕ್ಲಾಸಿಕ್ ಹೊಡೆತಗಳ ಪರಿಪೂರ್ಣ ಮಿಶ್ರಣವನ್ನು ಪ್ರದರ್ಶಿಸುತ್ತಾ ಒಂದು ಕಡೆ ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತರು.

KAR vs TRI: ಕರ್ನಾಟಕ ತಂಡಕ್ಕೆ ಹ್ಯಾಟ್ರಿಕ್‌ ಸೋಲಿನ ಆಘಾತ, ಸೂಪರ್‌ ಓವರ್‌ನಲ್ಲಿ ಗೆದ್ದ ತ್ರಿಪುರ!

ಅಜಿಂಕ್ಯ ರಹಾನೆ 56 ಎಸೆತಗಳಲ್ಲಿ ಒಂಬತ್ತು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳೊಂದಿಗೆ ಅಜೇಯ 95 ರನ್ ಗಳಿಸಿದರು. ಅವರಿಗೆ ಯುವ ಬ್ಯಾಟರ್‌ ಅಂಗ್‌ಕ್ರಿಶ್ ರಘುವಂಶಿ (26 ಎಸೆತಗಳಲ್ಲಿ 38) ಉತ್ತಮ ಬೆಂಬಲ ನೀಡಿದರು. ಮುಂಬೈ ತಂಡವು ಕೇವಲ 16 ಓವರ್‌ಗಳಲ್ಲಿ ಗುರಿಯನ್ನು ತಲುಪಿತು. ಆ ಮೂಲಕ ಇನ್ನೂ 24 ಎಸೆತಗಳನ್ನು ಉಳಿಸಿತು. ಈ ದೇಶಿ ಋತುವಿನಲ್ಲಿ ರಹಾನೆ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಅವರು ಏಳು ಪಂದ್ಯಗಳಲ್ಲಿ 48.16ರ ಸರಾಸರಿ ಮತ್ತು 158.79 ಸ್ಟ್ರೈಕ್ ರೇಟ್‌ನಲ್ಲಿ 289 ರನ್‌ಗಳನ್ನು ಸಿಡಿಸಿದ್ದಾರೆ. ಇದು ಕೆಕೆಆರ್‌ ಮುಖದಲ್ಲಿ ಮಂದಹಾಸವನ್ನು ಮೂಡಿಸಿದೆ.

IND vs SA: ತಮಗೆ ಭೀತಿ ಹುಟ್ಟಿಸಿರುವ ಭಾರತೀಯ ಬ್ಯಾಟ್ಸ್‌ಮನ್‌ ಹೆಸರಿಸಿದ ಏಡೆನ್‌ ಮಾರ್ಕ್ರಮ್!

ಈ ಗೆಲುವಿನೊಂದಿಗೆ, ಮುಂಬೈ ತಂಡವು ಏಳು ಪಂದ್ಯಗಳಲ್ಲಿ ಆರು ಗೆಲುವುಗಳೊಂದಿಗೆ ಎಲೈಟ್ ಗ್ರೂಪ್ ಎ ನಲ್ಲಿ ಅಗ್ರಸ್ಥಾನದಲ್ಲಿದೆ. ಆ ಮೂಲಕ ಮುಂಬೈ ತಂಡ ಮುಂದಿನ ಹಂತವಾದ ಸೂಪರ್ ಲೀಗ್‌ಗೆ ಅಧಿಕೃತವಾಗಿ ಪ್ರವೇಶ ಮಾಡಿದೆ. ಅಲ್ಲಿ ಅವರು ಗ್ರೂಪ್ ಎ ನಲ್ಲಿ ಹೈದರಾಬಾದ್, ಹರಿಯಾಣ ಮತ್ತು ರಾಜಸ್ಥಾನವನ್ನು ಎದುರಿಸಲಿದ್ದಾರೆ. ಮುಂಬೈ ಅತ್ಯುತ್ತಮ ಫಾರ್ಮ್‌ನಲ್ಲಿದೆ ಮತ್ತು ಟೂರ್ನಿಯಲ್ಲಿ ಗೆಲ್ಲುವ ಪ್ರಬಲ ಸ್ಪರ್ಧಿಗಳೆಂದು ಪರಿಗಣಿಸಲಾಗಿದೆ.

ಕೆಕೆಆರ್‌ಗೆ ಸಕಾರಾತ್ಮಕ ಸಂದೇಶ ರವಾನಿಸಿದ ರಹಾನೆ

ಅಜಿಂಕ್ಯ ರಹಾನೆ ಅವರು 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ ತಂಡವನ್ನು ಮುನ್ನಡೆಸಿದ್ದರು. ಆದರೆ, ಕೆಕೆಆರ್‌ ಪ್ಲೇಆಫ್ಸ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿತ್ತು. ಆದರೂ, 2026ರ ಐಪಿಎಲ್‌ ನಿಮಿತ್ತ ಕೋಲ್ಕತಾ ಫ್ರಾಂಚೈಸಿ ಮುಂಬೈ ನಾಯಕನನ್ನು ಉಳಿಸಿಕೊಂಡಿದೆ. ಇದೀಗ ಅವರು ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟೂರ್ನಿಯಲ್ಲಿನ ತಮ್ಮ ಪ್ರದರ್ಶನದಿಂದ ಕೆಕೆಆರ್‌ಗೆ ಭರವಸೆ ಮೂಡಿಸಿದ್ದಾರೆ.