ಬ್ಯಾಂಕ್, ಮ್ಯೂಚುವಲ್ ಫಂಡ್, ವಿಮೆಯಲ್ಲಿ ನಿಷ್ಕ್ರಿಯವಾಗಿರುವ ಹಣ ಮರಳಿ ಪಡೆಯುವುದು ಹೇಗೆ?
ಬ್ಯಾಂಕ್, ಮ್ಯೂಚುವಲ್ ಫಂಡ್, ವಿಮೆಯಲ್ಲಿ ಹೂಡಿಕೆ ಮಾಡಿರುವ ಹಣ ನಿಷ್ಕ್ರಿಯಗೊಂಡಿದ್ದರೆ ಅದನ್ನು ಪಡೆಯಲು ದಾರಿ ಇದೆ. ಇದರ ಸ್ಥಿತಿಗತಿಯನ್ನು ಟ್ರ್ಯಾಕ್ ಕೂಡ ಮಾಡಬಹುದು ಮತ್ತು ಅಗತ್ಯ ದಾಖಲೆಗಳನ್ನು ಸಲ್ಲಿಸಿ ಈ ಹಣವನ್ನು ಮರಳಿ ಕೂಡ ಪಡೆಯಬಹುದು. ಈ ಕುರಿತು ಪರಿಶೀಲನೆ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ಗ್ರಾಹಕರಿಗೆ ಸೂಚಿಸಿದ್ದಾರೆ.
ಸಾಂದರ್ಭಿಕ ಚಿತ್ರ -
ನವದೆಹಲಿ: ಬ್ಯಾಂಕುಗಳು (Bank), ಮ್ಯೂಚುವಲ್ ಫಂಡ್‌ಗಳು (Mutuval fund) ಮತ್ತು ವಿಮಾ (Insurance) ಕಂಪೆನಿಗಳಲ್ಲಿ ಹೂಡಿಕೆ ಮಾಡಿರುವ ಹಣ ಮರಳಿ ಪಡೆಯದೆ ನಿಷ್ಕ್ರಿಯಗೊಂಡಿದ್ದರೆ ಇದರ ಹಕ್ಕುದಾರರು ಪರಿಶೀಲಿಸಿ ಮರು ಪಡೆಯುವಂತೆ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ತಿಳಿಸಿದ್ದಾರೆ. ಇದರ ಕುರಿತು ಮಾಹಿತಿ ಪಡೆಯಲು ಯುಡಿಜಿಎಎಂ (UDGAM), ಬಿಮಾ ಭರೋಸಾ (Bima Bharosa) ಮತ್ತು ಎಂಎಫ್ ಸೆಂಟ್ರಲ್‌ನಂತಹ (MF Central) ಪೋರ್ಟಲ್‌ಗಳ ಸಹಾಯವನ್ನು ಪಡೆಯಬಹುದು. ದೇಶದ ನಾಗರಿಕರ ಬೃಹತ್ ಪ್ರಮಾಣದ ಹಣವು ಹಲವಾರು ವರ್ಷಗಳಿಂದ ನಿಷ್ಕ್ರಿಯಗೊಂಡಿದ್ದು, ಇದನ್ನು ವಿವಿಧ ಪೋರ್ಟಲ್ ಗಳ ಸಹಾಯದಿಂದ ಮರಳಿ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಭಾರತೀಯ ಬ್ಯಾಂಕುಗಳಲ್ಲಿ ಸುಮಾರು 78,000 ಕೋಟಿ ರೂ., ವಿಮಾ ಕಂಪೆನಿಗಳಲಿ 14,000 ಕೋಟಿ ರೂ. ಹಾಗೂ ಮ್ಯೂಚುವಲ್ ಫಂಡ್ ಗಳಲ್ಲಿ ಸುಮಾರು 3,000 ಕೋಟಿ ರೂ. ಮತ್ತು ಸುಮಾರು 9,000 ಕೋಟಿ ರೂ. ಪಡೆಯದ ಲಾಭಾಂಶಗಳಿವೆ. ಇದನ್ನು ಸಂಬಂಧಪಟ್ಟವರು ಪರಿಶೀಲಿಸಿ ಹಿಂಪಡೆಯುವಂತೆ ಪ್ರಧಾನಿ ಮೋದಿ ತಿಳಿಸಿದ್ದಾರೆ.
ಪ್ರತಿಯೊಬ್ಬರಲ್ಲೂ ಇರಲೇಬೇಕು ಟರ್ಮ್ ಇನ್ಶೂರೆನ್ಸ್; ಇದರಿಂದ ಏನು ಲಾಭ? ಈ ಬಗ್ಗೆ ತಜ್ಞರ ಅಭಿಮತ ಇಲ್ಲಿದೆ
ಬ್ಯಾಂಕುಗಳು, ಮ್ಯೂಚುವಲ್ ಫಂಡ್‌ಗಳು ಮತ್ತು ವಿಮಾ ಕಂಪೆನಿಗಳಲ್ಲಿ ನಿಷ್ಕ್ರಿಯವಾಗಿರುವ ಬೃಹತ್ ಪ್ರಮಾಣದ ಹಣವನ್ನು ಮರಳಿ ಪಡೆಯಲು ವಿವಿಧ ಪೋರ್ಟಲ್‌ಗಳು ಸಹಾಯ ಮಾಡುತ್ತದೆ. ಇದಕ್ಕಾಗಿ ಪಾಲಿಸಬೇಕಾದ ನಿಯಮಗಳು ಇಂತಿವೆ.
