ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Budget 2026: ಫೆಬ್ರವರಿ 1ರಂದು ಭಾನುವಾರವೇ ಬಜೆಟ್ ಮಂಡನೆ ಮಾಡ್ತಾರಾ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ?

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ದಾಖಲೆಯ ಸತತ ಒಂಬತ್ತನೇ ಬಜೆಟ್ ಅನ್ನು ಈ ಬಾರಿ ಮಂಡಿಸಲಿದ್ದಾರೆ. ಕೇಂದ್ರ ಬಜೆಟ್ 2026 ಅನ್ನು ಫೆಬ್ರವರಿ 1ರಂದು ಭಾನುವಾರ ಮಂಡಿಸುವ ಸಾಧ್ಯತೆ ಇದ್ದು, ಒಂದು ವೇಳೆ ಇದು ಸಾಧ್ಯವಾದರೆ ಇದೊಂದು ದಾಖಲೆಯಾಗಲಿದೆ. 2025 ರಲ್ಲಿ ಮಂಡಿಸಲಾದ ಮೊದಲ ಪೂರ್ಣ ಬಜೆಟ್ ಬಳಿಕ ಇದು ಮೋದಿ 3.0 ಸರ್ಕಾರದ ಎರಡನೇ ಪೂರ್ಣ ಬಜೆಟ್ ಆಗಲಿದೆ.

ಫೆಬ್ರವರಿ 1ರಂದು ಭಾನುವಾರವೇ ಬಜೆಟ್ ಮಂಡನೆ ?

(ಸಂಗ್ರಹ ಚಿತ್ರ) -

ನವದೆಹಲಿ: ಕೇಂದ್ರ ಬಜೆಟ್ 2026 (Budget 2026) ಅನ್ನು ಹಣಕಾಸು ಸಚಿವೆ (Finance Minister) ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಫೆಬ್ರವರಿ 1ರಂದು ಭಾನುವಾರ ಮಂಡಿಸುವ ಸಾಧ್ಯತೆ ಇದೆ. ಇದು ಅವರ ದಾಖಲೆಯ ಸತತ ಒಂಬತ್ತನೇ ಬಜೆಟ್ ಮಂಡನೆಯಾಗಿದೆ. ಇದು ಪೂರ್ಣಗೊಂಡರೆ ಅದೊಂದು ದಾಖಲೆಯಾಗಲಿದೆ. 2025ರಲ್ಲಿ ಮಂಡಿಸಲಾದ ಮೊದಲ ಪೂರ್ಣ ಬಜೆಟ್ ಬಳಿಕ ಇದು ಮೋದಿ 3.0 ಸರ್ಕಾರದ ಎರಡನೇ ಪೂರ್ಣ ಬಜೆಟ್ ಆಗಲಿದೆ. 2017ರ ಬಳಿಕ ಮೋದಿ ಸರ್ಕಾರ ಬಜೆಟ್ ಮಂಡನೆ ದಿನವನ್ನು ಫೆಬ್ರವರಿ 1 ಎಂದು ನಿಗದಿ ಪಡಿಸಿತ್ತು. ಇದಕ್ಕೂ ಮೊದಲು ಫೆಬ್ರವರಿ 28ರಂದು ಬಜೆಟ್ ಮಂಡನೆ ಮಾಡಲಾಗುತ್ತಿತ್ತು.

2026ರ ಬಜೆಟ್ ನಲ್ಲಿ ಹೆಚ್ಚಿನ ತೆರಿಗೆಗಳು, ಜೀವನ ವೆಚ್ಚ ಮತ್ತು ಮನೆಯ ಹಣಕಾಸುಗಳ ಮೇಲೆ ಪರಿಣಾಮ ಬೀರುವ ಯೋಜನೆಗಳ ಮೇಲೆ ಗಮನ ಹರಿಸುವ ಸಾಧ್ಯತೆ ಇದೆ. 2026ರ ಬಜೆಟ್‌ ಮಂಡನೆಯೊಂದಿಗೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸತತ ಒಂಬತ್ತನೇ ಬಜೆಟ್ ಮಂಡನೆ ಮಾಡಿದಂತಾಗುತ್ತದೆ.

