Union Budget 2026: ಸತತ 9ನೇ ಬಾರಿಗೆ ಬಜೆಟ್ ಮಂಡಿಸುತ್ತಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್; ಲೈವ್ ನೋಡುವುದು ಹೇಗೆ?
ಕೇಂದ್ರ ಬಜೆಟ್ 2026 ಮಂಡನೆ ಹಿನ್ನೆಲೆಯಲ್ಲಿ ಭಾರತೀಯ ಷೇರುಪೇಟೆ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ (ಬಿಎಸ್‌ಇ) ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ (ಎನ್‌ಎಸ್‌ಇ) ಭಾನುವಾರ ರಜಾದಿನವಾಗಿದ್ದರೂ ಕಾರ್ಯ ನಿರ್ವಹಿಸಲಿದೆ. ಕೇಂದ್ರ ಬಜೆಟ್ ಮಂಡನೆಯಾಗುವ ಕಾರಣ ಷೇರುಪೇಟೆಯಲ್ಲಿ ಲೈವ್ ಟ್ರೇಡಿಂಗ್ ಸೆಷನ್ ಕೂಡ ಇರಲಿದೆ ಎಂದು ಷೇರು ವಿನಿಮಯ ಕೇಂದ್ರಗಳು ಸುತ್ತೋಲೆಯಲ್ಲಿ ತಿಳಿಸಿವೆ. ಭಾರತೀಯ ಷೇರು ವಿನಿಮಯ ಕೇಂದ್ರಗಳು ಸಾಮಾನ್ಯವಾಗಿ ಎಲ್ಲ ಶನಿವಾರ ಮತ್ತು ಭಾನುವಾರ ವಹಿವಾಟು ನಡೆಸುವುದಿಲ್ಲ. ಕೇಂದ್ರ ಬಜೆಟ್ ಮಂಡನೆ ಈ ಹಿಂದೆ ಭಾನುವಾರ ನಡೆಸಿದ ಉದಾಹರಣೆಗಳೂ ಇದೆ. ಆಗ ವಹಿವಾಟು ನಡೆಸಿದ್ದೂ ಇದೆ.
ನಿರ್ಮಲಾ ಸೀತಾರಾಮನ್ (ಸಂಗ್ರಹ ಚಿತ್ರ) -
ನವದೆಹಲಿ, ಫೆ. 1: ಕೇಂದ್ರ ಹಣಕಾಸು ಸಚಿವೆ (Finance Minister) ನಿರ್ಮಲಾ ಸೀತಾರಾಮನ್ (Nirmala Sitharaman) ಭಾನುವಾರ (ಫೆಬ್ರವರಿ 1) 2026-27ನೇ ಸಾಲಿನ ಕೇಂದ್ರ ಬಜೆಟ್ (Budget) ಅನ್ನು ಲೋಕಸಭೆಯಲ್ಲಿ ಮಂಡಿಸಲಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೂರನೇ ಅವಧಿಯ ಮೊದಲ ಪೂರ್ಣ ಪ್ರಮಾಣದ ಬಜೆಟ್ ಇದು.
