ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Stock Market: ಗ್ರಾಸಿಮ್‌ ಇಂಡಸ್ಟ್ರೀಸ್‌ ಸ್ಟಾಕ್‌ ಖರೀದಿಸಿದ್ರೆ 36% ಲಾಭ? RCB ಮಾರಾಟಕ್ಕಿಲ್ಲ: ಡಿಯಾಜಿಯೊ

ಆದಿತ್ಯಾ ಬಿರ್ಲಾ ಸಮೂಹಕ್ಕೆ ಸೇರಿದ ಗ್ರಾಸಿಂ ಇಂಡಸ್ಟ್ರೀಸ್‌ ಕಂಪನಿಯ ಷೇರಿನ ಬಗ್ಗೆ ಇದೀಗ ಅಮೆರಿಕ ಮೂಲದ ಅಂತಾರಾಷ್ಟ್ರೀಯ ಬ್ರೋಕರೇಜ್‌ ಸಂಸ್ಥೆಯಾದ ಮೋರ್ಗಾನ್‌ ಸ್ಟಾನ್ಲಿಯು ಗುಡ್‌ ನ್ಯೂಸ್‌ ತಿಳಿಸಿದೆ. ಮೋರ್ಗಾನ್‌ ಸ್ಟಾನ್ಲಿಯು ಗ್ರಾಸಿಮ್‌ ಇಂಡಸ್ಟ್ರಿಯ ರೇಟಿಂಗ್‌ ಅನ್ನು EQUAI -WEIGHT ನಿಂದ OVER WEIGHT ಗೆ ಅಪ್‌ ಗ್ರೇಡ್‌ ಮಾಡಿದೆ.

ಗ್ರಾಸಿಮ್‌ ಇಂಡಸ್ಟ್ರೀಸ್‌ ಸ್ಟಾಕ್‌ ಖರೀದಿಸಿದ್ರೆ 36% ಲಾಭ?

Profile Vishakha Bhat Jun 11, 2025 4:53 PM

ಕೇಶವಪ್ರಸಾದ. ಬಿ

ಮುಂಬೈ: ಆದಿತ್ಯಾ ಬಿರ್ಲಾ ಸಮೂಹಕ್ಕೆ ಸೇರಿದ ಗ್ರಾಸಿಂ ಇಂಡಸ್ಟ್ರೀಸ್‌ ಕಂಪನಿಯ ಷೇರಿನ ಬಗ್ಗೆ ಇದೀಗ ಅಮೆರಿಕ ಮೂಲದ ಅಂತಾರಾಷ್ಟ್ರೀಯ ಬ್ರೋಕರೇಜ್‌ ಸಂಸ್ಥೆಯಾದ ಮೋರ್ಗಾನ್‌ ಸ್ಟಾನ್ಲಿಯು ಗುಡ್‌ ನ್ಯೂಸ್‌ ತಿಳಿಸಿದೆ. ಮೋರ್ಗಾನ್‌ ಸ್ಟಾನ್ಲಿಯು ಗ್ರಾಸಿಮ್‌ ಇಂಡಸ್ಟ್ರಿಯ ರೇಟಿಂಗ್‌ ಅನ್ನು EQUAI -WEIGHT ನಿಂದ OVER WEIGHT ಗೆ ಅಪ್‌ ಗ್ರೇಡ್‌ ಮಾಡಿದೆ. ಹಾಗೂ ಈ ಷೇರು ಭವಿಷ್ಯದಲ್ಲಿ 36% ಲಾಭ ಗಳಿಸುವ ನಿರೀಕ್ಷೆ ಇದೆ ಎಂದು ತಿಳಿಸಿದೆ. ಗ್ರಾಸಿಮ್‌ ಸ್ಟಾಕ್‌ ಈ ವರ್ಷ ಇಲ್ಲಿಯವರೆಗೆ 10% ರಿಟರ್ನ್‌ ನೀಡಿದೆ.

ಮೋರ್ಗಾನ್‌ ಸ್ಟಾನ್ಲಿಯ ವರದಿಯ ಬೆನ್ನಲ್ಲೇ ಗ್ರಾಸಿಮ್‌ ಇಂಡಸ್ಟ್ರಿಯ ಷೇರು ದರದಲ್ಲಿ ಜೂನ್‌ 10ರಂದು ಮಧ್ಯಂರ ವಹಿವಾಟಿನಲ್ಲಿ 5% ಏರಿಕೆ ಆಗಿದೆ.