77ನೇ ಗಣರಾಜ್ಯೋತ್ಸವ ಆಚರಣೆಗೆ ಸಿದ್ಧತೆ; ಟಿಕೆಟ್ ಮಾರಾಟ ಆರಂಭ, ವೇಳಾಪಟ್ಟಿ ಬಿಡುಗಡೆ, ಅಭ್ಯಾಸ ಶುರು

ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ಸತತ 10 ಕೇಂದ್ರ ಬಜೆಟ್‌ ಮಂಡಿಸಿರುವುದು ಈಗಾಗಲೇ ದಾಖಲೆಯಾಗಿ ಉಳಿದಿದೆ. 2024ರ ಮಧ್ಯಂತರ ಬಜೆಟ್ ಸೇರಿದಂತೆ ಈಗಾಗಲೇ ಎಂಟು ಸತತ ಬಜೆಟ್‌ಗಳನ್ನು ಮಂಡಿಸಿದ ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ. ಒಂದೇ ಪ್ರಧಾನ ಮಂತ್ರಿಯ ಅಧಿಕಾರಾವಧಿಯಲ್ಲಿ ಸತತ ಒಂಬತ್ತು ಬಜೆಟ್‌ಗಳನ್ನು ಮಂಡಿಸಿದ ಏಕೈಕ ಹಣಕಾಸು ಸಚಿವರು ಎನ್ನುವ ಖ್ಯಾತಿಗೆ ಇವರು ಪಾತ್ರರಾಗಲಿದ್ದಾರೆ.

ಬಜೆಟ್ ಮಂಡನೆ ಇತಿಹಾಸ

ಸ್ವಾತಂತ್ರ್ಯ ಭಾರತದ ಮೊದಲ ಕೇಂದ್ರ ಬಜೆಟ್ ಅನ್ನು 1947ರ ನವೆಂಬರ್ 26ರಂದು ದೇಶದ ಮೊದಲ ಹಣಕಾಸು ಸಚಿವ ಆರ್.ಕೆ. ಷಣ್ಮುಖಂ ಚೆಟ್ಟಿ ಮಂಡಿಸಿದ್ದರು. ಇದರ ಬಳಿಕ ಹಲವು ದಶಕಗಳವರೆಗೆ ಫೆಬ್ರವರಿಯ ಕೊನೆಯ ಕೆಲಸದ ದಿನದಂದು ಸಂಜೆ 5 ಗಂಟೆಗೆ ಬಜೆಟ್ ಮಂಡನೆ ಮಾಡಲಾಗುತ್ತಿತ್ತು.

ಇದರ ಬಳಿಕ 1999ರಲ್ಲಿ ಹಣಕಾಸು ಸಚಿವರಾಗಿದ್ದ ಯಶವಂತ್ ಸಿನ್ಹಾ ಅವರು ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಬಜೆಟ್ ಮಂಡನೆಯ ಸಮಯವನ್ನು ಬೆಳಗ್ಗೆ 11 ಗಂಟೆಗೆ ಬದಲಾಯಿಸಿದರು. ಈ ಸಮಯ ಈಗಲೂ ಮುಂದುವರಿದಿದೆ. ಆದರೆ ಬಜೆಟ್ ಮಂಡನೆ ದಿನಾಂಕವನ್ನು 2017ರಲ್ಲಿ ಸಂಸತ್ತಿನ ಅನುಮೋದನೆಯೊಂದಿಗೆ ಫೆಬ್ರವರಿ 1ಕ್ಕೆ ಬದಲಾಯಿಸಲಾಯಿತು.

ಏಪ್ರಿಲ್ 1ರಿಂದ ಹಣಕಾಸು ವರ್ಷದ ಆರಂಭವಾಗುವುದರಿಂದ ಇದರೊಂದಿಗೆ ಹೊಂದಿಕೆಯಾಗಲು ಯೋಜನೆಗಳ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಬಜೆಟ್ ದಿನಾಂಕವನ್ನು ಫೆಬ್ರವರಿ 28ರ ಬದಲು ಫೆಬ್ರವರಿ 1ಕ್ಕೆ ನಿಗದಿಪಡಿಸಿತ್ತು. ಈ ಯೋಜನೆಗಳ ಅನುಷ್ಠಾನ ವಿಳಂಬವಾಗಿ ಮೇ ಅಥವಾ ಜೂನ್‌ಗೆ ಮುಂದೂಡಲ್ಪಡುತ್ತಿತ್ತು. ಆದರೆ ಈಗ ಇದು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ.

