Stock Market: 10 ಸ್ಟಾಕ್ಸ್ಗಳಲ್ಲಿ ಎಲ್ಐಸಿ ಹೂಡಿಕೆ ಹೆಚ್ಚಳ
LIC: ಎಲ್ಐಸಿಯು ಈ ವರ್ಷ ಜನವರಿ-ಮಾರ್ಚ್ ಅವಧಿಯಲ್ಲಿ, ಟಾಟಾ ಕೆಮಿಕಲ್ಸ್, ಏಷ್ಯನ್ ಪೇಂಟ್ಸ್ ಸೇರಿದಂತೆ 10 ಲಿಸ್ಟೆಡ್ ಕಂಪನಿಗಳ ಷೇರುಗಳಲ್ಲಿ ತನ್ನ ಹೂಡಿಕೆಯನ್ನು ಹೆಚ್ಚಿಸಿದೆ. ಇನ್ಸ್ಟಿಟ್ಯೂಷನಲ್ ಇನ್ವೆಸ್ಟರ್ಗಳು ತಮ್ಮ ಹೋಲ್ಡಿಂಗ್ಸ್ನಲ್ಲಿ ಯಾವ ಬದಲಾವಣೆಗಳನ್ನು ಮಾಡುತ್ತಿದ್ದಾರೆ ಹಾಗೂ ಮಾರುಕಟ್ಟೆಯ ಸೆಂಟಿಮೆಂಟ್, ಸೆಕ್ಟರ್ ರೊಟೇಶನ್ ಮತ್ತು ಎಲ್ಐಸಿಯ ಕಾನ್ಫಿಡೆನ್ಸ್ ಅನ್ನು ಇಲ್ಲಿ ಗಮನಿಸಬಹುದು.


ಕೇಶವ ಪ್ರಸಾದ್ ಬಿ.
ಎಲ್ಐಸಿಯು ಈ ವರ್ಷ ಜನವರಿ-ಮಾರ್ಚ್ ಅವಧಿಯಲ್ಲಿ, ಟಾಟಾ ಕೆಮಿಕಲ್ಸ್, ಏಷ್ಯನ್ ಪೇಂಟ್ಸ್ ಸೇರಿದಂತೆ 10 ಲಿಸ್ಟೆಡ್ ಕಂಪನಿಗಳ ಷೇರುಗಳಲ್ಲಿ ತನ್ನ ಹೂಡಿಕೆಯನ್ನು (Stock Market) ಹೆಚ್ಚಿಸಿದೆ. ಇನ್ಸ್ಟಿಟ್ಯೂಷನಲ್ ಇನ್ವೆಸ್ಟರ್ಗಳು ತಮ್ಮ ಹೋಲ್ಡಿಂಗ್ಸ್ನಲ್ಲಿ ಯಾವ ಬದಲಾವಣೆಗಳನ್ನು ಮಾಡುತ್ತಿದ್ದಾರೆ ಹಾಗೂ ಮಾರುಕಟ್ಟೆಯ ಸೆಂಟಿಮೆಂಟ್, ಸೆಕ್ಟರ್ ರೊಟೇಶನ್ ಮತ್ತು ಎಲ್ಐಸಿಯ ಕಾನ್ಫಿಡೆನ್ಸ್ ಅನ್ನು ಇಲ್ಲಿ ಗಮನಿಸಬಹುದು. ಎಲ್ಐಸಿ ತನ್ನ ಹೂಡಿಕೆಯ ಪ್ರಮಾಣ ಮತ್ತು ಲಾಂಗ್ ಟರ್ಮ್ ಇನ್ವೆಸ್ಟ್ಮೆಂಟ್ ಅಪ್ರೋಚ್ ವಿಚಾರದಲ್ಲಿ ಗಮನಾರ್ಹ ಎನ್ನಿಸುತ್ತದೆ. ಅಂದಹಾಗೆ ಎಲ್ಐಸಿ ಹೂಡಿಕೆಯ ಮಾಹಿತಿಗಳನ್ನು ಕೋಟಕ್ ಇನ್ಸ್ಟಿಟ್ಯೂಷನಲ್ ಈಕ್ವಿಟೀಸ್ ಇಕನಾಮಿಕ್ ಟೈಮ್ಸ್ಗೆ ನೀಡಿದೆ. ಈ ಕುರಿತ ವಿವರ ಇಲ್ಲಿದೆ.