ಗ್ರಾಸಿಂ ಇಂಡಸ್ಟ್ರೀಸ್‌

Grasim Industries

ಷೇರಿನ ಈಗಿನ ದರ: 2,704/-

9-12 ತಿಂಗಳಿನಲ್ಲಿ ಟಾರ್ಗೆಟ್‌ ಪ್ರೈಸ್:‌ 3,500/-

ಏರಿಕೆ ಅಂದಾಜು: 36%

2024ರ ಜೂನ್‌ 10ಕ್ಕೆ ದರ: 2,446/-

ಗ್ರಾಸಿಮ್‌ ಇಂಡಸ್ಟ್ರೀಸ್‌ ಮಾರ್ಕೆಟ್‌ ಕ್ಯಾಪ್:‌ 1 ಲಕ್ಷದ 84 ಸಾವಿರ ಕೋಟಿ ರೂಪಾಯಿ.

ಆದಿತ್ಯ ಬಿರ್ಲಾ ಸಮೂಹದ ಗ್ರಾಸಿಮ್‌ ಇಂಡಸ್ಟ್ರೀಸ್‌ ಕಂಪನಿಯು ಫೈಬರ್‌, ಪೇಂಟ್ಸ್‌, ಕೆಮಿಕಲ್ಸ್‌, ಅಗ್ರೊಕೆಮಿಕಲ್ಸ್‌, ಟೆಕ್ಸ್‌ಟೈಲ್ಸ್‌, ಇನ್ಸುಲೇಟರ್‌ ಉತ್ಪಾದನೆಯ ಉದ್ದಿಮೆಯಲ್ಲಿದೆ. ಹಲವು ಸೆಕ್ಟರ್‌ಗಳಲ್ಲಿ ಪ್ರಬಲ ಕಂಪನಿಯಾಗಿದೆ. 1947ರಲ್ಲಿ ಗ್ವಾಲಿಯರ್‌ನಲ್ಲಿ ಈ ಕಂಪನಿ ಸ್ಥಾಪನೆಯಾಗಿದೆ. ಮುಂಬಯಿನಲ್ಲಿ ಪ್ರಧಾನ ಕಚೇರಿ ಇದೆ. ಕುಮಾರ ಮಂಗಲಂ ಬಿರ್ಲಾ ಕಂಪನಿಯ ಚೇರ್ಮನ ಆಗಿದ್ದಾರೆ. ಕಂಪನಿಯು 1 ಲಕ್ಷದ 48 ಸಾವಿರ ಕೋಟಿ ಆದಾಯವನ್ನು ಗಳಿಸಿದೆ. 20 ಸಾವಿರ ಉದ್ಯೋಗಿಗಳಿದ್ದಾರೆ. ಅಲ್ಟ್ರಾ ಟೆಕ್‌ ಸಿಮೆಂಟ್‌, ಆದಿತ್ಯಾ ಬಿರ್ಲಾ ಕ್ಯಾಪಿಟಲ್‌, ಆದಿತ್ಯಾ ಬಿರ್ಲಾ ರಿನೆವಬಲ್‌ ಇದರ ಅಧೀನ ಕಂಪನಿಗಳಾಗಿವೆ.

ಮೋರ್ಗಾನ್‌ ಸ್ಟಾನ್ಲಿಯು ಗ್ರಾಸಿಮ್‌ ಇಂಡಸ್ಟ್ರೀಸ್‌ನ ರೇಟಿಂಗ್‌ ಅನ್ನು ಅಪ್‌ ಗ್ರೇಡ್‌ ಮಾಡಲು ಕಾರಣವೇನು?

ಗ್ರಾಸಿಮ್‌ ಇಂಡಸ್ಟ್ರಿಯು ಮುಂದಿನ 9-12 ತಿಂಗಳಿನಲ್ಲಿ ಉತ್ತಮ ಬೆಳವಣಿಗೆ ದಾಖಲಿಸುವ ನಿರೀಕ್ಷೆ ಇದೆ. ಇದರ ಷೇರಿನ ದರ ಒಂದೆರಡು ವರ್ಷಗಳಲ್ಲಿ 3,500 ರುಪಾಯಿಗೆ ಏರಿಕೆಯಾಗುವ ಸಾಧ್ಯತೆ ಇದೆ‌ʼʼ ಎಂದು ಮೋರ್ಗಾನ್ ಸ್ಟಾನ್ಲಿಯ ರಿಸರ್ಚ್‌ ಅಸೋಸಿಯೇಟ್‌ ಆದ ರಾಹುಲ್‌ ಗುಪ್ತಾ ತಿಳಿಸಿದ್ದಾರೆ. ಮೋರ್ಗಾನ್‌ ಸ್ಟ್ಯಾನ್ಲಿಯು ಈ ಹಿಂದೆ 2,975/-ಕ್ಕೆ ಟಾರ್ಗೆಟ್‌ ಪ್ರೈಸ್‌ ಅನ್ನು ಇಟ್ಟಿತ್ತು.

