ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಜಾಯಿಂಟ್ ಅಕೌಂಟ್‌ನ ಪ್ರಯೋಜನಗಳೇನು? ಯಾರೆಲ್ಲ ತೆರಯಬಹುದು? ನಿಮ್ಮ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

Joint Account: ಜಾಯಿಂಟ್ ಅಕೌಂಟ್ ನಿರ್ವಹಣೆ ಬಗ್ಗೆ ಬ್ಯಾಂಕಿಂಗ್ ಕಾನೂನು ಏನು ಹೇಳುತ್ತದೆ? ಇದರಿಂದ ಏನೆಲ್ಲ ಪ್ರಯೋಜನಗಳಿಗೆ? ಈ ವಿಚಾರಗಳ ಬಗ್ಗೆ ನಿವೃತ್ತ ಬ್ಯಾಂಕರ್ ಪ್ರಕಾಶ್ ಆರ್.ಎಸ್. ವಿಶ್ವವಾಣಿ ಮನಿ ಯೂಟ್ಯೂಬ್ ಚಾನಲ್‌ಗೆ ನೀಡಿರುವ ಸಂದರ್ಶನದಲ್ಲಿ ವಿವರಿಸಿದ್ದಾರೆ.

ಜಾಯಿಂಟ್ ಅಕೌಂಟ್‌ ನಿರ್ವಹಿಸುವ ಬಗೆ ಹೇಗೆ? ಇಲ್ಲಿದೆ ಮಾಹಿತಿ

ಸಾಂದರ್ಭಿಕ ಚಿತ್ರ -

Profile
Sushmitha Jain Dec 11, 2025 9:00 AM

ಬೆಂಗಳೂರು: ಜಾಯಿಂಟ್ ಅಕೌಂಟ್ (Joint Account) ಎಂದರೇನು? ಜಾಯಿಂಟ್ ಅಕೌಂಟ್‌ ಅನ್ನು ನಿರ್ವಹಿಸುವ ಬಗೆ ಹೇಗೆ? ಇದರ ಪ್ರಯೋಜನಗಳೇನು (Benifits Of Joint Account)? ಎಂಬೆಲ್ಲ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದು. ಜಾಯಿಂಟ್ ಅಕೌಂಟ್ ಅಥವಾ ಜಂಟಿ ಖಾತೆ ನಿರ್ವಹಣೆ ಬಗ್ಗೆ ಬ್ಯಾಂಕಿಂಗ್ ಕಾನೂನು ಏನು ಹೇಳುತ್ತದೆ ಎಂಬ ವಿಚಾರಗಳ ಬಗ್ಗೆ ನಿವೃತ್ತ ಬ್ಯಾಂಕರ್ ಪ್ರಕಾಶ್ ಆರ್.ಎಸ್. ವಿಶ್ವವಾಣಿ ಮನಿ ಯೂಟ್ಯೂಬ್ ಚಾನಲ್‌ಗೆ ನೀಡಿರುವ ಸಂದರ್ಶನದಲ್ಲಿ ವಿವರಣೆ ನೀಡಿದ್ದಾರೆ.

ಒಂದಕ್ಕಿಂತ ಹೆಚ್ಚು ಜನ ನಿರ್ವಹಿಸುವಂತಹ ಖಾತೆಗಳನ್ನು ಜಾಯಿಂಟ್ ಅಕೌಂಟ್ ಅಥವಾ ಜಂಟಿ ಖಾತೆ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ವ್ಯವಹಾರ ಪಾಲುದಾರಿಕೆಯಲ್ಲಿ ಎಷ್ಟು ಜನ ಪಾಲುದಾರರಿರುತ್ತಾರೋ ಅಷ್ಟು ಮಂದಿಯ ಹೆಸರಿನಲ್ಲಿ ಜಂಟಿ ಖಾತೆಯನ್ನು ತೆರೆಯಲಾಗುತ್ತದೆ.
ಇಂತಹ ಅಕೌಂಟ್‌ನಿಂದ ಹಣ ತೆಗೆಯಬೇಕಾಗಿದ್ದಲ್ಲಿ ಚೆಕ್‌ಗೆ ಅವರೆಲ್ಲರ ಸಹಿ ಅಗತ್ಯ.

