ಏಪ್ರಿಲ್ 1 ರಿಂದ ಡಿಜಿಟಲ್ ಪಾವತಿಯಲ್ಲಿ ಬದಲಾವಣೆ; ಆರ್‌ಬಿಐ ಹೊಸ ನಿಯಮ ಹೇಳೋದೇನು?
ಭಾರತೀಯ ರಿಸರ್ವ್ ಬ್ಯಾಂಕ್ (RBI) ಎಲ್ಲಾ ಡಿಜಿಟಲ್ ವಹಿವಾಟುಗಳಿಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಜಾರಿತರಲಿದೆ. ಡಿಜಿಟಲ್ ಪಾವತಿ ಪರಿಸರ ವ್ಯವಸ್ಥೆಯು ಏಪ್ರಿಲ್ 1, 2026 ರಿಂದ ಪ್ರಮುಖ ಪರಿವರ್ತನೆಗೆ ಸಜ್ಜಾಗಿದೆ. ಎಲ್ಲಾ ಡಿಜಿಟಲ್ ಪಾವತಿಗಳಿಗೆ ಎರಡು ಅಂಶಗಳ ದೃಢೀಕರಣ ಕಡ್ಡಾಯವಾಗಿದೆ.
ಸಂಗ್ರಹ ಚಿತ್ರ -
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (RBI) ಎಲ್ಲಾ ಡಿಜಿಟಲ್ ವಹಿವಾಟುಗಳಿಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಜಾರಿತರಲಿದೆ. ಡಿಜಿಟಲ್ ಪಾವತಿ (Digital Payments) ವ್ಯವಸ್ಥೆಯು ಏಪ್ರಿಲ್ 1, 2026 ರಿಂದ ಪ್ರಮುಖ ಪರಿವರ್ತನೆಗೆ ಸಜ್ಜಾಗಿದೆ. ಪ್ರತಿಯೊಂದು ಡಿಜಿಟಲ್ ಪಾವತಿ ವಹಿವಾಟನ್ನು ಎರಡು ಹಂತದ ದೃಢೀಕರಣ (ವೆರಿಫಿಕೇಶನ್) ಕಡ್ಡಾಯವಾಗಿರುತ್ತದೆ. ಕಳೆದ ದಶಕದಲ್ಲಿ ಭಾರತವು ಡಿಜಿಟಲ್ ಪಾವತಿಗಳಲ್ಲಿ ಭಾರೀ ಹೆಚ್ಚಳವನ್ನು ಕಂಡಿದೆ.
RBI ಹೊಸ ನಿಮಯವೇನು?
- ಪಾಸ್‌ವರ್ಡ್‌ಗಳು ಅಥವಾ ಪಾಸ್‌ಫ್ರೇಸ್‌ಗಳು
- ಪಿನ್‌ಗಳು
- SMS-ಆಧಾರಿತ OTP ಗಳು
- ಹಾರ್ಡ್‌ವೇರ್ ಟೋಕನ್‌ಗಳು ಅಥವಾ ಕಾರ್ಡ್‌ಗಳು
- ಸಾಫ್ಟ್‌ವೇರ್ ಆಧಾರಿತ ದೃಢೀಕರಣ ಟೋಕನ್‌ಗಳು
- ಫಿಂಗರ್‌ಪ್ರಿಂಟ್‌ಗಳು ಅಥವಾ ಮುಖ ಗುರುತಿಸುವಿಕೆ
- ಎಲ್ಲಾ ಡಿಜಿಟಲ್ ಪಾವತಿಗಳಿಗೆ ಎರಡು ಅಂಶಗಳ ದೃಢೀಕರಣ ಕಡ್ಡಾಯವಾಗಿದೆ.
- ಗಡಿಯಾಚೆಗಿನ ವಹಿವಾಟುಗಳಿಗೂ ಅಕ್ಟೋಬರ್ 1, 2026 ರೊಳಗೆ ದೃಢೀಕರಣದ ಅಗತ್ಯವಿರುತ್ತದೆ.
ನಿಯಮಗಳನ್ನು ಬಿಗಿಗೊಳಿಸುತ್ತಿರುವುದೇಕೆ?
