ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಆಸ್ಪತ್ರೆಯೊಳಗೆ ಮದ್ಯಪಾನ ಮಾಡಿದ ಮಹಿಳೆ; ಆಡಳಿತ ಮಂಡಳಿಯ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ

Viral Video: ಮಹಿಳೆಯೊಬ್ಬರು ಆಸ್ವತ್ರೆ ವಾರ್ಡ್ ನಲ್ಲೇ ಬಹಿರಂಗವಾಗಿ ಮದ್ಯ ಸೇವಿಸುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ. ಜಬಲ್ಪುರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು ಭದ್ರತೆ ಮತ್ತು ಮೇಲ್ವಿಚಾರಣೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸಿಬ್ಬಂದಿಯ ಕಣ್ಣು ತಪ್ಪಿಸಿ ಆಸ್ವತ್ರೆ ಯೊಳಗೆ ಮದ್ಯ ಸೇವಿಸುವಷ್ಟು ಆಡಳಿತದ ನಿಯಮ ಸ್ವತಂತ್ರ ವಾಗಿದೆಯೇ? ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.

ಆಸ್ಪತ್ರೆ ವಾರ್ಡ್‌ನಲ್ಲೇ ಸಾರ್ವಜನಿಕವಾಗಿ ಮದ್ಯ ಸೇವಿಸಿದ ಮಹಿಳೆ!

ಆಸ್ಪತ್ರೆ ವಾರ್ಡ್‌ನಲ್ಲೇ ಸಾರ್ವಜನಿಕವಾಗಿ ಮದ್ಯ ಸೇವಿಸಿದ ಮಹಿಳೆ -

Profile
Pushpa Kumari Aug 25, 2026 3:51 PM

ಜಬಲ್ಪುರ,ಆ.25: ಮಹಿಳೆಯೊಬ್ಬರು ಆಸ್ವತ್ರೆ ವಾರ್ಡ್‌ನಲ್ಲೇ ಬಹಿರಂಗವಾಗಿ ಮದ್ಯ ಸೇವಿಸುತ್ತಿರುವ ವಿಡಿಯೊವೊಂದು ವೈರಲ್ (Viral News) ಆಗಿದೆ. ಜಬಲ್ಪುರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು ಭದ್ರತೆ ಮತ್ತು ಮೇಲ್ವಿಚಾರಣೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮಹಿಳೆಯ ಮಗ ಆಸ್ಪತ್ರೆಯಲ್ಲಿ ಆರ್ಥೋಪೆಡಿಕ್ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಆತನ ಶುಶ್ರೂಷೆಗೆಂದು ಬಂದಿದ್ದ ಮಹಿಳೆ ಆಸ್ವತ್ರೆ ವಾರ್ಡ್ ಗೆ ತೆರಳಿ ಸಾರ್ವಜನಿಕವಾಗಿ ಮದ್ಯಪಾನ ಮಾಡಿದ್ದಾಳೆ.

ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಮಹಿಳೆಯ ನಡವಳಿಕೆ ಬಗ್ಗೆ ಟೀ‌ಕೆ ವ್ಯಕ್ತವಾಗುವಂತೆ ಮಾಡಿದೆ. ಆಸ್ಪತ್ರೆ ವಾರ್ಡ್‌ನಲ್ಲೇ ಬಹಿರಂಗವಾಗಿ ಮದ್ಯ ಸೇವಿಸುತ್ತಿದ್ದು ಈ ದೃಶ್ಯವನ್ನು ಅಲ್ಲಿದ್ದವರು ಸೆರೆಹಿಡಿದಿದ್ದಾರೆ. ಆದರೆ ಈ ಘಟನೆಯ ಬಗ್ಗೆ ಆಸ್ಪತ್ರೆ ಆಡಳಿತದಿಂದ ಯಾವುದೇ ಅಧಿಕೃತ ಹೇಳಿಕೆ ಲಭ್ಯವಿಲ್ಲ.

ವಿಡಿಯೋ ನೋಡಿ:



ರೋಗಿಗಳು, ಸಿಬ್ಬಂದಿ ವರ್ಗ ತುಂಬಿಹೋಗಿರುವ ಜಿಲ್ಲಾ ಆಸ್ಪತ್ರೆಯೊಳಗೆ ಮದ್ಯದ ಬಾಟಲಿ ಹೇಗೆ ತರಲಾಯಿತು? ಇಲ್ಲಿ ಸೆಕ್ಯುರಿಟಿ ಗಾರ್ಡ್ ಇಲ್ಲವೆ? ಸಿಬ್ಬಂದಿಯ ಕಣ್ಣು ತಪ್ಪಿಸಿ ಆಸ್ವತ್ರೆ ಯೊಳಗೆ ಮದ್ಯ ಸೇವಿಸುವಷ್ಟು ಆಡಳಿತದ ನಿಯಮ ಸ್ವತಂತ್ರ ವಾಗಿದೆಯೇ? ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ. ಮಗನ ಆರೈಕೆಗಾಗಿ ಬಂದು ಸಾರ್ವಜನಿಕವಾಗಿ ಈ ರೀತಿಯ ವರ್ತನೆ ತೋರುವುದು ತಪ್ಪು ಎಂದು ನೆಟ್ಟಿಗರು ಟೀಕಿಸಿದ್ದಾರೆ.

Viral Video: ಸಿಜೆಪಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು 1 ಲಕ್ಷ ರುಪಾಯಿ ಖರ್ಚು ಮಾಡಿ ಆಸ್ಟ್ರೇಲಿಯಾದಿಂದ ಬಂದ ಬಿ.ಟೆಕ್ ಪದವೀಧರ!

ಮಧ್ಯಪ್ರದೇಶದ ಸರ್ಕಾರಿ ಆಸ್ಪತ್ರೆಗಳಲ್ಲಿ ಇಂತಹ ಘಟನೆಗಳು ಹೊಸದೇನಲ್ಲ. ಇತ್ತೀಚೆಗಷ್ಟೇ ಸಾಗರ್ ಜಿಲ್ಲಾ ಆಸ್ಪತ್ರೆಯ ವಾರ್ಡ್‌ನಲ್ಲಿಯೂ ರೋಗಿಯೊಬ್ಬರು ಮದ್ಯ ಸೇವಿಸುತ್ತಿರುವ ಘಟನೆ ಕಂಡು ಬಂದಿತ್ತು. ಆದರೆ ಆತ ಕುಟುಂಬಸ್ಥರು ಮತ್ತು ಆಸ್ಪತ್ರೆ ಸಿಬ್ಬಂದಿ ತಡೆದರೂ ಮದ್ಯ ಸೇವಿಸಿದ್ದ.ಸರ್ಕಾರಿ ಆಸ್ಪತ್ರೆಗಳಲ್ಲಿ ಭದ್ರತೆ ಕೊರತೆ ಇದೆ ಎಂಬುದಕ್ಕೆ ಈ ಘಟನೇಗಳೇ ಸಾಕ್ಷಿ ಯಾಗುತ್ತಿದೆ. ಸಾರ್ವಜನಿಕ ಆಸ್ಪತ್ರೆಗಳ ಭದ್ರತಾ ಸಿಬ್ಬಂದಿ ಹಾಗೂ ಆಡಳಿತ ಮಂಡಳಿಯ ನಿರ್ಲಕ್ಷಕ್ಕೆ ಕ್ರಮ ಕೈಗೊಳ್ಳಲು ಸಾರ್ವಜನಿಕರು ವಿನಂತಿಸಿದ್ದಾರೆ.