ಪತಂಜಲಿ ಫುಡ್ಸ್ Patanjali Foods
ಷೇರಿನ ಈಗಿನ ದರ: 1,690/-
2024 ಜೂನ್ನ 10ಕ್ಕೆ ದರ: 1,476/-
ಒಂದು ವರ್ಷದಲ್ಲಿ ಏರಿಕೆ : 14%
Mkt cap: 61,000 ಕೋಟಿ ರುಪಾಯಿ.
ಯೋಗಗುರು ಬಾಬಾ ರಾಮ್ ದೇವ್ ಅವರ ಪತಂಜಲಿ ಆಯುರ್ವೇದದ ಅಧೀನದಲ್ಲಿರುವ ಪತಂಜಲಿಫುಡ್ಸ್ ಈ ಹಿಂದೆ ರುಚಿ ಸೋಯಾ ಇಂಡಸ್ಟ್ರೀಸ್ ಆಗಿತ್ತು. ಅದನ್ನು ಪತಂಜಲಿಯು ಖರೀದಿಸಿ ಪತಂಜಲಿ ಫುಡ್ಸ್ ಆಗಿ ಬೆಳೆಸಿದೆ. ಇದೀಗ ಎಲ್ಐಸಿಯು ಪತಂಜಲಿ ಫುಡ್ಸ್ನಲ್ಲಿ ತನ್ನ ಷೇರು ಪಾಲನ್ನು 5.2%ರಿಂದ 7.7%ಕ್ಕೆ ಏರಿಸಿದೆ. ಇದರ ಮೌಲ್ಯ 1,626 ಕೋಟಿ ರುಪಾಯಿ ಆಗಿದೆ.
ಸಿಇಎಸ್ಸಿ-CESC
ಷೇರಿನ ಈಗಿನ ದರ: 170/-
2024 ಜೂನ್ನ 10ಕ್ಕೆ ದರ: 146/-
ಒಂದು ವರ್ಷದಲ್ಲಿ ಏರಿಕೆ : 16%
Mkt cap: 22660 ಕೋಟಿ ರುಪಾಯಿ.
ಕೋಲ್ಕತಾ ಮೂಲದ ಆರ್ ಪಿ ಸಂಜೀವ್ ಗೋಯೆಂಕಾ ನೇತೃತ್ವದ ಆರ್ಪಿಜಿ ಗ್ರೂಪ್ಗೆ ಸೇರಿದ ಕಲ್ಕತ್ತಾ ಎಲೆಕ್ಟ್ರಿಕ್ ಸಪ್ಲೈ ಕಾರ್ಪೊರೇಷನ್ ಇದಾಗಿದೆ. ಎಲ್ಐಸಿಯು CESCನಲ್ಲಿ ತನ್ನ ಷೇರು ಪಾಲನ್ನು 4.7%ರಿಂದ 6.6%ಕ್ಕೆ ಏರಿಕೆ ಮಾಡಿದೆ. ಇದರ ಮೌಲ್ಯ 370 ಕೋಟಿ ರುಪಾಯಿಗಳಾಗಿದೆ.
ಟಾಟಾ ಕೆಮಿಕಲ್ಸ್-Tata Chemicals
ಷೇರಿನ ಈಗಿನ ದರ: 965/-
2024 ಜೂನ್ನ 10ಕ್ಕೆ ದರ: 1086/-
ಒಂದು ವರ್ಷದಲ್ಲಿ ಇಳಿಕೆ : 11%
Mkt cap: 24,580 ಕೋಟಿ ರುಪಾಯಿ.
ಟಾಟಾ ಗ್ರೂಪ್ಗೆ ಸೇರಿದ ಟಾಟಾ ಕೆಮಿಕಲ್ಸ್, ಬಹುರಾಷ್ಟ್ರೀಯ ಕೆಮಿಕಲ್ಸ್ ಕಂಪನಿಯಾಗಿದ್ದು, ಮುಂಬಯಿನಲ್ಲಿ ಇದರ ಪ್ರಧಾನ ಕಚೇರಿ ಇದೆ. ಬೆಳೆಯ ರಕ್ಷಣೆಗೆ ಬಳಸುವ ಮತ್ತು ವಿಶೇಷ ರಾಸಾಯನಿಕ ಉತ್ಪನ್ನಗಳನ್ನು ತಯಾರಿಸುತ್ತದೆ. 2024ರಲ್ಲಿ 15,000 ಕೋಟಿ ಆದಾಯವನ್ನೂ ಗಳಿಸಿತ್ತು. ಎಲ್ಐಸಿಯು ಟಾಟಾ ಕೆಮಿಕಲ್ಸ್ನಲ್ಲಿ ತನ್ನ ಷೇರು ಪಾಲನ್ನು 7.3%ರಿಂದ 9.1%ಕ್ಕೆ ಏರಿಸಿದೆ. ಇದರ ಮೌಲ್ಯ 425 ಕೋಟಿ ರುಪಾಯಿಗಳಾಗಿದೆ.
