Yezdi Roadster Red Wolf: ಅಮೆಜಾನ್, ಫ್ಲಿಪ್‌ಕಾರ್ಟ್‌ನಲ್ಲೂ ಲಭ್ಯ ಹೊಸ 'ಯೆಜ್ಡಿ ರೋಡ್‌ಸ್ಟರ್ ರೆಡ್ ವೂಲ್ಫ್' ಬೈಕ್; ಬೆಲೆ ಎಷ್ಟು?
Yezdi Bikes: ಜಾವಾ-ಯೆಜ್ಡಿ ಮೋಟಾರ್‌ಸೈಕಲ್ಸ್ ತನ್ನ ಹೊಚ್ಚ ಹೊಸ 'ಯೆಜ್ಡಿ ರೋಡ್‌ಸ್ಟರ್ ರೆಡ್ ವೂಲ್ಫ್' ಬೈಕ್ ಅನ್ನು ಮನೆಯಲ್ಲಿಯೇ ಕುಳಿತು ಆನ್‌ಲೈನ್ ಮೂಲಕ ಬುಕ್ ಮಾಡುವ ಅವಕಾಶವನ್ನು ಗ್ರಾಹಕರಿಗೆ ಕಲ್ಪಿಸಿದೆ. ಶೋರೂಂಗಳಿಗೆ ಹೋಗದೆ, ಜನಪ್ರಿಯ ಇ-ಕಾಮರ್ಸ್ ತಾಣಗಳಾದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಬೈಕ್ ಬುಕ್ ಮಾಡಬಹುದಾಗಿದೆ. ಈ ಕುರಿತ ಡಿಟೇಲ್ಸ್ ಇಲ್ಲಿದೆ.
'ಯೆಜ್ಡಿ ರೋಡ್‌ಸ್ಟರ್ ರೆಡ್ ವೂಲ್ಫ್' ಬೈಕ್ -
ಬೆಂಗಳೂರು, ಆ.20: ಖ್ಯಾತ ಬೈಕ್ ತಯಾರಕ ಕಂಪನಿ ಜಾವಾ-ಯೆಜ್ಡಿ ಮೋಟಾರ್‌ಸೈಕಲ್ಸ್ ತನ್ನ ಹೊಚ್ಚ ಹೊಸ 'ಯೆಜ್ಡಿ ರೋಡ್‌ಸ್ಟರ್ ರೆಡ್ ವೂಲ್ಫ್' ಬೈಕ್ (Yezdi Roadster Red Wolf) ಅನ್ನು ಮನೆಯಲ್ಲಿಯೇ ಕುಳಿತು ಆನ್‌ಲೈನ್ ಮೂಲಕ ಬುಕ್ ಮಾಡುವ ಅವಕಾಶವನ್ನು ಗ್ರಾಹಕರಿಗೆ ಕಲ್ಪಿಸಿದೆ. ಶೋರೂಂಗಳಿಗೆ ಹೋಗದೆ, ಜನಪ್ರಿಯ ಇ-ಕಾಮರ್ಸ್ ತಾಣಗಳಾದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ಬೈಕ್ ಬುಕ್ ಮಾಡಬಹುದಾಗಿದೆ. ಈ ಮೂಲಕ ಜಾವಾ-ಯೆಜ್ಡಿ, ಪ್ರೀಮಿಯಂ ಬೈಕ್ ಮಾರಾಟದಲ್ಲಿ ಡಿಜಿಟಲ್ ಕ್ರಾಂತಿಗೆ ಮುನ್ನುಡಿ ಬರೆದಿದೆ.
ಹೊಸ ರೆಡ್ ವೂಲ್ಫ್ ಬೈಕ್‌ನ ವಿಶೇಷತೆಗಳೇನು?
