ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Kannada New Movie: ಯುವ ಪ್ರೇಮಿಗಳ ಕಥೆ ‘ಮೈ ಬೇಬಿ’: ಫಸ್ಟ್ ಲುಕ್ ಔಟ್‌!

Kannada New Movie: ಪ್ರೇಮಕಥೆಗಳನ್ನು ಬೆಳ್ಳಿತೆರೆಯ ಮೇಲೆ ವಿಭಿನ್ನವಾಗಿ ಕಟ್ಟಿಕೊಡುವಲ್ಲಿ ಸೈ ಎನಿಸಿಕೊಂಡಿರುವ ನಿರ್ದೇಶಕ ಪ್ರೀತಮ್ ಗುಬ್ಬಿ ಅವರ ಸಾರಥ್ಯದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ‘ಮೈ ಬೇಬಿ’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅಧಿಕೃತವಾಗಿ ಬಿಡುಗಡೆಯಾಗಿದೆ. ನವ ಪ್ರತಿಭೆಗಳಾದ ಸುಮುಖ ಹಾಗೂ ಇಶಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಈ ಚಿತ್ರವನ್ನು ‘ನಿಧಿ ಫಿಲ್ಮ್ಸ್ ಪ್ರೊಡಕ್ಷನ್ಸ್’ ಬ್ಯಾನರ್ ಅಡಿಯಲ್ಲಿ ರಂಗನಾಥ್ ಕೆಂಪನಹಳ್ಳಿ ಅವರು ಅತ್ಯಂತ ಅದ್ದೂರಿಯಾಗಿ ನಿರ್ಮಿಸುತ್ತಿದ್ದಾರೆ.

ಯುವ ಪ್ರೇಮಿಗಳ ಕಥೆ ‘ಮೈ ಬೇಬಿ’: ಫಸ್ಟ್ ಲುಕ್  ಔಟ್‌!

ಮೈ ಬೇಬಿ ಸಿನಿಮಾ -

Yashaswi Devadiga
Yashaswi Devadiga Oct 13, 2026 8:01 PM

ಪ್ರೇಮಕಥೆಗಳನ್ನು ಬೆಳ್ಳಿತೆರೆಯ ಮೇಲೆ ವಿಭಿನ್ನವಾಗಿ ಕಟ್ಟಿಕೊಡುವಲ್ಲಿ ಸೈ ಎನಿಸಿಕೊಂಡಿರುವ ನಿರ್ದೇಶಕ ಪ್ರೀತಮ್ ಗುಬ್ಬಿ (Preetham Gubbi) ಅವರ ಸಾರಥ್ಯದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ‘ಮೈ ಬೇಬಿ’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅಧಿಕೃತವಾಗಿ ಬಿಡುಗಡೆಯಾಗಿದೆ. ನವ ಪ್ರತಿಭೆಗಳಾದ ಸುಮುಖ ಹಾಗೂ ಇಶಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಈ ಚಿತ್ರವನ್ನು ‘ನಿಧಿ ಫಿಲ್ಮ್ಸ್ ಪ್ರೊಡಕ್ಷನ್ಸ್’ (Nidhi Films Productions) ಬ್ಯಾನರ್ ಅಡಿಯಲ್ಲಿ ರಂಗನಾಥ್ ಕೆಂಪನಹಳ್ಳಿ ಅವರು ಅತ್ಯಂತ ಅದ್ದೂರಿಯಾಗಿ ನಿರ್ಮಿಸುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾಗಿರುವ ಚಿತ್ರದ ಫಸ್ಟ್ ಲುಕ್ ನೋಡುಗರ ಗಮನ ಸೆಳೆಯುತ್ತಿದ್ದು, ಚಿತ್ರದ ಮೇಲಿನ ಕುತೂಹಲವನ್ನು ಹೆಚ್ಚಿಸಿದೆ.