ಕೆಪಿಐಟಿ ಟೆಕ್ನಾಲಜೀಸ್-KPIT Technologies
ಷೇರಿನ ಈಗಿನ ದರ: 1,371/-
2024 ಜೂನ್ನ 10ಕ್ಕೆ ದರ: 1482/-
ಒಂದು ವರ್ಷದಲ್ಲಿ ಇಳಿಕೆ : 7.50%
Mkt cap: 37,250 ಕೋಟಿ ರುಪಾಯಿ.
ಪುಣೆ ಮೂಲದ KPIT Technologies ಬಹುರಾಷ್ಟ್ರೀಯ ಕಂಪನಿಯಾಗಿದ್ದು, ಆಟೊಮೋಟಿವ್ ಕಂಪನಿಗಳಿಗೆ ರಿಸರ್ಚ್ ಮತ್ತು ಡೆವಲಪ್ಮೆಂಟ್ ಸೇವೆಯನ್ನು ನೀಡುತ್ತದೆ. ಕಂಪನಿಯು ಭಾರತ ಮಾತ್ರವಲ್ಲದೆ, ಯುರೋಪ್, ಅಮೆರಿಕ, ಬ್ರೆಜಿಲ್, ಜಪಾನ್ ಮತ್ತು ಚೀನಾದಲ್ಲಿ ತನ್ನ ಡೆವಲಪ್ ಮೆಂಟ್ ಸೆಂಟರ್ಗಳನ್ನು ಹೊಂದಿದೆ. ಎಲ್ಐಸಿಯು KPIT Technologies ನಲ್ಲಿ ಇತ್ತೀಚೆಗೆ 1.3% ಷೇರುಗಳನ್ನು ಖರೀದಿಸಿದೆ. 2024ರ ಡಿಸೆಂಬರ್ಗೆ ಮುನ್ನ ಈ ಕಂಪನಿಯಲ್ಲಿ ಎಲ್ಐಸಿಯ ಷೇರು ಇದ್ದಿರಲಿಲ್ಲ. ಇದೇ ಮೊದಲ ಭಾರಿಗೆ ಖರೀದಿಸಿದೆ. ಈ ಷೇರುಗಳ ಮೌಲ್ಯ 487 ಕೋಟಿ ರುಪಾಯಿ.
ಜಿಂದಾಲ್ ಸ್ಟೈನ್ಲೆಸ್-Jindal Stainless
ಷೇರಿನ ಈಗಿನ ದರ: 726/-
2024 ಜೂನ್ನ 10ಕ್ಕೆ ದರ: 813/-
ಒಂದು ವರ್ಷದಲ್ಲಿ ಇಳಿಕೆ : 10%
Mkt cap: 59,800 ಕೋಟಿ ರುಪಾಯಿ.
ದಿಲ್ಲಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಜಿಂದಾಲ್ ಸ್ಟೈನ್ಲೆಸ್ ಕಂಪನಿಯನ್ನು ಓಂ ಪ್ರಕಾಶ್ ಜಿಂದಾಲ್ ಸ್ಥಾಪಿಸಿದ್ದಾರೆ. ಎಲ್ಐಸಿಯು ಈ ಕಂಪನಿಯಲ್ಲಿ ಕಳೆದ ಮಾರ್ಚ್ ನಲ್ಲಿ 1.2% ಷೇರುಗಳನ್ನು ಖರೀದಿಸಿದೆ. ಇದರ ಮೌಲ್ಯ 645 ಕೋಟಿ ರುಪಾಯಿಗಳಾಗಿದೆ.