ಕೇಂದ್ರ ಬಜೆಟ್ 2026ರ ಮಂಡನೆ ಹಿನ್ನೆಲೆಯಲ್ಲಿ ಭಾರತೀಯ ಷೇರುಪೇಟೆ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ (ಬಿಎಸ್‌ಇ) ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ (ಎನ್‌ಎಸ್‌ಇ) ಭಾನುವಾರ ರಜಾ ದಿನವಾಗಿದ್ದರೂ ತೆರೆದು ಕಾರ್ಯ ನಿರ್ವಹಿಸಲಿದೆ ಎಂದು ಪ್ರಕಟಿಸಿದೆ. ಕೇಂದ್ರ ಬಜೆಟ್ ಮಂಡನೆಯಾಗುವ ಕಾರಣ ಷೇರುಪೇಟೆಯಲ್ಲಿ ಲೈವ್ ಟ್ರೇಡಿಂಗ್ ಸೆಷನ್ ಕೂಡ ಇರಲಿದೆ ಎಂದು ಷೇರು ವಿನಿಮಯ ಕೇಂದ್ರಗಳು ಸುತ್ತೋಲೆಯಲ್ಲಿ ತಿಳಿಸಿವೆ. ಭಾರತೀಯ ಷೇರು ವಿನಿಮಯ ಕೇಂದ್ರಗಳು ಸಾಮಾನ್ಯವಾಗಿ ಎಲ್ಲಾ ಶನಿವಾರ ಮತ್ತು ಭಾನುವಾರ ವಹಿವಾಟು ನಡೆಸುವುದಿಲ್ಲ. ಕೇಂದ್ರ ಬಜೆಟ್ ಮಂಡನೆ ಈ ಹಿಂದೆ ಭಾನುವಾರ ನಡೆಸಿದ ಉದಾಹರಣೆಗಳೂ ಇದೆ. ಆಗ ವಹಿವಾಟು ನಡೆಸಿದ್ದೂ ಇದೆ.
ಎಷ್ಟು ಹೊತ್ತಿಗೆ ಬಜೆಟ್ ಮಂಡನೆ?
ಕೇಂದ್ರ ಬಜೆಟ್ 2026 ಅನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ ಅಧಿವೇಶನದ ವೇಳೆ ಮಂಡಿಸುತ್ತಾರೆ. ಸಂಸತ್‌ನ ಬಜೆಟ್ ಅಧಿವೇಶ ಆರಂಭವಾಗಿದ್ದು, ಫೆಬ್ರವರಿ 1ರಂದು ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡನೆಯಾಗಲಿದೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ 9ನೇ ಬಾರಿ ಬಜೆಟ್ ಮಂಡಿಸಲಿದ್ದಾರೆ. ಬಜೆಟ್ 9 ಬಜೆಟ್‌ಗಳ ಪೈಕಿ 7 ಪೂರ್ಣ ಮತ್ತು 2 ಮಧ್ಯಂತರ ಬಜೆಟ್‌ಗಳು ಸೇರಿಕೊಂಡಿವೆ. ಇನ್ನು ಈ ಹಿಂದೆ ಮೊರಾರ್ಜಿ ದೇಸಾಯಿ ಅವರು ಸತತ 6 ಬಾರಿ ಬಜೆಟ್ ಮಂಡನೆ ಮಾಡಿದ್ದರು.
ಇಂದಿನಿಂದ ಬಜೆಟ್ ಅಧಿವೇಶನ ಆರಂಭ, ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ
ಬಜೆಟ್ ಲೈವ್ ವೀಕ್ಷಣೆ ಹೇಗೆ?
ಸರ್ಕಾರದ ಅಧಿಕೃತ ವಾಹಿನಿಗಳಾದ ದೂರದರ್ಶನ ಮತ್ತು ಸಂಸದ್ ಟಿವಿಗಳು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭಾಷಣದ ನೇರ ಪ್ರಸಾರವನ್ನು ಪ್ರಸಾರ ಮಾಡಲಿವೆ. ಸಂಸತ್ತಿನ ಸಂಸದ್ ಟಿವಿ ಮತ್ತು ದೂರದರ್ಶನ ಯೂಟ್ಯೂಬ್ ಪ್ಲಾಟ್‌ಫಾರ್ಮ್‌ಗಳು ಕೇಂದ್ರ ಬಜೆಟ್ 2026-27 ರ ಮಂಡನೆಯನ್ನು ಪ್ರಸಾರ ಮಾಡುತ್ತವೆ.
ಕೇಂದ್ರ ಬಜೆಟ್ 2026-27ರ ಬಜೆಟ್ ಪ್ರತಿ ಎಲ್ಲಿ ಸಿಗುತ್ತೆ?
