ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

MUFG ಬ್ಯಾಂಕ್‌ನಿಂದ ಶ್ರೀರಾಮ್ ಫೈನಾನ್ಸ್‌ನಲ್ಲಿ ಬೃಹತ್ ಹೂಡಿಕೆ

ಭಾರತೀಯ ಸ್ಪರ್ಧಾ ಆಯೋಗದಂತಹ ಅಗತ್ಯ ನಿಯಾಮಕ ಮತ್ತು ಕಾನೂನು ಅನುಮತಿಗಳು ಲಭಿಸಿವೆ. ಈ ಹೂಡಿಕೆಯ ನಂತರ, MUFG ಬ್ಯಾಂಕ್ ಶ್ರೀರಾಮ್ ಫೈನಾನ್ಸ್‌ನಲ್ಲಿ ಪೂರ್ಣ ಪ್ರಮಾಣದ ಸಮ್ಮಿಲಿತ ಆಧಾರದ ಮೇಲೆ (Fully Diluted Basis) 20% ಪಾಲನ್ನು ಹೊಂದಲಿದೆ. ಇದು ಭಾರತದ ಹಣಕಾಸು ಸೇವೆಗಳ ಕ್ಷೇತ್ರದಲ್ಲಿ ನಡೆದ ಅತಿ ದೊಡ್ಡ ಅಂತರರಾಷ್ಟ್ರೀಯ ಹೂಡಿಕೆಗಳಲ್ಲಿ ಒಂದಾಗಿದೆ.

MUFG ಬ್ಯಾಂಕ್‌ನಿಂದ ಶ್ರೀರಾಮ್ ಫೈನಾನ್ಸ್‌ನಲ್ಲಿ ಬೃಹತ್ ಹೂಡಿಕೆ

-

Profile
Ashok Nayak Apr 8, 2026 9:28 PM

ಜಪಾನ್‌ನ ಪ್ರಮುಖ ಹಣಕಾಸು ಸಂಸ್ಥೆಯಾದ MUFG Bank, ಭಾರತದ ಪ್ರಮುಖ ಬ್ಯಾಂಕೇತರ ಹಣಕಾಸು ಸಂಸ್ಥೆ ಶ್ರೀರಾಮ್ ಫೈನಾನ್ಸ್ ಲಿಮಿಟೆಡ್‌ನಲ್ಲಿ ತನ್ನ ಬೃಹತ್ ಹೂಡಿಕೆಯನ್ನು ಯಶಸ್ವಿ ಯಾಗಿ ಪೂರ್ಣಗೊಳಿಸಿದೆ. ಈ ಹೂಡಿಕೆಯು ಆದ್ಯತೆಯ ಹಂಚಿಕೆ (Preferential Issue) ಮೂಲಕ ನಡೆದಿದ್ದು, ಪ್ರತಿ ಷೇರಿಗೆ ₹840.93 ರಂತೆ ಒಟ್ಟು 47,11,21,055 ಇಕ್ವಿಟಿ ಷೇರುಗಳನ್ನು ಖರೀದಿಸ ಲಾಗಿದೆ. ಈ ವ್ಯವಹಾರದ ಒಟ್ಟು ಮೊತ್ತವು ಸುಮಾರು ₹39,618 ಕೋಟಿಗಳಾಗಿದೆ.