ವಿಶೇಷವೇನೆಂದರೆ ಕಳೆದ ಆರು ತಿಂಗಳಿನಿಂದ ಪೇಂಟ್ಸ್‌ ಬಿಸಿನೆಸ್‌ ವಲಯದಲ್ಲಿ ಗ್ರಾಸಿಮ್‌ ಇಂಡಸ್ಟ್ರೀಸ್‌ ಮುನ್ನಡೆ ಸಾಧಿಸಿದೆ. ಇದು ಉದ್ಯಮ ವಲಯವನ್ನು ಅಚ್ಚರಿಗೊಳಿಸಿದೆ.

ಎರಡನೆಯದಾಗಿ, ಗ್ರಾಸಿಮ್‌ ಇಂಡಸ್ಟ್ರಿಯ ಅಧೀನ ಕಂಪನಿಯಾದ ಅಲ್ಟ್ರಾ ಟೆಕ್‌ ಸಿಮೆಂಟ್‌ ಕಂಪನಿಯ ಆದಾಯ ಮತ್ತು ಮಾರ್ಕೆಟ್‌ ಪಾಲು ಎರಡೂ ಹೆಚ್ಚುತ್ತಿದೆ. ವಿಸ್ಕೋಸ್‌ ಸ್ಟಾಪಲ್‌ ಫೈಬರ್‌ ಉತ್ಪಾದನೆಯಲ್ಲಿ ಗ್ರಾಸಿಮ್‌ ಇಂಡಸ್ಟ್ರೀಸ್‌ ಜಗತ್ತನಲ್ಲೇ ಮುಂಚೂಣಿಯಲ್ಲಿದೆ. ಜತೆಗೆ ಕೆಮಿಕಲ್‌ ಇಂಡಸ್ಟ್ರಿಗೆ ಬೇಕಾಗುವ ಕಾಸ್ಟಿಕ್‌ ಸೋಡಾ ಮತ್ತಿತರ ರಾಸಾಯನಿಕಗಳನ್ನು ತಯಾರಿಸುತ್ತಿದೆ.

ಗ್ರಾಸಿಮ್‌ ಇಂಡಸ್ಟ್ರಿಯು ಏಷ್ಯನ್‌ ಪೇಂಟ್ಸ್‌ ವಿರುದ್ಧ ಕಾಂಪಿಟೇಶನ್‌ ಕಮಿಶನ್‌ ಆಫ್‌ ಇಂಡಿಯಾದಲ್ಲಿ ದೂರು ನೀಡಿದೆ. ದೂರಿನ ಪ್ರಕಾರ ಏಷ್ಯನ್‌ ಪೇಂಟ್ಸ್‌ ಸ್ಪರ್ಧಾತ್ಮಕತೆಗೆ ವಿರುದ್ಧವಾದ ನಡೆಯನ್ನು ಅನುಸರಿಸುತ್ತಿದೆ. ದೂರಿನ ಬಗ್ಗೆ ಸಿಸಿಐ ಮುಂದಿನ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ.

ಹಣಕಾಸು ಮಾರುಕಟ್ಟೆಗೆ ಸಂಬಂಧಿಸಿದ ಕೆಲವು ಉಪಯುಕ್ತ ಮತ್ತು ಇಂಟರೆಸ್ಟಿಂಗ್‌ ಮಾಹಿತಿಗಳನ್ನು ತಿಳಿಯೋಣ.

