MLA S.N.Narayanaswamy: ಹೊಲೆಯ ಸಮುದಾಯದ ಸಬಲೀಕರಣಕ್ಕೆ ಸಂಘಟಿತರಾಗುವುದು ಮುಖ್ಯ: ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅಭಿಮತ
ಇತಿಹಾಸದಲ್ಲಿ ಭೂಮಾಲೀಕರು, ಯೋಧರು ಆಗಿದ್ದ ನಮ್ಮ ಸಮುದಾಯವು ಬದಲಾದ ಕಾಲ ಘಟ್ಟದಲ್ಲಿ ತೀರಾ ನಿಕೃಷ್ಟವಾದ ಬದುಕನ್ನು ಬದುಕಲು ಪ್ರಾರಂಭಿಸಿದರು. ಬಾಬಾ ಸಾಹೇಬರ ಜನನದ ಕಾರಣವಾಗಿ ಇಂದು ನಾವು ಘನತೆಯ ಬದುಕನ್ನು ಬದುಕಲು ಸಾಧ್ಯವಾಗಿದೆ. ಅಂಬೇಡ್ಕರ್ ವಂಶಸ್ಥರಾದ ನಾವು ಅವರಂತೆ ಆಗಲು ಪ್ರಯತ್ನಿಸಬೇಕು.
ಹೊಲೆಯ ಸಮುದಾಯದ ಸಬಲೀಕರಣವು ಶಿಕ್ಷಣ ಆರ್ಥಿಕ ಸ್ವಾವಲಂಬನೆ, ರಾಜಕೀಯ ಪ್ರಾತಿನಿಧ್ಯ ಮತ್ತು ಸಾಮಾಜಿಕ ಸಮಾಜತೆಯಿಂದ ಮಾತ್ರ ಸಾಧ್ಯ. ಇದಾಗಬೇಕಾದರೆ ಮೊದಲು ಹೊಲೆಯರೆಲ್ಲಾ ಸಂಘಟಿತರಾಗಬೇಕು ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಕರೆ ನೀಡಿದರು. -
ಚಿಕ್ಕಬಳ್ಳಾಪುರ: ಹೊಲೆಯ ಸಮುದಾಯದ ಸಬಲೀಕರಣವು ಶಿಕ್ಷಣ ಆರ್ಥಿಕ ಸ್ವಾವಲಂಬನೆ, ರಾಜಕೀಯ ಪ್ರಾತಿನಿಧ್ಯ ಮತ್ತು ಸಾಮಾಜಿಕ ಸಮಾಜತೆಯಿಂದ ಮಾತ್ರ ಸಾಧ್ಯ. ಇದಾಗಬೇಕಾದರೆ ಮೊದಲು ಹೊಲೆಯರೆಲ್ಲಾ ಸಂಘಟಿತರಾಗಬೇಕು ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ(MLA S.N. Narayanaswamy) ಕರೆ ನೀಡಿದರು.
ನಗರದ ಕನ್ನಡ ಭವನದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಬಲಗೈಜಾತಿಗಳ ಒಕ್ಕೂಟದ ವತಿ ಯಿಂದ ಏರ್ಪಡಿಸಿದ್ದ ಜಿಲ್ಲಾ ಮತ್ತು ತಾಲೂಕು ಪದಾಧಿಕಾರಿಗಳ ಪದಗ್ರಹಣ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇತಿಹಾಸದಲ್ಲಿ ಭೂಮಾಲೀಕರು, ಯೋಧರು ಆಗಿದ್ದ ನಮ್ಮ ಸಮುದಾಯವು ಬದಲಾದ ಕಾಲಘಟ್ಟದಲ್ಲಿ ತೀರಾ ನಿಕೃಷ್ಟವಾದ ಬದುಕನ್ನು ಬದುಕಲು ಪ್ರಾರಂಭಿಸಿದರು. ಬಾಬಾ ಸಾಹೇಬರ ಜನನದ ಕಾರಣವಾಗಿ ಇಂದು ನಾವು ಘನತೆಯ ಬದುಕನ್ನು ಬದುಕಲು ಸಾಧ್ಯ ವಾಗಿದೆ. ಅಂಬೇಡ್ಕರ್ ವಂಶಸ್ಥರಾದ ನಾವು ಅವರಂತೆ ಆಗಲು ಪ್ರಯತ್ನಿಸಬೇಕು. ಆಧುನಿಕ ಶಿಕ್ಷಣ,ಕೌಶಲ್ಯಾಭಿವೃದ್ದಿ,ಮೀಸಲಾತಿಯ ಸದ್ಬಳಕೆ ಮತ್ತು ಸಾಮಾಜಿಕ ತಾರತಮ್ಯದ ವಿರುದ್ದ ಸಂಘಟಿತ ಹೋರಾಟದ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಲಿದೆ ಎಂದರು.