ಎನ್ಎಚ್ಪಿಸಿ-NHPC
ಷೇರಿನ ಈಗಿನ ದರ: 90/-
2024 ಜೂನ್ನ 10ಕ್ಕೆ ದರ: 102/-
ಒಂದು ವರ್ಷದಲ್ಲಿ ಇಳಿಕೆ : 11%
Mkt cap: 90,000 ಕೋಟಿ ರುಪಾಯಿ.
NHPC lmited ಸಾರ್ವಜನಿಕ ವಲಯದ ಹೈಡ್ರೊಪವರ್ ಕಂಪನಿಯಾಗಿದ್ದು, 1975ರಲ್ಲಿ ಸ್ಥಾಪನೆಯಾಗಿದೆ. ಜಲ ವಿದ್ಯುತ್ ಮಾತ್ರವಲ್ಲದೆ, ಸೋಲಾರ್, ಪವನ ವಿದ್ಯುತ್ ಅನ್ನೂ ಇದು ಉತ್ಪಾದಿಸುತ್ತಿದೆ. ಫರೀದಾಬಾದ್ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. 2023ರಲ್ಲಿ 10,770 ಕೋಟಿ ರುಪಾಯಿ ಆದಾಯ ಹೊಂದಿತ್ತು. ಎಲ್ಐಸಿಯು NHPCನಲ್ಲಿ ಷೇರು ಹೂಡಿಕೆಯನ್ನು 4%ರಿಂದ 5.2%ಕ್ಕೆ ಏರಿಸಿದೆ. ಇದರ ಮೌಲ್ಯ 967 ಕೋಟಿ ರುಪಾಯಿಗಳಾಗಿದೆ.
ಏಷ್ಯನ್ ಪೇಂಟ್ಸ್-Asian Paints
ಷೇರಿನ ಈಗಿನ ದರ: 2,225/-
2024 ಜೂನ್ನ 10ಕ್ಕೆ ದರ: 2,937/-
ಒಂದು ವರ್ಷದಲ್ಲಿ ಇಳಿಕೆ : 24%
Mkt cap: 2 ಲಕ್ಷದ 13 ಸಾವಿರ ಕೋಟಿ ರುಪಾಯಿ.
ಏಷ್ಯನ್ ಪೇಂಟ್ಸ್ ಭಾರತದಲ್ಲಿ ಮನೆಮಾತಾಗಿರುವ ಪೇಂಟ್ಸ್ ತಯಾರಿಕಾ ಕಂಪನಿಯಾಗಿದೆ. ಮುಂಬಯಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಇದು ಮಲ್ಟಿ ನ್ಯಾಷನಲ್ ಕಂಪನಿಯಾಗಿದೆ. ಮನೆಯ ಅಲಂಕಾರಕ್ಕೆ ಬೇಕಾದ ಬಣ್ಣಗಳನ್ನು ಮುಖ್ಯವಾಗಿ ತಯಾರಿಸಿ ಮಾರುತ್ತದೆ. ಏಷ್ಯನ್ ಪೇಂಟ್ಸ್ ಷೇರು ದರ ಕಳೆದೊಂದು ವರ್ಷದಿಂದೀಚೆಗೆ ಮಂದಗತಿಯಲ್ಲಿದೆ. ಹೀಗಿದ್ದರೂ ಕಳೆದ 5 ವರ್ಷಗಳ ಅವಧಿಯಲ್ಲಿ 35% ಏರಿಕೆ ದಾಖಲಿಸಿದೆ. 1999ರಲ್ಲಿ ಏಷ್ಯನ್ ಪೇಂಟ್ಸ್ ಷೇರಿನ ದರ 11 ರುಪಾಯಿಗೆ ಸಿಗುತ್ತಿತ್ತು. ಹಲವಾರು ದಶಕಗಳ ಕಾಲ ಪೇಂಟ್ಸ್ ಮಾರುಕಟ್ಟೆಯಲ್ಲಿ ಏಷ್ಯನ್ ಪೇಂಟ್ಸ್ ಗೆ ಸರಿಸಾಟಿ ಯಾರೂ ಇರಲಿಲ್ಲ. ಕಳೆದ 26 ವರ್ಷಗಳಲ್ಲಿ ಏಷ್ಯನ್ ಪೇಂಟ್ಸ್ ಷೇರು ದರ 18,620% ಏರಿಕೆ ದಾಖಲಿಸಿದೆ. 