ಜಂಟಿ ಖಾತೆಯ ಬಗ್ಗೆ ವಿವರ ಇಲ್ಲಿದೆ:



ಇನ್ನು ವೈಯಕ್ತಿಕ ಜಂಟಿ ಖಾತೆಯ ವಿಚಾರಕ್ಕೆ ಬಂದಲ್ಲಿ, ಅದು ತಂದೆ-ತಾಯಿ, ಗಂಡ-ಹೆಂಡತಿ, ತಂದೆ-ಮಗ ಹೀಗೆ ಒಬ್ಬರಿಗಿಂತ ಹೆಚ್ಚಿನವರು ಒಂದು ಖಾತೆಯನ್ನು ಹೊಂದಿರುವುದು ಜಂಟಿ ಖಾತೆ ಎನಿಸಿಕೊಳ್ಳುತ್ತದೆ. ಜಂಟಿ ಖಾತೆಯನ್ನು ತೆರೆಯುವ ಸಂದರ್ಭದಲ್ಲೇ, ಈ ಖಾತೆಯನ್ನು ಯಾರು ನಿಭಾಯಿಸುತ್ತಾರೆ? ಮತ್ತು ಈ ಖಾತೆಯಿಂದ ಯಾರು ಹಣವನ್ನು ಪಡೆದುಕೊಳ್ಳುತ್ತಾರೆ ಎಂಬುದನ್ನು ಮೊದಲೇ ಬ್ಯಾಂಕಿಗೆ ಸೂಚಿಸಬೇಕಾಗಿರುತ್ತದೆ.

ಉದಾಹರಣೆಗೆ, ಎ ಮತ್ತು ಬಿ ಎಂಬಿಬ್ಬರು ಜಂಟಿ ಖಾತೆಯನ್ನು ತೆರೆಯುವ ಸಂದರ್ಭದಲ್ಲೇ ಆ ಬ್ಯಾಂಕಿಗೆ ಈ ಖಾತೆಯ ನಿರ್ವಹಣೆ ಬಗ್ಗೆ ಮಾಹಿತಿಯನ್ನು ಕೊಡಬೇಕಾಗಿರುತ್ತದೆ. ತಮ್ಮ ಖಾತೆಯಿಂದ ಹಣ ಪಡೆಯಲು ಅಥವಾ ಹಣ ವರ್ಗಾವಣೆಗೆ ಎ ಮತ್ತು ಬಿ ಇಬ್ಬರೂ ಸಹಿ ಹಾಕಬೇಕೇ? ಅಥವಾ ಇಬ್ಬರಲ್ಲಿ ಒಬ್ಬರ ಸಹಿ ಮಾತ್ರವೇ ಸಾಕೇ? ಎಂಬ ವಿಚಾರವನ್ನು ಸ್ಪಷ್ಟಪಡಿಸಿರಬೇಕು. ಒಬ್ಬರಾಗಿದ್ದಲ್ಲಿ, ಆ ಒಬ್ಬರು ಯಾರು ಎಂಬುದನ್ನೂ ಸಹ ಬ್ಯಾಂಕಿಗೆ ಮೊದಲೇ ತಿಳಿಸಿರಬೇಕು. ಇದರಿಂದಾಗಿ ಜಂಟಿ ಖಾತೆಯನ್ನು ಹೊಂದಿರುವ ಇಬ್ಬರೂ ಹಣ ತೆಗೆಯುವ ಅಥವಾ ವರ್ಗಾವಣೆ ಸಂದರ್ಭದಲ್ಲಿ ಬ್ಯಾಂಕಿಗೆ ಬರಬೇಕಾಗಿಲ್ಲ.

ಇನ್ನೊಂದು ಆಯ್ಕೆಯ ಪ್ರಕಾರ, ಎ ಅಥವಾ ಬಿ ಸಹಿ ಹಾಕಿದರೆ ನಡೆಯುತ್ತದೆ ಎಂಬ ಆಯ್ಕೆಯನ್ನೂ ಜಂಟಿ ಖಾತೆಯನ್ನು ತೆರೆಯುವ ಸಂದರ್ಭದಲ್ಲಿ ನಮೂದಿಸಲು ಅವಕಾಶವಿದೆ. ಇಂತಹ ಸಂದರ್ಭದಲ್ಲಿ ಎ ಇಲ್ಲದಿದ್ದಲ್ಲಿ ಬಿ ಅಥವಾ ಬಿ ಇಲ್ಲದಿದ್ದಲ್ಲಿ ಎ, ತಮ್ಮ ಸಹಿ ಮೂಲಕ ಈ ಖಾತೆಯಿಂದ ಹಣವನ್ನು ತೆಗೆಯಬಹುದು ಅಥವಾ ವರ್ಗಾಯಿಸಬಹುದು.