ಇದನ್ನೂ ಓದಿ: Virajpet MLA A S Ponnanna Interview: ನಾಯಕತ್ವದ ಬಗ್ಗೆ ಸಿಎಂ-ಡಿಸಿಎಂ ಮಧ್ಯೆ ಚರ್ಚೆಯಾಗಿದೆ
ಸಮುದಾಯದ ಹೆಸರು ಹೇಳಲು ಭಯ ಬೇಡ. ಅವಕಾಶಗಳಿಂದ ವಂಚಿತರಾಗುವುದು ಬೇಡ. ನಾಚಿಕೆ ಅದು ಇದು ಎನ್ನದೆ ನಮಗಿರುವ ಸಮಾನ ಅವಕಾಶಗಳನ್ನು ಕೇಳಿ. ಏನಾದರೂ ಅಚಲವಾದ ಗುರಿ ಸಾಧಿಸಬೇಕೆಂಬ ಹಠವಿರಲಿ. ಉದ್ದಿಮೆಗೆಳನ್ನು ಸ್ಥಾಪಿಸಿ ಮುಂದೆ ಬಂದು ಉದ್ಯಮಪತಿಗಳಾಗಿ, ಇದಕ್ಕೆ ಬೇಕಾದ ನೆರವನ್ನು ಸರಕಾರದಿಂದ ಕೊಡಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಕರೆ ನೀಡಿದರು.
ಒಳಮೀಸಲಾತಿಯ ಅಪಾಯದಿಂದ ಸಮುದಾಯವನ್ನು ಪಾರು ಮಾಡಲು ಒಗ್ಗಟ್ಟಿನ ಹೋರಾಟ ಅಗತ್ಯ. ಈವರೆಗೆ ನಾವು ಕೇವಲ ಮತದಾರರಾಗಿ ನಾವು ಬಳಕೆಯಾಗಿದ್ದೇವೆ. ಭವಿಷ್ಯದಲ್ಲಿ ಹೀಗಾಗದಂತೆ ನಮ್ಮಲ್ಲಿಯೇ ನಾಯಕರಾಗಿ ಬೆಳೆಯುವ ಗುಣವನ್ನು ಬೆಳೆಸಿ ಕೊಳ್ಳಬೇಕು. ಸಂಘಟಿತ ಮಾಡಲಿಲ್ಲ ಎಂದರೆ ಭವಿಷ್ಯದಲ್ಲಿ ಕಷ್ಟ ಆಗಲಿದೆ. ಈ ಭಾಗದಲ್ಲಿ ಬಹಳ ಹಿಂದೆಯೇ ರಾಜಕೀಯದಲ್ಲಿ ಹೊಲೆಯ ಸಮುದಾಯದ ಪ್ರಾತಿನಿಧ್ಯ ತರಲು ಶ್ರಮಿಸಿದ್ದೇ ಆಗಲಿಲ್ಲ. ಆದ್ದರಿಂದ ನಾವು ಸಮಯ ಬಂದಾಗ ನಮ್ಮ ಅವಕಾಶ ಗಳನ್ನು ಕಿತ್ತುಕೊಳ್ಳಬೇಕು. ನಾನು ಜನರಲ್ ಸ್ಥಾನದಿಂದಲೇ ಗೆದ್ದು ಬಂದಿದ್ದೆ. ಈ ಮಟ್ಟಿಗಿನ ವಿಶ್ವಾಸ ವನ್ನು ಸಮಾಜದಲ್ಲಿ ಬೆಳೆಸಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕೋಲಾರ ಜಿಲ್ಲೆಯಲ್ಲಿ ನನ್ನ ಸಮುದಾಯವೂ ಸೇರಿದಂತೆ ಶೋಷಿತರಿಗೆ ಸಾಕಷ್ಟು ಅಭಿವೃದ್ಧಿ ಮಾಡಿದ್ದೇವೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬಲಗೈ ಸಮುದಾಯಕ್ಕೆ 2 ಎಕರೆ ಭೂಮಿ ಕೇಳಿದ್ದಾರೆ. ಪ್ರಸ್ತಾವನೆ ಸಲ್ಲಿಸಿದರೆ ಜಿಲ್ಲಾಧಿಕಾರಿಗಳ ಬಳಿ ಮಾತನಾಡುತ್ತೇನೆ. ಸರಕಾರಿ ಭೂಮಿ ಹುಡುಕಿ ಹೇಳಿ.ಮಂಜೂರು ಮಾಡಿಸಿಕೊಡುವ ಜವಾಬ್ದಾರಿ ನಾನು ಹೊರುತ್ತೇನೆ ಎಂದು ಭರವಸೆ ನೀಡಿದ ಅವರು ಸಂಘಟನೆಯಿಂದ ಮನವಿ ಸ್ವೀಕರಿಸಿದರು.
