ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

LG Electronics: ಸದ್ಯದಲ್ಲೇ ಬಹುದೊಡ್ಡ ಐಪಿಒ ಮಾರುಕಟ್ಟೆಗೆ ..ಎಲ್‌ಜಿ ಇಲೆಕ್ಟ್ರಾನಿಕ್ಸ್‌ಗೆ ಸೆಬಿ ಗ್ರೀನ್‌ ಸಿಗ್ನಲ್‌

ಎಲ್‌ಜಿ ಇಲೆಕ್ಟ್ರಾನಿಕ್‌ ಸಂಸ್ಥೆಗೆ ಐಪಿಒ ಪ್ರವೇಶಿಸಲು ಸೆಕ್ಯೂರಿಟಿ ಎಕ್ಸ್‌ಚೇಂಜ್‌ ಬೋರ್ಡ್ ಆಫ್ ಇಂಡಿಯಾ ಹಸಿರು ನಿಶಾನೆ ತೋರಿದೆ.ಸೆಬಿಯಿಂದ ಐಪಿಒಗೆ ಅನುಮೋದನೆಯನ್ನು ಪಡೆದಿದ್ದು ಸದ್ಯ ಮಾರುಕಟ್ಟೆಗೆ ಯಾವ ದಿನಾಂಕದಂದು ಲಿಸ್ಟ್‌ ಆಗಲಿದೆ ಎಂಬ ಬಗ್ಗೆ ಘೋಷಣೆಯಾಗಿಲ್ಲ., ಆದರೆ ಸದ್ಯದಲ್ಲೇ ಲಿಸ್ಟ್‌ ಆಗುವ ನಿರೀಕ್ಷೆ ಇದೆ ಎನ್ನಲಾಗಿದೆ.

ಎಲ್‌ಜಿ ಎಲೆಕ್ಟ್ರಾನಿಕ್ಸ್ ಐಪಿಒ ಶೀಘ್ರದಲ್ಲೇ ಮಾರುಕಟ್ಟೆಗೆ ಬರಲು ಸಿದ್ಧತೆ

Profile Pushpa Kumari Mar 19, 2025 12:11 PM

ನವದೆಹಲಿ: ಭಾರತೀಯ ಷೇರುಮಾರುಕಟ್ಟೆ ಸದ್ಯದಲ್ಲೇ ದೊಡ್ಡಮಟ್ಟದ ಆರಂಭಿಕ ಸಾರ್ವಜನಿಕ ಹಂಚಿಕೆ (ಐಪಿಒ) ಸ್ವಾಗತಿಸಲಿದೆ. ಎಲ್‌ಜಿ ಇಲೆ ಕ್ಟ್ರಾನಿಕ್‌ (LG Electronics) ಸಂಸ್ಥೆಗೆ ಐಪಿಒ ಪ್ರವೇಶಿಸಲು ಸೆಕ್ಯೂರಿಟಿ ಎಕ್ಸ್‌ಚೇಂಜ್‌ ಬೋರ್ಡ್ ಆಫ್ ಇಂಡಿಯಾ ಹಸಿರು ನಿಶಾನೆ ತೋರಿದೆ. ಸೌತ್‌ ಕೋರಿಯಾದ ಎಲ್‌ಜಿ ಇಲೆಕ್ಟ್ರಾನಿಕ್ಸ್‌ನ ಅಂಗ ಸಂಸ್ಥೆಯಾದ ಎಲ್‌ಜಿ ಇಲೆಕ್ಟ್ರಾನಿಕ್ಸ್ ಇಂಡಿಯಾ ಕಳೆದ ಡಿಸೆಂಬರ್‌ 6, 2024ರಂದು ಸೆಬಿ ಎದುರು ಕರಡು ದಾಖಲೆಗಳನ್ನು ಸಲ್ಲಿಕೆ ಮಾಡಿತ್ತು. ಐಪಿಒ ಪ್ರವೇಶಿಸಲು ಸದ್ಯ ಎಲ್ಲಾ ರೀತಿಯ ಅನುಮತಿ ದೊರೆತಿದ್ದು 10.18 ಕೋಟಿ ಇಕ್ವಿಟಿ ಷೇರು ಗಳನ್ನು ಮಾರಾಟಕ್ಕಿಡಲಾಗಿದೆ. ಈ ಎಲ್ಲಾ ಷೇರುಗಳು ಆಫರ್‌ ಫಾರ್‌ ಸೇಲ್‌ ಷೇರುಗಳೇ ಆಗಿದ್ದು ಷೇರುಗಳ ಮುಖಬೆಲೆ 10 ರೂ ನಿರ್ಧರಿಸಲಾಗಿದೆ.