1970ರ ದಶಕದ ಯೆಜ್ಡಿ ಬೈಕ್‌ಗಳ ಇತಿಹಾಸದಿಂದ ಸ್ಫೂರ್ತಿ ಪಡೆದು ಈ ಬೈಕ್ ಅನ್ನು ವಿನ್ಯಾಸಗೊಳಿಸಲಾಗಿದೆ. ಇದರ ಕಡು ಕೆಂಪು ಬಣ್ಣ ಹಾಗೂ ಕ್ರೋಮ್ ವಿನ್ಯಾಸವು, ರಸ್ತೆಯಲ್ಲಿ ರಾಜನಂತೆ ಕಂಗೊಳಿಸುವ ಲುಕ್ ನೀಡುತ್ತದೆ.
ಇದು 350 ಸಿಸಿ (ಆಲ್ಫಾ2) ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿದ್ದು, 6 ಸ್ಪೀಡ್ ಗೇರ್‌ಬಾಕ್ಸ್, ಸ್ಲಿಪ್ಪರ್ ಕ್ಲಚ್ ಮತ್ತು ಡ್ಯುಯಲ್ ಚಾನೆಲ್ ಎಬಿಎಸ್‌ನಂತಹ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿದೆ. ದೀರ್ಘಾವಧಿಯ ಪ್ರಯಾಣಕ್ಕೂ ಆಯಾಸವಾಗದಂತೆ ಅತ್ಯುತ್ತಮ ಸೀಟಿಂಗ್ ವ್ಯವಸ್ಥೆ ಇದರಲ್ಲಿದೆ. ಇದರ 12.5 ಲೀಟರ್ ಸಾಮರ್ಥ್ಯದ ಪೆಟ್ರೋಲ್ ಟ್ಯಾಂಕ್ ಒಮ್ಮೆ ಫುಲ್ ಆದರೆ ಬರೋಬ್ಬರಿ 350 ಕಿ.ಮೀ. ಗೂ ಹೆಚ್ಚು ದೂರ ಕ್ರಮಿಸಬಹುದಾಗಿದೆ. ಇದರ ಎಕ್ಸ್-ಶೋರೂಂ (ದೆಹಲಿ) ಬೆಲೆ 2,09,950 ರೂ. ಆಗಿದ್ದು, ದೇಶಾದ್ಯಂತ ಇರುವ ಜಾವಾ-ಯೆಜ್ಡಿ ಅಧಿಕೃತ ಡೀಲರ್‌ಶಿಪ್‌ಗಳಲ್ಲೂ ಖರೀದಿಗೆ ಲಭ್ಯವಿದೆ.
ಈ ಡಿಜಿಟಲ್ ಬುಕ್ಕಿಂಗ್ ಕುರಿತು ಮಾತನಾಡಿದ ಕ್ಲಾಸಿಕ್ ಲೆಜೆಂಡ್ಸ್‌ನ ಸಹ-ಸಂಸ್ಥಾಪಕ ಅನುಪಮ್ ಥರೇಜಾ, ʼತನ್ನ ವಿಶಿಷ್ಟ ಸ್ಟೈಲ್‌ನಿಂದಾಗಿ ಯೆಜ್ಡಿ ರೋಡ್‌ಸ್ಟರ್ ಈಗಾಗಲೇ ಗ್ರಾಹಕರ ಮನಗೆದ್ದಿದೆ. ಈಗ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಂತಹ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಇದು ದೇಶದ ಮೂಲೆ ಮೂಲೆಗಳಿಗೂ ಸುಲಭವಾಗಿ ತಲುಪಲಿದೆ. ಗ್ರಾಹಕರಿಗೆ ಡಿಜಿಟಲ್ ಮೂಲಕ ನಮ್ಮ ಬೈಕ್‌ಗಳನ್ನು ಖರೀದಿಸಲು ಅನುಕೂಲ ಮಾಡಿಕೊಡುವುದು ನಮ್ಮ ಮುಂದಿನ ಗುರಿಯಾಗಿದೆʼ ಎಂದರು.
ಆನ್‌ಲೈನ್‌ನಲ್ಲಿ ಬುಕ್ ಮಾಡುವುದು ಹೇಗೆ?