  • ಕಳೆದ ಮೇ ತಿಂಗಳಿನಲ್ಲಿ ಮ್ಯುಚುವಲ್‌ ಫಂಡ್‌ಗಳಲ್ಲಿ ಸಿಪ್‌ ಮೂಲಕ ಹೂಡಿಕೆಯ ಮೊತ್ತ 26,688 ಕೋಟಿ ರುಪಾಯಿಗೆ ಏರಿಕೆಯಾಗಿದೆ. ಏಪ್ರಿಲ್‌ನಲ್ಲಿ 26,632 ಕೋಟಿ ರುಪಾಯಿ ಹೂಡಿಕೆ ಆಗಿತ್ತು.
  • ಈಕ್ವಿಟಿ ಮ್ಯೂಚುವಲ್‌ ಫಂಡ್‌ಗಳಿಗೆ ಮಾತ್ರ ಮೇನಲ್ಲಿ ಹೂಡಿಕೆ 22% ಇಳಿಕೆಯಾಗಿದ್ದು, 19,013 ಕೋಟಿ ರುಪಾಯಿಯಷ್ಟಿತ್ತು. ಏಪ್ರಿಲ್‌ನಲ್ಲಿ 24,269 ಕೋಟಿ ರುಪಾಯಿ ಮೊತ್ತವು ಈಕ್ವಿಟಿ ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಆಗಿತ್ತು.
  • ಡೊಮೆಸ್ಟಿಕ್‌ ಇನ್‌ಸ್ಟಿಟ್ಯೂಶನಲ್‌ ಇನ್ವೆಸ್ಟರ್ಸ್‌ ಅಥವಾ ದೇಶೀಯ ಸಾಂಸ್ಥಿಕ ಹೂಡಿಕೆದಾರರು ಷೇರು ಮಾರುಕಟ್ಟೆಯಲ್ಲಿ ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆಯನ್ನು ಮುಂದುವರಿಸಿದ್ದಾರೆ. ಕಳೆದ ಹತ್ತು ವರ್ಷದಲ್ಲೇ ಎರಡನೇ ಅತಿ ಹೆಚ್ಚು ಹೂಡಿಕೆ ಈ ವರ್ಷ ಇದುವರೆಗೆ ಆಗಿದೆ.
  • ಈ ಸಲ ಐಪಿಎಲ್‌ ಚಾಂಪಿಯನ್‌ ಆಗಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಅಥವಾ ಆರ್‌ ಸಿಬಿ ಐಪಿಎಲ್‌ ತಂಡದ ಮಾಲೀಕತ್ವವನ್ನು ಹೊಂದಿರುವ ಡಿಯಾಜಿಯೊ ಕಂಪನಿಯು ಆರ್‌ ಸಿಬಿಯ ಐಪಿಎಲ್‌ ಫ್ರಾಂಚೈಸಿಯಲ್ಲಿರುವ ತನ್ನ ಷೇರುಗಳನ್ನು ಮಾರಾಟ ಮಾಡಲು ಚಿಂತನೆ ನಡೆಸಿದೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ. ಬ್ರಿಟನ್‌ ಮೂಲದ ಮದ್ಯ ಉತ್ಪಾದಕ ಡಿಯಾಜಿಯೊ, ಆರ್‌ ಸಿಬಿಯ ಮಾರುಕಟ್ಟೆ ಮೌಲ್ಯವನ್ನು 200 ಕೋಟಿ ಡಾಲರ್‌ ಎಂದು ಅಂದಾಜಿಸಿರುವುದಾಗಿ ವರದಿಯಾಗಿತ್ತು. ರುಪಾಯಿ ಲೆಕ್ಕದಲ್ಲಿ ಸುಮಾರು 17,000 ಕೋಟಿ ರುಪಾಯಿ ಆಗಲಿದೆ. ಆದರೆ ಸ್ವತಃ ಡಿಯಾಜಿಯೊ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಇವೆಲ್ಲವೂ ವದಂತಿಗಳಾಗಿವೆ. ಆರ್‌ಸಿಬಿಯ ಷೇರುಗಳನ್ನು ಮಾರುವ ಆಲೋಚನೆ ಇಲ್ಲ ಎಂದಿದೆ.
  • ಹಿಂದೂಸ್ತಾನ್‌ ಝಿಂಕ್‌ ಕಂಪನಿಯ ಷೇರಿನ ದರದಲ್ಲಿ ಕಳೆದ 5 ದಿನಗಳಲ್ಲಿ 15% ಏರಿಕೆಯಾಗಿದೆ. 5 ದಿನಗಳಲ್ಲಿ ಷೇರಿನ ದರ 464/-ರಿಂದ 533/-ಕ್ಕೆ ಹೆಚ್ಚಳವಾಗಿದೆ. ಬೆಳ್ಳಿಯ ದರದಲ್ಲಿ ಏರಿಕೆಯಾಗುತ್ತಿರುವುದು ಇದಕ್ಕೆ ಕಾರಣ. ದೇಶೀಯ ಮಾರುಕಟ್ಟೆಯಲ್ಲಿ ಬೆಳ್ಳಿಯ ದರ ದಾಖಲೆಯ ಎತ್ತರಕ್ಕೆ ಏರಿಕೆಯಾಗಿದೆ. ಒಂದು ಕಡೆ ಹೂಡಿಕೆದಾರರು ಹೂಡಿಕೆ ಹೆಚ್ಚಿಸುತ್ತಿದ್ದರೆ, ಕೈಗಾರಿಕೆಯ ಉದ್ದೇಶಕ್ಕೂ ಬಳಕೆಯಾಗುತ್ತಿದ್ದು, ಬೇಡಿಕೆಯಲ್ಲಿದೆ. ಹಿಂದೂಸ್ತಾನ್‌ ಝಿಂಕ್‌ ಜಗತ್ತಿನಲ್ಲೇ ಮೂರನೇ ಅತಿ ದೊಡ್ಡ ಸಿಲ್ವರ್‌ ಪ್ರೊಡ್ಯೂಸರ್‌ ಕಂಪನಿ ಆಗಿದೆ.
  • ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಇತ್ತೀಚೆಗೆ ರೆಪೊ ದರದಲ್ಲಿ ಇಳಿಕೆ ಮಾಡಿರುವ ಪರಿಣಾಮ ಕೆನರಾ ಬ್ಯಾಂಕ್‌, ಕೋಟಕ್‌ ಮಹೀಂದ್ರಾ ಬ್ಯಾಂಕ್‌, ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌, ಎಚ್‌ಡಿಎಫ್‌ಸಿ ಬ್ಯಾಂಕ್‌, ಇಂಡಿಯನ್‌ ಬ್ಯಾಂಕ್‌ ತಮ್ಮ ಕೆಲವು ಅವಧಿಯ ಫಿಕ್ಸೆಡ್‌ ಡೆಪಾಸಿಟ್‌ ಬಡ್ಡಿ ದರಗಳನ್ನು ಇಳಿಸಿವೆ.
  • ಮೊಟ್ಟ ಮೊದಲ ಬಾರಿಗೆ 2011ರಿಂದೀಚೆಗೆ ಪಬ್ಲಿಕ್‌ ಸೆಕ್ಟರ್‌ ಬ್ಯಾಂಕ್‌ಗಳು ಸಾಲದ ವಿತರಣೆಯಲ್ಲಿ 2024-25ರ ಸಾಲಿನಲ್ಲಿ ಖಾಸಗಿ ಬ್ಯಾಂಕ್‌ಗಳನ್ನು ಹಿಂದಿಕ್ಕಿವೆ. ಖಾಸಗಿ ಬ್ಯಾಂಕ್‌ಗಳು ಸಾಲದ ವಿತರಣೆಯ ಬೆಳವಣಿಗೆಯಲ್ಲಿ 9% growth ದಾಖಲಿಸಿದ್ದರೆ, ಸಾರ್ವಜನಿಕ ಬ್ಯಾಂಕ್‌ಗಳು 13.1% ಗ್ರೋತ್‌ ದಾಖಲಿಸಿವೆ.