ಎಲ್‌ಜಿ ಕಂಪನಿಯು ಗೃಹೋಪಯೋಗಿ ವಸ್ತುಗಳು ಮತ್ತು ಎಲೆಕ್ಟ್ರಾನಿಕ್ ವಸ್ತುಗಳನ್ನು ತಯಾರಿಸುವ ಪ್ರತಿಷ್ಠಿತ ಕಂಪನಿಯಾಗಿದ್ದು ಇದರ ಉತ್ಪನ್ನ ಗಳನ್ನು ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಮಾರಾಟ ಮಾಡಲಾಗುತ್ತಿದೆ. ಎಲ್‌ಜಿ ತನ್ನ ಎಲ್ಲಾ ಉತ್ಪನ್ನಗಳಿಗೂ ಅಳವಡಿಕೆ, ದುರಸ್ತಿ ಮತ್ತು ನಿರ್ವಹಣಾ ಸೇವೆಗಳನ್ನು ನೀಡುತ್ತಿದ್ದು ಸುಮಾರು 27 ವರ್ಷಗಳ ಅನುಭವ ದೊಂದಿಗೆ ಎಲ್‌ಜಿ ಎಲೆಕ್ಟ್ರಾನಿಕ್ಸ್ ಇಂಡಿಯಾ ಗ್ರಾಹಕರ ಅಗತ್ಯ ಗಳನ್ನು ಪೂರೈಸುವ ಗ್ರಾಹಕ ಸಂಬಂಧವನ್ನು ಉಳಿಸಿಕೊಂಡಿದೆ..1997 ರಲ್ಲಿ ಸ್ಥಾಪಿತವಾದ ಎಲ್‌ಜಿ ಎಲೆಕ್ಟ್ರಾನಿಕ್ಸ್ ಇಂಕ್‌ನ ಅಂಗಸಂಸ್ಥೆಯಾದ ಎಲ್‌ಜಿ 2011 ರಿಂದ 2023 ರವರೆಗೆ ಸುಮಾರು 13 ವರ್ಷಗಳ ವರೆಗೆ ಆಫ್‌ಲೈನ್ ಚಾನೆಲ್ ಮೂಲಕ ಮಾರುಕಟ್ಟೆ ಆಧಾರದ ಮೇಲೆ ಗೃಹೋಪಯೋಗಿ ವಸ್ತುಗಳು ಮತ್ತು ಎಲೆಕ್ಟ್ರಾನಿಕ್ಸ್ ಉದ್ಯಮದಲ್ಲಿ ಮಾರುಕಟ್ಟೆ ನಾಯಕ ಸ್ಥಾನವನ್ನು ಹಾಗೆಯೇ ಉಳಿಸಿಕೊಂಡಿದೆ.

ಇದನ್ನು ಓದಿ: South Indian Bank: ಸೌತ್ ಇಂಡಿಯನ್ ಬ್ಯಾಂಕ್‌ನಿಂದ 'ವುಮೆನ್ ಲೈಕ್ ಯು' ಕಾಫಿ ಟೇಬಲ್ ಪುಸ್ತಕ ರಿಲೀಸ್‌

ಇದೀಗ ಎಲ್‌ಜಿ ಎಲೆಕ್ಟ್ರಾನಿಕ್ಸ್ ಇಂಡಿಯಾ ಲಿಮಿಟೆಡ್, ಸೆಬಿಯಿಂದ ಐಪಿಒಗೆ ಅನುಮೋದನೆಯನ್ನು ಪಡೆದಿದ್ದು ಸದ್ಯ ಮಾರುಕಟ್ಟೆಗೆ ಯಾವ ದಿನಾಂಕದಂದು ಲಿಸ್ಟ್‌ ಆಗಲಿದೆ ಎಂಬ ಬಗ್ಗೆ ಘೋಷಣೆಯಾಗಿಲ್ಲ. ಆದರೆ ಸದ್ಯದಲ್ಲೇ ಲಿಸ್ಟ್‌ ಆಗುವ ನಿರೀಕ್ಷೆ ಇದೆ ಎನ್ನಲಾಗಿದೆ. ಭಾರತದ ಹೋಂ ಅಪ್ಲೈನ್ಸೆಸ್‌ ಹಾಗೂ ಗ್ರಾಹಕ ಇಲೆಕ್ಟ್ರಾನಿಕ್ಸ್‌ ಮಾರುಕಟ್ಟೆಯ ಕಿಂಗ್‌ ಎನಿಸಿಕೊಂಡಿರುವ ಎಲ್‌ಜಿ ಇಲೆಕ್ಟ್ರಾನಿಕ್ಸ್‌ 2024ನೇ ಹಣಕಾಸು ವರ್ಷದಲ್ಲಿ 21,352 ಕೋಟಿ ಆದಾಯವನ್ನು ಘೋಷಿಸಿದೆ. 2023ರಲ್ಲಿ 19,868.24 ಕೋಟಿ ಆದಾಯವಿದ್ದು ತೆರಿಗೆ ನಂತರದ ಲಾಭ ಕಳೆದ ವರ್ಷಕ್ಕೆ ಹೋಲಿ ಸಿದರೆ ಶೇ. 12.35 ರಷ್ಟು ಏರಿಕೆ ಕಂಡಿದೆ. ಈ ಐಪಿಒವನ್ನು ಮಾರ್ಗನ್‌ ಸ್ಟಾನ್ಲಿ, ಜೆ ಪಿ ಮಾರ್ಗನ್‌ ಇಂಡಿಯಾ, ಎಕ್ಸಿಸ್‌ ಕ್ಯಾಪಿಟಲ್‌, ಬೊಫಾ ಸೆಕ್ಯೂರಿಟಿಸ್‌ ಇಂಡಿಯಾ ಮತ್ತು ಸಿಟಿ ಗ್ರೂಪ್‌ ಗ್ಲೋಬಲ್‌ ಮಾರ್ಕೆಟ್‌  ಇಂಡಿಯಾ ನಿರ್ವಹಿಸುತ್ತಿದ್ದು , ಕೆಫಿನ್‌ ಟೆಕ್ನಾಲಜಿಸ್‌ ರೆಜಿಸ್ಟ್ರಾರ್‌ ಆಗಿ ಕಾರ್ಯನಿರ್ವಹಿಸುತ್ತಿದೆ.