ಹೆಚ್ಚು ಬಜೆಟ್ ಮಂಡಿಸಿದವರು

ಮೊರಾರ್ಜಿ ದೇಸಾಯಿ ಅವರು 10 ಬಜೆಟ್‌ಗಳನ್ನು ಮಂಡಿಸಿದ್ದಾರೆ. ಇವರು ಭಾರತದ ಇತಿಹಾಸದಲ್ಲಿ ಅತಿ ಹೆಚ್ಚು ಕೇಂದ್ರ ಬಜೆಟ್‌ಗಳನ್ನು ಮಂಡಿಸಿದವರು. 1959 ಮತ್ತು 1964 ರ ನಡುವೆ ಆರು ಮತ್ತು 1967 ಮತ್ತು 1969 ರ ನಡುವೆ ನಾಲ್ಕು ಬಜೆಟ್ ಗಳನ್ನು ಪ್ರಧಾನ ಮಂತ್ರಿಗಳಾದ ಜವಾಹರಲಾಲ್ ನೆಹರು ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಆಡಳಿತದಲ್ಲಿ ಮಂಡಿಸಿದ್ದರು.

ಪಿ. ಚಿದಂಬರಂ ಅವರು 9 ಬಜೆಟ್‌ಗಳನ್ನು ಮಂಡಿಸಿದ್ದಾರೆ. 1996 ರಲ್ಲಿ ಯುನೈಟೆಡ್ ಫ್ರಂಟ್ ಸರ್ಕಾರದ ಅವಧಿಯಲ್ಲಿ ಮತ್ತು ಬಳಿಕ 2004 ಮತ್ತು 2009 ರ ನಡುವೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅಡಿಯಲ್ಲಿ ಹಲವು ಬಜೆಟ್ ಗಳನ್ನು ಮಂಡಿಸಿದರು.

ಪ್ರಣಬ್ ಮುಖರ್ಜಿ ಅವರು 8 ಬಜೆಟ್‌ ಮಂಡಿಸಿದ್ದು, ಇದರಲ್ಲಿ ಯುಪಿಎ ಸರ್ಕಾರದ ಅಡಿಯಲ್ಲಿ 2009 ರಿಂದ 2012 ರವರೆಗೆ ಐದು ಸತತ ಬಜೆಟ್‌ಗಳನ್ನು ಮಂಡಿಸಿದರು.

Bigg Boss Kannada 12: ಅಶ್ವಿನಿ-ಧ್ರುವಂತ್ ಮೇಲೆ ದ್ವೇಷದ ನೀರೆರಚಾಟ! ಚುಚ್ಚು ಮಾತುಗಳನ್ನಾಡಿದ ರಾಶಿಕಾ

ಪ್ರಧಾನಿಯಾಗುವ ಮೊದಲು ಡಾ. ಮನಮೋಹನ್ ಸಿಂಗ್ ಅವರು ಪ್ರಧಾನಿ ಪಿ.ವಿ. ನರಸಿಂಹ ರಾವ್ ಅವರ ಆಡಳಿತ ಅವಧಿಯಲ್ಲಿ ಹಣಕಾಸು ಸಚಿವರಾಗಿದ್ದು, ಈ ವೇಳೆ 1991 ಮತ್ತು 1995 ರ ನಡುವೆ ಅವರು ಐದು ಸತತ ಬಜೆಟ್‌ಗಳನ್ನು ಮಂಡಿಸಿದರು. ಇದರಲ್ಲಿ 1991ರ ಬಜೆಟ್ ಭಾರತದ ಆರ್ಥಿಕ ಉದಾರೀಕರಣಕ್ಕೆ ನಾಂದಿ ಹಾಡಿತ್ತು.

ಬಜೆಟ್ ಭಾಷಣ

ಅತಿದೀರ್ಘ ಬಜೆಟ್ ಭಾಷಣದಲ್ಲಿ ದಾಖಲೆ ನಿರ್ಮಲಾ ಸೀತಾರಾಮನ್ ಅವರದ್ದೇ ಆಗಿದೆ. ಇವರು 2020ರಲ್ಲಿ ಮಂಡಿಸಿದ ಬಜೆಟ್ ಭಾಷಣವು 2 ಗಂಟೆ 40 ನಿಮಿಷಗಳ ಕಾಲ ಅವಧಿಯದ್ದಾಗಿತ್ತು. ಅತ್ಯಂತ ಕಡಿಮೆ ಬಜೆಟ್ ಭಾಷಣ 1977 ರಲ್ಲಿ ಹಿರುಭಾಯ್ ಮುಲ್ಜಿಭಾಯ್ ಪಟೇಲ್ ಅವರದ್ದಾಗಿದೆ. ಇವರ ಬಜೆಟ್ ಭಾಷಣ ಕೇವಲ 800 ಪದಗಳದ್ದಾಗಿತ್ತು.