ಸಮುದಾಯಕ್ಕೆ ಬೇಕಾದ ಸೌಲಭ್ಯಗಳನ್ನು ಕೊಡಿಸಲು ನಾನು ಸೇರಿಂದಂತೆ ನನ್ನಂತಿರುವ ಜನಪ್ರತಿನಿಧಿಗಳು ಸಿದ್ದ.ನಾವು ಭಯ ಪಡುವ ಅಗತ್ಯವಿಲ್ಲ. ಸಮುದಾಯದ ಹಿಂದೆ ಹೋದಾಗ ಟೀಕೆ ಟಿಪ್ಪಣಿ ಸಹಜ ಅದನ್ನು ಮರೆಯಿರಿ. ಸ್ವಂತ ಶಕ್ತಿಯ ಮೇಲೆ ನಿಂತುಕೊಳ್ಳಿ. ತಾಲೂಕಿಗೊಂದು ಸಂಘಟನೆ ಮಾಡಿ. ಕಾರ್ಯಕ್ರಮ ಸಣ್ಣದಾದರೂ ಪರವಾಗಿಲ್ಲ ಮಾಡಿ, ಸಮೃದ್ದಿ ಮಂಜುನಾಥ್, ಆನೇಕಲ್ ಶಿವಣ್ಣ, ನಾಗೇಶ್ ಹೀಗೆ ಎಲ್ಲಾ ರಾಜಕಾರಣಿಗಳು ಒಗ್ಗೂಡಲಿ ಎಂದು ಹೇಳಿದರು.
ಒಳಮೀಸಲಾತಿ ಜಾರಿಯಿಂದಾಗಿ ಬಲಗೈ ಸಮುದಾಯಕ್ಕೆ ಏನೇನೂ ಅನುಕೂಲ ಆಗಿಲ್ಲ. ಸಮೀಕ್ಷೆಯಲ್ಲಿ ನಮ್ಮ ಸಂಖ್ಯಾಬಲ ಕಡಿಮೆ ಆಗಿದ್ದರಿಂದ ಅನಿವಾರ್ಯವಾಗಿ ಜಾರಿಗೆ ಒಪ್ಪಲಾಗಿದೆ. ರೋಷ್ಟರ್ ಬಿಂದುಗಳಲ್ಲಿ ನಮ್ಮನ್ನು 9ಕ್ಕೆ ಸೇರಿಸಿರುವುದರಿಂದ ಶಿಕ್ಷಣ ಮತ್ತು ಉದ್ಯೋಗದಲ್ಲಿ ಭಾರೀ ಅನ್ಯಾಯ ಆಗುತ್ತಿದೆ. ಪರಿಸ್ಥಿತಿ ಹೀಗೆ ಇದ್ದರೂ ನಾವು ಸಂಘಟಿತ ರಾಗಿ ಹೋರಾಡದೆ ಮಲಗಿದರೆ ನಮ್ಮ ಮಕ್ಕಳ ಭವಿಷ್ಯ ಹಾಳಾಗುತ್ತದೆ. ನನಗಿರುವ ಮಾಹಿತಿಯಂತೆ ಚಿಕ್ಕಬಳ್ಳಾಪುರದಲ್ಲಿ ನಮ್ಮ ಸಂಖ್ಯೆ ದೊಡ್ಡದಿದೆ. ಶಾಸಕರ ಬಳಿ ಹೋಗಿ ಬೇಕಾದ ಸೌಲಭ್ಯಗಳನ್ನು ಕೇಳಿ ಪಡೆಯೋಣ.ಸಂಖ್ಯೆ ಕಡಿಮೆ ಇದ್ದರೂ ಚಿಂತೆಯಿಲ್ಲ ಹಕ್ಕು ಕೇಳು ಹಿಂಜರಿಕೆ ಬೇಡ ಎಂದರು.
