ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮೈಕ್ರೋ ಲೋನ್ಸ್ ಪೂರೈಕೆ ಮತ್ತು ಎಲ್ಲರಿಗೂ ಜೀವವಿಮೆ: ಎಚ್‌ಡಿಎಫ್‌ಸಿ ಲೈಫ್-ದಿಗಂಬರ್ ಕ್ಯಾಪ್‌ಫಿನ್ ಲಿ., ಸಹಯೋಗ

“ದಿಗಂಬರ್ ಕ್ಯಾಪ್‌ಫಿನ್ ಲಿ.,ನೊಪ್ಂದಿಗೆ ಸಹಯೋಗ ಏರ್ಪಡಿಸಿಕೊಳ್ಳುತ್ತಿರುವುದಕ್ಕೆ ನಮಗೆ ಸಂತೋಷವಾಗುತ್ತಿದೆ. ಜೀವ ವಿಮಾ ಉದ್ದಿಮೆಯು, “2047 ವೇಳೆಗೆ ಎಲ್ಲರಿಗೂ ಜೀವವಿಮೆ” ಯ ಗುರಿಯನ್ನು ಸಾಧಿಸಲು ಸಜ್ಜಾಗಿದೆ. ಎಚ್‌ಡಿಎಫ್‌ಸಿ ಲೈಫ್‌ನಲ್ಲಿ ನಾವು ವಿವಿಧ ಭೌಗೋಳಿಕ ಪ್ರದೇಶ ಗಳಾದ್ಯಂತ ನಮ್ಮ ಹೆಜ್ಜೆಗುರುತನ್ನು ವರ್ಧಿಸುವ ಮೂಲಕ ಈ ಸಂಘಟಿತ ಗುರಿಯನ್ನು ಸಾಧಿಸುವ ಪ್ರಯತ್ನ ನಡೆಸಿದ್ದೇವೆ

2047 ವೇಳೆಗೆ ಎಲ್ಲರಿಗೂ ಜೀವವಿಮೆ

Profile Ashok Nayak Jun 23, 2025 11:42 AM

ಬೆಂಗಳೂರು: ಭಾರತದ ಮುಂಚೂಣಿ ಜೀವ ವಿಮಾ ಸಂಸ್ಥೆಗಳ ಪೈಕಿ ಒಂದಾದ ಎಚ್‌ಡಿಎಫ್‌ಸಿ ಲೈಫ್ (HDFC Life) ಮತ್ತು ದಿಗಂಬರ್ ಕ್ಯಾಪ್‌ಫಿನ್ ಲಿ., ಮೈಕ್ರೋ ಲೋನ್ಸ್ ಪೂರೈಸುವ ಗುರಿ ಯೊಂದಿಗೆ ಹಣಕಾಸು ಒಳಗೊಳ್ಳುವಿಕೆಯನ್ನು ವರ್ಧಿಸುವುದಕ್ಕಾಗಿ ಒಂದುಗೂಡಿವೆ. ಈ ಸಹಭಾಗಿತ್ವವು, ಭಾರತದ ವಿವಿಧ ಸೇವಾವಂಚಿತ ಪ್ರದೇಶಗಳಾದ್ಯಂತ ಜೀವವಿಮೆಗೆ(life insurance) ಪ್ರವೇಶಾವಕಾಶ ಒದಗಿಸಲಿದೆ.

ಈ ಸಹಯೋಗವು, ರಾಜಸ್ಥಾನ, ಮಧ್ಯಪ್ರದೇಶ, ಬಿಹಾರ, ಉತ್ತರಪ್ರದೇಶ, ಉತ್ತರಾಖಂಡ, ಹರಿಯಾಣ, ಪಂಜಾಬ್, ಹಿಮಾಚಲ ಪ್ರದೇಶ ಹಾಗೂ ಜಮ್ಮು ಮತ್ತು ಕಾಶ್ಮೀರಗಳ 120 ಜಿಲ್ಲೆಗಳಾದ್ಯಂತ ದಿಗಂಬರ್ ಕ್ಯಾಪ್‌ಫಿನ್ ಲಿ.,ನ ವ್ಯಾಪಕ ಕಾರ್ಯಜಾಲವನ್ನು ವರ್ಧಿಸುವ ಮೂಲಕ ಭಾಗಶಃ ನಗರ ಹಾಗೂ ಗ್ರಾಮೀಣ ಮಾರುಕಟ್ಟೆಗಳೊಳಗೆ ಜೀವ ವಿಮೆಯನ್ನು ಸುದೀರ್ಘವಾಗಿ ತರಲು ನೆರವಾಗಲಿದೆ.