ಈ ವ್ಯವಹಾರಕ್ಕೆ ಕಂಪನಿಯ ನಿರ್ದೇಶಕರ ಮಂಡಳಿಯ ಅನುಮೋದನೆ ಸೇರಿದಂತೆ, ಭಾರತೀಯ ಸ್ಪರ್ಧಾ ಆಯೋಗದಂತಹ ಅಗತ್ಯ ನಿಯಾಮಕ ಮತ್ತು ಕಾನೂನು ಅನುಮತಿಗಳು ಲಭಿಸಿವೆ. ಈ ಹೂಡಿಕೆಯ ನಂತರ, MUFG ಬ್ಯಾಂಕ್ ಶ್ರೀರಾಮ್ ಫೈನಾನ್ಸ್‌ನಲ್ಲಿ ಪೂರ್ಣ ಪ್ರಮಾಣದ ಸಮ್ಮಿಲಿತ ಆಧಾರದ ಮೇಲೆ (Fully Diluted Basis) 20% ಪಾಲನ್ನು ಹೊಂದಲಿದೆ. ಇದು ಭಾರತದ ಹಣಕಾಸು ಸೇವೆಗಳ ಕ್ಷೇತ್ರದಲ್ಲಿ ನಡೆದ ಅತಿ ದೊಡ್ಡ ಅಂತರರಾಷ್ಟ್ರೀಯ ಹೂಡಿಕೆಗಳಲ್ಲಿ ಒಂದಾಗಿದೆ.

ಇದನ್ನೂ ಓದಿ: Shriram Finance: ಶ್ರೀರಾಮ್‌ ಫೈನಾನ್ಸ್‌ನಲ್ಲಿ 39,618 ಕೋಟಿ ಹೂಡಿಕೆ ಘೋಷಿಸಿದ ಜಪಾನ್‌ ಬ್ಯಾಂಕ್‌

ಈ ಕ್ರಮವು MUFG ಸಂಸ್ಥೆಯ ಭಾರತದಲ್ಲಿನ ತನ್ನ ಉಪಸ್ಥಿತಿ ಬಲಪಡಿಸುವುದಲ್ಲದೆ, ಶ್ರೀರಾಮ್ ಫೈನಾನ್ಸ್‌ಗೆ ಜಾಗತಿಕ ಮಟ್ಟದ ಪರಿಣತಿಯನ್ನು ಬಳಸಿಕೊಂಡು ತನ್ನ ಬೆಳವಣಿಗೆಯನ್ನು ವೇಗಗೊಳಿ ಸಲು ನೆರವಾಗಲಿದೆ.

ಶ್ರೀರಾಮ್ ಫೈನಾನ್ಸ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಉಮೇಶ್ ರೇವಂಕರ್ ಮಾತನಾಡಿ, ಈ ಹೂಡಿಕೆಯು ಸಂಸ್ಥೆಯ ಬೆಳವಣಿಗೆಯ ಹಾದಿಯಲ್ಲಿ ಒಂದು ಮಹತ್ವದ ಮೈಲಿಗಲ್ಲಾಗಿದ್ದು, MUFG ಜೊತೆಗಿನ ಸಹಭಾಗಿತ್ವವು ನವೀನತೆ ಮತ್ತು ಕಡಿಮೆ ವೆಚ್ಚದ ಹಣಕಾಸು ವ್ಯವಸ್ಥೆಯನ್ನು ತರಲಿದೆ ಎಂದು ತಿಳಿಸಿದರು.

MUFG ಸಂಸ್ಥೆಯ ಅಧ್ಯಕ್ಷ ಜುನಿಚಿ ಹನಜಾವಾ ಅವರು, ಭಾರತದ MSME ಮತ್ತು ಚಿಲ್ಲರೆ ಕ್ಷೇತ್ರ ಗಳಲ್ಲಿನ ಬೆಳವಣಿಗೆಯ ಅವಕಾಶಗಳನ್ನು ಗುರುತಿಸಿ ಈ ಹೂಡಿಕೆ ಮಾಡಲಾಗಿದೆ ಎಂದು ಹಂಚಿ ಕೊಂಡಿದ್ದಾರೆ. ಈ ಸಹಭಾಗಿತ್ವವು ಭಾರತದಲ್ಲಿ ಹಣಕಾಸು ಒಳಗೊಳ್ಳುವಿಕೆಯನ್ನು ಉತ್ತೇಜಿಸುವ ಜೊತೆಗೆ ದೀರ್ಘಕಾಲೀನ ಆರ್ಥಿಕ ಸ್ಥಿರತೆಗೆ ಸಹಕಾರಿಯಾಗಲಿದೆ ಎಂದರು.