ಹೊಲೆಯರು ಹೊಗಳಿದರೆ ಸಾಕು ಉಬ್ಬಿ ಹೋಗುತ್ತೇವೆ. ಕುರುಡು ಪ್ರೇಮಕ್ಕೆ ಬಲಿಯಾಗ ಬೇಡಿ. ಬೈದರೂ ಪರವಾಗಿಲ್ಲ ಬದುಕು ಕಟ್ಟಿಕೊಳ್ಳಲು ಮುಂದಾಗಿ. ಸಣ್ಣ ಪುಟ್ಟ ಜಗಳ ಬಿಡಿ..ಒಂದಾಗಿ ಕೆಲಸ ಮಾಡಿ. ಸದಾ ಕಾಲ ಸಂಘಟಿತರಾಗಿ, ಸಮುದಾಯಕ್ಕೆ ಸೇವೆ ಮಾಡಿ. ಜನಾಂಗ ಉಳಿದರೆ ನಾವು ಉಳಿಯುತ್ತೇವೆ.ಸಮುದಾಯಕ್ಕಾಗಿ ನಾನು ಸದಾ ಸಿದ್ದ.ಇದಕ್ಕಾಗಿ ನನ್ನ ಜೀವನ ಮೀಸಲಾಗಿರಲಿದೆ ಎಂದು ಸ್ಪಷ್ಟಪಡಿಸಿದರು.
ಸಂಸ್ಥಾಪಕ ಅಧ್ಯಕ್ಷ ಏಡುಕೊಂಡಲ ಶ್ರೀನಿವಾಸ್ ಮಾತನಾಡಿ, ಸಮುದಾಯವನ್ನು ಒಂದೇ ವೇದಿಕೆಗೆ ತರುವುದು ನನ್ನ ಉದ್ದೇಶವಾಗಿದೆ ವಿನಃ ರಾಜಕೀಯ ಪ್ರವೇಶವಲ್ಲ. ಅಳಿಲು ಸೇವೆ ಮಾಡುವುದೇ ನನ್ನ ಗುರಿ.. ನನ್ನ ಮಾತುಗಳನ್ನು ಅನ್ಯಥಾ ಭಾವಿಸಬಾರದು ಎಂದು ಹೇಳಿದರು.
