ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

500 ದಿನಗಳ ವಿಶೇಷ ‘ಸ್ಟಾರ್ ಅಕ್ಷಯ್ ಸ್ಥಿರ ಠೇವಣಿ’ ಯೋಜನೆ ಆರಂಭ; ಹಿರಿಯ ನಾಗರಿಕರಿಗೆ ಶೇ. 7.50ರವರೆಗೆ ಬಡ್ಡಿ

ಬ್ಯಾಂಕ್ ‘ಸ್ಟಾರ್ ಅಕ್ಷಯ್ ಸ್ಥಿರ ಠೇವಣಿ’ (Star Akshay Fixed Deposit) ಎಂಬ ವಿಶೇಷ ಯೋಜನೆಯನ್ನು ಪರಿಚಯಿಸಿದೆ. 500 ದಿನಗಳ ಅವಧಿಯ ಈ ವಿಶೇಷ ಠೇವಣಿ ಯೋಜನೆ ಯಡಿ ಸಾಮಾನ್ಯ ಗ್ರಾಹಕರಿಗೆ ವಾರ್ಷಿಕ ಶೇ. 6.85, ಹಿರಿಯ ನಾಗರಿಕರಿಗೆ ಶೇ. 7.35 ಹಾಗೂ ಅತಿ ಹಿರಿಯ ನಾಗರಿಕರಿಗೆ ಶೇ. 7.50ರಷ್ಟು ಗರಿಷ್ಠ ಬಡ್ಡಿದರವನ್ನು ನೀಡಲಾಗುತ್ತದೆ.

ಬ್ಯಾಂಕ್ ಆಫ್ ಇಂಡಿಯಾದ ಸ್ಥಿರ ಠೇವಣಿ ಬಡ್ಡಿದರ ಹೆಚ್ಚಳ

-

Profile
Ashok Nayak Nov 2, 2026 3:15 PM

ಬೆಂಗಳೂರು: ಭಾರತದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಇಂಡಿಯಾ, 3 ಕೋಟಿ ರೂ.ಗಿಂತ ಕಡಿಮೆ ಹಾಗೂ 3 ಕೋಟಿಯಿಂದ 10 ಕೋಟಿ ರೂ.ಗಿಂತ ಕಡಿಮೆ ಮೊತ್ತದ ಸ್ಥಿರ ಠೇವಣಿಗಳ (Fixed Deposit) ಮಧ್ಯಮ ಮತ್ತು ದೀರ್ಘಾವಧಿಯ ಬಡ್ಡಿದರ ಗಳನ್ನು ಹೆಚ್ಚಿಸಿದೆ. 1 ವರ್ಷದಿಂದ 3 ವರ್ಷಗಳಿಗಿಂತ ಕಡಿಮೆ ಅವಧಿಯ ಠೇವಣಿಗಳಿಗೆ ಪರಿಷ್ಕೃತ ಬಡ್ಡಿದರಗಳು ಅನ್ವಯವಾಗಲಿವೆ.

ಇದೇ ಸಂದರ್ಭದಲ್ಲಿ ಬ್ಯಾಂಕ್ ‘ಸ್ಟಾರ್ ಅಕ್ಷಯ್ ಸ್ಥಿರ ಠೇವಣಿ’ (Star Akshay Fixed Deposit) ಎಂಬ ವಿಶೇಷ ಯೋಜನೆಯನ್ನು ಪರಿಚಯಿಸಿದೆ. 500 ದಿನಗಳ ಅವಧಿಯ ಈ ವಿಶೇಷ ಠೇವಣಿ ಯೋಜನೆ ಯಡಿ ಸಾಮಾನ್ಯ ಗ್ರಾಹಕರಿಗೆ ವಾರ್ಷಿಕ ಶೇ. 6.85, ಹಿರಿಯ ನಾಗರಿಕರಿಗೆ ಶೇ. 7.35 ಹಾಗೂ ಅತಿ ಹಿರಿಯ ನಾಗರಿಕರಿಗೆ ಶೇ. 7.50ರಷ್ಟು ಗರಿಷ್ಠ ಬಡ್ಡಿದರವನ್ನು ನೀಡಲಾಗುತ್ತದೆ.