ಇದನ್ನೂ ಓದಿ: Kiran Upadhyay Column: ಏರುಗತಿಯಲ್ಲೇ ಸಾಗುತ್ತಿರುವ ಏಶಿಯನ್‌ ಪೇಂಟ್ಸ್‌

ಇದು, ಎರಡೂ ಸಂಸ್ಥೆಗಳ ಸಾಮಾನ್ಯ ಧ್ಯೇಯೋದ್ದೇಶ-ಅಂದರೆ, ವೈವಿಧ್ಯಮಯವಾದ ಹಾಗೂ ಈ ಮೊದಲು ಉಪಯೋಗಕ್ಕೆ ತರದ ಸಮುದಾಯಗಳನ್ನು ತಲುಪುವ ಮೂಲಕ ಹಣಕಾಸು ಒಳಗೊಳ್ಳುವಿಕೆಯಲ್ಲಿ ಇರುವ ಅಂತರವನ್ನು ಕಡಿಮೆ ಮಾಡುವ ಧ್ಯೇಯೋದ್ದೇಶಕ್ಕೆ ಇನ್ನಷ್ಟು ಒತ್ತು ನೀಡಲಿದೆ. ಈ ಉಪಕ್ರಮವು, ಪ್ರತಿಯೊಬ್ಬ ಭಾರತೀಯನಿಗೂ ಜೀವ ವಿಮೆಗೆ ಅವಕಾಶ ಒದಗಿಸಬೇಕೆನ್ನುವ ಎಚ್‌ಡಿಎಫ್‌ಸಿ ಲೈಫ್‌ನ ಬದ್ಧತೆಗೆ ಅನುಗುಣವಾಗಿದ್ದು, ಬೃಹತ್ ಪ್ರಮಾಣದ ಹಣಕಾಸು ಭದ್ರತೆಯ ದೊಡ್ಡ ಗುರಿ ಮತ್ತ ಎಲ್ಲರನ್ನೂ ಸಬಲಗೊಳಿಸುವ ಗುರಿಗೆ ಕೊಡುಗೆ ಸಲ್ಲಿಸಿದೆ.

ಈ ಕುರಿತು ಮಾತನಾಡುತ್ತಾ, ಎಚ್‌ಡಿಎಫ್‌ಸಿ ಲೈಫ್‌ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಮತ್ತು ಚೀಫ್ ಬಿಜಿನೆಸ್ ಆಫಿಸರ್ ವಿನೀತ್ ಅರೋರ , “ದಿಗಂಬರ್ ಕ್ಯಾಪ್‌ಫಿನ್ ಲಿ.,ನೊಪ್ಂದಿಗೆ ಸಹಯೋಗ ಏರ್ಪಡಿಸಿಕೊಳ್ಳುತ್ತಿರುವುದಕ್ಕೆ ನಮಗೆ ಸಂತೋಷವಾಗುತ್ತಿದೆ. ಜೀವ ವಿಮಾ ಉದ್ದಿಮೆಯು, “2047 ವೇಳೆಗೆ ಎಲ್ಲರಿಗೂ ಜೀವವಿಮೆ” ಯ ಗುರಿಯನ್ನು ಸಾಧಿಸಲು ಸಜ್ಜಾಗಿದೆ. ಎಚ್‌ಡಿಎಫ್‌ಸಿ ಲೈಫ್‌ನಲ್ಲಿ ನಾವು ವಿವಿಧ ಭೌಗೋಳಿಕ ಪ್ರದೇಶಗಳಾದ್ಯಂತ ನಮ್ಮ ಹೆಜ್ಜೆಗುರುತನ್ನು ವರ್ಧಿಸುವ ಮೂಲಕ ಈ ಸಂಘಟಿತ ಗುರಿಯನ್ನು ಸಾಧಿಸುವ ಪ್ರಯತ್ನ ನಡೆಸಿದ್ದೇವೆ. ಈ ಸಹಯೋಗವು, ವಿಶೇಷವಾಗಿ, ಸಮಾಜದ ಆರ್ಥಿಕವಾಗಿ ದುರ್ಬಲವಾದ ವರ್ಗಕ್ಕೆ ಸೇರಿದವರಿಗೆ ವಿಮೆ ಒದಗಿಸುವಲ್ಲಿ ಮತ್ತು ಆ ಮೂಲಕ ಅವರು ಹಾಗೂ ಅವರ ಕುಟುಂಬಗಳನ್ನು ಸುಭದ್ರಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ನಾವು ನಂಬಿದ್ದೇವೆ.” ಎಂದು ಹೇಳಿದರು.