ಹೊಲೆಯ ಜಾತಿ ಶ್ರಮಿಕ ಜಾತಿ ನಂಬಿಕಸ್ತ ಜಾತಿ. ಆದರೆ ಸಂಘನೆಯಿಲ್ಲದೆ ಸೊರಗಿದೆ. ಹೀಗಾಗಿಯೇ ಬಲಗೈಜಾತಿಗಳ ಒಕ್ಕೂಟ ಮಾಡಲಾಗಿದೆ. ಇದಕ್ಕೆ ತಾಲೂಕಿಗೆ 11 ಮಂದಿಯ ಸಮಿತಿ ಮಾಡಲಾಗಿದೆ. ಜನಾಂಗದ ಕಡುಬಡವರಿಗೆ ನೆರವಾಗುವ ಉದ್ದೇಶದಿಂದ ಸಂಘಟನೆ ಮಾಡಲಾಗಿದೆ. ಉಚಿತ ಕಲ್ಯಾಣ ಮಂಟಪ ಕಟ್ಟುವ ಚಿಂತನೆ ಇದೇ. ಉನ್ನತ ಶಿಕ್ಷಣಕ್ಕೆ ನೆರವು ನೀಡುವ ಉದ್ದೇಶ ಇದೆ. ಇಂತಹ ಒಳ್ಳೆಯ ಕೆಲಸಗಳಿಗೆ ಮುಂದಾದರೆ ಕಾಲೆಳೆಯುವ ಸನ್ನಿವೇಶ ಸೃಷ್ಟಿಸುವುದನ್ನು ಬಿಡಿ.ಸಮುದಾಯಕ್ಕಾಗಿ ನಾನು ಅನುದಾನ ತಂದಿದ್ದು ಅದರ ವಿತರಣೆಗೆ ನೀವೆಲ್ಲಾ ಕೈಜೋಡಿಸಿ,ಸಮುದಾಯವನ್ನು ಎಂದಿಗೂ ಒಡೆಯಲಾರೆ, ಸ್ವಾರ್ಥ ಕ್ಕಾಗಿ ಬಳಸಲಾರೆ, ತಪ್ಪು ಮಾಡಿದರೆ ತಿದ್ದಿ. ಒಳಮೀಸಲಾತಿಯಿಂದಾಗಿ ನಮ್ಮ ಹಕ್ಕನ್ನು ಪಡೆಯಲು ಹೋರಾಟ ರೂಪಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಲಾಯಿತು, ಗಣ್ಯರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕೃಷ್ಣಪ್ಪ, ಬಿ.ಹೆಚ್.ನರಸಿಂಹಪ್ಪ, ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ,ಪ್ರಧಾನ ಕಾರ್ಯದರ್ಶಿ ಗಂಗಾಧರ್, ಖಜಾಂಚಿ ನರಸಿಂಹಮೂರ್ತಿ, ಉಪಾಧ್ಯಕ್ಷ ವಿ.ಕೃಷ್ಣಪ್ಪ, ಸಂಘಟನಾ ಕಾರ್ಯದರ್ಶಿ, ನರಸಿಂಹಮೂರ್ತಿ, ಗೌರವಾಧ್ಯಕ್ಷ ಪಿ.ತ್ಯಾಗರಾಜ್, ಕಾನೂನು ಸಲಹೆಗಾರ ಆಂಜನೇಯ, ರವಿಕಿರಣ್ ಕಾರ್ಯಕಾರಿ ಸಮಿತಿ ಸದಸ್ಯರು, ಹರೀಶ್, ಮುರಳೀಧರ್, ಹರೀಶ್.ಕೆ.ಎನ್.ಗಂಗಾಧರಪ್ಪ, ಸಲಹಾ ಸಮಿತಿ ಸದಸ್ಯರಾದ ನಾರಾ ಯಣಪ್ಪ, ವೆಂಕಟರೆಡ್ಡಿ, ಚಿನ್ನಪ್ಪ, ವೆಂಕಟೇಶ್, ನಾರಾಯಣಸ್ವಾಮಿ, ಮುನಿರಾಜು, ಕಳವಾರ ಶ್ರೀಧರ್, ಚಿಕ್ಕಬಳ್ಳಾಪುರ ತಾಲೂಕು ಅಧ್ಯಕ್ಷ ವೆಂಕಟಕೃಷ್ಣ, ಮಂಚೇನಹಳ್ಳಿ ತಾಲೂಕು ಅಧ್ಯಕ್ಷ ಗೌರೀಶ್, ಗೌರಿಬಿದನೂರು ಅಧ್ಯಕ್ಷ ಹೆಚ್,ಎಸ್,ನಾಗರಾಜ್, ಬಾಗೇಪಲ್ಲಿ ರಾಮಚಂದ್ರಪ್ಪ, ಗುಡಿಬಂಡೆ, ಎಂ.ಸಿ.ಚಿಕ್ಕನರಸಿಂಹಪ್ಪ, ಚೇಳೂರು ವೈ.ಶಂಕರಪ್ಪ, ಚಿಂತಾಮಣಿ ತಾಲೂಕು ತುಳಸಿಕೃಷ್ಣ, ಶಿಡ್ಲಘಟ್ಟ ತಾಲೂಕು ಚಂದ್ರು ಮತ್ತಿತರರು ಇದ್ದರು.