ಬ್ಯಾಂಕ್ ಹಣ
ಬ್ಯಾಂಕ್ ಗಳಲ್ಲಿ ನಿಷ್ಕ್ರಿಯಗೊಂಡಿರುವ ಹಣವಿದ್ದರೆ ಆರ್‌ಬಿಐ ಮಾರ್ಗಸೂಚಿಗಳ ಪ್ರಕಾರ ಇದನ್ನು ಬ್ಯಾಂಕುಗಳು ಆರ್‌ಬಿಐನ ಡಿಇಎ ನಿಧಿಗೆ ವರ್ಗಾಯಿಸುತ್ತವೆ. ಹೀಗೆ ವರ್ಗಾಯಿಸಿದ ಹಣವನ್ನು ಮರಳಿ ಪಡೆಯಲು ಬ್ಯಾಂಕ್ ಗಳು ಅವಕಾಶ ನೀಡುವುದಿಲ್ಲ ಎನ್ನಲಾಗುತ್ತದೆ. ಆದರೆ ಇದನ್ನು ಮರಳಿ ಪಡೆಯಲು ಅವಕಾಶವಿದೆ. ಇದಕ್ಕಾಗಿಯೇ ಆರ್‌ಬಿಐ ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ ನಿಧಿಯನ್ನು ಸ್ಥಾಪಿಸಿದೆ. ಇದು 2014ರಲ್ಲಿ ಜಾರಿಗೆ ಬಂದಿದೆ.
ಈ ಹಣವನ್ನು ಮರಳಿ ಪಡೆಯಲು ಬ್ಯಾಂಕಿನ ವೆಬ್‌ಸೈಟ್ ಅಥವಾ ಆರ್ ಬಿಐ ನ ಯುಡಿಜಿಎಎಂ ಪೋರ್ಟಲ್‌ಗೆ ಭೇಟಿ ನೀಡಿ. https://udgam.rbi.org.in/unclaimed-deposits ಇದರಲ್ಲಿ ಕ್ಲೇಮ್ ಮಾಡದ ಖಾತೆಗಳನ್ನು ಹುಡುಕಲು ಪಾನ್, ಆಧಾರ್ ಅಥವಾ ಹೆಸರಿನೊಂದಿಗೆ ಲಾಗಿನ್ ಮಾಡಬೇಕು. ಬಳಿಕ ಖಾತೆ, ಬ್ಯಾಂಕ್ ಶಾಖೆಯ ವಿವರಗಳನ್ನು ಗಮನಿಸಿ. ಬಳಿಕ ಇದಕ್ಕೆ ಸಂಬಂಧಿಸಿದ ಕ್ಲೇಮ್ ಫಾರ್ಮ್ ಅನ್ನು ಪಡೆದು ಬ್ಯಾಂಕ್ ಶಾಖೆಗೆ ನೀಡಿ.
ವಿಮೆ ಹಣ
ವಿಮೆಯಲ್ಲಿ 10 ವರ್ಷಗಳಿಗೂ ಹೆಚ್ಚು ಕಾಲ ಕ್ಲೈಮ್ ಮಾಡದ ನಿಧಿಗಳಿದ್ದರೆ ಅದನ್ನು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರಆದೇಶಿಸಿದಂತೆ ಹಿರಿಯ ನಾಗರಿಕರ ಕಲ್ಯಾಣ ನಿಧಿಗೆ ವರ್ಗಾಯಿಸಲಾಗುತ್ತದೆ.ಈ ಕುರಿತು ಭಾರತೀಯ ಜೀವ ವಿಮಾ ನಿಗಮವು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ವಿವರಗಳನ್ನು ಪ್ರಕಟಿಸುತ್ತದೆ. ಇದನ್ನು ಮರಳಿ ಪಡೆಯಲು ಬಿಮಾ ಭರೋಸಾ ವೆಬ್‌ಸೈಟ್‌ಗೆ ಭೇಟಿ ನೀಡಿ.