- ಅಮೆಜಾನ್ ಅಥವಾ ಫ್ಲಿಪ್‌ಕಾರ್ಟ್‌ನಲ್ಲಿ ಎಕ್ಸ್-ಶೋರೂಂ ಬುಕಿಂಗ್ ಮೊತ್ತವನ್ನು ಪಾವತಿಸುವುದು.
- ಬುಕಿಂಗ್ ಆದ ತಕ್ಷಣ ನಿಮ್ಮ ಹತ್ತಿರದ ಅಧಿಕೃತ ಡೀಲರ್ (ಶೋ ರೂಮ್) ನಿಮ್ಮನ್ನು ಸಂಪರ್ಕಿಸಿ, ಆನ್-ರೋಡ್ ಪಾವತಿಯ ಬಗ್ಗೆ ಮಾಹಿತಿ ನೀಡುತ್ತಾರೆ.
- ಶೋರೂಮ್‌ನಲ್ಲಿ ನೋಂದಣಿ (ರಿಜಿಸ್ಟ್ರೇಷನ್) ಮತ್ತು ಇನ್ಶೂರೆನ್ಸ್ ಪ್ರಕ್ರಿಯೆ ಮುಗಿದ ಬಳಿಕ ಬೈಕ್ ಡೆಲಿವರಿ ಮಾಡಲಾಗುತ್ತದೆ.
- ಹೆಚ್ಚುವರಿ ಅಕ್ಸೆಸರೀಸ್‌ಗಳನ್ನು ನೀವು ಅದೇ ಶೋರೂಮ್‌ನಲ್ಲಿ ಖರೀದಿಸಬಹುದು.
ಗ್ರಾಹಕರಿಗೆ ಬಂಪರ್ ಆಫರ್
ಗ್ರಾಹಕರ ಅನುಕೂಲಕ್ಕಾಗಿ ಜಾವಾ-ಯೆಜ್ಡಿ ಹಲವು ಅತ್ಯುತ್ತಮ ಆಫರ್‌ಗಳನ್ನು ನೀಡುತ್ತಿದೆ.
- 4 ವರ್ಷ ಅಥವಾ 50,000 ಕಿ.ಮೀ. ವರೆಗೆ ಸ್ಟ್ಯಾಂಡರ್ಡ್ ವಾರಂಟಿ.
- 6 ವರ್ಷಗಳವರೆಗೆ ವಾರಂಟಿ ವಿಸ್ತರಿಸುವ ಅವಕಾಶ.
- 8 ವರ್ಷಗಳವರೆಗೆ ರಸ್ತೆಬದಿಯಲ್ಲೇ ಸಹಾಯಹಸ್ತ ನೀಡುವ ರೋಡ್‌ಸೈಡ್ ಅಸಿಸ್ಟೆನ್ಸ್ ಸೌಲಭ್ಯ.
- 5 ವರ್ಷಗಳವರೆಗೆ ಎಎಂಸಿ ಕವರೇಜ್.
ಟೆಕ್ ಹಿನ್ನೆಲೆ ಇಲ್ಲದವರಿಗೂ ಕಾಗ್ನಿಜೆಂಟ್‌ನಲ್ಲಿ ಉದ್ಯೋಗ, ಐಐಎಂ ಬೆಂಗಳೂರು ಸೇರಿ 58 ಸಂಸ್ಥೆಗಳ ಪದವೀಧರರ ನೇಮಕ
ಭಾರತದಲ್ಲಿನ ಐಕಾನಿಕ್ ಬ್ರ್ಯಾಂಡ್‌ಗಳಿಗೆ ಮರುಜೀವ ನೀಡುವ ದೃಷ್ಟಿಯಿಂದ ಸ್ಥಾಪನೆಯಾದ 'ಕ್ಲಾಸಿಕ್ ಲೆಜೆಂಡ್ಸ್' ಸಂಸ್ಥೆಯು, ಜಾವಾ, ಯೆಜ್ಡಿ ಹಾಗೂ ಬಿಎಸ್‌ಎ ಬ್ರ್ಯಾಂಡ್‌ಗಳನ್ನು ಮುನ್ನಡೆಸುತ್ತಿದೆ.