ಈ ಸಹಯೋಗದ ಬಗ್ಗೆ ಮಾತನಾಡುತ್ತಾ, ದಿಗಂಬರ್ ಕ್ಯಾಪ್‌ಫಿನ್ ಲಿ.,ನ ಚೇರ್ಮನ್ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಜಿವ್ ಜೈ ನ್, “ಸೇವಾವಂಚಿತ ಉದ್ದಿಮೆದಾರರು ಪಡೆದುಕೊಳ್ಳುವ ಪ್ರತಿಯೊಂದು ಸಾಲವೂ ಅವರಿಗೆ ಸಾಮಾಜಿಕ ಸುಭದ್ರತೆ ಒದಗಿಸುವುದನ್ನು ಖಾತರಿಪಡಿಸುವ ಸಲುವಾಗಿ ಎಚ್‌ಡಿಎಫ್‌ಸಿದೊಂದಿಗೆ ಸಹಯೋಗ ಏರ್ಪಡಿಸಿಕೊಂಡಿರುವುದಕ್ಕೆ ನಮಗೆ ಅತ್ಯಂತ ಹರ್ಷವಾಗುತ್ತಿದೆ. ಈ ಸಹಯೋಗವು ಸಾಲಗಾರರು ಮರಣ ಹೊಂದಿದ ದುರಾದೃಷ್ಟಕರ ಸಂದರ್ಭದಲ್ಲಿ ಅವರ ಕುಟುಂಬಗಳಿಗೆ ಹಣಕಾಸು ರಕ್ಷಣೆ ಒದಗಿಸಲಿದೆ.

ಗ್ರಾಹಕ ಗಮನ ಕೇಂದ್ರೀಕರಣದ ಮೇಲೆ ಎಚ್‌ಡಿಎಫ್‌ಸಿ ಲೈಫ್‌ನ ಪ್ರಬಲ ಗಮನ ಕೇಂದ್ರೀಕರಣ ಹಾಗೂ ಅದರ ಸರಳ, ಮೊದಲಿನಿಂದ-ಕೊನೆಯವರೆಗಿನ ಪ್ರಕ್ರಿಯೆಗಳು, ಆರ್ಥಿಕ ಸ್ತರದ ತಳಭಾಗ ದಲ್ಲಿರುವ ಕಡಿಮೆ-ಆದಾಯದ ವ್ಯಕ್ತಿಗಳಿಗೆ ವಿಮಾ ಕವರೇಜ್‌ಅನ್ನು ಪರಿಣಾಮಕಾರಿಯಾಗಿ ಒದಗಿಸಲು ದಿಗಂಬರ್ ಕ್ಯಾಪ್‌ಫಿನ್ ಲಿ.,ಗೆ ನೆರವಾಗಲಿದೆ.” ಎಂದು ಹೇಳಿದರು.