bimabharosa.irdai.gov.in ನಲ್ಲಿ “ದೂರು ನೋಂದಾಯಿಸಿ” ಕ್ಲಿಕ್ ಮಾಡಿ ಮತ್ತು ಹೆಸರು, ಮೊಬೈಲ್ ಸಂಖ್ಯೆ ಮತ್ತು ಇಮೇಲ್ ವಿವರಗಳನ್ನು ಸಲ್ಲಿಸಿ. ಅನಂತರ ದೂರು ಅರ್ಜಿಯನ್ನು ಲಾಗಿನ್ ಮಾಡಿ ಮತ್ತು ಭರ್ತಿ ಮಾಡಿ. ಬಳಿಕ ವಿಮಾದಾರರನ್ನು ಆಯ್ಕೆ ಮಾಡಿ, ಪಾಲಿಸಿ ಅಥವಾ ಕ್ಲೈಮ್ ಸಂಖ್ಯೆಯನ್ನು ನಮೂದಿಸಿ ದೂರಿನ ಪ್ರಕಾರವನ್ನು ನಮೂದಿಸಿ. ಪೂರಕ ದಾಖಲೆಗಳಾದ ನಿರಾಕರಣೆ ಪತ್ರ, ಕ್ಲೈಮ್ ಫಾರ್ಮ್, ಬಿಲ್, ವರದಿಗಳನ್ನು ಅಪ್‌ಲೋಡ್ ಮಾಡಿ. ಬಳಿಕ ಸಲ್ಲಿಸಿ. ಅನಂತರ ಟೋಕನ್ ಸಂಖ್ಯೆ ಪಡೆದು ದೂರಿನ ಸ್ಥಿತಿಯನ್ನು ಆನ್‌ಲೈನ್‌ನಲ್ಲಿ ಟ್ರ್ಯಾಕ್ ಮಾಡಬಹುದು.
ಮ್ಯೂಚುಯಲ್ ಫಂಡ್
ಮ್ಯೂಚುಯಲ್ ಫಂಡ್ ನಲ್ಲಿ ನಿಷ್ಕ್ರಿಯಗೊಂಡಿದ್ದ ಹಣವಿದ್ದರೆ ಇದರ ಮಾಹಿತಿಯನ್ನು ಮಿತ್ರ ವೆಬ್ ಸೈಟ್ ನಲ್ಲಿ ಪರಿಶೀಲಿಸಬಹುದು. ಕ್ಲೈಮ್‌ಗಳಿಗಾಗಿ ಅಧಿಕೃತವಾಗಿರುವ ಸೆಬಿ ಬೆಂಬಲಿತ ಪೋರ್ಟಲ್ ಎಂಎಫ್ ಸೆಂಟ್ರಲ್ mfcentral.com ವೆಬ್ ಸೈಟ್ ಗೆ ಹೋಗಿ ಇಲ್ಲಿ “ಹೂಡಿಕೆದಾರರ ಸೇವೆಗಳು” ಬಳಿಕ “ಪ್ರಸರಣ / ಕ್ಲೈಮ್” ಮೇಲೆ ಕ್ಲಿಕ್ ಮಾಡಿ. ಅನಂತರ ಮಿತ್ರ ಸಹಾಯ ಮಾಡುತ್ತದೆ. ಇಲ್ಲಿ ಅಗತ್ಯ ವಿವರಗಳನ್ನು ಸಲ್ಲಿಸಿ.
ಚಿನ್ನ ಯಾವಾಗ ಖರೀದಿಸಬೇಕು? ಸೂಕ್ತ ಸಮಯ ಯಾವುದು? ನಿಮ್ಮೆಲ್ಲ ಗೊಂದಲಗಳಿಗೆ ಇಲ್ಲಿದೆ ಉತ್ತರ
ಬಳಿಕ ಹೂಡಿಕೆದಾರರ ಪಾನ್ ವಿವರ, ಜನ್ಮ ದಿನಾಂಕ, ದೂರವಾಣಿ ಸಂಖ್ಯೆ , ಇಮೇಲ್ ವಿವರಗಳನ್ನು ಸಲ್ಲಿಸಿ. ಬಳಿಕ ಮ್ಯೂಚುಯಲ್ ಫಂಡ್ ಹೋಲ್ಡಿಂಗ್‌ಗಳಲ್ಲಿ ಕ್ಲೈಮ್ ವಿನಂತಿಯನ್ನು ಸಲ್ಲಿಸಿ.ಇದರಲ್ಲಿ ಹೂಡಿಕೆದಾರ ಜೀವಂತವಾಗಿದ್ದರೆ ಸಾಮಾನ್ಯ ಕ್ಲೈಮ್, ಹೂಡಿಕೆದಾರ ಮರಣ ಹೊಂದಿದ್ದರೆ ರವಾನೆ ಅನ್ನು ಕ್ಲಿಕ್ ಮಾಡಿ ಬಳಿಕ ಪ್ರಕರಣವನ್ನು ಆಧರಿಸಿ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
ಇದರಲ್ಲಿ ಆಧಾರ್, ಪಾನ್, ಮರಣ ಪ್ರಮಾಣಪತ್ರ, ಬ್ಯಾಂಕ್ ಪುರಾವೆ, ನಾಮನಿರ್ದೇಶಿತ ಐಡಿ ಪುರಾವೆಯನ್ನು ಒದಗಿಸಬೇಕು. ಬಳಿಕ ಕ್ಲೈಮ್ ಅನ್ನು ಆನ್‌ಲೈನ್‌ನಲ್ಲಿ ಟ್ರ್ಯಾಕ್ ಮಾಡಬಹುದು. ಬಳಿಕ ಹಣ ನೇರವಾಗಿ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ.