GST Council: ಜನಸಾಮಾನ್ಯರಿಗೆ ಗುಡ್‌ನ್ಯೂಸ್; ಜಿಎಸ್‌ಟಿಯಲ್ಲಿ ಭಾರೀ ಇಳಿಕೆ, , ಫುಲ್ ಚಾರ್ಟ್ ಲಿಸ್ಟ್ ಇಲ್ಲಿದೆ ನೋಡಿ
ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕ್ಯಾನ್ಸರ್ ಔಷಧಿ, ಜೀವರಕ್ಷಕ ಔಷಧಿಗಳ ಮೇಲೆ ಈ ಹಿಂದೆ ಅನ್ವಯಿಸಲಾಗಿದ್ದ ಜಿಎಸ್‌ಟಿಯನ್ನು ಶೂನ್ಯಗೊಳಿಸಿದ್ದಾರೆ. ಯಾವ ವಸ್ತುಗಳು ಇನ್ನು ಅಗ್ಗವಾಗಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
-
Vishakha Bhat Heggar
Sep 4, 2025 9:22 AM
ನವದೆಹಲಿ: ಬುಧವಾರ, ಸೆಪ್ಟೆಂಬರ್ 3 ರಂದು ನಡೆದ 56 ನೇ ಜಿಎಸ್‌ಟಿ ಕೌನ್ಸಿಲ್ (GST Council) ಸಭೆಯಲ್ಲಿ ಹಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಸಭೆಯಲ್ಲಿ 5% ಮತ್ತು 18% ರ ಎರಡು ತೆರಿಗೆ ಸ್ಲ್ಯಾಬ್‌ಗಳನ್ನು ಅನುಮೋದಿಸಲಾಯಿತು. ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕ್ಯಾನ್ಸರ್ ಔಷಧಿ, ಜೀವರಕ್ಷಕ ಔಷಧಿಗಳ ಮೇಲೆ ಈ ಹಿಂದೆ ಅನ್ವಯಿಸಲಾಗಿದ್ದ ಜಿಎಸ್‌ಟಿಯನ್ನು ಶೂನ್ಯಗೊಳಿಸಿದ್ದಾರೆ. ಈ ಹೊಸ ನಿಯಮವು ಸೆಪ್ಟೆಂಬರ್ 22, 2025 ರಿಂದ ಜಾರಿಗೆ ಬರಲಿದೆ. ಇದರ ನಂತರ, ದೇಶಾದ್ಯಂತ ಈ ಔಷಧಿಗಳ ಖರೀದಿಗೆ ಯಾವುದೇ ಜಿಎಸ್‌ಟಿ ಪಾವತಿಸಬೇಕಾಗಿಲ್ಲ. ಅಷ್ಟೇ ಅಲ್ಲದೇ, ಗೃಹ ಬಳಕೆ ಉತ್ಪನ್ನಗಳು, ಆರೋಗ್ಯಕ್ಕೆ ಸಂಬಂಧಿಸಿದ ಉತ್ಪನ್ನಗಳ ಮೇಲೆ ಜಿಎಸ್‌ಟಿಯನ್ನು ಕಡಿಮೆ ಮಾಡಲಾಗಿದೆ. ಯಾವ ವಸ್ತುಗಳು ಇನ್ನು ಅಗ್ಗವಾಗಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ದೈನಂದಿನ ಅಗತ್ಯ ವಸ್ತುಗಳು
| ಎಷ್ಟಿತ್ತು | ಕಡಿಮೆಯಾಗಿದ್ದೆಷ್ಟು | |
|---|---|---|
| ಕೂದಲಿನ ಎಣ್ಣೆ, ಶಾಂಪೂ, ಬ್ರಶ್, ಶೇವಿಂಗ್ ಕ್ರೀಮ್ | 18% | 5% |
| ಬೆಣ್ಣೆ, ತುಪ್ಪ, ಹಾಲಿನ ಉತ್ಪನ್ನ | 12% | 5% |
| ಬೇಕರಿ ಉತ್ಪನ್ನಗಳು, ಕುರುಕಲು ತಿಂಡಿ | 12% | 5% |
| ನಾಪ್‌ಕಿನ್, ಮಕ್ಕಳಿಗೆ ಸಂಬಂಧಿಸಿದ ಉತ್ಪನ್ನಗಳು | 12% | 5% |
| ಹೊಲಿಗೆ ಯಂತ್ರ ಮತ್ತು ಬಿಡಿಭಾಗಗಳು | 12% | 5% |
ಆರೋಗ್ಯ
| ಎಷ್ಟಿತ್ತು | ಕಡಿಮೆಯಾಗಿದ್ದೆಷ್ಟು | |
|---|---|---|
| ಲೈಫ್ ಇನ್ಸುರೆನ್ಸ್ | 18% | ಇಲ್ಲ |
| ಥರ್ಮೋಮೀಟರ್ | 18% | 5% |
| ಮೆಡಿಕಲ್ ಗ್ರೇಡ್ ಆಕ್ಸಿಜನ್ | 12% | 5% |
| ವೈದ್ಯಕೀಯ ಉಪಕರಣಗಳು | 12% | 5% |
| ಗ್ಲುಕೋಮೀಟರ್ | 12% | 5% |
| ಕನ್ನಡಕಗಳು | 12% | 5% |
ಶಿಕ್ಷಣ ಕ್ಷೇತ್ರ
| ಎಷ್ಟಿತ್ತು | ಕಡಿಮೆಯಾಗಿದ್ದೆಷ್ಟು | |
|---|---|---|
| ಮ್ಯಾಪ್, ಚಾರ್ಟ್, ಇತ್ಯಾದಿ | 12% | ಇಲ್ಲ |
| ಪೆನ್ಸಿಲ್, ಶಾರ್ಪನರ್, ಕ್ರೆಯಾನ್ಸ್ | 12% | ಇಲ್ಲ |
| ನೋಟ್‌ಬುಕ್ಸ್ | 12% | ಇಲ್ಲ |
| ಎರೇಸರ್ | 12% | 5% |
ಕೃಷಿ ಕ್ಷೇತ್ರ
| ಎಷ್ಟಿತ್ತು | ಕಡಿಮೆಯಾಗಿದ್ದೆಷ್ಟು | |
|---|---|---|
| ಟ್ರಾಕ್ಟರ್ ಟೈಯರ್ಸ್, ಬಿಡಿಭಾಗಗಳು | 18% | 5% |
| ಟ್ರಾಕ್ಟರ್ಸ್ | 12% | 5% |
| ಫಲವತ್ತತೆಗಳು, ಔಷಧಿಗಳು | 12% | 5% |
| ನೀರಾವರಿ ಯೋಜನೆಯ ಉಪಕರಣಗಳು | 12% | 5% |
| ಕೃಷಿ, ಹೈನುಗಾರಿಗೆಗೆ ಸಂಬಂಧಿತ ಸಲಕರಣೆಗಳು | 12% | 5% |
ಆಟೋಮೊಬೈಲ್
| ಎಷ್ಟಿತ್ತು | ಕಡಿಮೆಯಾಗಿದ್ದೆಷ್ಟು | |
|---|---|---|
| ಪೆಟ್ರೋಲ್, ಪೆಟ್ರೋಲಿಯಮ್ ಉತ್ಪನ್ನಗಳು, ಎಲ್‌ಪಿಜಿ ಇತ್ಯಾದಿ | 28% | 18% |
| ಡೀಸೆಲ್ ಮತ್ತು ಡೀಸೆಲ್ ಹೈಬ್ರಿಡ್ ಕಾರುಗಳು | 28% | 18% |
| ಮೂರು ಚಕ್ರದ ವಾಹನಗಳು | 28% | 18% |
| ಮೋಟಾರ್ ಸೈಕಲ್ (350 Cc Below) | 28% | 18% |
| ಸಾಗಾಟದ ವಾಹನಗಳು | 28% | 18% |
ಎಲೆಕ್ಟ್ರಾನಿಕ್ ಸಾಧನಗಳು
| ಎಷ್ಟಿತ್ತು | ಕಡಿಮೆಯಾಗಿದ್ದೆಷ್ಟು | |
|---|---|---|
| ಹವಾ ನಿಯಂತ್ರಕಕಗಳು (AC) | 28% | 18% |
| TV (LED, LCD) | 28% | 18% |
| ಮೊನಿಟರ್‌ಗಳು ಮತ್ತು ಪ್ರೊಜೆಕ್ಟರ್ಸ್ | 28% | 18% |
| ಪಾತ್ರೆ ತೊಳೆಯುವ ಯಂತ್ರಗಳು | 28% | 18% |