ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಡಾಲರ್ ಎದುರು ರೂಪಾಯಿ ಮೌಲ್ಯ 19 ಪೈಸೆ ಏರಿಕೆ; 8 ತಿಂಗಳ ಗರಿಷ್ಠ ಮಟ್ಟ ದಾಖಲು

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ಚೇತರಿಕೆ ಕಂಡಿದ್ದು, ಕಳೆದ ಎಂಟು ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೆ ತಲುಪಿದೆ. ಇಂದಿನ ಆರಂಭಿಕ ವಹಿವಾಟಿನಲ್ಲಿ ರೂಪಾಯಿ 19 ಪೈಸೆಗಳಷ್ಟು ಏರಿಕೆ ಕಾಣುವ ಮೂಲಕ ಡಾಲರ್ ಎದುರು 92.43ಕ್ಕೆ ತಲುಪಿ ಗಮನ ಸೆಳೆದಿದೆ. ಆರ್‌ಬಿಐ ರಕ್ಷಣಾತ್ಮಕ ಕ್ರಮ, ಎಫ್‌ಐಐಗಳ ಹೂಡಿಕೆ ಒಳಹರಿವು ಮೊದಲಾದ ಸಂಗತಿಗಳು ರೂಪಾಯಿಗೆ ಅನುಕೂಲವಾಗಿವೆ.

ಡಾಲರ್ ಎದುರು ರೂಪಾಯಿ ಮೌಲ್ಯ 19 ಪೈಸೆ ಏರಿಕೆ

8 ತಿಂಗಳ ಬಳಿಕ ಡಾಲರ್‌ ಮುಂದೆ ಚೇತರಿ ಕಂಡ ರೂಪಾಯಿ ಮೌಲ್ಯ -

Profile
Jyoti S Nov 23, 2026 12:46 PM

ಮುಂಬೈ, ನ.23: ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಇಂದು ಭಾರತೀಯ ರೂಪಾಯಿ ಮೌಲ್ಯ ಉತ್ತಮ ಆರಂಭ ಪಡೆದುಕೊಂಡಿದೆ. ಅಮೆರಿಕನ್ ಡಾಲರ್ (US Dollar) ಎದುರು ರೂಪಾಯಿ 19 ಪೈಸೆಗಳಷ್ಟು ಮೌಲ್ಯ ಹೆಚ್ಚಿಸಿಕೊಂಡಿದ್ದು, 92.43ರ ಮಟ್ಟದಲ್ಲಿ ವಹಿವಾಟು ಆರಂಭಿಸಿದೆ. ಇದು ಕಳೆದ ಎಂಟು ತಿಂಗಳಲ್ಲೇ ರೂಪಾಯಿ ದಾಖಲಿಸಿದ ಅತ್ಯಂತ ಗರಿಷ್ಠ ಮಟ್ಟವಾಗಿದ್ದು, ಹೂಡಿಕೆದಾರರು ಹಾಗೂ ಆರ್ಥಿಕ ವಲಯದಲ್ಲಿ ಸಕಾರಾತ್ಮಕ ಭಾವನೆ ಮೂಡಿಸಿದೆ.

ಡಾಲರ್‌ ಎದುರು ರೂಪಾಯಿ ಮೌಲ್ಯ 97ರ ಮಟ್ಟಕ್ಕೆ ಕುಸಿಯುವ ಹಂತದಿಂದ ಈಗ ಭಾರತೀಯ ಕರೆನ್ಸಿ ಗಮನಾರ್ಹ ರೀತಿಯಲ್ಲಿ ಚೇತರಿಸಿಕೊಂಡಿದ್ದು, ಮೇ, ಜುಲೈ ಮತ್ತು ಅಕ್ಟೋಬರ್‌ ತಿಂಗಳಲ್ಲಿ ಮೌಲ್ಯ 97ರ ಮಟ್ಟಕ್ಕೆ ಸಮೀಪಕ್ಕೆ ಕುಸಿದಿತ್ತು. ಈಗ ನಾಲ್ಕು ರೂಪಾಯಿಗಳಷ್ಟು ಮೌಲ್ಯ ವೃದ್ಧಿ ಕಂಡು ಗಣನೀಯ ಚೇತರಿಕೆ ಹೊಂದಿದೆ.

ಅಬ್ಬಬ್ಬಾ ಲಾಟರಿ: ಬಡ ಮಹಿಳೆಗೆ ಒಲಿದ 1 ಕೋಟಿ ರೂಪಾಯಿ; 7 ರೂಪಾಯಿಗೆ ಟಿಕೆಟ್‌ ಖರೀದಿಸಿದ ಪಂಜಾಬ್ ಕುಟುಂಬದ ಭವಿಷ್ಯವೇ ಬದಲಾಯ್ತು

ರೂಪಾಯಿ ಏರಿಕೆಗೆ ಪ್ರಮುಖ ಕಾರಣಗಳೇನು?

ಮಾರುಕಟ್ಟೆ ತಜ್ಞರ ಪ್ರಕಾರ, ದೇಶೀಯ ಷೇರುಪೇಟೆಯಲ್ಲಿನ ಸಕಾರಾತ್ಮಕ ವಹಿವಾಟು ಮತ್ತು ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಹೆಚ್ಚುತ್ತಿರುವ ಬಂಡವಾಳ ಒಳಹರಿವು ರೂಪಾಯಿಗೆ ಬೆಂಬಲ ನೀಡಿದೆ. ಇದರ ಜೊತೆಗೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಸೂಚ್ಯಂಕ ತುಸು ದುರ್ಬಲಗೊಂಡಿರುವುದು ಮತ್ತು ಕಚ್ಚಾ ತೈಲ ಬೆಲೆಯಲ್ಲಿನ ಇಳಿಕೆಯು ಭಾರತೀಯ ಕರೆನ್ಸಿ ಮೌಲ್ಯ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ.

ಆಮದು-ರಫ್ತು ವಲಯದ ಮೇಲೆ ಪರಿಣಾಮ

ರೂಪಾಯಿ ಮೌಲ್ಯ ಬಲವರ್ಧನೆಗೊಳ್ಳುವುದರಿಂದ ವಿದೇಶಗಳಿಂದ ಸರಕುಗಳನ್ನು ಆಮದು ಮಾಡಿಕೊಳ್ಳುವ ಕಂಪನಿಗಳಿಗೆ ಹೆಚ್ಚಿನ ಲಾಭವಾಗಲಿದೆ. ವಿಶೇಷವಾಗಿ ಕಚ್ಚಾ ತೈಲ, ಎಲೆಕ್ಟ್ರಾನಿಕ್ಸ್ ಮತ್ತು ಇತರ ಅಗತ್ಯ ವಸ್ತುಗಳ ಆಮದು ವೆಚ್ಚ ತಗ್ಗಲಿದ್ದು, ದೇಶೀಯ ಮಾರುಕಟ್ಟೆಯಲ್ಲಿ ಹಣದುಬ್ಬರ ನಿಯಂತ್ರಣಕ್ಕೂ ಇದು ಪೂರಕವಾಗಲಿದೆ ಎಂದು ಆರ್ಥಿಕ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.