ಕೇಂದ್ರ ಬಜೆಟ್ 2026-27ರ ಬಜೆಟ್ ಪ್ರತಿ ಕೇಂದ್ರ ಸರ್ಕಾರದ ಯೂನಿಯನ್ ಬಜೆಟ್ ಮೊಬೈಲ್ ಅಪ್ಲಿಕೇಷನ್‌ನಲ್ಲಿ ಪಿಡಿಎಫ್ ಪ್ರತಿಯ ರೂಪದಲ್ಲಿ ಲಭ್ಯವಿದೆ ಅಥವಾ ಯೂನಿಯನ್ ಬಜೆಟ್ ವೆಬ್ ಪೋರ್ಟಲ್ (www.indiabudget.gov.in) ಅಥವಾ Android ಮತ್ತು iOS ಬಳಕೆದಾರರು ಯೂನಿಯನ್ ಬಜೆಟ್‌ನ ಬಹುಭಾಷಾ ಅಪ್ಲಿಕೇಶನ್ ಡೌನ್‌ಲೋಡ್ ಮಾಡಬಹುದು. ಬಜೆಟ್ ಪ್ರತಿ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಲಭ್ಯ.
ಇನ್ನು ಈ ಬಾರಿಯ ಬಜೆಟ್‌ದೇಶದ ಆರ್ಥಿಕ ದಿಕ್ಕು ಮತ್ತು ಭವಿಷ್ಯದ ರೂಪರೇಷೆಗಳನ್ನು ನಿರ್ಧರಿಸುವ ಮಹತ್ವದ ಹಂತವಾಗಿದೆ. 2026–27ರ ಕೇಂದ್ರ ಬಜೆಟ್‌ನಲ್ಲಿ ಆರ್ಥಿಕ ವೃದ್ಧಿಗೆ ಉತ್ತೇಜನ ನೀಡುವುದು, ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದು ಹಾಗೂ ಸಾಮಾಜಿಕ ಕಲ್ಯಾಣ ಯೋಜನೆಗಳಿಗೆ ಹೆಚ್ಚಿನ ಮಹತ್ವ ನೀಡುವುದು ಸರ್ಕಾರದ ಪ್ರಮುಖ ಗುರಿಯಾಗಿರಲಿದೆ ಎಂಬ ನಿರೀಕ್ಷೆಯಿದೆ. ಮೂಲಸೌಕರ್ಯ ನಿರ್ಮಾಣ, ಕೃಷಿ ವಲಯದ ಬಲವರ್ಧನೆ ಮತ್ತು ಉತ್ಪಾದನಾ ಕ್ಷೇತ್ರಕ್ಕೆ ಉತ್ತೇಜನ ನೀಡುವ ಯೋಜನೆಗಳು ಬಜೆಟ್‌ನ ಕೇಂದ್ರಬಿಂದುವಾಗುವ ಸಾಧ್ಯತೆ ಇದೆ. ಜೊತೆಗೆ ತೆರಿಗೆ ನೀತಿಗಳಲ್ಲಿ ತಿದ್ದುಪಡಿ, ಸಬ್ಸಿಡಿಗಳ ವ್ಯವಸ್ಥೆ ಮತ್ತು ಸರ್ಕಾರದ ವೆಚ್ಚದ ಆದ್ಯತೆಗಳು ಪ್ರಮುಖ ವಿಚಾರಗಳಾಗಿರಲಿವೆ. ರಾಜ್ಯ ಸರ್ಕಾರಗಳ ಆರ್ಥಿಕ ಬೇಡಿಕೆಗಳು ಹಾಗೂ ಕೇಂದ್ರ–ರಾಜ್ಯ ಸಂಬಂಧಗಳ ಕುರಿತ ಚರ್ಚೆಯೂ ಬಜೆಟ್‌ನಲ್ಲಿ ಪ್ರಮುಖ ಸ್ಥಾನ ಪಡೆಯುವ ನಿರೀಕ್ಷೆಯಿದೆ.