ಪ್ರೇಕ್ಷಕರಿಗೆ ಸುಲಭವಾಗಿ ಕನೆಕ್ಟ್

ಇಂದಿನ ತಲೆಮಾರಿನ ಯುವಪೀಳಿಗೆ ಪ್ರೀತಿ, ಜೀವನ, ಬಾಂಧವ್ಯ ಹಾಗೂ ಸಂಬಂಧಗಳ ಬದಲಾಗುತ್ತಿರುವ ಸಮೀಕರಣಗಳನ್ನು ಹೇಗೆ ನೋಡುತ್ತದೆ ಎಂಬುದನ್ನು ಕೇಂದ್ರೀಕರಿಸಿ ಈ ಸಮಕಾಲೀನ ಪ್ರೇಮಕಥೆಯನ್ನು ಹೆಣೆಯಲಾಗಿದೆ. ತಮ್ಮದೇ ಆದ ನಿಲುವುಗಳು ಮತ್ತು ದೃಷ್ಟಿಕೋನಗಳನ್ನು ಹೊಂದಿರುವ ಇಬ್ಬರು ವ್ಯಕ್ತಿಗಳ ಪ್ರೇಮ ಪಯಣವನ್ನು ಚಿತ್ರದಲ್ಲಿ ಸೂಕ್ಷ್ಮವಾಗಿ ಕಟ್ಟಿಕೊಡಲಾಗುತ್ತಿದ್ದು, ಇದು ಇಂದಿನ ಯುವ ಪ್ರೇಕ್ಷಕರಿಗೆ ಸುಲಭವಾಗಿ ಕನೆಕ್ಟ್ ಆಗುವಂತಿದೆ.

ಚಿತ್ರದ ಬಹುತೇಕ ಭಾಗದ ಚಿತ್ರೀಕರಣವನ್ನು ಹಿಮಾಚಲ ಪ್ರದೇಶ ಹಾಗೂ ಮನಾಲಿಯ ಹಿಮಾವೃತ ರಮಣೀಯ ತಾಣಗಳಲ್ಲಿ ಸೆರೆಹಿಡಿಯಲಾಗಿದ್ದು, ಈಗಾಗಲೇ ಮೊದಲ ಹಂತದ ಚಿತ್ರೀಕರಣ ಯಶಸ್ವಿಯಾಗಿ ಪೂರ್ಣಗೊಂಡಿದೆ. ಇದೀಗ ಚಿತ್ರತಂಡ ಬೆಂಗಳೂರಿನತ್ತ ಮುಖ ಮಾಡಿದ್ದು, ನಗರದ ವಿಭಿನ್ನ ಪರಿಸರದಲ್ಲಿ ಅಂತಿಮ ಹಂತದ ಚಿತ್ರೀಕರಣವನ್ನು ಆರಂಭಿಸಲು ಭರದಿಂದ ಸಿದ್ಧತೆ ನಡೆಸುತ್ತಿದೆ. ಹಿಮಾಚಲ ಪ್ರದೇಶದ ನೈಸರ್ಗಿಕ ಸೊಬಗು ಮತ್ತು ಬೆಂಗಳೂರಿನ ಆಧುನಿಕ ಜೀವನಶೈಲಿಯ ಹಿನ್ನೆಲೆಯಲ್ಲಿ ಈ ಪ್ರೇಮಕಥೆ ತೆರೆದುಕೊಳ್ಳಲಿದೆ.

ಚಿತ್ರಕ್ಕೆ ಪ್ರತಿಭಾವಂತ ತಂತ್ರಜ್ಞರ ತಂಡ ಬೆನ್ನೆಲುಬಾಗಿ ನಿಂತಿದ್ದು, ಅಭಿಲಾಷ್ ಕಲಾತಿ ಅವರ ಕಣ್ಮನ ಸೆಳೆಯುವ ಛಾಯಾಗ್ರಹಣ ಹಾಗೂ ಖ್ಯಾತ ಸಂಗೀತ ನಿರ್ದೇಶಕ ನಕುಲ್ ಅಭ್ಯಂಕರ್ ಅವರ ಇಂಪಾದ ಸಂಗೀತ ಸಂಯೋಜನೆ ಚಿತ್ರಕ್ಕಿದೆ.

ಇದನ್ನೂ ಓದಿ: Pahalgam Terror Attack: ಕಾಶ್ಮೀರ ಎಂದಿಗೂ ನಮ್ಮದೇ; ಉಗ್ರರ ದಾಳಿಗೆ ನಟ ಯಶ್‌, ಶಿವಣ್ಣ, ಸುದೀಪ್‌ ಸೇರಿ ಪ್ರಮುಖ ನಟ, ನಟಿಯರ ಖಂಡನೆ

ಅಂತಿಮ ಹಂತದ ಚಿತ್ರೀಕರಣ ಮುಗಿಯುತ್ತಿದ್ದಂತೆಯೇ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಚಾಲನೆ ನೀಡಲಿದ್ದು, ಆದಷ್ಟು ಬೇಗ ಬೆಳ್ಳಿಪರದೆಯ ಮೇಲೆ ಪ್ರೇಕ್ಷಕರನ್ನು ಎದುರುಗೊಳ್ಳಲು ಸಿನಿಮಾ ದಾಪುಗಾಲು ಇಡುತ್ತಿದೆ.