ಇದನ್ನೂ ಓದಿ: BOI Recruitment 2026: ಪದವೀಧರರೇ ಗಮನಿಸಿ; ಬ್ಯಾಂಕ್‌ ಆಫ್‌ ಇಂಡಿಯಾದ 779 ಹುದ್ದೆಗಳಿಗೆ ಅರ್ಜಿ ಆಹ್ವಾನ

3 ಕೋಟಿ ರೂ.ಗಿಂತ ಕಡಿಮೆ ಮೊತ್ತದ ಸ್ಥಿರ ಠೇವಣಿಗಳಿಗೆ ಸಂಬಂಧಿಸಿದಂತೆ, ಒಂದು ವರ್ಷದ ಅವಧಿಯ ಠೇವಣಿಗಳ ಬಡ್ಡಿದರವನ್ನು ಶೇ. 6.60ಕ್ಕೆ ಹಾಗೂ ಒಂದು ವರ್ಷಕ್ಕಿಂತ ಹೆಚ್ಚಿನ ಮತ್ತು ಮೂರು ವರ್ಷಗಳಿಗಿಂತ ಕಡಿಮೆ ಅವಧಿಯ ಠೇವಣಿಗಳ ಬಡ್ಡಿದರವನ್ನು ಶೇ. 6.70ಕ್ಕೆ ಹೆಚ್ಚಿಸಲಾಗಿದೆ.

ಅಲ್ಲದೆ, 180 ದಿನಗಳಿಂದ ಮೂರು ವರ್ಷಗಳಿಗಿಂತ ಕಡಿಮೆ ಅವಧಿಯ ಠೇವಣಿಗಳಿಗೆ ಹಿರಿಯ ನಾಗರಿಕರಿಗೆ ಹೆಚ್ಚುವರಿಯಾಗಿ ವಾರ್ಷಿಕ ಶೇ. 0.50 ಹಾಗೂ ಅತಿ ಹಿರಿಯ ನಾಗರಿಕರಿಗೆ ಶೇ. 0.65ರಷ್ಟು ಬಡ್ಡಿಯನ್ನು ನೀಡಲಾಗುತ್ತದೆ.

ಇನ್ನು 3 ಕೋಟಿಯಿಂದ 10 ಕೋಟಿ ರೂ.ಗಿಂತ ಕಡಿಮೆ ಮೊತ್ತದ ಸ್ಥಿರ ಠೇವಣಿಗಳ ಆಯ್ದ ಅವಧಿಗಳಿಗೂ ಬ್ಯಾಂಕ್ ಬಡ್ಡಿದರವನ್ನು ಹೆಚ್ಚಿಸಿದೆ. ಒಂದು ವರ್ಷದ ಅವಧಿಯ ಠೇವಣಿಗಳಿಗೆ ವಾರ್ಷಿಕ ಶೇ. 6.55 ಹಾಗೂ ಒಂದು ವರ್ಷಕ್ಕಿಂತ ಹೆಚ್ಚಿನ ಮತ್ತು ಮೂರು ವರ್ಷಗಳಿಗಿಂತ ಕಡಿಮೆ ಅವಧಿಯ ಠೇವಣಿಗಳಿಗೆ ಶೇ. 6.65ರಷ್ಟು ಬಡ್ಡಿದರವನ್ನು ಪರಿಷ್ಕರಿಸಲಾಗಿದೆ.

1 ಕೋಟಿಗಿಂತ ಹೆಚ್ಚಿನ ಮೊತ್ತದ ಠೇವಣಿಗಳನ್ನು ಒಂದು ವರ್ಷದಿಂದ ಮೂರು ವರ್ಷಗಳ ಅವಧಿಗೆ ನಾನ್-ಕಾಲಬಲ್ (Non-Callable) ಆಯ್ಕೆಯಡಿ ಇರಿಸಿದರೆ, ಹೆಚ್ಚುವರಿಯಾಗಿ ವಾರ್ಷಿಕ ಶೇ. 0.15ರಷ್ಟು ಬಡ್ಡಿಯನ್ನು ನೀಡಲಾಗುತ್ತದೆ. ನಾನ್-ಕಾಲಬಲ್ ಠೇವಣಿಗಳಿಗೆ ಅವಧಿಪೂರ್ವ ಹಿಂಪಡೆಯುವಿಕೆ ಹಾಗೂ ಠೇವಣಿಯ ಆಧಾರದ ಮೇಲೆ ಸಾಲ ಪಡೆಯುವ ಸೌಲಭ್ಯ ಇರುವುದಿಲ್ಲ. ಈ ಸೌಲಭ್ಯಗಳು ಕಾಲಬಲ್ (Callable) ಠೇವಣಿಗಳಿಗೆ ಮಾತ್ರ ಲಭ್ಯವಿರುತ್ತವೆ.

ಗ್ರಾಹಕರು ಬ್ಯಾಂಕ್ ಆಫ್ ಇಂಡಿಯಾದ ಯಾವುದೇ ಶಾಖೆಯಲ್ಲಿ ಅಥವಾ BOI Omni Neo ಆ್ಯಪ್ ಹಾಗೂ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಸ್ಥಿರ ಠೇವಣಿ ಖಾತೆ ತೆರೆಯಬಹುದು.

ಪರಿಷ್ಕೃತ ಬಡ್ಡಿದರಗಳು 2026ರ ನವೆಂಬರ್ 2ರಿಂದ ಜಾರಿಗೆ ಬಂದಿವೆ.