11 ರುಪಾಯಿಯಲ್ಲಿದ್ದ ಷೇರು ದರ ಈಗ 2,224 ರುಪಾಯಿಯಷ್ಟಿದೆ. ಹೀಗಿದ್ದರೂ, ಮಾರುಕಟ್ಟೆಯಲ್ಲಿ ಪ್ರತಿಸ್ಪರ್ಧಿಗಳು ಈಗ ಇರುವುದರಿಂದ ಏಷ್ಯನ್ ಪೇಂಟ್ಸ್ನ ಮೊದಲಿನ ಏಕಸ್ವಾಮ್ಯ ಕೊನೆಯಾಗಿದೆ. ಆದರೂ ಈಗಲೂ ಏಷ್ಯನ್ ಪೇಂಟ್ಸ್ ಮುಂಚೂಣಿಯಲ್ಲಿರುವ ಪೇಂಟ್ಸ್ ತಯಾರಕ ಕಂಪನಿಯಾಗಿದೆ ಎಂಬುದರದಲ್ಲಿ ಎರಡು ಮಾತಿಲ್ಲ. ಎಲ್ಐಸಿಯು ಏಷ್ಯನ್ ಪೇಂಟ್ಸ್ನಲ್ಲಿ ತನ್ನ ಷೇರು ಪಾಲನ್ನು 7.2%ರಿಂದ 8.3%ಕ್ಕೆ ಏರಿಕೆ ಮಾಡಿದೆ. ಇದರ ಮೌಲ್ಯ 2,476 ಕೋಟಿ ರುಪಾಯಿಗಳಾಗಿದೆ.
ಎಸಿಸಿ-ACC
ಷೇರಿನ ಈಗಿನ ದರ: 1,920/-
2024 ಜೂನ್ನ 10ಕ್ಕೆ ದರ: 2,937/-
ಒಂದು ವರ್ಷದಲ್ಲಿ ಇಳಿಕೆ : 24%
Mkt cap: 36,000 ಕೋಟಿ ರುಪಾಯಿ.
ಎಸಿಸಿ ಲಿಮಿಟೆಡ್ ಸಿಮೆಂಟ್ ಉತ್ಪಾದಕ ಕಂಪನಿಯಾಗಿದೆ. ಮುಂಬಯಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಈಗ ಅದಾನಿ ಗ್ರೂಪ್ ನ ಕಂಪನಿಯಾಗಿದೆ. ಎಸಿಸಿಯಲ್ಲಿ ಎಲ್ಐಸಿಯು ತನ್ನ ಷೇರು ಪಾಲನ್ನು 6.5%ರಿಂದ 7.7%ಕ್ಕೆ ಏರಿಸಿದೆ. ಇದರ ಮೌಲ್ಯ 410 ಕೋಟಿ ರುಪಾಯಿಗಳಾಗಿದೆ.
ಯುಕೊ ಬ್ಯಾಂಕ್-UCO Bank
ಷೇರಿನ ಈಗಿನ ದರ: 33/-
2024 ಜೂನ್ನ 10ಕ್ಕೆ ದರ: 56/-
ಒಂದು ವರ್ಷದಲ್ಲಿ ಇಳಿಕೆ : 41%
Mkt cap: 41,000 ಕೋಟಿ ರುಪಾಯಿ.
ಯುಕೊ ಬ್ಯಾಂಕ್ ಸಾರ್ವಜನಿಕ ವಲಯದ ಬ್ಯಾಂಕ್ ಆಗಿದ್ದು, ಕೋಲ್ಕತಾದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಎಲ್ಐಸಿಯು ಯುಕೊ ಬ್ಯಾಂಕ್ನಲ್ಲಿ ತನ್ನ ಷೇರು ಹೂಡಿಕೆಯನ್ನು 1.2%ರಿಂದ 2.3% ಕ್ಕೆ ಏರಿಸಿದೆ. ಇದರ ಮೌಲ್ಯ 566 ಕೋಟಿ ರುಪಾಯಿಗಳಾಗಿದೆ.
ಈ ಸುದ್ದಿಯನ್ನೂ ಓದಿ | HPCL Recruitment 2025: ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ನಲ್ಲಿದೆ 411 ಹುದ್ದೆ; ದ್ವಿತೀಯ ಪಿಯು ಪಾಸಾದವರು ಅಪ್ಲೈ ಮಾಡಿ