ಜಂಟಿ ಖಾತೆಯನ್ನು ತೆರೆಯುವ ಸಂದರ್ಭದಲ್ಲಿ ಅಲ್ಲಿ ನೀಡಿರುವ ಆಪ್ಶನ್‌ ಸರಿಯಾಗಿ ಆಯ್ಕೆ ಮಾಡಿಕೊಂಡಲ್ಲಿ, ಇದು ಗ್ರಾಹಕ ಸ್ನೇಹಿಯಾಗಲಿದೆ. ನಿಮ್ಮ ಹಣವನ್ನು ಯಾವುದ ತೊಡಕಿಲ್ಲದೇ ಹಿಂಪಡೆಯುವ ಸೌಲಭ್ಯ ಇದರ ಮೊದಲನೇ ಪ್ರಯೋಜನವಾದರೆ, ಜಂಟಿ ಖಾತೆದಾರರಲ್ಲಿ ಯಾರೊಬ್ಬರು ಸಾವನ್ನಪ್ಪಿದರೂ, ಇನ್ನೊಬ್ಬ ಖಾತೆದಾರರು ಈ ಖಾತೆಯಲ್ಲಿರುವ ಹಣವನ್ನು ಪಡೆಯಬಹುದು ಅಥವಾ ವರ್ಗಾಯಿಸಬಹುದಾಗಿರುವುದು ಎನ್ನುವುದು ಜಂಟಿ ಖಾತೆಯ ಇನ್ನೊಂದು ಪ್ರಯೋಜನ.

ವೈಯಕ್ತಿಕ ಜಂಟಿ ಖಾತೆಯ ಪ್ರಯೋಜನವೆಂದರೆ ಒಂದು ವೇಳೆ ಖಾತೆದಾರರಲ್ಲಿ ಯಾರೊಬ್ಬರೂ ಅಕಸ್ಮಾತ್ತಾಗಿ ಮತಪಟ್ಟಲ್ಲಿ ಇನ್ನೊಬ್ಬ ಸದಸ್ಯ ಈ ಖಾತೆಯಲ್ಲಿರುವ ಹಣವನ್ನು ತುರ್ತು ಸಂದರ್ಭದಲ್ಲಿ ಪಡೆದುಕೊಳ್ಳಲು ಸಾಧ್ಯವಿದೆ. ಒಂದು ವೇಳೆ ಸಿಂಗಲ್ ಖಾತೆಯಾಗಿದ್ದಲ್ಲಿ ಆ ಖಾತೆದಾರ ಮೃತಪಟ್ಟಲ್ಲಿ ಅವರ ವಾರಸುದಾರರು ಆ ಖಾತೆಯಲ್ಲಿರುವ ಹಣವನ್ನು ಸೂಕ್ತ ದಾಖಲೆಗಳನ್ನು ಬ್ಯಾಂಕ್‌ಗೆ ಸಲ್ಲಿಸದೆ ಪಡೆದುಕೊಳ್ಳಲು ಸಾಧ್ಯವಿಲ್ಲ. ಈ ಅನಾನುಕೂಲತೆಯನ್ನು ಜಂಟಿ ಖಾತೆ ನಿವಾರಿಸುತ್ತದೆ.

ಜಂಟಿ ಖಾತೆಯಲ್ಲಿ ಉಳಿದ ಖಾತೆಗಳಲ್ಲಿರುವಂತೆ ನಾಮಿನಿ ಅಥವಾ ನಾಮನಿರ್ದೇಶನ ಸೌಲಭ್ಯವೂ ಇರುವುದರಿಂದ ನಾಮಿನಿಯನ್ನು ಸೂಚಿಸಲು ಅವಕಾಶವಿರುತ್ತದೆ. ಒಟ್ಟಿನಲ್ಲಿ ಜಂಟಿ ಖಾತೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯವಾಗುತ್ತಿದೆ. ಸೂಕ್ತ ಬ್ಯಾಂಕಿಂಗ್ ನಿಯಮಗಳನ್ನು ಅರಿತುಕೊಂಡು ಈ ಖಾತೆಯನ್ನು ನಿಭಾಯಿಸಿದಲ್ಲಿ ಇದು ಗ್ರಾಹಕರ ಪಾಲಿಗೆ ವರದಾನವಾಗುವುದರಲ್ಲಿ ಸಂಶಯವಿಲ್ಲ.