ವಂಚನೆ, ಫಿಶಿಂಗ್ ದಾಳಿಗಳು ಮತ್ತು ಅನಧಿಕೃತ ವಹಿವಾಟುಗಳು ಡಿಜಿಟಲ್ ಪಾವತಿಯಲ್ಲಿ ಹೆಚ್ಚಾಗಿ ಕಂಡು ಬರುತ್ತಿರುವುದರಿಂದ ಆರ್‌ಬಿಐ ನಿಯಮಗಳನ್ನು ಬಿಗಿಗೊಳಿಸಲಿದೆ ಎಂದು ಹೇಳಲಾಗಿದೆ. ಹೊಸ ನಿಯಮಗಳು ಬಯೋಮೆಟ್ರಿಕ್ಸ್ ಮತ್ತು ಸಾಧನ ಆಧಾರಿತ ಪರಿಶೀಲನೆ ಸೇರಿದಂತೆ ಬಹು ದೃಢೀಕರಣ ವಿಧಾನಗಳನ್ನು ಗುರುತಿಸುತ್ತವೆ, ಇದು ಸಂಸ್ಥೆಗಳಿಗೆ ಹೆಚ್ಚು ಸುರಕ್ಷಿತ ಪರಿಹಾರಗಳನ್ನು ಅಳವಡಿಸಿಕೊಳ್ಳಲು ಅವಕಾಶ ನೀಡುತ್ತದೆ.
UPI: ಎಲ್ಲ ಯುಪಿಐ ಪಾವತಿಗಳನ್ನು ಒಂದೇ ಆ್ಯಪ್‌ನಿಂದ ನಿರ್ವಹಿಸಿ: ಡಿಸೆಂಬರ್ 31ರಿಂದ ಹೊಸ ನಿಯಮ ಜಾರಿ
ಕಳೆದ ವರ್ಷವೂ ಯುಪಿಐನಲ್ಲಿ ಬದಲಾವಣೆ ತರಲಾಗಿತ್ತು. ಬಳಕೆದಾರರು ಪ್ರತಿ ಯುಪಿಐ ಅಪ್ಲಿಕೇಶನ್‌ನಲ್ಲಿ ದಿನಕ್ಕೆ ಗರಿಷ್ಠ 50 ಬಾರಿ ಮಾತ್ರ ಅಕೌಂಟ್ ಬ್ಯಾಲೆನ್ಸ್ ಪರಿಶೀಲಿಸಲು ಸಾಧ್ಯವಾಗಲಿದೆ. ಇದಲ್ಲದೆ, ನಿಮ್ಮ ಮೊಬೈಲ್ ಸಂಖ್ಯೆಗೆ ಲಿಂಕ್ ಮಾಡಲಾದ ಬ್ಯಾಂಕ್ ಖಾತೆಗಳ ಮಾಹಿತಿಯನ್ನು ದಿನಕ್ಕೆ 25 ಬಾರಿ ಮಾತ್ರ ಪಡೆಯಲು ಅವಕಾಶವಿದೆ. ಸರ್ವರ್‌ಗಳ ಮೇಲಿನ ಒತ್ತಡ ಕಡಿಮೆ ಮಾಡಲು ಮತ್ತು ಅನಗತ್ಯ ವಿನಂತಿಗಳನ್ನು ನಿಯಂತ್ರಿಸಲು ಈ ಕ್ರಮಗಳನ್ನು ಜಾರಿಗೆ ತರಲಾಗಿದೆ. ಆಗಾಗ ಬ್ಯಾಲೆನ್ಸ್ ಪರಿಶೀಲಿಸುವುದು ಮತ್ತು ವಹಿವಾಟು ಸ್ಥಿತಿಯನ್ನು ಪದೇ ಪದೇ ರಿಫ್ರೆಶ್ ಮಾಡುವುದು ಯುಪಿಐ ಸರ್ವರ್‌ಗಳಿಗೆ ಅನಗತ್ಯ ಹೊರೆಯನ್ನುಂಟು ಮಾಡುತ್ತಿದ್ದ ಕಾರಣ ಈ ಮಿತಿಗಳನ್ನು ಹೇರಲಾಗಿದೆ.