ಈ ಸುದ್ದಿಯನ್ನೂ ಓದಿ: Stock Market: ಷೇರು ಮಾರುಕಟ್ಟೆ ಇಂಡೆಕ್ಸ್ ಕುಸಿತದ ವೇಳೆ ಯಾವ ಷೇರು ಬೆಸ್ಟ್?

  • ರಿಲಯನ್ಸ್‌ ಪವರ್‌ ಷೇರು ದರ ಮಂಗಳವಾರ 4.8% ಏರಿಕೆಯಾಗಿದೆ. ಕಳೆದ 52 ವಾರಗಳಲ್ಲಿ ಗರಿಷ್ಠ ಮಟ್ಟಕ್ಕೇರಿದೆ. ಹೊಸ ಪ್ರಾಜೆಕ್ಟ್‌ಗಳು, ಈಕ್ವಿಟಿ ಸೇರ್ಪಡೆ, ಕೋರ್ಟ್‌ ರಿಲೀಫ್‌, ಜನವರಿ-ಮಾರ್ಚ್‌ ಅವಧಿಯಲ್ಲಿ ಕಂಪನಿಯ ವಹಿವಾಟು ಲಾಭದ ಹಳಿಗೆ ಮರಳಿರುವುದು ಇದಕ್ಕೆ ಕಾರಣ. 126 ಕೋಟಿ ರುಪಾಯಿ ಲಾಭ ಗಳಿಸಿತ್ತು. ರಿಲಯನ್ಸ್‌ ಪವರ್ ಷೇರಿನ ಈಗಿನ ದರ 72/- ಆಗಿದೆ. ವರ್ಷದ ಹಿಂದೆ 26 ರುಪಾಯಿ ಇತ್ತು. ಒಂದು ವರ್ಷದಲ್ಲಿ 175% ಹೆಚ್ಚಳ ದಾಖಲಿಸಿದೆ. ಈ ಕಂಪನಿಯ ಮಾರುಕಟ್ಟೆ ಬಂಡವಾಳ ಮೌಲ್ಯ 29 ಸಾವಿರ ಕೋಟಿ ರುಪಾಯಿಗಳಾಗಿದೆ.